Astrology Tips : ಮದುವೆಯಾಗ್ತಿಲ್ವ? ಕಂಕಣ ಭಾಗ್ಯ ಕೂಡಿ ಬರಲು ಮಾಡಿ ಈ ಕೆಲಸ

By Suvarna News  |  First Published Jan 27, 2022, 9:38 AM IST

ಕಂಕಣ ಕೂಡಿ ಬಂದಾಗ ಮದುವೆಯಾಗುತ್ತೆ ಎನ್ನಲಾಗುತ್ತದೆ. ಕೆಲವರಿಗೆ ವಯಸ್ಸು 35 ದಾಟಿದ್ರೂ ಮದುವೆಯಾಗುವುದಿಲ್ಲ. ಕೊನೆ ಹಂತದಲ್ಲಿ ಮದುವೆ ಸಂಬಂಧ ಮುರಿದು ಬೀಳುತ್ತದೆ. ಅಂಥವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ ಉಪಾಯ ಪಾಲಿಸಬೇಕು. 


ಮಕ್ಕಳ (Children) ಮದುವೆ(Marriage)ಯನ್ನು ಕಣ್ತುಂಬಿಕೊಳ್ಳಬೇಕೆಂಬ ಬಯಕೆ ಎಲ್ಲ ಪಾಲಕರಿಗೂ ಇರುತ್ತದೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಮದುವೆ ಸ್ವರ್ಗ (Heaven)ದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುತ್ತದೆ. ಕೆಲವರ ಮದುವೆ ಕಲ್ಯಾಣ ಮಂಟಪದವರೆಗೆ ಬಂದು ನಿಲ್ಲುವುದಿದೆ. ಕೆಲವರು ಮದುವೆಯಲ್ಲಿ ಅನಗತ್ಯ ಅಡೆತಡೆಗಳನ್ನು ಎದುರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮದುವೆ ವಿಧಾನವನ್ನು ಮಾತ್ರವಲ್ಲ ಬೇಗ ವಿವಾಹವಾಗಲು ಏನು ಮಾಡಬೇಕು ಎಂಬುದನ್ನೂ ಹೇಳಿದ್ದಾರೆ. ನಿಮ್ಮ ಮನೆಯಲ್ಲೂ ಮದುವೆ ಸಮಸ್ಯೆ ಎದುರಾಗಿದ್ದರೆ,ಮದುವೆ ವಯಸ್ಸು ಮೀರುತ್ತಿದ್ದರೂ ಸಂಗಾತಿ ಸಿಕ್ಕಿಲ್ಲವೆಂದಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ ಸರಳ ವಿಧಾನಗಳನ್ನು ಅನುಸರಿಸಿ,ಅದ್ಭುತ ಪರಿಹಾರ ಕಂಡುಕೊಳ್ಳಬಹುದು. 

ಮದುವೆ ತಡವಾಗ್ತಿದ್ದರೆ ಏನು ಮಾಡ್ಬೇಕು ?

Tap to resize

Latest Videos

undefined

1. ಹುಡುಗಿಯ ಮದುವೆ ತಡವಾಗ್ತಿದ್ದರೆ 16 ಸೋಮವಾರಗಳ ಕಾಲ ಉಪವಾಸವನ್ನು ಮಾಡಬೇಕು.ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ಪಾರ್ವತಿಯಂತೆ ಬಟ್ಟೆ ಧರಿಸಬೇಕು. ಶಿವ-ಪಾರ್ವತಿ ಮದುವೆ ಮಾಡಿಸಿ, ಬೇಗ ವಿವಾಹವಾಗುವಂತೆ ದೇವರನ್ನು ಪ್ರಾರ್ಥಿಸಬೇಕು. 
2.  ತುಳಸಿದಾಸರು ರಚಿಸಿರುವ ಪಾರ್ವತಿ ಮಂಗಳ ಪುಸ್ತಕವನ್ನು ಓದಬೇಕು. ಇದ್ರಿಂದ ಮದುವೆ ಭಾಗ್ಯ ಬೇಗ ಕೂಡಿಬರುತ್ತದೆ. 
3. ಇದಲ್ಲದೆ ಮದುವೆಗಾಗಿ ಹುಡುಗಿಯರು ಗೌರಿ-ಶಂಕರ ಮಂತ್ರವನ್ನು ಪಠಿಸಬೇಕು. 
4. ಹಸೆಮಣೆ ಏರಲು ಬಯಸುವ ಹುಡುಗಿಯರು ಹಸಿರು ಹಲ್ಲು ಹಾಗೂ ಪಾಲಕನ್ನು ಪ್ರತಿ ದಿನ ಹಸುವಿಗೆ ನೀಡಬೇಕು. 
5.  ಯುವಕರು ಶೀಘ್ರ ವಿವಾಹ ಬಯಸಿದ್ರೆ ಭಕ್ತಿ ಮತ್ತು ನಂಬಿಕೆಯಿಂದ ಶಿವ ಚಾಲೀಸ್ ಮಂತ್ರವನ್ನು ಜಪಿಸಬೇಕು. 
6. ವಿವಾಹಿತ ಯುವಕ-ಯುವತಿಯರು ಪ್ರತಿ ಗುರುವಾರದಂದು ಸ್ನಾನದ ನೀರಿಗೆ ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಬೇಕು. ಕೇಸರಿಯನ್ನು ಆಹಾರದಲ್ಲಿ ಬಳಸುವುದರಿಂದ,  ವಿವಾಹದ ತೊಡಕುಗಳು ಕಡಿಮೆಯಾಗುತ್ತವೆ. 
7. ಯುವಕ ಹಾಗೂ ಯುವತಿ ಇಬ್ಬರೂ ಗುರುವಾರ ಮತ್ತು ಹುಣ್ಣಿಮೆಯ ದಿನದಂದು ಆಲದ ಮರಕ್ಕೆ ಕನಿಷ್ಠ 108 ಪ್ರದಕ್ಷಿಣೆಯನ್ನು ಹಾಕಬೇಕು. ಆಲದ ಮರವಿಲ್ಲ ಎನ್ನುವವರು ಅಶ್ವತ್ಥ ಮರ,ಬಾಳೆ ಮರಗಳಿಗೆ ನೀರು ಹಾಕಿ,ಆಶೀರ್ವಾದ ಪಡೆಯಬಹುದು. ಇದ್ರಿಂದ ನಿಶ್ಚಿತವಾಗಿ ಫಲ ಪ್ರಾಪ್ತಿಯಾಗುತ್ತದೆ.

Numerology: ಪಾದಾಂಕ 5ರ ವ್ಯಕ್ತಿಗಳ 2022ರ ದಾಂಪತ್ಯ ರಹಸ್ಯ
8. ಮದುವೆಗೆ ರಾಹು ಅಡ್ಡಿಯಾಗ್ತಿದ್ದರೆ,ರಾಹು ದೋಷವಿರುವವರು ದೇವಿ ದುರ್ಗೆಯ ಆರಾಧನೆ ಮಾಡಬೇಕು.
9. ನವಗ್ರಹ ದೇವರಿಗೆ ಪೂಜೆ ಸಲ್ಲಿಸುವುದು ಒಳ್ಳೆಯ ಫಲ ನೀಡುತ್ತದೆ. ನವಗ್ರಹ ದೇವಸ್ಥಾನವನ್ನು ಸ್ಥಾಪಿಸಿ,ಪೂಜೆ ಮಾಡಿದರೆ ಫಲ ಹೆಚ್ಚು. ಮಂಗಳ ಗ್ರಹದ ದೋಷಗಳು ನಿವಾರಣೆಯಾಗಿ ಮದುವೆ ಯೋಗ ಕೂಡಿ ಬರುತ್ತದೆ. 
10. ಬಡವರಿಗೆ ಮದುವೆ ಸಂದರ್ಭದಲ್ಲಿ ಹಣದ ಸಹಾಯ ಮಾಡುವುದ್ರಿಂದ ಹಾಗೂ ಬಡವರಿಗೆ ದಾನ ಮಾಡುವುದ್ರಿಂದಲೂ ಮದುವೆಗೆ ಆಗಿರುವ ಅಡ್ಡಿ ದೂರವಾಗುತ್ತದೆ.
11. ತುಳಸಿ ಮದುವೆಯನ್ನು ಮಾಡುವುದ್ರಿಂದಲೂ ನಿಮ್ಮ ಮದುವೆ ದಾರಿ ಸುಗಮವಾಗುತ್ತದೆ.
12. ಭಾರತದಲ್ಲಿ ಅನೇಕ ದೇವಸ್ಥಾನಗಳಿವೆ. ಅಲ್ಲಿ ಪೂಜೆ ಮಾಡಿದ್ರೆ ಮದುವೆ ಸರಾಗವಾಗಿ ನೆರವೇರುತ್ತದೆ ಎಂದು ನಂಬಲಾಗಿದೆ. ಆ ದೇವಸ್ಥಾನಗಳಿಗೆ ಹರಕೆ ಹೊತ್ತುಕೊಂಡು,ದೇವರ ದರ್ಶನ ಪಡೆದು ಬರಬಹುದು.
13. ಮದುವೆಯಾಗದ 25-30 ವರ್ಷ ವಯಸ್ಸಿನ ಯುವಕ-ಯುವತಿಯರು ಪ್ರತಿ ಗುರುವಾರ ಹಳದಿ ಬಟ್ಟೆ ಧರಿಸುವುದ್ರಿಂದಲೂ ಸಮಸ್ಯೆ ದೂರವಾಗುತ್ತದೆ.

Healing Temple: ಸರ್ವ ರೋಗ ನಿವಾರಕ, ವೈದ್ಯರಿಗೇ ವೈದ್ಯ ಈ ವೈದ್ಯನಾಥೇಶ್ವರ

ಇವುಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ :
1. ಜ್ಯೋತಿಷ್ಯ ಕೇಳದೆ ಯಾವುದೇ ಯಂತ್ರವನ್ನು ಮನಸ್ಸಿಗೆ ಬಂದಂತೆ ಧರಿಸಬೇಡಿ. 
2. ಮದುವೆಗೆ ಸಂಬಂಧಿಸಿದಂತೆ ಯಾವುದೇ ಮಂತ್ರವನ್ನು ಪಠಿಸುತ್ತಿದ್ದರೆ ಅದನ್ನು ಅರ್ಧಕ್ಕೆ ಬಿಡಬೇಡಿ.
3. ನಿಮಗಿಂತ ಹಿರಿಯರು,ಪಾಲಕರನ್ನು ಗೌರವದಿಂದ ಕಾಣುವುದು ಕೂಡ ಮಹತ್ವ ಪಡೆಯುತ್ತದೆ. 
4. ಡ್ರಾಯಿಂಗ್ ರೂಮಿನಲ್ಲಿ ಅಡುಗೆ ಸೇವನೆಯನ್ನು ಎಂದೂ ಮಾಡಬೇಡಿ.
5. ಮೆಟಲ್ ಕಾಟ್ ನಲ್ಲಿ ಎಂದೂ ಮಲಗಬೇಡಿ.

click me!