ಈ ದೇವಾಲಯ ಆವರಣದಲ್ಲಿ ಮಲಗಿದರೆ ಸಾಕು, ಮಕ್ಕಳಿಲ್ಲದ ಮಹಿಳೆ ಗರ್ಭವತಿಯಾಗುತ್ತಾಳೆ!

By Suvarna News  |  First Published Jan 11, 2023, 10:29 AM IST

ಇಲ್ಲೊಂದು ಅಚ್ಚರಿಯ ಪವಾಡ ನಡೆಯುವ ದೇವಾಲಯವಿದೆ. ಮಕ್ಕಳಿಲ್ಲದ ಮಹಿಳೆಯರು ಈ ದೇವಾಲಯ ಆವರಣದಲ್ಲಿ ಮಲಗಿದರೆ ಅವರಿಗೆ ಯಾವ ಮಗುವಾಗುವುದು, ಆಗುವುದೋ ಇಲ್ಲವೋ ಎಂಬ ಸೂಚನೆಯನ್ನು ತಾಯಿ ನೀಡುತ್ತಾಳೆ. 


ಎಲ್ಲಿ ನಂಬಿಕೆ ಇರುತ್ತದೋ ಅಲ್ಲಿ ಎಲ್ಲವೂ ಇರುತ್ತದೆ. ಈ ಪುಣ್ಯ ಭರತ ಭೂಮಿಯಲ್ಲಿ ಏನು ಬೇಕಾದರೂ ಆಗಬಹುದು. ಪ್ರತಿದಿನ ಒಂದಲ್ಲ ಒಂದು ಪವಾಡ ಇಲ್ಲಿ ನಡೆಯುತ್ತಲೇ ಇರುತ್ತದೆ. ಇಂಥದೊಂದು ಪವಾಡ ಕ್ಷೇತ್ರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಿಮಾಸ್ ಗ್ರಾಮದಲ್ಲಿರುವ ಮಾತಾ ಸಿಮ್ಸಾ ದೇವಾಲಯ.

ದೇವಾಲಯವು ಬೈಜನಾಥದಿಂದ 25 ಕಿಮೀ ಮತ್ತು ಜೋಗಿಂದರ್ ನಗರದಿಂದ ಸುಮಾರು 50 ಕಿಮೀ ದೂರದಲ್ಲಿದೆ. ಇದೊಂದು ವಿಶಿಷ್ಟವಾದ ದೇವಾಲಯವಾಗಿದೆ. ನಂಬಿಕೆಗಳ ಪ್ರಕಾರ, ಮಾ ಸಿಮ್ಸಾ ಈ ದೇವಾಲಯದಲ್ಲಿ ಕುಳಿತಿದ್ದು, ಆಕೆ ಮಕ್ಕಳಾಗದ ಮಹಿಳೆಯರ ಒಡಲು ತುಂಬುತ್ತಾಳೆ.

Tap to resize

Latest Videos

ಮಕ್ಕಳಾಗದ ಮಹಿಳೆಯರು ಬಂದು ಈ ದೇವಾಲಯದ ಚಾವಡಿಯಲ್ಲಿ ಮಲಗಿದರೆ ಅವರು ಕೆಲವೇ ದಿನಗಳಲ್ಲಿ ಗರ್ಭಿಣಿಯಾಗುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿ ಮಲಗುವ ಮಹಿಳೆಯರಿಗೆ ತಾಯಿ ಶಾರದೆ ಸ್ವತಃ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾಳೆ ಮತ್ತು ಮಹಿಳೆಯರಿಗೆ ಅವರು ಮಗನನ್ನು ಹೊಂದುತ್ತಾರೆಯೇ ಅಥವಾ ಮಗಳನ್ನು ಹೊಂದುತ್ತಾರೆಯೇ ಎಂದು ತಿಳಿಸುತ್ತಾಳೆ!  ಈ ದೇವಾಲಯದ ವಿಶೇಷತೆಯಿಂದಾಗಿ ಇದನ್ನು ಸಂತತಿಯ ದೇವಾಲಯ, ಸಂತಾನ ಧಾತ್ರಿ ಮಂದಿರ ಎಂದೂ ಕರೆಯುತ್ತಾರೆ. 

ಪುರಾತನ ನಂಬಿಕೆಗಳ ಪ್ರಕಾರ, ಮಹಿಳೆಯು ಭಕ್ತಿ ಮತ್ತು ನಂಬಿಕೆಯಿಂದ ದೇವಾಲಯದ ನೆಲದ ಮೇಲೆ ಮಲಗಿದರೆ, ತಾಯಿ ಸಿಮ್ಸಾ ತನ್ನ ಕನಸಿನಲ್ಲಿ ಕಾಣಿಸಿಕೊಂಡು ಮಗುವನ್ನು ಹೊಂದಲು ಆಶೀರ್ವದಿಸುತ್ತಾಳೆ. ತಾಯಿ ಇಲ್ಲಿ ತನ್ನ ಭಕ್ತರಿಗೆ ಪಿಂಡಿ ರೂಪದಲ್ಲಿ ದರ್ಶನ ನೀಡುತ್ತಾಳೆ. 

ಈ ತಾರೀಖುಗಳಲ್ಲಿ ಹುಟ್ಟಿದವರಿಗೆ 2023ರಲ್ಲಿ ಲಾಟರಿಯಂಥ ಫಲ, ಇಡೀ ವರ್ಷ ಶುಭಕರ

ತಾಯಿಯು ಕನಸಿನಲ್ಲಿ ಮಹಿಳೆಗೆ ಯಾವುದೇ ಹಣ್ಣು ಅಥವಾ ಹೂವನ್ನು ನೀಡಿದರೆ, ಮಹಿಳೆಗೆ ಮಗುವಾಗುವುದು ಖಚಿತ ಎಂದು ನಂಬಲಾಗಿದೆ. ನವರಾತ್ರಿಯ ಸಮಯದಲ್ಲಿ ಈ ದೇವಾಲಯದಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಏಕೆಂದರೆ ನವರಾತ್ರಿಯ ಸಮಯದಲ್ಲಿ ಮಹಿಳೆಯರು ಇಲ್ಲಿಗೆ ಬರುತ್ತಾರೆ ಮತ್ತು ಮಗುವಿನ ವರ ಪಡೆಯುತ್ತಾರೆ. ಹುಟ್ಟಲಿರುವ ಮಗು ಮಗನೋ ಅಥವಾ ಮಗಳೋ ಎಂಬ ಲಿಂಗದ ಸೂಚನೆಯನ್ನೂ ತಾಯಿ ನೀಡುತ್ತಾಳೆ. ಮಕ್ಕಳಿಲ್ಲದ ಮಹಿಳೆಯರು ಕೇವಲ ಹಿಮಾಚಲದಿಂದಷ್ಟೇ ಅಲ್ಲದೆ ಪಂಜಾಬ್, ಹರಿಯಾಣ, ಚಂಡೀಗಢ ಮೊದಲಾದ ರಾಜ್ಯಗಳಿಂದ ಇಲ್ಲಿಗೆ ಬರುತ್ತಾರೆ.

ಹೆಣ್ಣೋ ಗಂಡೋ?
ಮಹಿಳೆಯು ಕನಸಿನಲ್ಲಿ ತಾಯಿಯಿಂದ ಬಾಳೆಹಣ್ಣು ಅಥವಾ ಪೇರಲ ಹಣ್ಣನ್ನು ಸ್ವೀಕರಿಸಿದರೆ, ಅವಳಿಗೆ ಮಗನು ಹುಟ್ಟುತ್ತಾನೆ ಎಂದರ್ಥ ಮತ್ತು ಅವಳು ಬೆಂಡೆಕಾಯಿ ಅಥವಾ ಸೋರೆಕಾಯಿಯನ್ನು ಸ್ವೀಕರಿಸಿದರೆ ಆ ಮಹಿಳೆಯ ಮಗು ಹೆಣ್ಣು ಎಂದು ಅರ್ಥ!

ಪವಾಡದ ಸಂಗತಿಯೆಂದರೆ, ಮಾತಾ ಸಿಮ್ಸಾ ತನ್ನ ಭಕ್ತರಿಗೆ ಮಕ್ಕಳಾಗುವುದಿಲ್ಲ ಅಥವಾ ತುಂಬಾ ತಡವಾಗಿ ಮಕ್ಕಳಾಗುತ್ತದೆ ಎಂಬುದನ್ನೂ ಹೇಳುತ್ತಾಳೆ. ಮಹಿಳೆ ತನ್ನ ಕನಸಿನಲ್ಲಿ ಲೋಹದ ಅಥವಾ ಮರದಿಂದ ಮಾಡಿದ ಘನ ವಸ್ತುವನ್ನು ಸ್ವೀಕರಿಸಿದರೆ, ಮಹಿಳೆಗೆ ಮಕ್ಕಳಾಗುವುದಿಲ್ಲ ಎಂದು ಅರ್ಥ ಅಥವಾ ತಡವಾಗುತ್ತದೆ ಎಂದೂ ತಿಳಿಯಬಹುದು.

ಕನಸು ಬಿದ್ದ ಕೂಡಲೇ ಎದ್ದು ನಡೆಯಬೇಕು!
ದೇವಾಲಯದ ಬಳಿ ಒಂದು ಮೆಟ್ಟಿಲುಬಾವಿಯೂ ಇದೆ, ಅಲ್ಲಿ ಮಹಿಳೆಯರು ಸ್ನಾನ ಮಾಡಿದ ನಂತರವೇ ದೇವಾಲಯದ ಜಗುಲಿಯಲ್ಲಿ ಮಲಗುತ್ತಾರೆ. ಆದ್ದರಿಂದ ಅವರ ಕನಸಿನಲ್ಲಿ ತಾಯಿಯು ಅವರಿಗೆ ಮಗುವನ್ನು ಆಶೀರ್ವದಿಸುತ್ತಾಳೆ. ಕನಸು ಬಿದ್ದು ತಾಯಿ ಸೂಚನೆ ಕೊಟ್ಟ ಬಳಿಕವೂ ಇಲ್ಲಿಯೇ ಮಲಗಿದ್ದರೆ ಇರುವೆಗಳು ಮಹಿಳೆಯನ್ನು ಕಚ್ಚಲು ಪ್ರಾರಂಭಿಸುತ್ತವೆ ಮತ್ತು ದೇಹದ ಮೇಲೆ ಕೆಂಪು ಗುರುತುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹಾಗಾಗಿ, ಕನಸು ಬಿದ್ದ ಕೂಡಲೇ ಮಹಿಳೆ ಎದ್ದು ದೇವಾಲಯದ ಆವರಣದಿಂದ ಹೊರ ಹೋಗಬೇಕು. 

ಈ ದೇವಾಲಯಕ್ಕೆ ಹೋಗ್ಬೇಕಂದ್ರೆ ಪುರುಷರು ಮಹಿಳೆಯರಂತೆ ವೇಷ ಧರಿಸ್ಲೇಬೇಕು!

ವಿಸ್ಮಯ ಬಂಡೆ
ದೇವಾಲಯದ ಇನ್ನೊಂದು ವಿಸ್ಮಯಕಾರಿ ಸಂಗತಿಯೆಂದರೆ ದೇವಾಲಯದ ಬಳಿ ಇರುವ ಅದ್ಭುತವಾದ ಬಂಡೆ. ಈ ಶಿಲೆಯನ್ನು ನಮ್ಮ ಎರಡೂ ಕೈಗಳಿಂದ ಚಲಿಸಿದರೆ ಅದು ಚಲಿಸುವುದಿಲ್ಲ ಮತ್ತು ತಾಯಿಯ ಹೆಸರು ಹೇಳಿ ಕಿರುಬೆರಳಿನಿಂದ ಅದನ್ನು ಚಲಿಸಲು ಪ್ರಯತ್ನಿಸಿದರೆ ಅದು ಚಲಿಸುತ್ತದೆ. 

click me!