ಬರ್ಸಿಲೋನಾದ ಮೆಟ್ರೋ ಸ್ಟೇಷನ್‌ನಲ್ಲಿ ಮೊಳಗಿದ ಗಾಯತ್ರಿ ಮಂತ್ರ ವೀಡಿಯೋ ವೈರಲ್

By Anusha KbFirst Published Aug 19, 2023, 12:23 PM IST
Highlights

ಬಾರ್ಸಿಲೋನಾದ ರೈಲ್ವೆ ಸ್ಟೇಷನ್‌ವೊಂದರಲ್ಲಿ ಸ್ಪೇನ್ ಮೂಲದ ಮಹಿಳೆಯೊಬ್ಬರು ಮುಂಜಾನೆ  ಗಾಯತ್ರಿ ಮಂತ್ರವನ್ನು ಪಠಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬೆಂಗಳೂರು: ಭಾರತೀಯ ಹಿಂದೂ ಸಮುದಾಯ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿದ್ದರೆ ಅತ್ತ ಪಾಶ್ಚಿಮಾತ್ಯರು ಹಿಂದೂ ಸನಾತನ ಧರ್ಮದತ್ತ ಒಲುವು ತೋರುತ್ತಿದ್ದಾರೆ. ಶಾಂತಿ ನೆಮ್ಮದಿ ಅರಸಿ ಸನಾತನ ಧರ್ಮವನ್ನು ಅರಸಿ ಅನೇಕ ವಿದೇಶಿಗರು ಭಾರತದ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವುದನ್ನು, ಮೋಕ್ಷ ಪ್ರಾಪ್ತಿಗಾಗಿ ತಮ್ಮ ಪೂರ್ವಜರಿಗೆ ಭಾರತದ ಪುಣ್ಯ ನದಿಗಳ ತಟದಲ್ಲಿ ಪಿಂಡ ಪ್ರದಾನ ಮಾಡಿದಂತಹ ಹಲವು ನಿದರ್ಶನಗಳನ್ನು ನೀವು ಈಗಾಗಲೇ ನೋಡಿರಬಹುದು ಕೇಳಿರಬಹುದು. ಅದೇ ರೀತಿ ಈಗ ಬಾರ್ಸಿಲೋನಾದ ರೈಲ್ವೆ ಸ್ಟೇಷನ್‌ವೊಂದರಲ್ಲಿ ಸ್ಪೇನ್ ಮೂಲದ ಮಹಿಳೆಯೊಬ್ಬರು ಮುಂಜಾನೆ  ಗಾಯತ್ರಿ ಮಂತ್ರವನ್ನು ಪಠಿಸುತ್ತಿರುವುದನ್ನು ನೋಡಬಹುದಾಗಿದೆ. 

ಈ ವೀಡಿಯೋವನ್ನು ಫೇಸ್‌ಬುಕ್‌ನ  'Worldwide Hindu Temples'ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಸ್ಪೇನಿಷ್ ಮಹಿಳೆಯೊಬ್ಬರು ಬರ್ಸಿಲೋನಾದ ಮೆಟ್ರೋ ರೈಲು ನಿಲ್ದಾಣದಲ್ಲಿ ಮೈಕ್‌ನಲ್ಲಿ ಗಾಯತ್ರಿ ಮಂತ್ರವನ್ನು ಪಠಿಸುವುದನ್ನು ಕಾಣಬಹುದಾಗಿದೆ.  ಈ ವೀಡಿಯೊ ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಕ್ಯಾಟಲುನಿಯಾದ ಮೆಟ್ರೋ ಪ್ಯಾರಲಲ್‌ ಸ್ಟೇಷನ್‌ನಲ್ಲಿ ಸೆರೆಯಾದ ದೃಶ್ಯ ಇದಾಗಿದೆ. ವೀಡಿಯೋ ನೋಡಿದ ಅನೇಕರು ಮಹಿಳೆಯನ್ನು ಮೆಚ್ಚಿದ್ದು, ಇದೊಂದು ಪವರ್‌ಫುಲ್ ಮಂತ್ರವಾಗಿದೆ. ಇದು ವಿದೇಶಿ ನೆಲದಲ್ಲಿ ಪಠಣವಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ.  

Latest Videos

ಅಂದು ಕೃಷ್ಣ ನನ್ನ ಕೈಹಿಡಿದ : ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಶಯನ್ ಅಲಿ ಹೇಳಿದಿಷ್ಟು!

ಹಿಂದೂ ಸನಾತನ ಧರ್ಮ ಹಾಗೂ ಧಾರ್ಮಿಕ ಗ್ರಂಥ ಭಗವದ್ಗೀತೆಗೆ ವಿದೇಶಿಗರು ಮನಸೋಲುತ್ತಿರುವುದು ಇದೇ ಮೊದಲೇನಲ್ಲ, ಪ್ರಪಂಚದ ವಿವಿಧ ಮೂಲಗಳಲ್ಲಿ ಸನಾತನ ಧರ್ಮವನ್ನು ನಂಬುವ ಜನರಿದ್ದು, ಇವರ ಇರುವಿಕೆಗೆ ಅನೇಕ ಸಾಕ್ಷ್ಯಗಳಿವೆ. ಇದರ ಜೊತೆಗೆ ಅಣುಬಾಂಬ್‌ನ ಪಿತಾಮಹ ರಾಬರ್ಟ್ ಒಪೆನ್ಹೈಮರ್ (Robert Oppenheimer) ಅವರು ಅಣುಬಾಂಬ್ (Automic Bomb) ಪತ್ತೆಯ ನಂತರ ಮನಶಾಂತಿಗಾಗಿ ಭಗವದ್ಗೀತೆಯ ಹಾದಿ ಹಿಡಿದ ವಿಚಾರವೂ ಬೆಳಕಿಗೆ ಬಂದಿತ್ತು.  ರಾಬರ್ಟ್ ಒಪೆನ್ಹೈಮರ್ ಅವರ ಜೀವನಾಧಾರಿತ ಒಪೆನ್ಹೈಮರ್ ಸಿನಿಮಾ ಈ ವರ್ಷ ತೆರೆಗೆ ಬಂದಿತ್ತು. ಇವರ ಪಾತ್ರದಲ್ಲಿ ಹಾಲಿವುಡ್‌ ನಟ ಸಿಲಿಯನ್‌ ಮರ್ಫಿ (Hollywood actor Cillian Murphy)ನಟಿಸಿದ್ದರು. ಈ ಪಾತ್ರಕ್ಕಾಗಿ ತಾನು ಕೂಡ ಭಗವದ್ಗೀತೆ ಓದಿದ್ದೆ ಅದೊಂದು ಅದ್ಭುತ ಗ್ರಂಥ ಎಂದು ಮರ್ಪಿ ಹೇಳಿದ್ದ ವೀಡಿಯೋ ವೈರಲ್ ಆಗಿತ್ತು. ಅಣುಬಾಂಬ್‌ನ ಪಿತಾಮಹ ರಾಬರ್ಟ್ ಒಪೆನ್ಹೈಮರ್ ಅವರ ಜೀವನಾಧಾರಿತ ಒಪೆನ್ಹೈಮರ್ ಚಿತ್ರವನ್ನು ಇಂಟರ್‌ಸ್ಟೆಲ್ಲರ್‌, ಇನ್‌ಸೆಪ್ಷನ್‌, ಡುಂಕಿರ್ಕ್‌ ರೀತಿಯ ಮಹಾನ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಕ್ರಿಸ್ಟೋಫರ್‌ ನೋಲನ್‌ ಅವರು ನಿರ್ದೇಶಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಹಿಂದೂ ಧರ್ಮಕ್ಕೆ ಘರ್‌ ವಾಪಸಿಯಾದ 100 ಕ್ಕೂ ಹೆಚ್ಚು ಜನ..!

ಇವರಷ್ಟೇ ಅಲ್ಲದೇ ಪಾಕಿಸ್ತಾನದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ (Social media star) ಮೊಹಮ್ಮದ್ ಶಯನಾ ಅಲಿ (Mohammad Shaina Ali) ಅವರು ತಾನು ಹಿಂದೂ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಕಳೆದ ಜೂನ್‌ನಲ್ಲಿ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದರು. ತಮ್ಮ ಈ ನಿರ್ಧಾರವನ್ನು ಅವರು ಮರಳಿ ಮನೆಗೆ (ಘರ್ ವಾಪ್ಸಿ) ಎಂದು ಕರೆದುಕೊಂಡಿದ್ದರು.  ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಕಳೆದ 2 ವರ್ಷಗಳಿಂದ ನನ್ನ ಪೂರ್ವಜರ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಗಮನಿಸಿದ ನಂತರ, ಇಂದು ನಾನು ನನ್ನ 'ಘರ್ ವಾಪ್ಸಿ' ಯನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ. ನನ್ನನ್ನು ಎಂದಿಗೂ ಬಿಟ್ಟು ಕೊಡದ ಇಸ್ಕಾನ್‌ಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.

2019ರಲ್ಲಿ ಪಾಕಿಸ್ತಾನ ತೊರೆದಿದ್ದ ಅಲಿ

ಪಾಕಿಸ್ತಾನದಲ್ಲಿ ತೀವ್ರ ಕಿರುಕುಳವನ್ನು ಎದುರಿಸಿದ ನಂತರ 2019 ರಲ್ಲಿ ಪಾಕಿಸ್ತಾನವನ್ನು ತೊರೆದಿದ್ದರು. ದೇಶ ಬಿಡುವುದಕ್ಕೆ ಕಾರಣವಾದ ವಿಚಾರಗಳ ಬಗ್ಗೆ ಅಲಿ ಈ ವರ್ಷದ ಮೇ ತಿಂಗಳಲ್ಲಿ ಟ್ವಿಟ್ ಮಾಡುವ ಮೂಲಕ ತಿಳಿಸಿದ್ದರು.  ಕಾಶ್ಮೀರದ ಕುರಿತಾಗಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐನ ಪಿಆರ್ ಮ್ಯೂಸಿಕ್ (PR Music) ವಿಡಿಯೋ ಮಾಡಲು ಅವರುನಿರಾಕರಿಸಿದ ನಂತರ ಅವರನ್ನು ಪಾಕಿಸ್ತಾನದ ಐಎಸ್‌ಐ (ISI) ಹೇಗೆ ಬಿಂಬಿಸಿತ್ತು? ಯಹೂದಿ ಏಜೆಂಟ್ ಮತ್ತು ಭಾರತೀಯ ಗುಪ್ತಚರ ಸಂಸ್ಥೆ ರಾ(RAW)ದ ಸದಸ್ಯ ಎಂದು ಹೇಗೆ ಆರೋಪಿಸಿತ್ತು ಎಂಬುದರ ಕುರಿತು ಅವರು ಆ ಟ್ವಿಟ್‌ನಲ್ಲಿ ಉಲ್ಲೇಖಿಸಿದ್ದರು. ಮೈ ಸ್ಟೋರಿ ಆಫ್ ಲೀವಿಂಗ್ ಪಾಕಿಸ್ತಾನ್ ಎಂಬ ಶೀರ್ಷಿಕೆಯ ಟ್ವಿಟ್‌ನಲ್ಲಿ ಪಾಕಿಸ್ಥಾನದ ಐಎಸ್‌ಐ ನೀಡಿದ ಕಿರುಕುಳದ ಬಗ್ಗೆ ಅವರು ತಿಳಿಸಿದ್ದಾರೆ. 
 

click me!