ಜ.22ರಂದು ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಬೆನ್ನಿಗೇ ದೊಡ್ಡ ದೊಡ್ಡ ಹೋಟೆಲ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಯೋಧ್ಯೆಯಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಹಂಬಲಿಸುತ್ತಿದ್ದಾರೆ. ಇದೀಗ ಜಗತ್ತಿನ ಮೊದಲ ಸಸ್ಯಾಹಾರಿ 7 ಸ್ಟಾರ್ ಹೋಟೆಲ್ ಅಯೋಧ್ಯೆಯಲ್ಲಿ ನಿರ್ಮಾಣವಾಗಲು ಯೋಜನೆ ಸಿದ್ಧವಾಗುತ್ತಿದೆ.
ಅಯೋಧ್ಯೆ: ಜ.22ರಂದು ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಬೆನ್ನಿಗೇ ದೊಡ್ಡ ದೊಡ್ಡ ಹೋಟೆಲ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಯೋಧ್ಯೆಯಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಆಸಕ್ತಿ ತೋರುತ್ತಿದ್ದಾರೆ. ಇದೀಗ ಜಗತ್ತಿನ ಮೊದಲ ಸಸ್ಯಾಹಾರಿ 7 ಸ್ಟಾರ್ ಹೋಟೆಲನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವುದಾಗಿ ಪ್ರಸ್ತಾವನೆ ಬಂದಿದೆ.
ರಾಮ ಮಂದಿರದ ಉದ್ಘಾಟನೆಯು ಅಯೋಧ್ಯಾ ನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಸರಣಿಯನ್ನು ಪ್ರಚೋದಿಸಿದೆ. ಅಯೋಧ್ಯೆಯನ್ನು ಸ್ಮಾರ್ಟ್ ಸಿಟಿಯನ್ನಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಸುದ್ದಿ ಈ ಹಿಂದೆ ಕೇಳಿಬಂದಿತ್ತಷ್ಟೇ. ಇದೀಗ ಹೋಟೆಲ್‌ಗಳು ಮತ್ತು ವಸತಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅಯೋಧ್ಯೆಯನ್ನು ವಾಣಿಜ್ಯವಾಗಿಯೂ ಪ್ರಮುಖ ಕೇಂದ್ರವನ್ನಾಗಿ ಮಾಡಲು ಸಿದ್ಧತೆ ನಡೆಯುತ್ತಿದೆ.
undefined
ಕೇವಲ ಸಸ್ಯಾಹಾರ ನೀಡುವ 7 ಸ್ಟಾರ್ ಹೋಟೆಲ್ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೇ ಇಲ್ಲ. ಹೀಗಾಗಿ, ಅಯೋಧ್ಯೆಯಲ್ಲಿ ಈ 7 ಸ್ಟಾರ್ ಹೋಟೆಲ್ ನಿರ್ಮಾಣವಾದರೆ, ಅದು ಮೊದಲ ಸಸ್ಯಾಹಾರಿ 7 ಸ್ಟಾರ್ ಹೋಟೆಲ್ ಆಗಲಿದೆ. ಇದಲ್ಲದೆ, ಸರಯೂ ನದಿಯ ದಡದಲ್ಲಿ ಹಲವಾರು ಪಂಚತಾರಾ ಹೋಟೆಲ್‌ಗಳು ಬರಲಿವೆ. ಸುಮಾರು 110 ಸಣ್ಣ ಮತ್ತು ದೊಡ್ಡ ಹೋಟೆಲ್ ಉದ್ಯಮಿಗಳು ಅಯೋಧ್ಯೆಯಲ್ಲಿ ತಮ್ಮ ಹೋಟೆಲ್ ಸ್ಥಾಪಿಸಲು ಭೂಮಿಯನ್ನು ಖರೀದಿಸಿದ್ದಾರೆ.
ಮುಂಬೈ, ದೆಹಲಿ ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲು ನಿಲ್ದಾಣವು ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶುಕ್ರವಾರದಿಂದ ಲಕ್ನೋದಿಂದ ಹೆಲಿಕಾಪ್ಟರ್ ಸೇವೆ ಕೂಡಾ ಆರಂಭವಾಗಲಿದೆ. ಇಲ್ಲಿ ಸೋಲಾರ್ ಪಾರ್ಕ್ ಕೂಡ ನಿರ್ಮಾಣವಾಗುತ್ತಿದೆ.
ಈಗಾಗಲೇ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ದೇವಸ್ಥಾನದಿಂದ ಸುಮಾರು 15 ನಿಮಿಷಗಳ ದೂರದಲ್ಲಿರುವ ಐಷಾರಾಮಿ ಎಕ್ಸ್‌ಕ್ಲೇವ್ 'ದಿ ಸರಯು' ನಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಒಟ್ನಲ್ಲಿ ರಾಮ ಮಂದಿರ ನಿರ್ಮಾಣದೊಂದಿಗೆ ಅಯೋಧ್ಯೆಯ ಚಿತ್ರಣವೇ ಸಂಪೂರ್ಣ ಬದಲಾಗಲಿದೆ.