Money And Astrology: 5 ರೂ. ನಾಣ್ಯದಲ್ಲಿದೆ ಮ್ಯಾಜಿಕ್! ಹೀಗೆ ಮಾಡಿದ್ರೆ ಈ ಜನ್ಮದಲ್ಲಿ ಕಾಡಲ್ಲ ಹಣದ ಕೊರತೆ

By Suvarna News  |  First Published Dec 23, 2021, 3:54 PM IST

ಐದು ರೂಪಾಯಿಗೆ ಏನ್ ಬರುತ್ತೆ ಹೇಳಿ? ಇಷ್ಟದ ಚಾಕೋಲೇಟ್ ಖರೀದಿಸಲೂ ಇದು ಸಾಲೋದಿಲ್ಲ. ಯಸ್, ಐದು ರೂಪಾಯಿಗೆ ದೊಡ್ಡ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲದೆ  ಇರಬಹುದು. ಆದ್ರೆ ಇದಕ್ಕೆ ಮನುಷ್ಯನನ್ನು ಶ್ರೀಮಂತನನ್ನಾಗಿಸುವ ಶಕ್ತಿಯಿದೆ.


ಜೀವನದಲ್ಲಿ ಎಲ್ಲಾ ಸೌಕರ್ಯ ಪಡೆಯಲು ಹಣ (Money )ಅತ್ಯಗತ್ಯವಿದೆ.  ಕೆಲವರು ಐಷಾರಾಮಿ (Luxury )ಜೀವನಕ್ಕೆ ಮತ್ತೆ ಕೆಲವರು ಮೂರು ಹೊತ್ತು ಸರಿಯಾಗಿ ಊಟಕ್ಕೆ ಹಗಲಿರುಳು ದುಡಿಯುತ್ತಾರೆ. ಎಷ್ಟು ಕೆಲಸ ಮಾಡಿದರೂ ಅನೇಕರ ಕೈನಲ್ಲಿ ಹಣ ನಿಲ್ಲುವುದಿಲ್ಲ. ಯಶಸ್ಸು(Success) ಬರುವುದಿಲ್ಲ. ಇದು ಅಸಮಾಧಾನ,ನೋವಿಗೆ ಕಾರಣವಾಗುತ್ತದೆ. ಕೆಲವರ ಹಣೆಬರಹ ಎಷ್ಟು ಗಟ್ಟಿಯಾಗಿದ್ದರೂ ಲಕ್ಷ್ಮಿಯ ಆಶೀರ್ವಾದ ಸದಾ ಅವರ ಮೇಲೆ ಇರುವುದಿಲ್ಲ. ಲಕ್ಷ್ಮಿ(Laxmi) ಸದಾ ಮನೆಯಲ್ಲಿ ನೆಲೆಸಬೇಕು,ಆರ್ಥಿಕ (Economic )ವೃದ್ಧಿಯಾಗಬೇಕೆಂದರೆ ವಾಸ್ತು ನಿಯಮಗಳನ್ನೂ ಪಾಲನೆ ಮಾಡಬೇಕಾಗುತ್ತದೆ. 

ಬಹುತೇಕರು ವಾಸ್ತು(Vastu)ವನ್ನು ಪಾಲನೆ ಮಾಡುವುದಿಲ್ಲ. ಆದರೆ ಮನೆಯ ಸಣ್ಣ ಸಣ್ಣ ವಿಷ್ಯಗಳು ವಾಸ್ತುವಿನಲ್ಲಿ ಸೇರಿರುತ್ತವೆ. ಚಪ್ಪಲಿ ಇಡುವ ಜಾಗದಿಂದ ಹಿಡಿದು ಮನೆಯ ಶೋಕೇಸ್ ನಲ್ಲಿ ಇಟ್ಟ ಸಣ್ಣ ಮೂರ್ತಿ ಕೂಡ ವಾಸ್ತು ಬದಲಿಸುವ ಶಕ್ತಿ ಹೊಂದಿರುತ್ತದೆ. ವಾಸ್ತು ದೋಷವಾದಲ್ಲಿ ಆರ್ಥಿಕ ಮುಗ್ಗಟ್ಟು ಮಾತ್ರವಲ್ಲ ಅನಾರೋಗ್ಯ,ಒತ್ತಡ,ಕೌಟುಂಬಿಕ ಕಲಹಗಳು ಕಾಡುತ್ತವೆ. ಎಂದೂ ಹಣದ ಕೊರತೆ ಕಾಡಬಾರದು,ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಿರಬೇಕು ಎನ್ನುವವರು ಸಣ್ಣ-ಸಣ್ಣ ಸಂಗತಿ ಮೇಲೆ ಗಮನ ನೀಡಬೇಕು. ಮನೆಯಲ್ಲಿರುವ ಐದು ರೂಪಾಯಿ ನಾಣ್ಯವೂ ನಿಮ್ಮ ಅದೃಷ್ಟ ಬದಲಿಸಬಲ್ಲದು. ಐದು ರೂಪಾಯಿ ನಾಣ್ಯದಲ್ಲಿ ಏನು ಮಾಡಿದರೆ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ ಎಂಬ ವಿವರ ಇಲ್ಲಿದೆ. 

Tap to resize

Latest Videos

undefined

Great Sages: ಸಪ್ತರ್ಷಿಗಳೆಂದರೆ ಯಾರು, ಅವರ ವಿಶೇಷತೆಗಳೇನು?

ಐದು ರೂಪಾಯಿ ನಾಣ್ಯದಲ್ಲಿದೆ ಶ್ರೀಮಂತಿಕೆಯ ಗುಟ್ಟು :
ಎಲ್ಲರ ಮನೆಯಲ್ಲೂ ಐದು ರೂಪಾಯಿಯ ಒಂದು ನಾಣ್ಯ ಇದ್ದೇ ಇರುತ್ತದೆ. ಹಾಗೆ ಎಲ್ಲರೂ ಶ್ರೀಮಂತರಾಗಬೇಕೆಂಬ ಕನಸು ಕಂಡಿರುತ್ತಾರೆ. ಕನಸು ನನಸಾಗಬೇಕೆಂದರೆ ಐದು ರೂಪಾಯಿ ನಾಣ್ಯದ ಸಿಂಪಲ್ ಉಪಾಯವನ್ನು ಪಾಲಿಸಿ. ಐದು ರೂಪಾಯಿ ನಾಣ್ಯದ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಬರೆಯಬೇಕಾಗುತ್ತದೆ. ನಾಣ್ಯದ ಮೇಲೆ ಸಿಂಧೂರದಿಂದ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಬರೆಯಿರಿ. ಇದರ ನಂತರ ಹೆಸರು ಬರೆದ ನಾಣ್ಯವನ್ನು ನೀಡುವ ಮನೆಯ ಛಾವಣಿ ಮೇಲೆ ಇಡಬೇಕಾಗುತ್ತದೆ. ರಾತ್ರಿ ಪೂರ್ತಿ ನಾಣ್ಯ ಛಾವಣಿ ಮೇಲೆ ಇರಬೇಕು. ಛಾವಣಿ ಮೇಲೆ ಇರುವ ನೀರಿನ ತೊಟ್ಟಿ ಮೇಲೆ ಇದನ್ನು ಇಡಬೇಕು. ನಾಣ್ಯ (Coin )ಇಡುವಾಗ ನಿಮ್ಮ ಹೆಸರಿನ ಮೊದಲ ಅಕ್ಷರ ಬರೆದ ಭಾಗ ಮೇಲ್ಭಾಗದಲ್ಲಿರುವಂತೆ ನೀವು ಗಮನ ಹರಿಸಬೇಕಾಗುತ್ತದೆ.
ಎಲ್ಲರ ಮನೆಯ ಛಾವಣಿ ಮೇಲೆ ನೀರಿನ ಟ್ಯಾಂಕ್ (Water tank )ಇರುವುದಿಲ್ಲ. ಅದಕ್ಕೆ ಚಿಂತಿಸುವ ಅಗತ್ಯವಿಲ್ಲ. ಛಾವಣಿ ಮೇಲೆ ಹಾಗೆಯೇ ನೀವು ನಾಣ್ಯವನ್ನು ಇಡಬಹುದು. ಒಂದು ರಾತ್ರಿ ಪೂರ್ತಿ ನಾಣ್ಯ ಅಲ್ಲಿರಬೇಕು.  
ಮರುದಿನ, ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತ, ನಾಣ್ಯವನ್ನು ತೆಗೆಯಬೇಕು. ಈ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಬೇಕು.  ಅದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ನೀವು ಹೀಗೆ ಮಾಡಿದರೆ ನಿಮಗೆ ಈ  ಜನ್ಮದಲ್ಲಿ ಯಾವತ್ತೂ ಹಣದ ಕೊರತೆ ಎದುರಾಗುವುದಿಲ್ಲ. ಆರ್ಥಿಕ ಸಮೃದ್ಧಿಯನ್ನು ನೀವು ಕಾಣಬಹುದು.

ಇದೊಂದೇ ಉಪಾಯವಲ್ಲ,ಬಡತನದಿಂದ ಬಳಲುತ್ತಿರುವವರು ಅಥವಾ ದೀರ್ಘಕಾಲ ಸಾಲದ ಹೊರೆಯನ್ನು ಎದುರಿಸುತ್ತಿರುವವರು ಪೂಜಾ ಸ್ಥಳದಲ್ಲಿ ಅಕ್ಕಿ ಅಥವಾ ಗೋವಿನ ಜೋಳವನ್ನು ತುಂಬಿದ ಕಲಶದಲ್ಲಿ ಐದು ರೂಪಾಯಿಯ ನಾಣ್ಯವನ್ನು ಹಾಕಬೇಕು.ಇದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಶೀಘ್ರವೇ ನಿಮಗೆ ಲಾಭ ಸಿಗಲು ಶುರುವಾಗುತ್ತದೆ.

Sadesath: 2022ರಲ್ಲಿ ಶನಿರಾಶಿಯ ಪ್ರಭಾವ ಯಾರ ಮೇಲೆ? ಯಾರಿಗೆ ಕಷ್ಟ, ಯಾರಿಗೆ ಶುಭ ಫಲ?

ಶುಕ್ರವಾರವನ್ನು ದೇವಿ ಲಕ್ಷ್ಮಿಯ ದಿನವೆನ್ನಲಾಗಿದೆ. ಈ ದಿನ   ಪೂಜಾ ಸ್ಥಳದಲ್ಲಿ  ಕಲಶವನ್ನು ಇಡಬೇಕು. ನಂತರ ಆ ಕಲಶದ ಮೇಲೆ ಐದು ರೂಪಾಯಿಯ ನಾಣ್ಯವನ್ನು ಇಡಬೇಕು. ಇದರ ನಂತರ, ಕಲಶದ ಮೇಲೆ ಕುಂಕುಮದಿಂದ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಬೇಕು. ನಂತರ ಈ ಕಲಶವನ್ನು ಪ್ರತಿನಿತ್ಯವೂ ಪೂಜಿಸಬೇಕು. ಈ ವಿಧಾನ ಕೂಡ ತಾಯಿ ಲಕ್ಷ್ಮಿ ಒಲಿಸಿಕೊಳ್ಳುವ ಒಳ್ಳೆಯ ಉಪಾಯವಾಗಿದೆ.  
 

click me!