Solar Eclipse 2022: ವರ್ಷದ ಮೊದಲ ಸೂರ್ಯ ಗ್ರಹಣ ಯಾವಾಗ? ಭಾರತದಲ್ಲಿ ಕಾಣುವುದೇ?

By Suvarna NewsFirst Published Apr 22, 2022, 2:48 PM IST
Highlights

Solar Eclipse: ಈ ವರ್ಷ ಎರಡು ಸೂರ್ಯ ಗ್ರಹಣ ಸಂಭವಿಸಲಿದೆ. ಮೊದಲ ಸೂರ್ಯ ಗ್ರಹಣ ಇದೇ ತಿಂಗಳು ಸಂಭವಿಸಲಿದೆ. ವರ್ಷದ ಮೊದಲ ಸೂರ್ಯ ಗ್ರಹಣ ಎಂದು? ಸೂತಕದ ಸಮಯ ಎಷ್ಟು ಎಂಬೆಲ್ಲ ಮಾಹಿತಿ ಇಲ್ಲಿದೆ.
 

ಈ ವರ್ಷದ ಮೊದಲ ಸೂರ್ಯಗ್ರಹಣ (solar eclipse) ಏಪ್ರಿಲ್ 30ರಂದು ಸಂಭವಿಸಲಿದೆ. ಅಂದಹಾಗೆ, ಈ ವರ್ಷ ಎರಡು ಸೂರ್ಯಗ್ರಹಣಗಳಿವೆ. ಮೊದಲ ಸೂರ್ಯಗ್ರಹಣವು 30 ಏಪ್ರಿಲ್ (April) ರಂದು ಸಂಭವಿಸಲಿದ್ದ, ಸೂರ್ಯ ಗ್ರಹಣ ಭಾಗಶಃ ಕಾಣಲಿದೆ. ಸೂರ್ಯ ಗ್ರಹಣವು ಒಂದು ಪ್ರಮುಖ ಖಗೋಳ ಘಟನೆಯಾಗಿದೆ. ಸೂರ್ಯ ಗ್ರಹಣಕ್ಕೆ ಹಿಂದೂ ಧರ್ಮದಲ್ಲಿ  (Hinduism) ಮಹತ್ವದ ಸ್ಥಾನವಿದೆ. ಗ್ರಹಣವನ್ನು ಹಿಂದೂ ಧರ್ಮದಲ್ಲಿ ಅಶುಭವೆಂದು ನಂಬಲಾಗಿದೆ. ಧರ್ಮದ ಪ್ರಕಾರ, ಸೂರ್ಯ ಗ್ರಹಣದ ವೇಳೆ ಅನೇಕ ಕೆಲಸ (Work)ಗಳನ್ನು ಮಾಡಬಾರದು. ಸೂರ್ಯಗ್ರಹಣದ ಸಂದರ್ಭದಲ್ಲಿ ಸೂತಕ ಕಾಲವನ್ನೂ ಹಿಂದೂ ಧರ್ಮದಲ್ಲಿ ಆಚರಿಲಾಗುತ್ತದೆ. 

ಮೊದಲ ಸೂರ್ಯಗ್ರಹಣದ ಸಮಯ : ಈ ವರ್ಷದ ಸೂರ್ಯಗ್ರಹಣವು ಏಪ್ರಿಲ್ 30 ರ ಮಧ್ಯರಾತ್ರಿ 12 ಗಂಟೆ 15 ನಿಮಿಷದಿಂದ  ಪ್ರಾರಂಭವಾಗಲಿದೆ ಮತ್ತು ಮರುದಿನ ಬೆಳಿಗ್ಗೆ 4 ಗಂಟೆ 8 ನಿಮಿಷಕ್ಕೆ ಮುಕ್ತಾಯವಾಗಲಿದೆ. ಈ ಬಾರಿ ಸೂರ್ಯಗ್ರಹಣವು ಭಾಗಶಃವಾಗಿದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗುವುದಿಲ್ಲ.

Latest Videos

Vastu Tips: ಈ ದಿಕ್ಕಿನಲ್ಲಿ ಗೋಡೆ ಗಡಿಯಾರವಿದ್ದರೆ ಸಂಪತ್ತನ್ನು ಆಕರ್ಷಿಸುತ್ತದೆ!

2022 ರಲ್ಲಿ ಎರಡು ಸೂರ್ಯಗ್ರಹಣ : ಮೊದಲೇ ಹೇಳಿದಂತೆ ಈ ವರ್ಷ ಎರಡು ಸೂರ್ಯ ಗ್ರಹಣ ಸಂಭವಿಸಲಿದೆ. ಮೊದಲ ಗ್ರಹಣ ಏಪ್ರಿಲ್ 30ರಂದು ಕಾಣಸಿಗಲಿದೆ. ಎರಡನೇ ಗ್ರಹಣವು  ಅಕ್ಟೋಬರ್ 25 ರಂದು ಸಂಭವಿಸಲಿದೆ. ಅಕ್ಟೋಬರ್ ನಲ್ಲಿ ಸಂಭವಿಸಲಿರುವ  ಸೂರ್ಯಗ್ರಹಣದ ಸಮಯ ಸಂಜೆ 4 ಗಂಟೆ 29 ನಿಮಿಷದಿಂದ ಶುರುವಾಗಲಿದ್ದು 5 ಗಂಟೆ 42 ರಂದು ಮುಗಿಯಲಿದೆ. ಈ ಸೂರ್ಯಗ್ರಹಣವು ಭಾರತ (India)ದ ಕೆಲವು ಸ್ಥಳಗಳಲ್ಲಿ ಸಹ ಗೋಚರಿಸಲಿದೆ.

ಮೊದಲ ಸೂರ್ಯ ಗ್ರಹಣ ಎಲ್ಲೆಲ್ಲಿ ಸಂಭವಿಸಲಿದೆ ? : ಈ ಬಾರಿ ಮೂರು ಗಂಟೆ 52 ನಿಮಿಷಗಳ ಕಾಲ ಸೂರ್ಯಗ್ರಹಣವಾಗಲಿದೆ. ಅಂಟಾರ್ಕ್ಟಿಕಾ, ಅಟ್ಲಾಂಟಿಕ್, ಪೆಸಿಫಿಕ್ ಮಹಾಸಾಗರ, ದಕ್ಷಿಣ ಅಮೆರಿಕಾ ಮತ್ತು ಪಶ್ಚಿಮ ದಕ್ಷಿಣ ಅಮೆರಿಕಾದಲ್ಲಿ ಗ್ರಹಣ ಗೋಚರಿಸಲಿದೆ.

ನಿಮ್ಮ ಮುಖದ ಮಚ್ಚೆಗಳು ನಿಮ್ಮ ಬಗ್ಗೆ ಏನು ಹೇಳ್ತಿವೆ ಗೊತ್ತಾ?

ಸೂರ್ಯಗ್ರಹಣದ ಸಮಯದಲ್ಲಿ ಇವುಗಳನ್ನು ನೆನಪಿಡಿ : ಈ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಹಾಗಾಗಿ ಸೂತಕದ ಸಮಯವಿಲ್ಲ. ಹಾಗಾಗಿ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಆದ್ರೆ ಸಾಮಾನ್ಯವಾಗಿ ಗ್ರಹಣದ ಸೂತಕದ ವೇಳೆ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ದೇವಾಲಯಗಳು ಈ ಸಮಯದಲ್ಲಿ ಮುಚ್ಚಿರುತ್ತವೆ. ಗ್ರಹಣ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದು. ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಜನರು ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎನ್ನಲಾಗುತ್ತದೆ. ಇದಲ್ಲದೆ, ಗ್ರಹಣದ ಸಮಯದಲ್ಲಿ ಆಹಾರ ತಯಾರಿಸುವುದು ಹಾಗೂ ಆಹಾರ ತಿನ್ನುವುದನ್ನು ಮಾಡಬಾರದು. ತುಳಸಿ ಎಲೆಗಳನ್ನು ಆಹಾರ ಮತ್ತು ನೀರಿನಲ್ಲಿ ಹಾಕಿಡಬೇಕು. ಗ್ರಹಣ ಮುಗಿದ ನಂತ್ರ ನೀವು ಅದನ್ನು ಬಳಸಬಹುದು, ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬರಬಾರದು. ಗ್ರಹಣ ಶುರುವಾಗುವ ಸಂದರ್ಭದಲ್ಲಿ ಸ್ನಾನ ಮಾಡಿ, ದೇವರ ಪ್ರಾರ್ಥನೆ ಮಾಡ್ಬೇಕು. ಗ್ರಹಣ ಮುಗಿದ ನಂತ್ರ ಮತ್ತೆ ಸ್ನಾನ ಮಾಡಬೇಕು ಎಂಬ ನಂಬಿಕೆಯಿದೆ. 

ಸೂರ್ಯ ಗ್ರಹಣ ಹೇಗೆ ಸಂಭವಿಸುತ್ತದೆ : ಭೂಮಿ ಹಾಗೂ ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯನ ಕಿರಣಗಳು ಆಗ ಭೂಮಿಗೆ ತಲುಪುವುದಿಲ್ಲ. ಸೂರ್ಯಗ್ರಹಣ ಯಾವಾಗಲೂ ಅಮಾವಾಸ್ಯೆಯ ದಿನದಂದು ನಡೆಯುತ್ತದೆ. ಸೂರ್ಯನ ಕಿರಣಗಳು ಕಡಿಮೆ ಪ್ರಮಾಣದಲ್ಲಿ ಭೂಮಿಯನ್ನು ತಲುಪಿದಾಗ ಅದನ್ನು ಭಾಗಶಃ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಿದ್ದರೆ ಅದನ್ನು ಸಂಪೂರ್ಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಸೂರ್ಯ ಗ್ರಹಣವನ್ನು ಎಂದೂ ಬರಿಗಣ್ಣಿನಿಂದ ನೋಡಬಾರದು. ಇದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಸೂರ್ಯಗ್ರಹಣವನ್ನು ವೀಕ್ಷಿಸಲು ಯಾವಾಗಲೂ ಕನ್ನಡಕ, ಬೈನಾಕ್ಯುಲರ್ ಅಥವಾ ಬಾಕ್ಸ್ ಪ್ರಾಜೆಕ್ಟ್ ಬಳಸಬೇಕು.

click me!