ತುಲಾ ರಾಶಿಯ ಹುಡುಗನಿಗೆ ನಿಮ್ಮ ಮೇಲೆ ಲವ್ ಆಗಿದ್ದರೆ ಆತನ ಈ ನಡುವಳಿಕೆಗಳಿಂದಲೇ ನೀವದನ್ನು ಖಚಿತಪಡಿಸಿಕೊಳ್ಳಬಹುದು. ಲವ್‌ನಲ್ಲಿ ಬಿದ್ದಾಗ ತುಲಾ ರಾಶಿಯ ಹುಡುಗರು ಹೇಗಿರುತ್ತಾರೆ ಗೊತ್ತಾ?
ತುಲಾ ರಾಶಿಯವರು ಉತ್ತಮ ಕೇಳುಗರು ಮತ್ತು ಚೆನ್ನಾಗಿ ಗಮನಿಸುವ ಸ್ವಭಾವದವರು. ತುಲಾ ರಾಶಿಯ ಪುರುಷರು ತುಂಬಾ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ನಿಮ್ಮನ್ನು ಮೋಡಿ ಮಾಡಬಹುದು. ಅವರು ತಮ್ಮ ಭಾವನೆಗಳನ್ನು ಕಷ್ಟವಿಲ್ಲದೆ ವ್ಯಕ್ತಪಡಿಸುತ್ತಾರೆ. ಇದು ಜನರು ಅವರನ್ನು ಸಮೀಪಿಸಲು ಸುಲಭವಾಗಿಸುತ್ತದೆ. ಅವರು ಮಹಾನ್ ಪ್ರೇಮಿಗಳು ಕೂಡಾ ಹೌದು. ಆದರೆ ಈ ರಾಶಿಯ ಪುರುಷನು ಪ್ರೀತಿಯಲ್ಲಿ ಬಿದ್ದಾಗ ಅದನ್ನಿನ್ನೂ ಹುಡುಗಿಗೆ ಹೇಳಿಲ್ಲವೆಂದರೆ, ಆಕೆ ಅದನ್ನು ಅವನ ವರ್ತನೆಯಿಂದಲೇ ಅರಿಯಲು ಸಾಧ್ಯವಿದೆ. ಒಂದು ವೇಳೆ ನಿಮಗೂ ತುಲಾ ರಾಶಿಯ ಹುಡುಗ ಪ್ರೀತಿಸುತ್ತಿದ್ದಾನೆ ಎನಿಸುತ್ತಿದ್ದರೆ ಅದನ್ನು ಖಚಿತವಾಗಿ ಹೇಗೆ ತಿಳಿಯುವುದು? ನೀವು ಆಸಕ್ತಿ ಹೊಂದಿರುವ ತುಲಾ ರಾಶಿ(Libra zodiac sign)ಯ ವ್ಯಕ್ತಿ ನಿಮ್ಮನ್ನೂ ಅದೇ ರೀತಿ ಭಾವಿಸಿದ್ದಾನೆ ಎಂಬುದನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುವ ಆತನ 5 ವರ್ತನೆಗಳು ಇಲ್ಲಿವೆ..
ಅವನು ನಿಮಗಾಗಿ ತನ್ನದಲ್ಲದ ಸ್ವಭಾವ ತೋರಬಹುದು..
ತುಲಾ ರಾಶಿಯವರು ನಿಮ್ಮನ್ನು ಆಳವಾಗಿ ಪ್ರೀತಿಸುತ್ತಿದ್ದರೆ ಅವರ ಸರಳ ಕ್ರಿಯೆಗಳು ಬಹಳಷ್ಟು ಪರಿಣಾಮಗಳನ್ನು ಬೀರಬಹುದು. ತುಲಾ ರಾಶಿಯ ಪುರುಷರು ಯಾರ ಮೇಲಾದರೂ ಆಸಕ್ತಿಯನ್ನು ಹೊಂದಿದ್ದರೆ, ಅವರು ವಿಶೇಷವಾದ ಭಾವನೆಯನ್ನುಂಟು ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಮುಂಚೆಗಿಂತ ಈಗ ನಿಮಗಾಗಿ ತಮ್ಮದಲ್ಲದ ಸ್ವಭಾವ ತಂದುಕೊಂಡಿರಬಹುದು.
ಈ ರಾಶಿಗಳು ಚಿನ್ನ ಧರಿಸಿದ್ರೆ ಸುಮ್ನಿರಲಾರ್ದೆ ಇರ್ವೆ ಮೈ ಮೇಲ್ ಬಿಟ್ಕೊಂಡಂಗೇ!
ಗುಡ್ ಬಾಯ್
ತುಲಾ ರಾಶಿಯವರು ತಮ್ಮ ಒಳ್ಳೆಯ ಹುಡುಗನ ವರ್ತನೆಯಿಂದ ನಿಮ್ಮನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಅತ್ಯಂತ ಕರುಣಾಳು ಮತ್ತು ನಿಜವಾದ ವ್ಯಕ್ತಿತ್ವ(personality)ವನ್ನು ನಿಮ್ಮೆದುರು ತೋರಗೊಡುತ್ತಾರೆ. ಅದು ತುಂಬಾ ಆಹ್ಲಾದಕರವಾಗಿರುತ್ತದೆ. ಅವರು ತಮ್ಮ ಅತ್ಯುತ್ತಮ ಆವೃತ್ತಿಯ ಮೂಲಕ ತಮ್ಮ ಮಹಿಳೆ ಪ್ರೀತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ತಾವು ಹುಡುಗಿಯ ಎದುರು ಸದಾ ಒಳ್ಳೆಯವರೇ ಆಗಿರಲು ಬಯಸುತ್ತಾರೆ. ಹಾಗಾಗಿ, ಎಂದಿಗೂ ಕೋಪಿಸಿಕೊಳ್ಳುವುದಿಲ್ಲ, ಜಗಳವಾಡುವುದಿಲ್ಲ, ಸಿಡುಕುವುದಿಲ್ಲ..
ನಿಮ್ಮನ್ನು ಮಾತ್ರ ನೋಡುತ್ತಾನೆ!
ತುಲಾ ರಾಶಿಯವರು ನಿಮ್ಮನ್ನು ಆಳವಾಗಿ ಪ್ರೀತಿಸುತ್ತಿದ್ದರೆ ನಿಮ್ಮ ಹೊರತಾಗಿ ಬೇರೆ ಯಾವ ಹುಡುಗಿಯನ್ನೂ ನೋಡಲು ಧೈರ್ಯ ಮಾಡುವುದಿಲ್ಲ. ತುಲಾ ಪುರುಷರು ತೀವ್ರವಾಗಿ ನಿಷ್ಠರಾಗಿರುತ್ತಾರೆ(Sincere) ಮತ್ತು ನಿಮ್ಮನ್ನು ಅಸೂಯೆಗೊಳಿಸಲು ಕೂಡಾ ಅವರು ಇಷ್ಟಪಡುವುದಿಲ್ಲ. ನಿಮ್ಮ ಹೊರತಾಗಿ ಬೇರೆ ಯಾವ ಹುಡುಗಿಯ ಕಡೆಯೂ ಅರ ಗಮನ ಹೋಗುವುದಿಲ್ಲ. ಅಷ್ಟೇ ಅಲ್ಲ, ನಿಮ್ಮಲ್ಲಿ ಅವರ ನೋಟ ಹಿಂದೆಂದಿಗಿಂತಲೂ ಆಳವಾಗಿದೆ ಎಂದರೆ ಅದು ಅವರು ನಿಮ್ಮೊಂದಿಗೆ ಪ್ರೀತಿಯಲ್ಲಿರುವುದ ಸೂಚನೆ.
ನಿಮಗೆ ಬದ್ಧರಾಗಿರುತ್ತಾರೆ..
ಲಿಬ್ರಾನ್ ಪುರುಷರು ತಮ್ಮ ಭಾವನೆಗಳ ಬಗ್ಗೆ ಖಚಿತವಾಗಿದ್ದಾಗ ಸಂಪೂರ್ಣವಾಗಿ ನಿಮಗೆ ಬದ್ಧರಾಗುತ್ತಾರೆ. ಅವರು ನಿಮ್ಮೊಂದಿಗೆ ಗಂಭೀರ ಸಂಬಂಧ(relationship)ವನ್ನು ಹೊಂದಲು ಬಯಸುತ್ತಾರೆ ಮತ್ತು ಇದನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತಾರೆ. ಅವರಂತೆಯೇ ನೀವು ಕೂಡಾ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಅವರು ನಿರೀಕ್ಷಿಸುತ್ತಾರೆ. ಅವರೆಂದೂ ನಿಮಗೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ನಿಮಗಾಗಿ ಹೇಳಿದ ಸಮಯಕ್ಕೆ ಪ್ರತ್ಯಕ್ಷವಿರುತ್ತಾರೆ.
ಆನೆಗಳು ಸೊಂಡಿಲಲ್ಲಿ ಆಶೀರ್ವದಿಸಿದ್ರೆ ಅನ್ಕೊಂಡಿದ್ದೆಲ್ಲ ಆಗುತ್ತಾ?
ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾನೆ
ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತುಲಾ ರಾಶಿಯ ಹುಡುಗ ಸಾಕಷ್ಟು ಸಕ್ರಿಯವಾಗಿರುವುದು ಕಂಡು ಬಂದರೆ ಅನುಮಾನವೇ ಬೇಡ, ಆತನಿಗೆ ನಿಮ್ಮ ಮೇಲೆ ಲವ್ ಆಗಿದೆ ಎಂದೇ ಅರ್ಥ. ಲಿಬ್ರಾನ್ ಪುರುಷರು ನಿಮ್ಮ ಸಮಸ್ಯೆಯನ್ನು ತಮ್ಮದೇ ಸಮಸ್ಯೆ ಎಂದು ಪರಿಗಣಿಸುತ್ತಾರೆ ಮತ್ತು ಪರಿಹಾರಗಳನ್ನು ಹುಡುಕುವ ಕಡೆಗೆ ನೋಡುತ್ತಾರೆ. ಅವರು ಮಹಾನ್ ಸಲಹೆಗಾರರು; ಅವರು ಉಪಸ್ಥಿತರಿರುವ ಮೂಲಕ ನಿಮ್ಮ ದಿನವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ. ನೀವು ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುವುದನ್ನು ಅವರಿಂದ ನೋಡಲಾಗುವುದಿಲ್ಲ.