ಕಾರ್ತೀಕ ಅಮವಾಸ್ಯೆ ದಿನಾಂಕ, ಮುಹೂರ್ತ.. ಈ ದಿನ ತುಳಸಿ ಪೂಜೆಗಿದೆ ವಿಶೇಷ ಮಹತ್ವ

By Suvarna NewsFirst Published Oct 22, 2022, 10:22 AM IST
Highlights

ಕಾರ್ತಿಕ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ದೀಪಾವಳಿ ಅಮವಾಸ್ಯೆ ಎಂದೂ ಕರೆಯುತ್ತಾರೆ. ಕಾರ್ತಿಕ ಅಮಾವಾಸ್ಯೆಯ ದಿನಾಂಕ ಮತ್ತು ಮಹತ್ವವನ್ನು ತಿಳಿಯೋಣ..

ಕಾರ್ತೀಕ ಅಮಾವಾಸ್ಯೆಯನ್ನು ಕಾರ್ತಿಕ ಮಾಸದ ಆರಂಭದ ದಿನ ಕರ್ನಾಟಕದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಅಮವಾಸ್ಯೆಯನ್ನು ಹಿಂದೂ ಧರ್ಮದಲ್ಲಿ ಪ್ರಮುಖ ಅಮವಾಸ್ಯೆ ಎಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಅಮಾವಾಸ್ಯೆಯು ಕಾರ್ತಿಕ ಮಾಸದಲ್ಲಿ ಬರುತ್ತದೆ, ಆದರೆ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಇದು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುತ್ತದೆ.

ಪಿತೃ ಪೂಜೆಗೆ ಅವರ ಆಶೀರ್ವಾದವನ್ನು ಪಡೆಯಲು ಮತ್ತು ದತ್ತಿ ದಾನಗಳನ್ನು ಮಾಡಲು ಇದು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾಭಾರತದಲ್ಲಿ, ಶಾಂತಿ ಪರ್ವದ ಸಂದರ್ಭದಲ್ಲಿ, ಕಾರ್ತಿಕ ಅಮಾವಾಸ್ಯೆಯ ಮಹತ್ವವನ್ನು ವಿವರಿಸುತ್ತಾ ಶ್ರೀ ಕೃಷ್ಣನು ಹೇಳಿದನು, 'ಈ ದಿನ ನನಗೆ ತುಂಬಾ ಪ್ರಿಯವಾಗಿದೆ. ಈ ದಿನದಂದು ನನ್ನನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದ ಮೇಲೆ ಗ್ರಹಗಳ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.'

ಕಾರ್ತಿಕ ಅಮಾವಾಸ್ಯೆ 2022: ದಿನಾಂಕ, ಸಮಯ ಮತ್ತು ಶುಭ ಸಮಯ
ಲಕ್ಷ್ಮೀ ಪೂಜೆಗೆ ಮುಹೂರ್ತ: ಸಂಜೆ 6:53ರಿಂದ 8:16ರವರೆಗೆ
ಪೂಜೆ ಅವಧಿ: 1 ಗಂಟೆ 23 ನಿಮಿಷಗಳು
ವೃಷಭ ರಾಶಿಯ ಅವಧಿ: 6:53ರಿಂದ 8:48
ಪ್ರದೋಷ ಕಾಲ: ಸಂಜೆ 5:43ರಿಂದ 8:16
ಕಾರ್ತಿಕ ಅಮಾವಾಸ್ಯೆ 2022 ತಿಥಿ ಅಕ್ಟೋಬರ್ 24, ಸಂಜೆ 5:29:35ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅದು ಅಕ್ಟೋಬರ್ 25, 2022ರಂದು 4:20ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ದೀಪಾವಳಿ ಹಬ್ಬವನ್ನು ಅಕ್ಟೋಬರ್ 24ರಂದು ಆಚರಿಸಲಾಗುತ್ತದೆ. ಅದೇ ಸಮಯದಲ್ಲಿ, ಅಕ್ಟೋಬರ್ 25ರಂದು ಸೂರ್ಯಗ್ರಹಣ ಕೂಡ ಇರುತ್ತದೆ. ಹಾಗಾಗಿ ದೀಪಾವಳಿಯ ಆಚರಣೆಗೆ ಗ್ರಹಣ ಅಡ್ಡಿಯಾಗುವುದಿಲ್ಲ. ಅಕ್ಟೋಬರ್ 25 ರಂದು, ಭಾಗಶಃ ಸೂರ್ಯಗ್ರಹಣವು ಭಾರತೀಯ ಕಾಲಮಾನ 4:49:20ಕ್ಕೆ ಪ್ರಾರಂಭವಾಗುತ್ತದೆ ಮತ್ತು 6:06ರವರೆಗೆ ಇರುತ್ತದೆ. 

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಯಾಕೆ? ಅದರ ಮಹತ್ವ ತಿಳಿಯಿರಿ

ಕಾರ್ತಿಕ ಅಮಾವಾಸ್ಯೆ 2022: ಉಪವಾಸ ವ್ರತ
ಭಕ್ತರು ಮುಂಜಾನೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು.
ನೀರು ಮತ್ತು ಎಳ್ಳನ್ನು ಅರ್ಪಿಸಿ ಸೂರ್ಯ ದೇವರನ್ನು ಪೂಜಿಸಿ.
ಈ ದಿನ ನವಗ್ರಹ ಸ್ತೋತ್ರವನ್ನು ಪಠಿಸುವ ಮೂಲಕ, ನೀವು ಉತ್ತಮ ಗ್ರಹಗಳ ಧನಾತ್ಮಕ ಪರಿಣಾಮಗಳನ್ನು ಹೆಚ್ಚಿಸಬಹುದು ಮತ್ತು ಜಾತಕದಲ್ಲಿ ಕೆಟ್ಟ ಗ್ರಹಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು.
ನವಗ್ರಹ ದೋಷಗಳನ್ನು ತೊಡೆದುಹಾಕಲು ಬೆಳಿಗ್ಗೆ ವಿಷ್ಣು ಸಹಸ್ರನಾಮವನ್ನು ಜಪಿಸಬೇಕು.
ಶಿವಲಿಂಗದ ಮೇಲೆ ಜೇನುತುಪ್ಪದೊಂದಿಗೆ ಎಲ್ಲಾ ಅಭಿಷೇಕ ವಿಧಿಗಳನ್ನು ಮಾಡುವ ಮೂಲಕ ಭಗವಾನ್ ಶಿವನ ಆಶೀರ್ವಾದ ಪಡೆಯಿರಿ.
ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿ. ಇದು ಶನಿ ದೋಷವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
ಲಕ್ಷ್ಮಿ ದೇವಿಗೆ ಹೂವುಗಳು, ಸಿಹಿತಿಂಡಿಗಳು, ಹಣ್ಣುಗಳು ಮತ್ತು ಖೀರ್ ಅನ್ನು ನೈವೇದ್ಯವಾಗಿ ಅರ್ಪಿಸಿ.
ಭಕ್ತರು ಸಾತ್ವಿಕ ಆಹಾರ, ಹಣ್ಣು ಮತ್ತು ಹಾಲು ಮಾತ್ರ ಸೇವಿಸಬೇಕು.
ಈ ದಿನ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ, ಮದ್ಯ ಮತ್ತು ಮಾದಕ ದ್ರವ್ಯಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಬೀಜಗಳು, ಹಣ್ಣುಗಳು, ಹಾಲು ಮತ್ತು ಬೆಣ್ಣೆಯಂಥ ಡೈರಿ ವಸ್ತುಗಳು ಮತ್ತು ಕೆಲವು ಹಿಟ್ಟುಗಳಾದ ರಾಜಗಿರಾ ಹಿಟ್ಟು, ಹುರುಳಿ ಹಿಟ್ಟು ಮತ್ತು ಸಿಂಘರೆ ಹಿಟ್ಟುಗಳನ್ನು ಸೇವಿಸಲಾಗುತ್ತದೆ.
ನೀರು, ಹಾಲು, ಮಜ್ಜಿಗೆ ಮತ್ತು ತಾಜಾ ಜ್ಯೂಸ್‌ಗಳನ್ನು ಸೇವಿಸಿ ದಿನವಿಡೀ ದೇಹವು ತೇವಾಂಶದಿಂದ ಕೂಡಿರುತ್ತದೆ.
ನೈವೇದ್ಯದ ಅಡುಗೆಗೆ ಟೇಬಲ್ ಉಪ್ಪಿನ ಬದಲು ಕಲ್ಲು ಉಪ್ಪು ಬಳಸಿ. ಹೆಚ್ಚುವರಿಯಾಗಿ, ಜೀರಿಗೆ, ದಾಲ್ಚಿನ್ನಿ, ಹಸಿರು ಏಲಕ್ಕಿ, ಲವಂಗ, ಕರಿಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಕರಿಮೆಣಸು ಮುಂತಾದ ಮಸಾಲೆಗಳನ್ನು ಬಳಸಿ.

ಈ ದಿನದಂದು ಕೆಲಸಕ್ಕೆ ಜಾಯಿನ್ ಆದ್ರೆ ಎಲ್ಲವೂ ಶುಭವಾಗುತ್ತೆ!

ಕಾರ್ತಿಕ ಅಮಾವಾಸ್ಯೆ 2022: ತುಳಸಿ ಪೂಜೆ (Tulsi Puja)
ಕಾರ್ತಿಕ ಅಮಾವಾಸ್ಯೆಯ ದಿನದಂದು ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸ್ನಾನದ ನಂತರ ತುಳಸಿ ಮತ್ತು ಸೂರ್ಯನಿಗೆ ನೀರನ್ನು ಅರ್ಪಿಸಿ ಇಬ್ಬರನ್ನೂ ಪೂಜಿಸಲಾಗುತ್ತದೆ. ಕಾರ್ತಿಕ ಅಮಾವಾಸ್ಯೆಯ ದಿನ ತುಳಸಿ ಗಿಡವನ್ನು ದಾನ ಮಾಡಲಾಗುತ್ತದೆ. ತುಳಸಿಯನ್ನು ಪೂಜಿಸುವುದು ವಿಷ್ಣುವಿನ ಆಶೀರ್ವಾದವನ್ನು ಪಡೆಯುವ ಸಾಧನವಾಗಿದೆ ಎಂದು ನಂಬಲಾಗಿದೆ ಮತ್ತು ತುಳಸಿ ಪೂಜೆಯು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಭಕ್ತರನ್ನು ಮೆಚ್ಚಿಸುತ್ತದೆ.

click me!