ದಾನ ಮಾಡುವುದರಿಂದ ಅತ್ಯಂತ ಶ್ರೇಷ್ಠವೆಂದು ಹೇಳಲಾಗುತ್ತದೆ.ನಿರ್ಗತಿಕರಿಗೆ, ಅವಶ್ಯಕತೆ ಇರುವವರಿಗೆ ಶಕ್ತಿಯ ಅನುಸಾರ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಪುಣ್ಯ ಫಲ ಸಿಗುತ್ತದೆ. ಅದೂ ಕಾಲಕ್ಕೆ ತಕ್ಕಂತೆ ಅವಶ್ಯಕವಾಗುವ ವಸ್ತುವನ್ನು ದಾನ ನೀಡಿದರೆ ಶುಭ ಪರಿಣಾಮಗಳು ಉಂಟಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ದಾನವಾಗಿ ನೀಡಬೇಕಾದ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ...
ಹಿಂದೂ ಪರಂಪರೆಯಲ್ಲಿ ದಾನ (Donation) ಧರ್ಮಕ್ಕೆ ವಿಶೇಷವಾದ ಮಹತ್ವವಿದೆ. ದಾನ ಎಂದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಕ್ತ್ಯಾನುಸಾರ ಯಾವುದಾದರು ವಸ್ತುವನ್ನು ಇತರರಿಗೆ ನೀಡುವುದು. ಈ ರೀತಿ ದಾನ ಮಾಡುವುದರಿಂದ ಭಗವಂತನ (God) ಕೃಪೆ ಸಿಗುವುದಲ್ಲದೆ. ಕೈಗೆತ್ತಿಕೊಂಡ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ದಾನ ಮಾಡುವುದರಿಂದ ಭೂಲೋಕದಲ್ಲಿ ಅಷ್ಟೇ ಅಲ್ಲದೆ, ಮರಣದ ನಂತರ ಪರಲೋಕದಲ್ಲಿಯೂ ಮೋಕ್ಷ ಪ್ರಾಪ್ತಿಗೆ ಅನುಕೂಲವಾಗುತ್ತದೆ. ದಾನಗಳಲ್ಲಿ ಅನೇಕ ವಿಧದ ದಾನಗಳಿವೆ. ನೇತ್ರದಾನ, ವಿದ್ಯಾದಾನ ಅನ್ನದಾನ ಹೀಗೆ ವಿಧ ವಿಧವಾದ ದಾನಗಳಿವೆ. ಅಷ್ಟೆ ಅಲ್ಲದೆ ಕೆಲವು ವಿಶೇಷ ತಿಥಿ, ಹಬ್ಬಗಳ (Festival) ಸಮಯದಲ್ಲಿ ಮಾಡುವ ದಾನಕ್ಕೆ ವಿಶೇಷ ಸ್ಥಾನ ಪ್ರಾಪ್ತವಾಗಲಿದೆ. ಹಾಗಾಗಿ ನಾನು ಮಾಡುವಾಗ ಸರಿಯಾದ ಸಮಯವನ್ನು (Time) ಸಹ ನೋಡಿಕೊಳ್ಳಲಾಗುತ್ತದೆ. ಹಾಗೆಯೇ ಆಯಾ ದಾನಗಳಿಗೆ ತಕ್ಕದಾದ ವಿಶೇಷ ಫಲ ಪ್ರಾಪ್ತಿ ಆಗುತ್ತದೆ. ಆಯಾ ಋತುವಿಗೆ ತಕ್ಕಂತೆ, ಅಗತ್ಯವಿರುವವರಿಗೆ ಅವಶ್ಯವಿರುವ ವಸ್ತುವನ್ನು ದಾನವಾಗಿ (Donate) ನೀಡುವುದರಿಂದ ತೊಂದರೆ ತಾಪತ್ರಯಗಳು ದೂರವಾಗುತ್ತವೆ.
ವಿಶೇಷ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಪುಣ್ಯ ಲಭಿಸುತ್ತದೆ ಮತ್ತು ಸಕಲ ಸಂಕಷ್ಟಗಳು ದೂರವಾಗುತ್ತವೆ, ಗ್ರಹ ದೋಷಗಳಿಂದ ಮುಕ್ತಿ ದೊರಕುತ್ತದೆ ಅಷ್ಟೆ ಅಲ್ಲದೆ ಸಕಲ ಪಾಪಗಳು ನಿವಾರಣೆಯಾಗುತ್ತವೆ. ಹಾಗಾದರೆ ಬೇಸಿಗೆಯನ್ನು (Summer) ಯಾವ ವಸ್ತುವನ್ನು ದಾನವಾಗಿ ನೀಡಬೇಕು ಎಂಬುದನ್ನು ತಿಳಿಯೋಣ...
ಜಲ (water):
ಬಾಯಾರಿದವರಿಗೆ ನೀರು ಕೊಡುವುದು ಅತ್ಯಂತ ಪುಣ್ಯದ ಕೆಲಸ. ಬೇಸಿಗೆ ಬಂತೆಂದರೆ ಪಶು, ಪಕ್ಷಿ (Bird), ಪ್ರಾಣಿಗಳಿಗೆ (Animal) ಹೆಚ್ಚು ನೀರಡಿಕೆ ಆಗುತ್ತದೆ. ಹಾಗಾಗಿ ಪುಣ್ಯ ಸಂಪಾದನೆ ಮಾಡಲು ಬೇಸಿಗೆಯಲ್ಲಿ ಉತ್ತಮ ಅವಕಾಶ ಸಿಗುತ್ತದೆ. ದಾನದಂಥಹ ಪುಣ್ಯದ ಕೆಲಸ ಮಾಡಲು ದೊಡ್ಡ ದೊಡ್ಡ ವಸ್ತುಗಳನ್ನೇ ಕೊಡಬೇಕೆಂದಿಲ್ಲ. ಅವಶ್ಯಕತೆ ಇದ್ದಾಗ ನೀರು ಕೊಟ್ಟು ಸಂಪಾದಿಸಿದ ಪುಣ್ಯದಿಂದ ಮೋಕ್ಷವನ್ನೇ ಪಡೆಯಬಹುದಾಗಿದೆ. ಹಲವರು ಬೇಸಿಗೆಯ ಸಂದರ್ಭದಲ್ಲಿ ನೀರನ್ನು ದಾನವಾಗಿ ನೀಡುವುದನ್ನು ಕಂಡಿರುತ್ತೇವೆ. ಹಾಗೇನಾದರೂ ನೀರನ್ನು ದಾನವಾಗಿ ನೀಡುವ ಯೋಜನೆ ಹಾಕಿಕೊಂಡರೆ, ಎರಡು ಪಾತ್ರೆಯಲ್ಲಿ ನೀರನ್ನು ಇಡಬೇಕು. ಒಂದು ಪಾತ್ರೆಯಲ್ಲಿರುವ ನೀರು ವಿಷ್ಣುವಿಗೆ (Lord Vishnu) ಮತ್ತೊಂದು ಪಾತ್ರೆಯಲ್ಲಿರುವುದು ಪೂರ್ವಜರಿಗೆ ಎಂದು ತೆಗೆದಿಟ್ಟು ಆ ನೀರನ್ನು ಎಲ್ಲರಿಗೂ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ –ಶಾಂತಿ ನೆಲೆಸುವುದಲ್ಲದೇ, ಬಾಯಾರಿದವರಿಗೆ ನೀರು ಕೊಟ್ಟದ್ದಕ್ಕೆ ಹಾರೈಕೆಯೊಂದಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಇದನ್ನು ಓದಿ: ಸಿಹಿ ಮಾತಿಂದಲೇ ನಿಮ್ಮ Secrets ಬಾಯಿ ಬಿಡಿಸೋ ಚಾಣಾಕ್ಯರು ಈ ರಾಶಿಯವರು!
ಮಾವು (Mango)
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಹೇರಳವಾಗಿ ದೊರೆಯುತ್ತದೆ. ಶಾಸ್ತ್ರದಲ್ಲಿ ಹೇಳುವ ಪ್ರಕಾರ ಫಲವನ್ನು ದಾನವಾಗಿ ನೀಡಬೇಕು. ಹಾಗಾಗಿ ಬೇಸಿಗೆ ಫಲವಾಗಿರುವ ಮಾವಿನ ಹಣ್ಣನ್ನು ದಾನವಾಗಿ ನೀಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಮಾವಿನ ಹಣ್ಣು ಮತ್ತು ಸೂರ್ಯ (Sun) ದೇವನಿಗೆ ನೇರ ಸಂಬಂಧವಿದೆ. ಹಾಗಾಗಿ ಈ ಹಣ್ಣನ್ನು ದಾನವಾಗಿ ನೀಡುವುದರಿಂದ ಸೂರ್ಯದೇವನ ಅನುಗ್ರಹ ಪ್ರಾಪ್ತವಾಗುತ್ತದೆ. ಜಾತಕದಲ್ಲಿ ಸೂರ್ಯ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಅಂಥವರು ಮಾವಿನ ಹಣ್ಣನ್ನು ದಾನವಾಗಿ ನೀಡಿದರೆ, ಸೂರ್ಯಗ್ರಹಕ್ಕೆ ಬಲ ಬರುತ್ತದೆ. ಅಷ್ಟೇ ಅಲ್ಲದೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು (Success) ಸಿಗುತ್ತದೆ.
ಇದನ್ನು ಓದಿ : ಇದು ವೈಶಾಖ ಮಾಸ, ಪುಣ್ಯ ಪ್ರಾಪ್ತಿಗೆ ಮಾಡಿ ಈ ಕೆಲಸ!
ಬೆಲ್ಲ ( Jaggery ):
ಧರ್ಮ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಪೂಜೆ ಮತ್ತು ಇತರ ಕಾರ್ಯಗಳಲ್ಲಿ ಬೆಲ್ಲವನ್ನು ಬಳಸಲಾಗುತ್ತದೆ. ಹಾಗಾಗಿ ಬೆಲ್ಲವನ್ನು ದಾನವಾಗಿ ನೀಡುವುದರಿಂದ ಜೀವನಕ್ಕೆ ಶುಭ ಪ್ರಭಾವಗಳು ಉಂಟಾಗುತ್ತವೆ. ಬೆಲ್ಲವನ್ನು ದಾನ ಮಾಡುವುದರಿಂದ ಸೂರ್ಯ ಗ್ರಹಕ್ಕೆ ಬಲ ಬರುತ್ತದೆ. ಇದರಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ. ಅಷ್ಟೇ ಅಲ್ಲದೆ ಆತ್ಮವಿಶ್ವಾಸ (Confidence) ಹೆಚ್ಚುತ್ತದೆ. ಬಾಯಾರಿದವರಿಗೆ ನೀರು ಮತ್ತು ಬೆಲ್ಲವನ್ನು ನೀಡುವುದರಿಂದ ಪುಣ್ಯ ಲಭಿಸುತ್ತದೆ.