ಪ್ರತೀ ಎರಡು ವರ್ಷಕ್ಕೊಮೆ ನಡೆಯುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸುಪ್ರಸಿದ್ಧ ಮಾರಿಜಾತ್ರಾ ಮಹೋತ್ಸವ ಇಂದಿನಿಂದ ಆರಂಭಗೊಂಡಿದೆ. ಕೋವಿಡ್ ಕಾರಣದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಐದನೇ ವರ್ಷದ ಜಾತ್ರಾ ಮಹೋತ್ಸವವನ್ನು ಮುಂದೂಡಿ ಈ ಭಾರಿ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ.
ಉತ್ತರ ಕನ್ನಡ (ಜ.10): ಪ್ರತೀ ಎರಡು ವರ್ಷಕ್ಕೊಮೆ ನಡೆಯುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸುಪ್ರಸಿದ್ಧ ಮಾರಿಜಾತ್ರಾ ಮಹೋತ್ಸವ ಇಂದಿನಿಂದ ಆರಂಭಗೊಂಡಿದೆ. ಕೋವಿಡ್ ಕಾರಣದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಐದನೇ ವರ್ಷದ ಜಾತ್ರಾ ಮಹೋತ್ಸವವನ್ನು ಮುಂದೂಡಿ ಈ ಭಾರಿ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ.
ಸುಮಾರು 300 ವರ್ಷಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಈ ದುರ್ಗಾಪರಮೇಶ್ವರಿ ದೇವೆಯೂ ಭಕ್ತರು ಬೇಡಿದ್ದನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಈ ಭಾಗದ ಭಕ್ತರಲ್ಲಿದೆ. ಅಲ್ಲದೇ, ಗ್ರಾಮದ ಮೀನುಗಾರ ಸಮುದಾಯದವರು ದೇವಿಯನ್ನು ನಂಬಲು ಪ್ರಾರಂಭಿಸಿದಾಗಿನಿಂದಲೂ ಸಾಕಷ್ಟು ಅಭಿವೃದ್ಧಿ ಕಂಡಿದ್ದಾರೆ. ಇದರಿಂದ ಪ್ರತಿ ವರ್ಷವೂ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಎರಡು ದಿನ ವಿಶೇಷ ಪೂಜೆ ಬಳಿಕ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುತ್ತದೆ.
ದೇವಿಯ ಇತಿಹಾಸವೇ ರೋಚಕ: ಅಂದಹಾಗೆ, ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಇರುವ ಈಗಿನ ಪ್ರದೇಶ ಹಿಂದೆ ನಿರ್ಜನ ಪ್ರದೇಶವಾಗಿತ್ತು.
Chitradurga: ಕಾಡುಗೊಲ್ಲ ಬುಡಕಟ್ಟು ಜನರ ಕ್ಯಾತೆ ಜಾತ್ರೆ: ಮುಳ್ಳಿನ ಗೋಪುರದ ಮೇಲೆ ಯುವಕರ ಕುಣಿತ..!
ಇಲ್ಲಿನ ಪೊದೆಯೊಂದರ ಮಧ್ಯೆ ಪ್ರತಿನಿತ್ಯ ತೆರಳುವ ಹಸುವೊಂದು ಹಾಲೆರೆದು ಬರುತಿತ್ತು. ಆ ಬಳಿಕ ನೋಡಿ ವಿಚಾರಿಸಿದಾಗ ಅಲ್ಲಿ ದೇವಿ ನೆಲೆಸಿರುವುದು ತಿಳಿದು ಬಂದಿದೆ. ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರು ದೇವಿಯನ್ನು ನಂಬಲು ಆರಂಭಿಸಿದ್ದರು. ಇದರಿಂದ ಮೀನುಗಾರರು ತಮ್ಮ ದುಡಿಮೆಯಲ್ಲಿನ ಒಂದು ಪಾಲನ್ನು ದೇವಿಗೆ ಅರ್ಪಣೆ ಮಾಡುತ್ತಾರೆ. ಬಂದಂತಹ ಭಕ್ತರ ಸಕಲ ಇಷ್ಟಾರ್ಥಗಳನ್ನು ದೇವಿಯೂ ಈಡೇರಿಸುತ್ತಾಳೆ ಅನ್ನೋದು ಇಲ್ಲಿನ ಜನರ ನಂಬಿಕೆಯಾಗಿದೆ.
ಶಾಸಕರಿಂದ ವಿಶೇಷ ಪೂಜೆ: ಮಾರಿ ಜಾತ್ರೆಗೆ ಆಗಮಿಸಿದ ಶಾಸಕ ಸುನೀಲ್ ನಾಯ್ಕ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ರಾಜ್ಯದಲ್ಲಿಯೇ ತುಂಬಾ ಅಚ್ಚುಕಟ್ಟಾಗಿ ವಿಭಿನ್ನವಾಗಿ ಜಾತ್ರೆ ಆಯೋಜನೆ ಮಾಡಲಾಗುತ್ತದೆ. ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾಕಷ್ಟು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ದೇವಾಲಯ ಭಕ್ತರ ಸಹಕಾರದಿಂದ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಅದ್ಧೂರಿ ಜಾತ್ರೆ ನಡೆಯುತ್ತದೆ ಎಂದು ದೇವಸ್ಥಾನ ಆಡಳಿತ ಸಮಿತಿ ಸದಸ್ಯರು ತಿಳಿಸಿದರು.
ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ: 5 ಲಕ್ಷ ಮಂದಿಗೆ ಪ್ರಸಾದ..!
ಭಕ್ತರ ಅಮ್ಮನಾಗಿ ಖ್ಯಾತಿ: ಮಾರಿ ದೇವಿ ಇಂದು ಪ್ರಸಿದ್ಧ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನಾಗಿ ಖ್ಯಾತಿ ಪಡೆದಿದ್ದಾಳೆ. ಈ ದೇವಿಯ ವಿಶೇಷತೆಗಳು, ಪವಾಡಗಳನ್ನು ಕಂಡವರು ಈಗಲೂ ಇದ್ದಾರೆ. ದೇವಾಲಯದ ಇತಿಹಾಸದ ಬಗ್ಗೆ ದಾಖಲೆಗಳು ಇಲ್ಲದಿದ್ದರೂ, ಸಾವಿರಾರು ವರ್ಷಗಳ ಇತಿಹಾಸ ಇದೆ ಎನ್ನುತ್ತಾರೆ ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ. ಒಟ್ಟಾರೆ ಭಕ್ತರ ಪಾಲಿನ ಶಕ್ತಿ ಕೇಂದ್ರವಾಗಿರುವ ದುರ್ಗಾ ಪರಮೇಶ್ವರಿ ದೇವಸ್ಥಾನದ ಮಾರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ಭಕ್ತರ ದಂಡೇ ಹರಿದುಬರುತ್ತಿದೆ. ಜಾತ್ರೆಯಲ್ಲಿ ಆಡಳಿತ ಮಂಡಳಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿರುವುದಕ್ಕೆ ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.