Solar Eclipse: ನಾಳೆ ಹಲವು ಪ್ರಮುಖ ದೇವಾಲಯಗಳು ಬಂದ್; ಕೆಲವೆಡೆ ಸಮಯ ಬದಲಾವಣೆ

By BK AshwinFirst Published Oct 24, 2022, 2:04 PM IST
Highlights

ನಾಳೆ ಸೂರ್ಯಗ್ರಹಣ ಹಿನ್ನೆಲೆ ಹಲವು ದೇವಸ್ಥಾನಗಳು ಸಂಪೂರ್ಣ ಬಂದ್‌ ಆಗಲಿದೆ. ಇನ್ನು ಹಲವು ದೇವಾಲಯಗಳ ಸಮಯ ಬದಲಾವಣೆಯಾಗಲಿದೆ. ಹಾಗೂ, ಗ್ರಹಣದ ಬಳಿಕ ದೇವಾಲಯಗಳ ಶುದ್ಧೀಕರಣವೂ ನಡೆಯುತ್ತದೆ. ಹಲವು ದೇಗುಲಗಳಲ್ಲಿ ಪ್ರಸಾದ ಸೇವೆಯನ್ನೂ ಬಂದ್‌ ಮಾಡಲಿದೆ. 

ಪ್ರಮುಖ ಹಬ್ಬ ದೀಪಾವಳಿ ನಡುವೆ ನಾಳೆ ಸೂರ್ಯಗ್ರಹಣವೂ ಇದೆ. ಈ ಹಿನ್ನೆಲೆ ನೀವು ದೀಪಾವಳಿ ಹಬ್ಬದ ಸಾಲು ಸಾಲು ರಜೆ ಅಂತ ದೇವಾಲಯಗಳಿಗೆ ಭೇಟಿ ನೀಡಲು ಹೊರಟಿದ್ದೀರಾ..? ಹಾಗಾದ್ರೆ, ನಿಮ್ಮ ಪ್ಲ್ಯಾನ್‌ ಮುಂದೂಡಿ. ಯಾಕೆ ಅಂತೀರಾ..? ಸೂರ್ಯ ಗ್ರಹಣ ಅಂತ ಹಲವು ದೇವಸ್ಥಾನಗಳು ನಾಳೆ ಅಂದರೆ ಮಂಗಳವಾರ, ಅಕ್ಟೋಬರ್ 24, 2022 ರಂದು ಬಂದ್‌ ಆಗುತ್ತಿದೆ. ಆಂಧ್ರ ಪ್ರದೇಶ ತಿರುಪತಿ ದೇವಾಲಯ ಸಹ ಬಂದ್‌ ಆಗುತ್ತಿದೆ. ಇನ್ನು, ಕೆಲವು ದೇವಾಲಯಗಳ ಸಮಯ ಬದಲಾವಣೆ ಆಗುತ್ತಿದೆ. ಹಾಗಾದ್ರೆ, ನಾಳೆ ಯಾವ್ಯಾವ ದೇವಸ್ಥಾನಗಳು ಬಂದ್‌ ಆಗುತ್ತೆ ಅನ್ನೋ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ಯಾ..? ಇಲ್ಲಿದೆ ವಿವರ..

ಸೂರ್ಯ ಗ್ರಹಣ ಹಿನ್ನೆಲೆ ನಾಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ದೇವಾಲಯ ಸಂಪೂರ್ಣ ಬಂದ್ ಆಗಲಿದೆ. ಗ್ರಹಣದ ಕಾರಣ ದೇವಾಲಯದಲ್ಲಿ ಯಾವುದೇ ಪೂಜೆ ಹೋಮ ಹವನಕ್ಕೆ ಅವಕಾಶ ಇಲ್ಲ ಎಂದು ಚೌಡೇಶ್ವರಿ ದೇಗುಲದ ಧರ್ಮದರ್ಶಿ ರಾಮಪ್ಪನವರು ಮಾಹಿತಿ ನೀಡಿದ್ದಾರೆ. 

Latest Videos

ಇದನ್ನು ಓದಿ: Eclipse 2022: ಗ್ರಹಣದ ಸಮಯದಲ್ಲಿ ದೇವಾಲಯಗಳ ಬಾಗಿಲು ಮುಚ್ಚುವುದೇಕೆ?

ನಾಳೆ ಬೆಳಗ್ಗೆ ದೇವಾಲಯದ ಬಾಗಿಲು ಬಂದ್‌ ಆದರೆ, ಮತ್ತೆ ಮರುದಿನ ಬೆಳಗ್ಗೆಯೇ ಅದನ್ನು ತೆರೆಯಲಾಗುವುದು. ಈ ಹಿನ್ನೆಲೆ ನಾಡಿನಾದ್ಯಂತ ಚೌಡೇಶ್ವರಿ ದೇವಿಯ ಭಕ್ತರು ಸಹಕರಿಸಬೇಕು ಎಂದೂ ಚೌಡೇಶ್ವರಿ ದೇಗುಲದ ಧರ್ಮದರ್ಶಿ ಮನವಿ ಮಾಡಿದ್ದಾರೆ.  

ಗೋಕರ್ಣ ದೇಗುಲದಲ್ಲಿ ಪ್ರಸಾದ ಸೇವೆ ಬಂದ್
ನಾಳೆ ಕೇತು ಗ್ರಹ "ಗ್ರಸ್ತಾಸ್ತ" ಸೂರ್ಯಗ್ರಹಣದ ಕಾಲದಲ್ಲೂ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಐತಿಹಾಸಿಕ ಮಹಾಬಲೇಶ್ವರ ದೇವಸ್ಥಾನದ ಆತ್ಮ ಲಿಂಗ ಸ್ಪರ್ಶಕ್ಕೆ ಮತ್ತು ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣದ ಮಧ್ಯ ಕಾಲದಿಂದ ಮುಕ್ತಾಯದವರೆಗೆ ಭಕ್ತರಿಗೆ ವಿಶೇಷ ಅವಕಾಶ ನೀಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಬೆಳಗ್ಗೆ 6:30ರಿಂದ 9:30ರವರೆಗೆ ಭಕ್ತರಿಗೆ ಸ್ಪರ್ಶ ದರ್ಶನಕ್ಕೆ ಅವಕಾಶ, ಹಾಗೂ ಸಂಜೆ 4 ಗಂಟೆಯಿಂದ ಗ್ರಹಣ ಕಾಲ ಮುಗಿಯುವರೆಗೆ ಅಂದ್ರೆ ಸಂಜೆ 6.04ರವರೆಗೆ ಸ್ಪರ್ಶ ದರ್ಶನದ ಅವಕಾಶವಿದೆ. ಆದರೆ, ಗ್ರಹಣ ಹಿನ್ನೆಲೆ ನಾಳೆ ಮಧ್ಯಾಹ್ನ ದೇವಸ್ಥಾನದಲ್ಲಿ ಅಮೃತಾನ್ನ ಪ್ರಸಾದ ಮತ್ತು ರಾತ್ರಿ ಪ್ರಸಾದ ಭೋಜನ ಇರುವುದಿಲ್ಲ. ಇದಕ್ಕೆ ಭಕ್ತರು ಸಸಹಕರಿಸಬೇಕೆಂದು ದೇವಸ್ಥಾನ ಮಂಡಳಿ ಕೋರಿಕೊಂಡಿದ್ದಾರೆ. 

ಇದನ್ನೂ ಓದಿ: Surya Grahan 2022: ಅನೇಕ ವಿಕೋಪಗಳನ್ನು ಸೃಷ್ಟಿ ಮಾಡುತ್ತೆ: ಕಾಲಜ್ಞಾನಿ ಶಿವಲಿಂಗ ಶಿವಾಚಾರ್ಯ ಶ್ರೀ ಭವಿಷ್ಯ

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಮಯ ಬದಲಾವಣೆ
ಈ ಮಧ್ಯೆ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲೂ ಸಮಯ ಬದಲಾವಣೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಂಪೂರ್ಣ ಬಂದ್ ಆಗಲಿದ್ದು, ರಾತ್ರಿ 7.30ರ ನಂತರ ದೇವರ ದರ್ಶನಕ್ಕೆ ಅವಕಾಶವಿದ್ದು, ರಾತ್ರಿ ಅನ್ನ ಪ್ರಸಾದ ಸೇವೆ ಇದೆ. ಅಲ್ಲದೆ, ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ದೇವರ ದರ್ಶನ ಮತ್ತು ಅನ್ನ ಪ್ರಸಾದ ಇದೆ. ಆದರೆ, ಯಾವುದೇ ವಿಶೇಷ ಪೂಜೆ, ಸೇವೆಗಳು ಇರುವುದಿಲ್ಲ ಎಂದು ತಿಳಿದುಬಂದಿದೆ.

ಹಾಗೆ, ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 7 ರಿಂದ 8.30 ಹಾಗೂ 10 ರಿಂದ ಮಧ್ಯಾಹ್ನ 1 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮತ್ತೆ ಸಂಜೆ.5.11 ರಿಂದ ಸಂಜೆ 6.28ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ, ಸೂರ್ಯ ಗ್ರಹಣ ಹಿನ್ನೆಲೆ ಅಕ್ಟೋಬರ್ 25ರ ಇಡೀ ದಿನ ಕುಕ್ಕೆಯಲ್ಲಿ ದೇವರ ಸೇವೆಗಳು, ಅನ್ನಪ್ರಸಾದ ಇರುವುದಿಲ್ಲ ಎಂದದೂ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಸೂರ್ಯಗ್ರಹಣ: ಕರಾವಳಿ ದೇವಳದಲ್ಲಿ ದೇವರ ದರ್ಶನ, ಸೇವೆಗಳಲ್ಲಿ ವ್ಯತ್ಯಯ

ಬೆಂಗಳೂರಿನ ದೇವಸ್ಥಾನಗಳ‌ಲ್ಲಿ ಹೇಗೆ..?
ಇನ್ನು, ನಾಳೆ ಕೇತು ಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ  ಹಿನ್ನೆಲೆ ದೇವಸ್ಥಾನಗಳು ಯಾವ ಸಮಯದಲ್ಲಿ ಓಪನ್ ಹಾಗೂ ಕ್ಲೋಸ್ ಆಗುತ್ತೆ? ದೇವಸ್ಥಾನಗಳಲ್ಲಿ ಏನೆಲ್ಲ ವಿಶೇಷ ಪೂಜೆಗಳಿವೆ ಅನ್ನೋ ಬಗ್ಗೆ ಗೊಂದಲವೇ..? ನಾಳೆ ಮಲ್ಲೇಶ್ವರದ ಪ್ರಸಿದ್ಧ ಕಾಡುಮಲ್ಲೇಶ್ವರ ದೇವಸ್ಥಾನ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ತೆರಯಲಿದ್ದು, ಸೂರ್ಯಗ್ರಹಣದ ಸಮಯದವರೆಗೆ ಬಂದ್‌ ಆಗಲಿದೆ. ಬಳಿಕ, ಸಂಜೆ 6 ಗಂಟೆಯಿಂದ ದೇವಸ್ಥಾನದ  ಶುದ್ದಿ ಕಾರ್ಯ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಭಕ್ತಾದಿಗಳಿಗೆ  ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. 

ಅದೇ ರೀತಿ, ಮಲ್ಲೇಶ್ವರದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಗ್ರಹಣದ ಪ್ರಯುಕ್ತ ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ ಶುರುವಾಗಲಿದ್ದು, ಬೆಳಗ್ಗೆ 8 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಹಾಗೂ 10 ಗಂಟೆಗೆ ಬಂದ್‌ ಆಗಲಿದೆ. ನಂತರ, ಸಂಜೆ 7.30 ಗಂಟೆಗೆ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶವಿದೆ. ಹಾಗೂ, ಅಕ್ಟೋಬರ್ 26 ರಂದು ಬೆಳಗ್ಗೆ 10 ಗಂಟೆಗೆ ಗ್ರಹಣ ಶಾಂತಿ ಹೋಮ ನಡೆಯಲಿದೆ ಎಂದೂ ತಿಳಿದುಬಂದಿದೆ.

ಹಾಗೂ, ಚಾಮರಾಜಪೇಟೆಯ ಗವಿಗಂಗಾದರ ದೇವಸ್ಥಾನ ಸಹ ಬೆಳಗ್ಗೆ 6 ಗಂಟೆಗೆ ತೆರಯಲಿದ್ದರೆ, 8 ಗಂಟೆಯವರೆಗೆ ಮಾತ್ರ ಭಕ್ತಾದಿಗಳಿಗೆ ದೇರ ದರ್ಶನಕ್ಕೆ ಅವಕಾಶವಿದೆ. ಹಾಗೂ, ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ದೋಷವಿರುವ ನಕ್ಷತ್ರದವರಿಗೆ ದೋಷಪರಿಹಾರ ಹೋಮ ನಡೆಯುತ್ತದೆ. ಇನ್ನು,  ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿದೆ.

ಇನ್ನೊಂದೆಡೆ, ಚಾಮರಾಜಪೇಟೆಯ ಬಂಡಿ ಮಹಾಕಾಳಿ ದೇವಸ್ಥಾನ ಅಮಾವಾಸ್ಯೆ ದಿನ ಓಪನ್ ಇರುವ ಏಕೈಕ ದೇವಸ್ಥಾನ ಎಂದೂ ಹೇಳಲಾಗಿದೆ. 

ತಿರುಪತಿ ದೇವಾಲಯವೂ ಬಂದ್‌
ನಾಳೆ ಸೂರ್ಯಗ್ರಹಣ ಹಿನ್ನೆಲೆ, ಭಕ್ತರಿಗೆ 2 ದಿನ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲ. 12 ತಾಸು ವೆಂಕಟೇಶ್ವರ ದೇವಸ್ಥಾನ ಮುಚ್ಚಲಾಗುತ್ತದೆ. ಈ ಹಿನ್ನೆಲೆ, ನಾಳೆ ತಿರುಪತಿಯಲ್ಲಿ ವಿಐಪಿ, ಶ್ರೀವಾಣಿ, ವಿಶೇಷ ದರ್ಶನ ಹಾಗೂ ನಿತ್ಯ ಅನ್ನದಾನವೂ ರದ್ದು ಮಾಡಲಾಗಿದೆ. ಇನ್ನು, ಶುದ್ಧಿ- ಪುಣ್ಯಾಹವಾಚನದ ಬಳಿಕ ತಿಮ್ಮಪ್ಪನಿಗೆ ಪೂಜೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದೆ. 

click me!