ಸಿದ್ದೇಶ್ವರ ಶ್ರೀಗಳ ಅಗಲಿಕೆ ಹಿನ್ನೆಲೆ ಅದ್ದೂರಿ ಜಾತ್ರೆಗೆ ಬ್ರೇಕ್, ಸರಳವಾಗಿರಲಿದೆ ಶ್ರೀ ಸಿದ್ದೇಶ್ವರ ದೇವರ ಜಾತ್ರೆ

Published : Jan 10, 2023, 06:42 PM ISTUpdated : Jan 10, 2023, 06:44 PM IST
ಸಿದ್ದೇಶ್ವರ ಶ್ರೀಗಳ ಅಗಲಿಕೆ ಹಿನ್ನೆಲೆ ಅದ್ದೂರಿ ಜಾತ್ರೆಗೆ ಬ್ರೇಕ್, ಸರಳವಾಗಿರಲಿದೆ ಶ್ರೀ ಸಿದ್ದೇಶ್ವರ ದೇವರ ಜಾತ್ರೆ

ಸಾರಾಂಶ

ಗುಮ್ಮಟನಗರಿಯ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ಈ ವರ್ಷ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಡೆದಾಡುವ ದೇವರು, ಸರಳತೆಯ ಸಂತ ಸಿದ್ದೇಶ್ವರ ಶ್ರೀಗಳು ನಿಧನದಿಂದಾಗಿ ಸರಳವಾಗಿಯೆ ಜಾತ್ರೆ ಆಚರಿಸಲು ತೀರ್ಮಾನಿಸಲಾಗಿದೆ.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ.10) : ಗುಮ್ಮಟನಗರಿಯ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ಈ ವರ್ಷ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಡೆದಾಡುವ ದೇವರು, ಸರಳತೆಯ ಸಂತ ಸಿದ್ದೇಶ್ವರ ಶ್ರೀಗಳು ನಿಧನದಿಂದಾಗಿ ಸರಳವಾಗಿಯೆ ಜಾತ್ರೆ ಆಚರಿಸಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯಲ್ಲಿ ಆಚರಿಸಲಾಗುತ್ತಿರುವ ಸಿದ್ದೇಶ್ವರ ಶ್ರೀ ಜಾತ್ರೆಯನ್ನು ಈ ಬಾರಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಜಾತ್ರೆಯನ್ಜು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಯಾವುದೇ ಮನರಂಜನೆ ಕಾರ್ಯಕ್ರಮ, ಆಡಂಬರದ ಕಾರ್ಯಕ್ರಮಗಳು ಇರುವುದಿಲ್ಲ. ಮದ್ದು ಸುಡುವದು ಸೇರಿದಂತೆ ಪ್ರತಿ ವರ್ಷ ನಡೆಸುವ ಅದ್ದೂರಿ ಕಾರ್ಯಕ್ರಮಗಳನ್ನ ಈ ಬಾರಿ ನಡೆಸದಿರುಲು ತೀರ್ಮಾನಿಸಲಾಗಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶಗಳಿರಲಿವೆ. 

ಕುಸ್ತಿ ಹಾಗೂ ಭಾರ ಎತ್ತುವ ಸ್ಪರ್ಧೆಗೆ ಅವಕಾಶ
ವಿಜಯಪುರದ ಸಿದ್ದರಾಮೇಶ್ವರ ಸಂಕ್ರಾಂತಿ ಜಾತ್ರೆ ಎಂದರೆ ಉತ್ತರ ಕರ್ನಾಟಕದಲ್ಲೆ ಅತಿ ದೊಡ್ಡ ಜಾತ್ರೆ. ಈ ಜಾತ್ರೆಯಲ್ಲಿ ಕುಸ್ತಿ ಹಾಗೂ ಭಾರ ಎತ್ತುವ ಸ್ಪರ್ಧೆಗಳು ಬಲು ಆಕರ್ಷಣೀಯ. ಸುತ್ತಮುಲತ್ತಲಿನ ಸಾಕಷ್ಟು ಜಿಲ್ಲೆ, ನೆರೆಯ ಮಹಾರಾಷ್ಟ್ರದ ಜನರು ಬರುತ್ತಾರೆ. ಅದ್ರಲ್ಲು ಕುಸ್ತಿ, ಭಾರ ಎತ್ತುವ ಕ್ರೀಡಾಪಟುಗಳಿಗೆ ಇದೊಂದು ಅವಕಾಶವಿದ್ದಂತೆ. ಹೀಗಾಗಿ ಕ್ರೀಡಾಪಟುಗಳಿಗಾಗಿ ಕುಸ್ತಿ ಹಾಗೂ ಭಾರ ಎತ್ತುವ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆ ಹೊರತು ಪಡಿಸಿ ಬೇರೆ ಯಾವುದೇ ಮನರಂಜನೆ ಕಾರ್ಯಕ್ರಮಗಳು ನಡೆಯುವುದಿಲ್ಲ. ಕೇವಲ ಭಜನೆ, ಭಕ್ತಿ ಗೀತೆಗಳ ನಮನ ನಡೆಯಲಿದೆ 

ಜ. 12 ರಿಂದ ಸಂಕ್ರಾಂತಿ ಜಾತ್ರೆ ಶುರು
ಜಾತ್ರಾ ಮಹೋತ್ಸವ ಜ. 12 ರಿಂದ ಜ. 17ರವರೆಗೆ ನಡೆಯಲಿದೆ. ಜಾತ್ರಾ ಮಹೋತ್ಸವವು ದೇವಸ್ಥಾನ ಆವರಣದಲ್ಲಿರುವ ಗೋವುಗಳ ಪೂಜೆ ನೇರವೇರಿಸುವ ಮೂಲಕ‌ ಆರಂಭಗೊಳ್ಳಲಿದೆ. ನಂತರ ನಂದಿ ಧ್ವಜಗಳಿಗೆ ಸಂಪ್ರದಾಯ ಪೂಜೆ ನಡೆಯಲಿದೆ. ಜ.13ರಂದು ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಕುರಿತು ನುಡಿನಮನ. ಭಜನಾ ಕಾರ್ಯಕ್ರಮ ನಡೆಯಲಿದೆ. 

ಆಕರ್ಷಕ ನಂದಿ ಧ್ವಜಗಳ ಉತ್ಸವ 
ಸಂಕ್ರಾಂತಿ ಜಾತ್ರೆ ಅಂದ್ರೆ ನಂದಿ ಧ್ವಜ ಮೆರವಣಿಗೆ ಕೂಡ ಅದ ಹೈಲೈಟ್.. ನಂದಿ ಧ್ವಜಗಳ ಉತ್ಸವದ ಜತೆ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನೇರವೇರಲಿದೆ.  ಜ.14ರಂದು ಸಂಕ್ರಮಣ ಭೋಗಿ,  ವಚನ ಸಂಗೀತ,ಗೊಂದಳಿ ಹಾಡುಗಳ ಕಾರ್ಯಕ್ರಮ ನಡೆಯಲಿವೆ. ಜ.15ರಂದು ಸಂಕ್ರಮಣ ಆಚರಣೆ ಇದ್ದು ಅಂದು ಸಂಪ್ರದಾಯಕ ನಂದಿ ಧ್ವಜಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಜ.16ರಂದು ಜಾತ್ರಾ ಮಹೋತ್ಸವದಲ್ಲಿ ನಂದಿ ಮೆರವಣಿಗೆ ದೇವಸ್ಥಾನದಿಂದ ನಡೆಯಲಿದೆ. ಜ. 17ರಂದು ಭಾರ ಎತ್ರುವ ಸ್ಪರ್ಧೆ, ಕುಸ್ತಿ ಸ್ಪರ್ಧೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.

ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ: ಕೂಡಲಸಂಗಮದಲ್ಲಿ ಭಕ್ತರ ದಂಡು

ಬೀದಿ ಬದಿಗಳಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ
ಪ್ರತಿ ವರ್ಷವು ಜಾತ್ರೆಯಲ್ಲಿ ಸಿದ್ದೇಶ್ವರ ದೇಗುಲದ ಎದುರಿನ ರಸ್ತೆಯ ಎರಡು ಬದಿಗಳಲ್ಲಿ ಸ್ಟೆಶನರಿ ವ್ಯಾಪಾರ ಜೋರಾಗಿರುತ್ತಿತ್ತು. ಎರಡು ಬದಿಗಳಲ್ಲಿ ಆಟಿಕೆ ಸಾಮಾನು, ತಿಂಡಿ ತಿನಿಸು ಮಾರಾಟ ನಡೆಯುತ್ತಿತ್ತು. ಈ ಬಾರಿ ಇದಕ್ಕೆಲ್ಲ ಬ್ರೇಕ್ ಹಾಕಲಾಗಿದೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ ಎಂದು ಸಿದ್ದೇಶ್ವರ ಜಾತ್ರಾ ಕಮಿಟಿ ಹೇಳಿದೆ.

ಸಿದ್ದೇಶ್ವರ ಶ್ರೀಗಳು ಪ್ರಶಸ್ತಿ, ಪ್ರಚಾರ ಬಯಸದ ಅಪರೂಪದ ಸಂತರು: ಎಸ್‌.ವಿ. ಸಂಕನೂರ

ದನಗಳ ಜಾತ್ರೆ ರದ್ದು:
ಸಂಕ್ರಾಂತಿ ಜಾತ್ರೆ ಅಂದ್ರೆ ದನಗಳ ಜಾತ್ರೆ ಅತ್ಯಾಕರ್ಷಕವಾಗಿರುತ್ತಿತ್ತು. ನಗರದ ಹೊರ ವಲಯದಲ್ಲಿ ಲಕ್ಷಾಂತರ ದನಗಳು ಪಾಲ್ಗೊಳ್ಳುತ್ತಿದ್ದವು. ಉತ್ತರ ಕರ್ನಾಟಕದಲ್ಲೆ ಅತಿ ದೊಡ್ಡ ದನದ ಜಾತ್ರೆ ಎನ್ನಲಾಗ್ತಿತ್ತು. ಆದ್ರೆ ಈ ಬಾರಿ ಜಾನುವಾರುಗಳಿಗೆ ಭಯಾನಕ ಚರ್ಮ ರೋಗ ಕಾಣಿಸಿಕೊಂಡಿರುವುದರಿಂದ ದನ ಜಾತ್ರೆಗು ಬ್ರೇಕ್ ಹಾಕಲಾಗಿದೆ.

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ