Temple Entry Rules: ದೇವಾಲಯದ ಮೆಟ್ಟಿಲನ್ನು ಮುಟ್ಟಿ ಒಳ ಪ್ರವೇಶಿಸುವುದೇಕೆ?

By Suvarna NewsFirst Published Apr 3, 2023, 9:06 AM IST
Highlights

ದೇವಾಲಯವನ್ನು ಪ್ರವೇಶಿಸುವ ಸಮಯದಲ್ಲಿ ನೀವು ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುತ್ತೀರಾ? ಹೀಗೇಕೆ ಮಾಡಬೇಕು? ಇದರ ಹಿಂದಿರುವ ಜ್ಯೋತಿಷ್ಯ ಕಾರಣಗಳ ಬಗ್ಗೆ ತಿಳಿಯೋಣ.

ದೇವಾಲಯಗಳು ಶಾಂತಿಧಾಮಗಳಾಗಿವೆ. ಜನರು ಮನಃಶಾಂತಿಗಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ದೇವಾಲಯವನ್ನು ಪ್ರವೇಶಿಸಲು ಹಲವು ನಿಯಮಗಳಿವೆ ಮತ್ತು ಸಾಮಾನ್ಯವಾಗಿ ನಾವು ಆ ನಿಯಮಗಳನ್ನು ಅದರ ಹಿಂದಿನ ಕಾರಣ ಗೊತ್ತಿಲ್ಲದೆಯೇ, ಅಭ್ಯಾಸ ಬಲದಿಂದ ಅನುಸರಿಸುತ್ತಿರುತ್ತೇವೆ. ದೇವಾಲಯವನ್ನು ಪ್ರವೇಶಿಸುವ ಮೊದಲು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ನಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತವೆ.

ದೇವಸ್ಥಾನ ಪ್ರವೇಶಿಸುವಾಗ ಗಂಟೆ ಬಾರಿಸುವುದು, ದೇವಸ್ಥಾನದ ಹೊರಗೆ ಪಾದರಕ್ಷೆ ಬಿಡುವುದು, ನೈವೇದ್ಯ ಮಾಡುವಾಗ ಪರದೆ ಎಳುವುದು, ಒಳಗೆ ಗಡಿಯಾರದ ತೆರದಲ್ಲಿ ಪ್ರದಕ್ಷಿಣೆ ಹಾಕುವುದು ಇತ್ಯಾದಿ ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ನಿಯಮಗಳು.

Latest Videos

ಅಂತಹ ನಿಯಮಗಳಲ್ಲಿ ಒಂದು- ದೇವಾಲಯವನ್ನು ಪ್ರವೇಶಿಸುವಾಗ ನಮಸ್ಕರಿಸುವುದು, ಮೆಟ್ಟಿಲುಗಳನ್ನು ಮುಟ್ಟುವುದು ಮತ್ತು ನಂತರ ಒಳಗೆ ಹೋಗುವುದು. ವಾಸ್ತವವಾಗಿ ಇದು ನಾವು ಯಾವುದೇ ಕಾರಣವನ್ನು ತಿಳಿಯದೆ ಅನುಸರಿಸುತ್ತಿರುವ ನಿಯಮವಾಗಿದೆ. ಶಾಸ್ತ್ರಗಳಲ್ಲಿ ಈ ಅಭ್ಯಾಸದ ಬಗ್ಗೆ ಬಹಳಷ್ಟು ಹೇಳಲಾಗಿದೆ. ಬನ್ನಿ, ಈ ಅಭ್ಯಾಸದ ಹಿಂದಿನ ಕಾರಣಗಳ ಬಗ್ಗೆ ತಿಳಿಸುತ್ತೇವೆ.

ಗೌರವವನ್ನು ಪಾವತಿಸುವ ವಿಧಾನ
ನಾವು ಯಾರಿಗಾದರೂ ಗೌರವ ನೀಡುವಾಗ ಅವರಿಗೆ ನಮಸ್ಕರಿಸುತ್ತೇವೆ ಅಥವಾ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇವೆ. ಅದೇ ರೀತಿ, ದೇವಸ್ಥಾನವನ್ನು ಪ್ರವೇಶಿಸುವಾಗ, ನಾವು ಮೆಟ್ಟಿಲುಗಳಿಗೆ ನಮಸ್ಕರಿಸುತ್ತೇವೆ. ಏಕೆಂದರೆ ನಾವು ದೇವರಿಗೆ ಗೌರವವನ್ನು ತೋರಿಸುವ ಮೊದಲ ಹೆಜ್ಜೆ ಇದಾಗಿದೆ. 
ನಾವು ಮೆಟ್ಟಿಲುಗಳನ್ನು ಸ್ಪರ್ಶಿಸಿದಾಗ ದೇವಸ್ಥಾನದ ಹೊರಗೆ ನಮ್ಮ ತಲೆಯಲ್ಲಿದ್ದ ಅನೇಕ ಅನಿಷ್ಟಗಳನ್ನು ಅಲ್ಲಿಯೇ ಬಿಟ್ಟು ಶುದ್ಧ ಮನಸ್ಸಿನಿಂದ ಒಳಗೆ ಪ್ರವೇಶಿಸುತ್ತೇವೆ. ಈ ಸಮಯದಲ್ಲಿ ಪವಿತ್ರ ಸ್ಥಳಕ್ಕೆ ಕಾಲಿಡುತ್ತಿರುವುದರ ಅಂತಃಪ್ರಜ್ಞೆ ನಮ್ಮಲ್ಲಿ ಸೃಷ್ಟಿಯಾಗುತ್ತದೆ.

Garuda Purana: ಸ್ನಾನಗೃಹದ ವಿಷಯದಲ್ಲಿ ಈ ತಪ್ಪು ಮಾಡಿದ್ರೆ ಬಡತನ ಒಕ್ಕರಿಸುತ್ತೆ!

ಅಹಂ ನಾಶ
ದೇವಸ್ಥಾನದ ಮೆಟ್ಟಿಲುಗಳನ್ನು ಮುಟ್ಟಿ ನಮಸ್ಕರಿಸುವುದರಿಂದ ನಮ್ಮೊಳಗಿನ ಅಹಂಕಾರವೆಲ್ಲ ಕೊನೆಗೊಳ್ಳುತ್ತದೆ. ದೇವಾಲಯವನ್ನು ಪ್ರವೇಶಿಸುವಾಗ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಹೆಮ್ಮೆಯಿದ್ದರೆ, ನೀವು ಪೂಜೆಯ ಫಲವನ್ನು ಪಡೆಯುವುದಿಲ್ಲ. ಆದ್ದರಿಂದ ಪ್ರವೇಶದ್ವಾರದಲ್ಲಿರುವ ಮೆಟ್ಟಿಲುಗಳಿಗೆ ನಮಸ್ಕರಿಸುವಂತೆ ಸಲಹೆ ನೀಡಲಾಗುತ್ತದೆ. ನಮಸ್ಕರಿಸಿ ಮೆಟ್ಟಿಲುಗಳನ್ನು ಮುಟ್ಟುವುದರಿಂದ ಅಹಂಕಾರ ನಾಶವಾಗಿ ಮನಸ್ಸು ಸ್ಪಷ್ಟವಾಗುತ್ತದೆ, ಇದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ.

ದೇವರಿಗೆ ಪ್ರಾರ್ಥನೆ ಮಾಡುವ ವಿಧಾನ
ದೇವಾಲಯದ ಮೆಟ್ಟಿಲುಗಳು ನಾವು ಈ ಪವಿತ್ರ ಸ್ಥಳಕ್ಕೆ ಪ್ರವೇಶಿಸುವ ಸ್ಥಳವಾಗಿದೆ. ಇವುಗಳ ಆರಂಭದಲ್ಲಿ ನಮಸ್ಕರಿಸಿದಾಗ, ನಮ್ಮ ಯಾವುದೇ ಇಷ್ಟಾರ್ಥಗಳ ಈಡೇರಿಕೆಗಾಗಿ ನಾವು ದೇವರನ್ನು ಪ್ರಾರ್ಥಿಸುತ್ತಿದ್ದೇವೆ ಎಂದು ತೋರಿಸುತ್ತದೆ. ಇದು ನಿಮ್ಮನ್ನು ದೇವರೊಂದಿಗೆ ಸಂಪರ್ಕಿಸುವ ಮಾರ್ಗವಾಗಿದೆ ಮತ್ತು ಇದರಿಂದ ನೀವು ದೇವರ ಅನುಗ್ರಹವನ್ನು ಪಡೆಯುತ್ತೀರಿ.

ಶರಣಾಗತಿಯ ಚಿಹ್ನೆ
ದೇವಾಲಯವನ್ನು ಪ್ರವೇಶಿಸುವ ಮೊದಲು, ನೀವು ಮೆಟ್ಟಿಲುಗಳ ಮುಂದೆ ನಮಸ್ಕರಿಸಿದಾಗ ಮತ್ತು ಮೆಟ್ಟಿಲುಗಳ ಪಾದಗಳನ್ನು ಸ್ಪರ್ಶಿಸಿದಾಗ, ಅದು ನಿಮ್ಮ ಶರಣಾಗತಿಯನ್ನು ಸೂಚಿಸುತ್ತದೆ. ಪ್ರವೇಶಿಸುವ ಮೊದಲು, ನಿಮ್ಮ ಆತ್ಮ ಮತ್ತು ದೇಹವು ಎಲ್ಲವನ್ನೂ ದೇವರಿಗೆ ಒಪ್ಪಿಸುತ್ತಿದ್ದೀರಿ ಎಂಬ ಸೂಚನೆ ಇದು. ಶರಣಾಗತಿಯ ಭಾವನೆಯಿಂದ ದೇವಾಲಯ ಪ್ರವೇಶಿಸಿದಾಗ ನೀವು ಪೂಜೆಯ ಫಲಿತಾಂಶವನ್ನು ಪಡೆಯುತ್ತೀರಿ. ದೇವರ ಭಕ್ತಿಯಲ್ಲಿ ನಾವು ಎಲ್ಲವನ್ನೂ ತ್ಯಾಗ ಮಾಡಿದಾಗ, ನಮಗೆ ದೇವರ ಕೃಪೆ ಸಿಗುತ್ತದೆ.

Tulsi Plant Vastu: ತುಳಸಿಯನ್ನು ಈ ದಿಕ್ಕಲ್ಲಿ ನೆಟ್ಟರೆ, ಮನೆಗೆ ಸಿಗುವುದು ಧನಲಕ್ಷ್ಮೀ ಕಟಾಕ್ಷ

ಈ ರೀತಿಯಾಗಿ, ನೀವು ದೇವಾಲಯವನ್ನು ಪ್ರವೇಶಿಸುವ ಸಮಯದಲ್ಲಿ ಮೆಟ್ಟಿಲುಗಳನ್ನು ಸ್ಪರ್ಶಿಸಿದರೆ, ಆಗ ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಉಳಿಯುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!