ಜಾತಕದಲ್ಲಿರುವ ಉತ್ತಮ ಯೋಗಗಳಿಂದ ವ್ಯಕ್ತಿಯು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾನೆ. ಅಂತಹ ಯೋಗಗಳಲ್ಲಿ ಒಂದು ಶಶ ಯೋಗ. ಜಾತಕದಲ್ಲಿ ಶನಿಯ ಉತ್ತಮ ಸ್ಥಿತಿಯಿಂದ ಉಂಟಾಗುವ ಈ ಯೋಗವು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ತಂದುಕೊಡುತ್ತದೆ.
ವ್ಯಕ್ತಿಯ ಜೀವನಕ್ಕೆ ಗ್ರಹಗತಿಗಳು (Planet) ತುಂಬಾ ಮುಖ್ಯವಾಗುತ್ತವೆ. ಗ್ರಹಗಳ ಸ್ಥಿತಿ ಯಾವ ರೀತಿ ಇದೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಜೀವನ (Life) ನಡೆಯುತ್ತದೆ. ಜಾತಕದಲ್ಲಿ ಕೆಲವು ಗ್ರಹಗಳ ಸ್ಥಿತಿಯು ವ್ಯಕ್ತಿಯ (Person) ಜೀವನದ ಮೇಲೆ ನಕಾರಾತ್ಮಕ ಪ್ರಭಾವ (Negative effect) ಬೀರುತ್ತದೆ. ಹಾಗೆಯೇ ಮತ್ತೆ ಕೆಲವು ಗ್ರಹಗಳ ಸ್ಥಿತಿಯು ಶುಭ ಯೋಗವನ್ನು (Good) ಉಂಟುಮಾಡುತ್ತವೆ. ಹಾಗೆಯೇ ಶಶ ಯೋಗವು (Shasha yoga) ಒಂದು ರೀತಿಯ ಯೋಗವಾಗಿದೆ. ಶನಿ ಗ್ರಹವು (Saturn) ಜಾತಕದಲ್ಲಿ ವಿಶೇಷ ಸ್ಥಾನ (Place) ಮತ್ತು ಸ್ಥಿತಿಯಲ್ಲಿ ಇದ್ದರೆ ಈ ಯೋಗವು ಉಂಟಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂಭತ್ತು (Nine) ಗ್ರಹಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಜಾತಕದಲ್ಲಿ ಗ್ರಹಗಳ ಸ್ಥಿತಿಯು ಉತ್ತಮವಾಗಿದ್ದರೆ ಆ ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮಗಳು (Positive effects) ಉಂಟಾಗುತ್ತವೆ. ಅದೇ ಗ್ರಹಗಳ ಸ್ಥಿತಿ ನೀಚವಾಗಿದ್ದರೆ ಜೀವನದಲ್ಲಿ ಅನೇಕ ತೊಂದರೆ ತಾಪತ್ರಯಗಳನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ ಉತ್ತಮ ಯೋಗಗಳು ಉಂಟಾದಾಗ ಸಹ ಜೀವನದಲ್ಲಿ (Life) ಸಫಲತೆ ದೊರಕುತ್ತದೆ.
ಇದನ್ನು ಓದಿ : Numerology: ಪಾದಾಂಕ 4ರಲ್ಲಿ ಜನಿಸಿದವರ ಆರೋಗ್ಯ ಭವಿಷ್ಯ ಹೀಗಿದೆ..
ವೈದಿಕ ಜ್ಯೋತಿಷ್ಯದ ಪ್ರಕಾರ ಜಾತಕದಲ್ಲಿ ಗ್ರಹಗಳ ಸ್ಥಾನ ವ್ಯಕ್ತಿಯ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಗ್ರಹ ನಕ್ಷತ್ರಗಳ (Star) ಸಂಯೋಗದಿಂದಲೇ ಜಾತಕದಲ್ಲಿ ಯೋಗಗಳು ಉಂಟಾಗುತ್ತವೆ. ಅಂತಹ ಯೋಗಗಳಲ್ಲಿ ಒಂದಾದ ಶಶ ಯೋಗವು ಶುಭವನ್ನು ತರುವ ಯೋಗವಾಗಿದೆ. ಶಶ ಯೋಗ ಎಂದರೇನು? ಈ ಯೋಗದಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿಯೋಣ..
ವೈದಿಕ ಜ್ಯೋತಿಷ್ಯದಲ್ಲಿ ಪಂಚ ಮಹಾಪುರುಷ ರಾಜಯೋಗ ಇರುತ್ತದೆ. ರುಚಕ ಯೋಗ, ಭದ್ರ ಯೋಗ, ಹಂಸಯೋಗ, ಮಾಳವ್ಯ ಯೋಗ ಮತ್ತು ಶಶ ಯೋಗ ಎಂಬ ಯೋಗಗಳಿರುತ್ತವೆ. ಜಾತಕದಲ್ಲಿ ಯಾವುದೇ ಲಗ್ನದಲ್ಲಿ ಶಶ ಯೋಗ ಉಂಟಾದರೂ ಅದು ಉತ್ತಮವಾದದ್ದೆಂದು ಹೇಳಲಾಗುತ್ತದೆ. ಈ ಯೋಗವು ಶನಿ ಗ್ರಹವು ವಿಶೇಷ ಸ್ಥಾನ ಮತ್ತು ಸ್ಥಿತಿಗಳಲ್ಲಿ ಉಂಟಾಗುತ್ತದೆ. ಈ ಯೋಗವನ್ನು ಹೊಂದಿದ ಜಾತಕವು ಅನೇಕ ಶುಭ ಫಲಗಳನ್ನು ಪಡೆಯುತ್ತಾರೆ. ಶನಿ ಗ್ರಹವು ಲಗ್ನ ಭಾವದಿಂದ ಅಥವಾ ಚಂದ್ರ (Moon) ಭಾವದಿಂದ ಕೇಂದ್ರ ಸ್ಥಾನದಲ್ಲಿದ್ದರೆ ಅಂದರೆ ಶನಿಯು ಲಗ್ನದಿಂದ ಅಥವಾ ಚಂದ್ರನಿಂದ 1, 4, 7 ಅಥವಾ 10ನೇ ಸ್ಥಾನದಲ್ಲಿ ತುಲಾ, ಮಕರ ಅಥವಾ ಕುಂಭ ರಾಶಿಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕದಲ್ಲಿ ಶಶ ಯೋಗ ಉಂಟಾಗುತ್ತದೆ.
ಇದನ್ನು ಓದಿ : 2022ರಲ್ಲಿ ಮಕರ ರಾಶಿಯವರ Job, Love & Future ಹೇಗಿರಲಿದೆ?
ಶಶ ಯೋಗದಿಂದ ಜಾತಕದ ಮೇಲಾಗುವ ಪ್ರಭಾವಗಳು (Effects)