
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.21): ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣ. ಅಷ್ಪೇ ಧಾರ್ಮಿಕ ಕೇಂದ್ರವೂ ಕೂಡ ಹೌದು. ಇಲ್ಲಿರುವ ದೇವಸ್ಥಾನಗಳು ವಿಶೇಷವಾದ ಆಚರಣೆ ಮೂಲಕ ಜನಸಾಗರವನ್ನು ತನ್ನ ಬಳಿ ಕರೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದೇವಿರಮ್ಮ ಬೆಟ್ಟವೂ ಒಂದು. ಮಳೆಗಾಲ ಮುಗಿದು ತಕ್ಷಣ, ರಾಜ್ಯಾಧ್ಯಾತ ಧಾರ್ಮಿಕ ಜಾತ್ರೆಗಳು ಆನಾವರಣಗೊಳ್ಳಲು ಆರಂಭವಾಗುತ್ತೇದೆ. ಇದರ ಮೊದಲ ಸಾಲಿಗೆ ಚಿಕ್ಕಮಗಳೂರು ಜಿಲ್ಲೆಯ ಶಕ್ತಿ ದೇವತೆ ದೇವೀರಮ್ಮ ಬೆಟ್ಟ ನಿಲ್ಲುತ್ತದೆ. ಶಕ್ತಿ ದೇವತೆ ದೇವಿರಮ್ಮನ್ನು ದರ್ಶನ ಪಡೆಯುಲು ಸಾವಿರಾರು ಸಂಖ್ಯೆಯಲ್ಲಿ ದೀಪಾವಳಿ ಮುನ್ನಾ ದಿನ ಭಕ್ತಸಾಗರವೇ ಹರಿದು ಬರುತ್ತೇದೆ. ಅಕ್ಟೋಬರ್ 23ರಿಂದ 27ರವರೆಗೆ ಇಲ್ಲಿ ವಿಜೃಂಭಣೆ ನಡೆಯಲಿದೆ. ಪ್ರತಿವರ್ಷ ಲಕ್ಷಾಂತರ ಮಂದಿ ಆಗಮಿಸಿ ಬೆಟ್ಟವನ್ನು ಹತ್ತಿ ದೇವಿ ದರ್ಶನ ಪಡೆಯುತ್ತಾರೆ. ಆದ್ರೆ ಕಳೆದ ಮೂರು ವರ್ಷಗಳಿಂದ ಕೋವಿಡ್ ಸೋಂಕು ಹರಡುವ ಕಾರಣಕ್ಕೆ ಜಿಲ್ಲಾಡಳಿತ ಗಿರಿ ಹತ್ತುವುದನ್ನು ನಿರ್ಬಂಧಿಸಿತ್ತು. ಈ ಬಾರಿ ಕೋವಿಡ್ ಕಾರ್ಮೋಡ ಸರಿದು ಎಲ್ಲಾ ಹಬ್ಬ, ಹರಿದಿನಗಳ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಈ ಬಾರಿ ದೇವಿರಮ್ಮನ ದೀಪೋತ್ಸವ ಇನ್ನಷ್ಟು ಕಳೆ ಕಟ್ಟಲಿದೆ
ಬರಿಗಾಲನಲ್ಲೇ ಬೆಟ್ಟವನ್ನು ಹತ್ತಿ ದೇವಿ ದರ್ಶನ: ಚಿಕ್ಕಮಗಳೂರಿನಿಂದ 23 ಕಿ.ಮೀ.ದೂರದಲ್ಲಿ ಮಲ್ಲೇನಹಳ್ಳಿ ಗ್ರಾಮದಲ್ಲಿ ದೇವಿರಮ್ಮ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಐತಿಹಾಸಿಕವಾದ ಹಿನ್ನಲೆಯೂ ಕೂಡ ಹೊಂದಿದೆ. ಶಕ್ತಿದೇವತೆ ದೇವಿರಮ್ಮನಿಗೆ ದೀಪಾವಳಿ ಅಂದು ಜಾತ್ರಮಹೋತ್ಸವ ನಡೆಯುತ್ತೇದೆ. ಆ ದಿನ ವಿವಿಧ ಜಿಲ್ಲೆಗಳಿಂದ ಭಕ್ತ ಸಾಗರವೇ ಹರಿದು ಬರುತ್ತದೆ. ಬೆಟ್ಟದ ಕೆಳಗಿನ ದೇವಾಲಯದ ಗರ್ಭಗುಡಿ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುವ ದೃಶ್ಯ ನೋಡಲು ಭಕ್ತರು ಆಗಮಿಸುತ್ತಾರೆ. ಅಲ್ಲದೆ ದೇವಸ್ಥಾನದಿಂದ ಕಳೆದ ಭಾಗದಿಂದ ಸುಮಾರು 13 ಕಿ.ಮೀ ದೂರದಲ್ಲಿ ಇರುವ ಬೆಟ್ಟದ ಮೇಲೆ ದೇವಿರಮ್ಮನ ಮೂಲ ದೇವಸ್ಥಾನವಿದೆ. ಬೆಟ್ಟಕ್ಕೆ ಹೋಗಲು ಯಾವುದೇ ವಾಹನದ ವ್ಯವಸ್ಥೆ ಇಲ್ಲ.
ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಯಾಕೆ? ಅದರ ಮಹತ್ವ ತಿಳಿಯಿರಿ
ಆದ್ರೆ ವರ್ಷಕ್ಕೆ ಒಮ್ಮೆ ಈ ಬೆಟ್ಟವನ್ನು ಏರಲು ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಬೆಟ್ಟದ ಮೇಲೆ ಇರುವ ದೇವಿರಮ್ಮ ದೇವತೆಯ ದರ್ಶನವನ್ನು ಪಡೆಯುತ್ತಾರೆ. ಪ್ರತಿವರ್ಷ ದೀಪಾವಳಿ ಮುನ್ನದಿನ ಇಲ್ಲಿ ಧಾರ್ಮಿಕ ಜಾತ್ರೆ ನಡೆಯುತ್ತದೆ. ಶಕ್ತಿ ದೇವತೆ ದೇವಿರಮ್ಮ ಭಕ್ತರು ಸಕಲ ಇಷ್ಪಾರ್ಥಗಳುನ್ನು ಈಡೇರಸುತ್ತದೆ ಎಂಬ ನಂಬಿಕೆ ಮೇಲೆ ಭಕ್ತ ಸಾಗರ ಹರಿದು ಬರುತ್ತೇದೆ. ದೀಪಾವಳಿ ಮುನ್ನದಿನ ಈ ಬೆಟ್ಟಕ್ಕೆ ಹತ್ತುಲು ಭಕ್ತ ಸಮೂಹವೇ ಆಗಮಿಸುತ್ತದೆ. ಬೆಟ್ಟಕ್ಕೆ ಹೋಗಲು ಯಾವುದೇ ರೀತಿ ವಾಹನದ ವ್ಯವಸ್ಥೆ ಕೂಡ ಇಲ್ಲ ಅಲ್ಲದೆ ಪಾದರಕ್ಷೆಯನ್ನು ಬಿಟ್ಟು ಬರಿಗಾಲನಲ್ಲೇ ಬೆಟ್ಟವನ್ನು ಹತ್ತುಬೇಕು. ಬೆಟ್ಟವನ್ನು ಹತ್ತುವದರಿಂದ ಮನಸ್ಸುನಲ್ಲಿ ಮಾಡಿಕೊಂಡು ಕೋರಿಕೆ ಈಡೇರುತ್ತೇವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
Diwali 2022 : ತಾಯಿ ಲಕ್ಷ್ಮಿ ಸಂತೋಷಗೊಳ್ಬೇಕೆಂದ್ರೆ ಈ ತಪ್ಪೆಲ್ಲಾ ಮಾಡ್ಬೇಡಿ
ಧಾರ್ಮಿಕ ಕಾರ್ಯಕ್ರಮಗಳು: ಕೊರೋನ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಕಳೆಗುಂದಿದ್ದ ದೇವಿರಮ್ಮ ಉತ್ಸವ ಈ ಬಾರಿ ಕಳೆಗಟ್ಟಲಿದೆ .ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟವೇರಲು ಭಾರೀ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದ್ದು ,ಪ್ರತಿಕೂಲ ಹವಾಮಾನ ಉತ್ಸಾಹಕ್ಕೆ ತಣ್ಣೀರು ಎರಚುವ ಸಾಧ್ಯತೆಯೂ ಇದೆ . ಅಕ್ಟೋಂಬ್ಬರ್ 24 ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭವಾಗಲಿದ್ದು, ರಾತ್ರಿ 7 ಗಂಟೆಗೆ ದೀಪೋತ್ಸವ. 25 ರಂದು ಬೆಳಿಗ್ಗೆ ಗಂಟೆ 8.45 ಕ್ಕೆ ಶ್ರೀ ದೇವಿಯವರಿಗೆ ಉಡುಗೆ, ಪೂಜೆ, ಸಂಜೆ ಬೆಣ್ಣೆ ಬಟ್ಟೆ ಸುಡುವುದು ನಂತರ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. 26 ರಂದು ರಾತ್ರಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಲಶ ಸ್ಥಾಪನೆಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿದೆ. 27ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ತಿಳಿಸಿದೆ