ಗ್ರಹಕ್ಕೂ ಶನಿ ಪ್ರದೋಷಕ್ಕೂ ಏನೀ ಸಂಬಂಧ?

By Web Desk  |  First Published Nov 9, 2019, 3:47 PM IST

ಶನಿಗೂ, ಪ್ರದೋಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದೇ ಹೆಚ್ಚು. ಅಷ್ಟಕ್ಕೂ ಏನೀ ವ್ರತ? ಆಚರಿಸುವುದು ಹೇಗೆ?


ಪ್ರದೋಷ ಅಂದರೆ ಏನು..? ಆ ಪದವನ್ನು ನೋಡಿದಾಗ ಏನು ಒಂದು ದೊಡ್ಡ ದೋಷ ಅಂತ ನಾವು ಅರ್ಥೈಸುತ್ತೇವೆ. ಆದರೆ ಅದು ನಿಜವಾದ ಅರ್ಥವಲ್ಲ. ಪ್ರದೋಷ ಎಂಬ ಪದಕ್ಕಿರುವ ಅರ್ಥ ಅದಲ್ಲ. ಇಂದು ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಹಾಗಾದರೆ ಅದರ ನಿಜವಾದ ಅರ್ಥ ಏನು..?

ನಾಮಲಿಂಗಾನು ಶಾಸನ ಗ್ರಂಥದಲ್ಲಿ ಪ್ರದೋಷದ ಬಗ್ಗೆ ಉಲ್ಲೇಖಿಸಿದ್ದಾರೆ. ‘‘ ಗಣರಾತ್ರಂ ನಿಶಾಬಹ್ವ್ಯ: ಪ್ರದೋಷೋ ರಜನೀ ಮುಖಮ್ ’’ಅಂತ ಹೇಳಿದ್ದಾರೆ. ದೋಷಾಯಾ: ಪ್ರಾರಂಭ: ಪ್ರದೋಷ: ಅಂತ. ಇದರ ಅರ್ಥ ರಾತ್ರಿಯ ಪ್ರಾರಂಭ ಕಾಲ ಯಾವುದಿದೆ ಆ ಕಾಲವನ್ನು ಪ್ರದೋಷ ಅಂತ ಕರೆಯಲಾಗುತ್ತದೆ.  ಸಂಧ್ಯಾ ಕಾಲ ಕಳೆದು ರಾತ್ರಿ ಪ್ರಾರಂಭವಾಗುವ ಕಾಲವೇ ಪ್ರದೋಷ ಕಾಲ. ಈ ಕಾಲದಲ್ಲಿ ಮಾಡುವ ಪೂಜೆಯೇ ಪ್ರದೋಷ ಪೂಜೆ ಅಂತ ಕರೆಯಲ್ಪಟ್ಟಿದೆ. ಅದರಲ್ಲೂ ಶನಿವಾರ ಬಂದರೆ ಶನಿ ಪ್ರದೋಷ ಅಂತ ಕರೀತಾರೆ. ಹಾಗಂತ ಶನಿ ಗ್ರಹಕ್ಕೂ ಈ ಪೂಜೆಗೂ ಸಂಬಂಧವಿಲ್ಲ. ಆದರೆ ಇತ್ತೀಚಿಗೆ ಕೆಲವರು ಶನಿ ಗ್ರಹಕ್ಕೂ ಈ ಪ್ರದೋಷಕ್ಕೂ ಗಂಟುಹಾಕಿದ್ದಾರೆ. ಅದಿರಲಿ ಬಿಡಿ.  ಶನಿಗ್ರಹಕ್ಕೂ ಈಶ್ವರನೇ ಅಧಿಪತಿ ಹಾಗಾಗಿ ಆ ಅರ್ಥದಲ್ಲಾದರೂ ಶಿವನ ಆರಾಧನೆ ಮಾಡಲಿ ಎಂಬುದು ಉದ್ದೇಶವಷ್ಟೇ.

Latest Videos

undefined

ಭಯಂಕರವಾಗಿ ಕಾಡುವ ಶನಿ ಕಾಟಕ್ಕೆ ಇದೆಯಾ ಮುಕ್ತಿ..?

ಶನಿವಾರ ಬರುವ ಪ್ರದೋಷ ಕಾಲದಲ್ಲಿ ಈಶ್ವರನ ಪೂಜೆ ಮಾಡಬೇಕು. ಈ ಶನಿ ಪ್ರದೋಷ ವ್ರತ ಸಾರುವುದು ಅದನ್ನೇ. ಶನಿವಾರ ಬರುವ ತ್ರಯೋದಶಿಯಂದು ಈಶ್ವರನ ಆರಾಧನೆ ಮಾಡಿದರೆ ಋಣ ಮುಕ್ತರಾಗುತ್ತಾರೆ, ಸಾಲ ಬಾಧೆಯಿಂದ ಬಿಡುಗಡೆಯಾಗುತ್ತದೆ. ಅದು ಆಧ್ಯಾತ್ಮಕ ಋಣವೂ ಆಗಬಹುದು ಆದಿ ದೈವಿಕ, ಆದಿ ಭೌತಿಕವೂ ಆಗಬಹುದು.

ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!

ವ್ರತ ಆಚರಣೆ ಹೇಗೆ..?

ಶನಿ ಪ್ರದೋಷದ ಸಂಧ್ಯಾ ಕಾಲದಲ್ಲಿ  ಸ್ನಾನಾದಿ ಕರ್ಮಾನುಷ್ಠಾನ ಮುಗಿಸಿ, ಒಂದು ಮಂಟಪದ ಮೇಲೆ ಎರಡು ಕಳಶಗಳನ್ನಿಟ್ಟು ಪಾರ್ವತಿ ಸಹಿತ ಈಶ್ವರನ ಆವಾಹನೆ ಮಾಡಿ ಷೋಡಶೋಪಚಾರ ಪೂಜೆ ಮಾಡಿ ನಮಸ್ಕರಿಸಬೇಕು. ಮುಖ್ಯವಾಗಿ ಸಂಕಲ್ಪ ಮಾಡುವಾಗ ಶ್ರೀ ಸಾಂಬಶಿವಸ್ವಾಮಿ ದೇವತಾ ಉದ್ದಿಶ್ಯ ಶ್ರೀ ಸಾಂಬಸದಾಶಿವ ಸ್ವಾಮಿ ದೇವತಾ ಪ್ರೀತ್ಯರ್ಥಂ ಶನಿವಾಸರ ಯುಕ್ತ ತ್ರಯೋದಶ್ಯಾಂ ಕಲ್ಪೋಕ್ತ ಪ್ರಕಾರೇಣ ಯಾವಚ್ಛಕ್ತಿ ಧ್ಯಾನಂ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೆ ಅಂತ ಸಂಕಲ್ಪಿಸಿ ಪೂಜಿಸಬೇಕು. ಜೊತೆಗೆ ಈಶ್ವರ ಗಣಗಳಾದ ನಂದಿ, ಭೃಂಗಿರಿಟಿ ಇತ್ಯಾದಿಗಳಿಗೂ ಪೂಜೆ ಸಲ್ಲಿಸಬೇಕು.
ಜೊತೆಗೆ ಮೌನ ವ್ರತದಲ್ಲಿದ್ದು 32 ದೀಪಗಳನ್ನು ಮೌನ ವ್ರತದಲ್ಲೇ ಹಚ್ಚಬೇಕು. ದೀಪ ಜ್ಞಾನದ ಸಂಕೇತ. ಶಿವ ಜ್ಞನ ಕೊಡುವ ತೇಜೋ ಮೂರ್ತಿ. ಜ್ಞಾನಮಿಚ್ಛೇತ್ ಮಹೇಶ್ವರಾತ್ ಎಂಬ ಆಧಾರದಂತೆ ಜ್ಞಾನ ಪ್ರಾಪ್ತಿಗಾಗಿ ಈಶ್ವರನ ಮುಂದೆ ದೀಪಗಳನ್ನು ಹಚ್ಚಬೇಕು.

ಶನೇಶ್ವರ ದೇವರ ಗುಡಿಗೆ ನುಗ್ಗಿ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ಕಾಗೆ..!

ಪೂಜೆಯ ಫಲವೇನು..?

ಹಿಂದೆ ದೇವತೆಗಳು ರಭ ಭಯಂಕರನಾದ ವೃತ್ರಾಸುರನನ್ನು ಕೊಲ್ಲುವ ಮುನ್ನ ಈ ಶನಿ ಪ್ರದೋಷ ವ್ರತವನ್ನು ಆಚರಿಸಿದ್ದರಂತೆ. ಹಾಗಾಗಿ ಈ ವ್ರತದಿಂದ ಮುಖ್ಯವಾಗಿ ಶತ್ರು ಧ್ವಂಸ ಫಲವಿದದೆ. ಶತ್ರುಗಳೆಂದರೆ ಹೊರಗಿನ ಶತ್ರುಗಳಷ್ಟೇ ಅಲ್ಲ, ನಮ್ಮೊಳಗೇ ಆರು ಬಗೆಯ ಶತ್ರುಗಳಿದ್ದಾರೆ ಕಾಮ ಕ್ರೋಧ ಲೋಭಾದಿ ಅರಿ ಷಡ್ವರ್ಗಗಳು ಎಂದು ಕರೆಯುತ್ತಾರೆ. ಈ ಆರು ವರ್ಗಗಳಲ್ಲಿ ಯಾವುದು ಬಾಧಿಸಿದರೂ ಬದುಕು ಮೂರಾಬಟ್ಟೆಯಾಗುತ್ತದೆ. ಹೀಗಾಗಿ ಬಾಹ್ಯ ಶತ್ರುಗಳಿಗಿಂತ ಮುಖ್ಯವಾಗಿ ಆಂತರಿಕ ಶತ್ರುಗಳೇ ನಮ್ಮನ್ನು ಬಾಧಿಸುವುದರಿಂದ ಅದರ ನಿವಾರಣೆಯಾಗಬೇಕಾದದ್ದು ಮನುಷ್ಯರಿಗೆ ಮುಖ್ಯ. ಹಾಗಾಗಿ ಶನಿ ಪ್ರದೋಷದಂದು ಸಾಂಬಸದಾಶಿವನಲ್ಲಿ ಅಂತರಂಗ ಶತ್ರುಗಳ ನಿವೃತ್ತಿ ಮಾಡು ಎಂದು ಪ್ರಾರ್ಥಿಸಬೇಕು.

click me!