Pleasing Saturn: ಶನಿದೇವರ ಮೆಚ್ಚಿಸಬೇಕಿದ್ದರೆ ಇದೋ ಇಲ್ಲಿದೆ ಸರಳ ಮಂತ್ರ!

By Suvarna NewsFirst Published Jan 24, 2022, 9:50 AM IST
Highlights

ಶನಿದೇವರ ಕೃಪೆಗೆ ಪಾತ್ರರಾಗಬೇಕು. ಶನಿದೋಷದಿಂದ ಮುಕ್ತಿ ಹೊಂದಬೇಕು. ಮನೆಯಲ್ಲಿ ಅದೃಷ್ಟ ನೆಲೆಸಬೇಕು ಎಂದು ಹಲವು ರೀತಿಯ ಪ್ರಯತ್ನಗಳನ್ನು ಹಲವರು ಮಾಡಿರುತ್ತಾರೆ. ಆದರೆ, ಏನೇ ಮಾಡಿದರೂ ಕೆಲವರಿಗೆ ಫಲ ದೊರೆಯುತ್ತಿರುವುದಿಲ್ಲ. ಆದರೆ, ಇಲ್ಲಿ ಕೊಡಲಾಗಿರುವ ಕೆಲವು ಸರಳ ಮಂತ್ರಗಳನ್ನು ಜಪಿಸಿ ಶನಿದೇವರ ಕೃಪೆಗೆ ಪಾತ್ರರಾಗಿ...

ಮನುಷ್ಯನ ಹುಟ್ಟು (Birth), ಘಳಿಗೆಗಳ ಆಧಾರ ಮೇಲೆ ರಾಶಿ (Zodiac), ನಕ್ಷತ್ರಗಳನ್ನು (Star) ತಿಳಿದುಕೊಳ್ಳಬಹುದಾಗಿದೆ. ಈ ರಾಶಿ ಚಕ್ರಗಳ ಅನುಸಾರವಾಗಿ ಆ ವ್ಯಕ್ತಿಗಳ ಭವಿಷ್ಯವನ್ನು (Future) ನಾವು ಅರಿಯುತ್ತೇವೆ. ಇಷ್ಟಾದರೂ ರಾಶಿಗಳ ಮೇಲೆ ಗ್ರಹಗಳ ಪ್ರಭಾವ ಇರುತ್ತದೆ. ಪ್ರತಿ ವ್ಯಕ್ತಿಗೆ ಅವರ ಜಾತಕದಲ್ಲಿ (Horoscope)  ಯಾವ ಗ್ರಹಗಳು ಯಾವ ಸ್ಥಿತಿಯಲ್ಲಿವೆ ಎಂಬುದರ ಮೇಲೆ ಅವರ ಉಚ್ಛ – ನೀಚ ಸ್ಥಿತಿಗಳು ನಿರ್ಧರಿತವಾಗುತ್ತವೆ. ಈ ಮೂಲಕ ಲಾಭ – ನಷ್ಟಗಳು (Profit – Loss), ಕಷ್ಟ – ಸುಖಗಳು ಬರುತ್ತವೆ. ಒಟ್ಟು ಇರುವ ಒಂಭತ್ತು ಗ್ರಹಗಳ ಪೈಕಿ ಶನಿ ಗ್ರಹದ ಬಗ್ಗೆ ಎಲ್ಲರಿಗೂ ಭಯ (Fear) ಮತ್ತು ಭಕ್ತಿ ಜಾಸ್ತಿ. 

ಕರ್ಮಕ್ಕೆ ತಕ್ಕ ಫಲ ನೀಡುವವನು ಶನಿ ದೇವ. ಶನಿ (Saturn) ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಹೆಚ್ಚಿನ ಕಷ್ಟಗಳನ್ನು ಅನುಭವಿಸಬೇಕಾಗಲಿದೆ. ಶನಿ ದೋಷವಿದ್ದರೆ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಲೇ ಇರುತ್ತದೆ. ಜಾತಕದಲ್ಲಿ ಶನಿ ದೋಷವಿದ್ದರೆ ಪರಿಹಾರಗಳನ್ನು (Solution) ಕಂಡುಕೊಳ್ಳಬೇಕಿದೆ. ಶನಿಯ ಕೆಟ್ಟ ಪ್ರಭಾವಕ್ಕೊಳಪಟ್ಟಿದ್ದೇ ಆದಲ್ಲಿ ದುಡ್ಡಿದ್ದವರು ಸಹ ಆ ಹಣವನ್ನು ಕಳೆದುಕೊಂಡುಬಿಡುತ್ತಾರೆ. ಅವರ ಸಂಪತ್ತಿನ ಜೊತೆಗೆ ಗೌರವ, ಪ್ರತಿಷ್ಠೆಗಳಿಗೂ ಧಕ್ಕೆಯಾಗುತ್ತದೆ. ಶನಿ ದೋಷದಿಂದ ಮುಕ್ತಿ ಪಡೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ಶಾಂತಿ, ಹೋಮ-ಹವನಗಳನ್ನು ಮಾಡಿಸುವುದಲ್ಲದೆ, ಶನಿ ದೇವಸ್ಥಾನಕ್ಕೆ ಹೋಗಿ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿದರೂ ಸಹ ಕೆಲವು ಬಾರಿ ಶನಿ ದೋಷ ನಿವಾರಣೆಯಾಗುವುದಿಲ್ಲ. ಹೀಗಾಗಿ ಶನಿ ದೋಷ ನಿವಾರಣೆಗೆ ಸರಳ ತಂತ್ರ ಹಾಗೂ ಸರಳ ಮಂತ್ರದ ಬಗ್ಗೆ ಇಲ್ಲಿ ಹೇಳಲಾಗಿದೆ. 

ಇದನ್ನು ಓದಿ: Numerology: ಪಾದಾಂಕ 4ರಲ್ಲಿ ಜನಿಸಿದವರ ಆರೋಗ್ಯ ಭವಿಷ್ಯ ಹೀಗಿದೆ..

ಈ ಮಂತ್ರಗಳ (Mantra) ಜಪಿಸಿ (Chant) ಶನಿ ದೇವರ ಸಂತುಷ್ಟಗೊಳಿಸಿ 

ಸಾಮಾನ್ಯ ಮಂತ್ರ: ಓಂ ಶಂ ಶನೈಶ್ಚರಾಯ ನಮಃ.

ಶನಿ ಗಾಯತ್ರಿ ಮಂತ್ರ: ಓಂ ಭಗಭವಾಯ ವಿದ್ಮಹೇ ಮೃತ್ಯುರೂಪಾಯ ಧೀಮಹೀ ತನ್ನೋ ಶನಿಃ ಪ್ರಚೋದಯಾತ್ 

ಶನಿಯ ಪೌರಾಣಿಕ ಮಂತ್ರ: ಓಂ ಹ್ರೀಂ ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ/ಛಾಯಾ ಮಾರ್ತಾಂಡಸಂಭೂತಂ ತಮ್ ನಮಾಮಿ ಶನೈಶ್ಚರಮ್.

ಶನಿಯ ವೈದಿಕ ಮಂತ್ರ: ಓಂ ಶನ್ನೋದೇವೀರ ಭಿಸ್ಟಯಾಪೋ ಭವಂತು ಪೀತಯೇ ಶಂಯ್ಯೋರಭಿಸ್ತ್ರವಂತುನಃ

ತಾಂತ್ರಿಕ ಮಂತ್ರ ಮತ್ತು ಬೀಜ ಮಂತ್ರ: ಓಂ ಪ್ರಾಂ ಪ್ರೀಂ ಪ್ರೋಂ ಸಃ ಶನೈಶ್ಚರಾಯ ನಮಃ.

ಈ ಮಂತ್ರಗಳನ್ನು ಶ್ರದ್ಧೆಯಿಂದ ದಿನವೂ ಪಠಿಸಿದಲ್ಲಿ ಖಂಡಿತವಾಗಿಯೂ ಶನಿದೇವರ ಪ್ರೀತಿಗೆ ಪಾತ್ರರಾಗಬಹುದು. ಶನಿದೇವರು ಕೇವಲ ಕೆಟ್ಟದ್ದನ್ನು ಮಾಡುವ ದೇವರಲ್ಲ. ಶನಿಯ ಶುಭ ಪ್ರಭಾವಕ್ಕೆ ಒಮ್ಮೆ ಬಂದರೆ ಸಾಕು ಆ ವ್ಯಕ್ತಿಗಳ ಅದೃಷ್ಟದ ಓಟವನ್ನು ಯಾರೂ ಹಿಡಿಯಲಾಗದು. ಆದರೆ, ಈ ಮಂತ್ರಗಳನ್ನು ಜಪಿಸುವ ಮುಂಚೆ ನೀವೇನು ಮಾಡಬೇಕು ಎಂಬ ಬಗ್ಗೆ ನೋಡೋಣ. 

ಶನಿವಾರ (Saturday) ಮಂತ್ರ ಪಠಣೆಗೆ ಮುನ್ನ ಹೀಗೆ ಮಾಡಿ
• ಶನಿವಾರ ಸಂಜೆ ಸ್ನಾನ ಇತ್ಯಾದಿ ಶುದ್ಧ ಕ್ರಮಗಳ ಅನುಸರಿಸಿ
• ನಂತರ ಮನೆಯಲ್ಲಿ ಸ್ವಚ್ಛವಾದ ಸ್ಥಳವನ್ನು (Place) ಆಯ್ದುಕೊಳ್ಳಿ. ಅಲ್ಲಿ ಶನಿದೇವರ ಪ್ರತಿಮೆ ಅಥವಾ ಚಿತ್ರವನ್ನು ಸ್ಥಾಪಿಸಿ.
• ನೀಲಿ ಹೂವುಗಳು (Blue Flower), ಕಪ್ಪು ಬಟ್ಟೆ (Black Dress), ಕಪ್ಪು ಉದ್ದು ಮತ್ತು ಕಪ್ಪು ಎಳ್ಳನ್ನು ಶನಿದೇವರಿಗೆ ಅರ್ಪಿಸಿ. 
• ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಶನಿದೇವರಿಗೆ ಅರ್ಪಿಸಿ, ಸೇವಿಸಿ 
• ನಂತರ ಕಪ್ಪು ತುಳಸಿ ಮಾಲೆಯೊಂದಿಗೆ ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ.

ಇದನ್ನು ಓದಿ : 2022ರಲ್ಲಿ ಮಕರ ರಾಶಿಯವರ Job, Love & Future ಹೇಗಿರಲಿದೆ?

ಕಪ್ಪು ತುಳಸಿ ಮಣಿ ಮಾಲೆ (Chanting Beads) 
ಜಪ ಮಾಡುವಾಗ ಕಪ್ಪು ತುಳಸಿಯ ಮಣಿ ಮಾಲೆಯನ್ನು ಬಳಸಿ ಪಠಿಸುವುದರಿಂದ ಶನಿದೇವರು ಸಂತುಷ್ಟಗೊಳ್ಳುತ್ತಾನೆ. ಜೊತೆಗೆ ತೊಂದರೆಗಳಿದ್ದರೆ (Problem)  ನಿವಾರಣೆಯೂ ಆಗುತ್ತದೆ. ಈ ಮಣಿ ಮಾಲೆಯಿಂದ ಜಪ ಮಾಡುವದರಿಂದ ಮತ್ತು ಧರಿಸುವುದರಿಂದ ಮಾನಸಿಕ ಶಾಂತಿಯು (Mental Peace) ದೊರೆಯುತ್ತದೆ. ಅಲ್ಲದೆ, ಸಮಸ್ಯೆಗೆ ಪರಿಹಾರವನ್ನು (Solution) ಸಹ ಕಂಡುಕೊಳ್ಳಬಹುದಾಗಿದೆ. 

click me!