ಶಿವೋ ಹಂ ಹಾಡಿಗೆ ದೇವಲೋಕವನ್ನೇ ಸೃಷ್ಟಿಸಿದ ವಿಪಿ, ಶಂಕರ್ ಮಹಾದೇವನ್ ಜುಗಲ್ಬಂದಿ

By Suvarna NewsFirst Published Apr 3, 2023, 11:21 AM IST
Highlights

ಟೊರೋಂಟೋದಲ್ಲಿ ಇದೇ ಮೊದಲ ಬಾರಿಗೆ ಸುಪ್ರಸಿದ್ಧ ಗಾಯಕರಾದ  ಶಂಕರ್ ಮಹಾದೇವನ್ ಮತ್ತು ವಿಜಯ್ ಪ್ರಕಾಶ್ ಶಿವಗೀತೆಗಳ ಜುಗಲ್ಬಂದಿ ನಡೆಸಿದರು.

ಶಿವನ ಭಕ್ತಿಗೀತೆಗಳನ್ನು ಕೇಳುವುದೇ ಒಂದು ಆನಂದ. ಅದರಲ್ಲೂ ಅತ್ಯಂತ ಎನರ್ಜಿ ತುಂಬಿದ ಶಿವನ ಹಾಡುಗಳು ಕೇಳುಗರ ದೇಹದಲ್ಲಿ ವಿದ್ಯುದ್ಕಾಂತೀಯ ಶಕ್ತಿಯನ್ನು ಪಸರಿಸುತ್ತವೆ. ಭಕ್ತಿ ಲೋಕದಲ್ಲಿ ಮುಳುಗಿಸುತ್ತವೆ. ಇನ್ನು ಇಂಥ ಹಾಡುಗಳನ್ನು ಪ್ರಸಿದ್ಧ ಗಾಯಕರ ಬಾಯಲ್ಲಿ ಕೇಳುವುದು, ಅವರು ಎಂಜಾಯ್ ಮಾಡಿಕೊಂಡು ಹಾಡುವುದನ್ನು ನೋಡುವುದಂತೂ ವಿಶಿಷ್ಠ ಸೊಬಗೇ ಸರಿ. ಈ ಎಲ್ಲವೂ ಸೇರಿದ ಮೇಳೈಕೆ ಅಲ್ಲಿತ್ತು. 
ಅದರಲ್ಲೂ ಒಬ್ಬರಲ್ಲ, ಇಬ್ಬರೂ ದಿಗ್ಗಜ ಗಾಯಕರು ಜುಗಲ್ಬಂದಿಗೆ ತೊಡಗಿದ್ದರು. ಹೌದು, ಟೊರೋಂಟೋದಲ್ಲಿ ಇದೇ ಮೊದಲ ಬಾರಿಗೆ ಸುಪ್ರಸಿದ್ಧ ಗಾಯಕರಾದ  ಶಂಕರ್ ಮಹಾದೇವನ್ ಮತ್ತು ವಿಜಯ್ ಪ್ರಕಾಶ್ ಶಿವಗೀತೆಗಳ ಜುಗಲ್ಬಂದಿ ನಡೆಸಿದರು. ಒಬ್ಬರಿಗಿಂತ ಒಬ್ಬರು ಸ್ಪರ್ಧೆಗೆ ಬಿದ್ದು ಹರ ಹರ ಮಹಾದೇವ, ಶಂಭೋ ಶಿವ ಶಂಭೋ ಎಂದು ಪೂರ್ಣವಿರಾಮವೇ ಇಲ್ಲದಂತೆ ಹಾಡುತ್ತಲೇ, ತಮ್ಮದೇ ರಾಗ ಬೆಸೆಯುತ್ತಲೇ ಸಾಗಿದ್ದರು. ಈ ಐತಿಹಾಸಿಕ ಪ್ರದರ್ಶನವು, ಎರಡು ಸಂಗೀತ ಶಕ್ತಿಗಳ ನಡುವಿನ ಅದ್ಭುತ ರಸಾಯನಶಾಸ್ತ್ರವು ಕೇಳುಗರನ್ನು ಮಂತ್ರಮುಗ್ಧಗೊಳಿಸಿತು.

ಇದೀಗ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಆರ್ಯ ಕೆನಡ ಇಂಕ್ (Arya Canada Inc) ಪಬ್ಲಿಶ್ ಮಾಡಿದ್ದು, ವೀಕ್ಷಕರಿಗೆ ದಿನ ದಿನ ಹಬ್ಬದೂಟ ತಿಂದಂಥ ಅನುಭವ ಸಾಧ್ಯವಾಗಿದೆ. 

Latest Videos

ವಿಜಯ್ ಪ್ರಕಾಶ್ ಹಾಗೂ ಶಂಕರ್ ಮಹದೇವನ್ ಜುಗಲ್ಬಂದಿ ಕೇಳಿದ ಶ್ರೋತೃಗಳು ವಾಹ್ ವಾಹ್ ಎನ್ನುತ್ತಿದ್ದಾರೆ.

Soma Pradosh Vrat katha: ಭಿಕ್ಷುಕನನ್ನು ರಾಜ್ಯವಾಳಿಸಬಲ್ಲ ಮಹಿಮೆಯ ಪ್ರದೋಷ ವ್ರತ

ಈ ವಿಡಿಯೋಗೆ ಯೂಟ್ಯೂಬ್ ಬಳಕೆದಾರರು ಉತ್ತಮ ಕಾಮೆಂಟ್‌ಗಳ ಮಳೆಯನ್ನೇ ಸುರಿಸಿದ್ದಾರೆ. ಒಬ್ಬರು, 'ಹೇ ಶಿವನೇ... ಈ ಇಬ್ಬರು ಈ ಲೋಕದಲ್ಲಿ ಎಂದೆಂದಿಗೂ ಬದುಕಲಿ..' ಎಂದು ಹಾರೈಸಿದರೆ, ಮತ್ತೊಬ್ಬರು 'ಎಲ್ಲಿಯೇ ಹಾಡಲಿ, ವಿಜಯ್ ಪ್ರಕಾಶ್ ತಮ್ಮ ಬೂಟುಗಳನ್ನು ತೆಗೆಯುತ್ತಾರೆ. ಅವರ  ಸಂಸ್ಕಾರ ದೊಡ್ಡದು' ಎಂದು ಮೆಚ್ಚಿ ಮಾತಾಡಿದ್ದಾರೆ.

ಮತ್ತೊಬ್ಬ ವೀಕ್ಷಕರು ಇವರ ಜುಗಲ್ಬಂದಿಗೆ ಪರವಶವಾಗಿದ್ದು, 'ಒಂದೇ ವೇದಿಕೆಯಲ್ಲಿ ಎರಡು ಜೀವಂತ ದಂತಕಥೆಗಳನ್ನು ಹೊಂದುವುದು ಯಾರ ಕಲ್ಪನೆ? ಥ್ಯಾಂಕ್ಸ್ ಎಂಬುದು ಚಿಕ್ಕ ಪದ, ವಾಹ್ ಎಂತಹ ದೈವಿಕತೆಯೊಂದಿಗೆ ಪರಿಪೂರ್ಣತೆ! ಭಗವಾನ್ ಶಿವನೇ ಈ ಸ್ವರಗಳ ರೋಮಾಂಚಕ ಅಲೆಗಳನ್ನು ಕೇಳಲು ಬಂದನು,' ಎಂದಿದ್ದಾರೆ.

ಬಹುತೇಕ ಎಲ್ಲ ಕಾಮೆಂಟ್‌ದಾರರು 13 ನಿಮಿಷಗಳ ಟ್ರಾನ್ಸ್ ಭಾವನೆ ಅನುಭವಿಸಿದ್ದಾಗಿ ಹೇಳಿದ್ದಾರೆ. ಈ ದಿಗ್ಗಜರ ಹಾಡಿಗೆ ಮೈ ತುಂಬಾ ರೋಮಾಂಚನವಾಗಿದ್ದನ್ನು ಅನುಭವಿಸಿ ನುಡಿದಿದ್ದಾರೆ. 


 

click me!