
ಹುಟ್ಟಿದ ಮೇಲೆ ಸಾವು ಅನಿವಾರ್ಯ. ಸಾವು ಯಾವಾಗ ಬರುತ್ತೆ ಅನ್ನೋದು ಯಾರಿಗೂ ತಿಳಿದಿಲ್ಲ. ಈಗಿದ್ದ ವ್ಯಕ್ತಿ ಒಂದೊಂದು ಗಳಿಗೆಯಲ್ಲಿ ಇಹಲೋಕ ತ್ಯಜಿಸಬಹುದು. ಮನುಷ್ಯನಿಗೆ ಸಾವು ಯಾವಾಗ ಬರುತ್ತೆ ಅನ್ನೋದು ತಿಳಿದಿಲ್ಲದೆ ಇರಬಹುದು. ಆದ್ರೆ ದೇವರಿಗೆ ಇದು ನಿಶ್ಚಿತವಾಗಿ ಗೊತ್ತಿರುತ್ತೆ. ಸಾವಿಗೂ ಮುನ್ನ ಅನೇಕ ಸಂಕೇತಗಳು ಮೂಲಕ ಅದನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ದೇವರು ಮಾಡ್ತಾನೆ. ಶಿವ ಪುರಾಣದಲ್ಲಿ ಆ ಸಂಕೇತಗಳು ಯಾವುವು ಎಂಬುದನ್ನು ಹೇಳಲಾಗಿದೆ.
ಹಿಂದೂ ಧರ್ಮ (Hinduism) ದಲ್ಲಿ ಹದಿನೆಂಟು ಪುರಾಣಗಳಿವೆ. ಅದರಲ್ಲಿ ಶಿವ ಪುರಾಣ ಕೂಡ ಒಂದು. ಶಿವ ಪುರಾಣ (Shiva Purana ) ದಲ್ಲಿ ಶಿವನಿಗೆ ಸಂಬಂಧಿಸಿದ ಅನೇಕ ಮಾಹಿತಿ ನಿಮಗೆ ಲಭ್ಯವಾಗುತ್ತದೆ. ಶಿವನ ಅನೇಕ ಅವತಾರಗಳನ್ನು ನೀವು ಕಾಣಬಹುದು. ಈ ಶಿವ ಪುರಾಣದಲ್ಲಿ ಜೀವನ – ಮರಣಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಶಿವ ಪುರಾಣದಲ್ಲಿ ಶಿವನು ಪತ್ನಿ ಪಾರ್ವತಿಗೆ, ಸಾವಿಗಿಂತ ಮೊದಲು ಯಾವ ಸಂಕೇತಗಳು ಸಿಗುತ್ತವೆ ಎಂಬುದನ್ನು ವಿವರಿಸಿದ್ದಾನೆ. ಆ ಸಂಕೇತಗಳು ನಿಮ್ಮಲ್ಲಿ ಕಾಣಿಸಿಕೊಂಡರೇ ಇನ್ನು ಕೆಲವೆ ದಿನ ಅಥವಾ ಗಂಟೆ ನಿಮಗಿದೆ. ನೀವು ಸಾವಿಗೆ ಹತ್ತಿರವಾಗುತ್ತಿದ್ದೀರಿ ಎಂದೇ ಅರ್ಥ.
ರವಿ ಯೋಗ ದಿಂದ ಈ ರಾಶಿಗೆ ಲಾಭ ಸಂತೋಷ
ಸಾವಿನ ಸಂಕೇತ ಇದು :
ಶರೀರದ ಬಣ್ಣ ಬದಲಾಗುವುದು : ಶಿವಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಮರಣದ ಸಮೀಪದಲ್ಲಿದ್ದರೆ ಅವರ ದೇಹವು ಇದ್ದಕ್ಕಿದ್ದಂತೆ ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಇಲ್ಲವೆ ದೇಹದ ಬಣ್ಣದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ದೇಹ ಬಿಳಿ ಅಥವಾ ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ಕೆಂಪು ಕಲೆಗಳು ಕಂಡು ಬರುತ್ತವೆ. ಈ ವ್ಯಕ್ತಿಗೆ ಇನ್ನು ಆರು ತಿಂಗಳಲ್ಲಿ ಸಾವು ಬರುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.
ರಾಮಮಂದಿರ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಯಲ್ಲಿ ನಡೆದಾಡಿದ ರಾಮ ಸೀತೆ ಲಕ್ಷ್ಮಣ!
ಕೆಲಸ ನಿಲ್ಲಿಸುವ ದೇಹದ ಅಂಗ : ಸಾವು ಸಮೀಪದಲ್ಲಿದೆ ಎನ್ನುವ ವ್ಯಕ್ತಿಯ ದೇಹದ ಅನೇಕ ಅಂಗಗಳು ಕೆಲಸ ನಿಲ್ಲಿಸುತ್ತವೆ. ಬಾಯಿ, ಕಿವಿ, ಕಣ್ಣು, ನಾಲಿಗೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಆ ವ್ಯಕ್ತಿಗೆ ಬಹಳ ಕಡಿಮೆ ಸಮಯ ಉಳಿದಿದೆ ಎಂದು ಅರ್ಥಮಾಡಿಕೊಳ್ಳಿ.
ಬಾಯಿ ಒಣಗುವುದು : ಸಾವು ಇನ್ನೇನು ಒಂದು ತಿಂಗಳಲ್ಲಿ ಬರಲಿದೆ ಎನ್ನುವ ವ್ಯಕ್ತಿಯ ಬಾಯಿ ಒಣಗಲು ಶುರುವಾಗುತ್ತದೆ. ಎಡಗೈ ಭಾಗದಲ್ಲಿ ವಿಪರೀತ ಸೆಳೆತ ಕಾಣಿಸಿಕೊಳ್ಳುತ್ತದೆ.
ಕಾಣೆಯಾಗುವ ನೆರಳು : ಸಾವಿಗೆ ಹತ್ತಿರ ಇರುವ ವ್ಯಕ್ತಿಗೆ ತನ್ನ ನೆರಳು ಕಾಣೋದಿಲ್ಲ. ಕಂಡ್ರು ತಲೆಯ ಭಾಗ ಕಾಣಿಸೋದಿಲ್ಲ. ನೀರು, ಎಣ್ಣೆ, ತುಪ್ಪ ಅಥವಾ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸೋದಿಲ್ಲ. ಪ್ರತಿಬಿಂಬ ಕಾಣಿಸ್ತಿಲ್ಲ ಎನ್ನುವ ವ್ಯಕ್ತಿಗೆ ಅತ್ಯಂತ ಕಡಿಮೆ ಸಮಯವಿರುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ.
ಕಪ್ಪಾಗಿ ಕಾಣುವ ಚಂದ್ರ : ಒಬ್ಬ ವ್ಯಕ್ತಿಗೆ ಸಾವು ಸಮೀಪಿಸುತ್ತಿದೆ ಎಂದಾಗ ಚಂದ್ರ ಸರಿಯಾಗಿ ಕಾಣೋದಿಲ್ಲ. ಚಂದ್ರ ಕಪ್ಪಾಗಿ ಕಾಣಿಸುತ್ತಾನೆ. ಅಲ್ಲದೆ ಅರುಂಧತಿ ನಕ್ಷತ್ರ, ಸಪ್ತಋಷಿ ನಕ್ಷತ್ರಗಳು ಅಥವಾ ಇತರ ಯಾವುದೇ ನಕ್ಷತ್ರಗಳನ್ನು ನೋಡಲು ಸಾಧ್ಯವಾಗೋದಿಲ್ಲ.
ಪಕ್ಷಿಗಳಿಂದ ಸಿಗುತ್ತೆ ಸಂಕೇತ : ಕಾಗೆಯು ಒಬ್ಬ ವ್ಯಕ್ತಿಯ ತಲೆಯ ಮೇಲೆ ಇದ್ದಕ್ಕಿದ್ದಂತೆ ಬಂದು ಕುಳಿತಾಗ ಅದು ಸಾವಿನ ಸಂಕೇತವಾಗಿದೆ. ರಣಹದ್ದು ಅಥವಾ ಪಾರಿವಾಳವು ಯಾರೊಬ್ಬರ ತಲೆಯ ಮೇಲೆ ಕುಳಿತರೆ, ಅದು ಸಾವನ್ನು ಸೂಚಿಸುತ್ತದೆ.
ದೃಷ್ಟಿಯಲ್ಲಿ ವ್ಯತ್ಯಾಸ : ಸಾವು ಹತ್ತಿರದಲ್ಲಿರುವ ವ್ಯಕ್ತಿಗೆ ಅಕ್ಕಪಕ್ಕದ ವಸ್ತುಗಳು ಸರಿಯಾಗಿ ಕಾಣಿಸೋದಿಲ್ಲ. ತನ್ನ ಸುತ್ತಮುತ್ತಲಿನ ಜಗತ್ತು ಸಂಪೂರ್ಣ ಕತ್ತಲಾದಂತೆ ಭಾಸವಾಗುತ್ತದೆ. ಆಪ್ತರನ್ನು ಗುರುತಿಸಲು ಆತ ಅಸಮರ್ಥನಾಗುತ್ತಾನೆ.