Saturn Effect: ಈ ರಾಶಿಯವರಿಗೆ ಒಂದು ತಿಂಗಳು ಶನಿ ಕಾಟದಿಂದ ಮುಕ್ತಿ

By Suvarna NewsFirst Published Jan 20, 2022, 5:04 PM IST
Highlights

ಸಾಡೇಸಾತಿ, ಶನಿದೆಸೆಯಿಂದ ಬಸವಳಿದವರು ಮುಂದಿನ ಒಂದು ತಿಂಗಳ ಕಾಲ ಹಾಯಾಗಿರಬಹುದು. ಏಕೆಂದರೆ, ಜನವರಿ 22ರಿಂದ ಫೆ.22ರವರೆಗೆ ಶನಿ ಮಕರ ರಾಶಿಯಲ್ಲಿ ಅಸ್ತನಾಗುತ್ತಾನೆ. ಒಂದು ತಿಂಗಳ ಬಳಿಕ ಉದಯವಾಗುತ್ತಾನೆ. ಈಗ ಶನಿಯ ಪ್ರಭಾವ ಕಡಿಮೆಯಾಗುತ್ತದೆ.
 

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಶನಿ (Saturn) ಗ್ರಹವನ್ನು ನ್ಯಾಯಾಧೀಶ ಎಂದು ಕರೆಯಲಾಗುತ್ತದೆ. ಅಂದರೆ, ಜನ್ಮಾಂತರಗಳಲ್ಲಿ ನಾವು ಮಾಡಿದ ಪಾಪಪುಣ್ಯಗಳ ಲೆಕ್ಕಾಚಾರದ ಮೇಲೆ ನ್ಯಾಯ ನೀಡುವ ಗ್ರಹವನ್ನಾಗಿ ಶನಿಯನ್ನು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಶನಿ ಗ್ರಹ ಮಕರ (Capricorn) ರಾಶಿ(Zodiac Sign)ಯಲ್ಲಿಯಲ್ಲಿದೆ. ಜನವರಿ 22ರಿಂದ ಫೆಬ್ರವರಿ 22ರವರೆಗೂ ಮಕರ ರಾಶಿಯಲ್ಲೇ ಅಸ್ತವಾಗುತ್ತದೆ. ಫೆ.22ರಂದು ಬೆಳಗ್ಗೆ 10.13ರ ಸುಮಾರಿಗೆ ಮತ್ತೆ ಉದಯವಾಗುತ್ತದೆ. (ಈ ದಿನಾಂಕಗಳ ಕುರಿತು ಕೆಲವರಲ್ಲಿ ಅಲ್ಪ ಭಿನ್ನಾಭಿಪ್ರಾಯವಿದೆ.)

ಶನಿ ಅಸ್ತನಾಗುತ್ತಿರುವುದರಿಂದ ಸಾಡೇಸಾತಿ ಅಥವಾ ಎರಡೂವರೆ ವರ್ಷಗಳ ಶನಿ ದೆಸೆ ನಡೆಯುತ್ತಿರುವವರಿಗೆ ಈ ಸಮಯದಲ್ಲಿ ಸ್ವಲ್ಪ ಬಿಡುಗಡೆ ದೊರೆಯುತ್ತದೆ. ಸದ್ಯ ಧನು (Sagittarius), ಮಕರ, ಕುಂಭ (Aquarius) ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದ್ದು, ಮಿಥುನ (Gemini) ಮತ್ತು ತುಲಾ (Libra) ರಾಶಿಯವರಿಗೆ ಶನಿದೆಸೆ ನಡೆಯುತ್ತಿದೆ. ಈಗ ಶನಿ ಮಕರ ರಾಶಿಯಲ್ಲಿ ಸ್ಥಿತನಾಗುವುದರಿಂದ ಈ ಐದು ರಾಶಿಗಳಿಗೆ ಶನಿಯಿಂದ ಅಲ್ಪ ಪರಿಹಾರ ದೊರೆಯುತ್ತದೆ ಎನ್ನುವುದು ಜ್ಯೋತಿಷಿಗಳ ಅಭಿಪ್ರಾಯ.

ಶನಿ ಅಸ್ತನಾಗುವುದರಿಂದ ಪರಿಣಾಮ ಏನಿರುತ್ತದೆ ಎಂದು ನೋಡಿಕೊಳ್ಳಿ. 
•   ಮೊದಲನೆಯದಾಗಿ, ಧನು, ಮಕರ, ಕುಂಭ, ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ (Relief) ದೊರೆಯುತ್ತದೆ. ನೀವು ಕೈಗೊಂಡ ಕಾರ್ಯಗಳಿಗೆ ವೇಗ ದೊರೆಯುತ್ತದೆ. ಅರ್ಧಕ್ಕೇ ನಿಂತ ಕೆಲಸ ಪೂರ್ಣಗೊಳ್ಳುವ ಸ್ಥಿತಿಗೆ ಬರುತ್ತದೆ. 
•   ಯಾರ ಜನ್ಮಕುಂಡಲಿ(Janma Kundali) ಯಲ್ಲಿ ಶನಿ ನಾಲ್ಕನೇ, ಎಂಟನೇ ಹಾಗೂ 12ನೇ ಮನೆಯಲ್ಲಿ ಸ್ಥಿತನಾಗಿದ್ದಾನೆಯೋ ಅವರಿಗೆ ಶನಿಯ ಕೆಟ್ಟ ಪ್ರಭಾವದಿಂದ ಈ ಸಮಯದಲ್ಲಿ ಮುಕ್ತಿ ದೊರೆಯುತ್ತದೆ. 
•   ಕುಂಡಲಿಯಲ್ಲಿ ಒಂದೊಮ್ಮೆ ಶನಿ ಮಾರಕ ಸ್ಥಾನದಲ್ಲಿದ್ದರೆ ಅವರಿಗೂ ಈ 30 ದಿನಗಳ ಅವಧಿಯಲ್ಲಿ ಶನಿಕಾಟದಿಂದ ಬಿಡುಗಡೆಯಾಗುತ್ತದೆ. 

Vastu Tips: ಉಪ್ಪುನೀರಿನಿಂದ ಮನೆ ಒರೆಸಿದ್ರೆ ಋಣಾತ್ಮಕ ಶಕ್ತಿಗಳೆಲ್ಲ ಗಾಯಬ್!

•   ಶನಿ ಕೆಟ್ಟ ಸ್ಥಿತಿಯಲ್ಲಿದ್ದರೆ ಯಾವುದೇ ಕಾರ್ಯ ಸುಲಭವಾಗಿ ಆಗುವುದಿಲ್ಲ. ಯಾವಾಗಲೂ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.  ಎಷ್ಟು ಪ್ರಯತ್ನಿಸಿದರೂ ಏನಾದರೊಂದು ವಿಘ್ನ ಎದುರಾಗುತ್ತಲೇ ಇರುತ್ತದೆ. ಹೀಗಾಗಿ, ಮಾನಸಿಕ ಕ್ಲೇಶ (Stress) ಹೆಚ್ಚಾಗಿರುತ್ತದೆ. ಆದರೆ, ಈ ಸಮಯದಲ್ಲಿ ಶನಿಯ ಪ್ರಭಾವ (Effect) ಕಡಿಮೆ ಇರುವುದರಿಂದ ಸ್ವಲ್ಪ ವಿರಾಮ ದೊರೆಯುತ್ತದೆ. ನೆಮ್ಮದಿ ಸಿಗುತ್ತದೆ. ಮನಸ್ಸಿಗೆ ಶಾಂತಿ (Peace) ಲಭಿಸುತ್ತದೆ. 
•   ಯಾರ ಕುಂಡಲಿಯಲ್ಲಿ ಶನಿ ಅಶುಭ ಸ್ಥಾನದಲ್ಲಿದ್ದಾನೆಯೋ ಅವರಿಗಂತೂ ಈ 30 ದಿನಗಳ ಕಾಲ ಸಾಕಷ್ಟು ಪರಿಹಾರ ದೊರೆಯುತ್ತದೆ. ಸಂಕಷ್ಟಗಳು ಕಡಿಮೆಯಾಗುತ್ತವೆ. ಮಾನಸಿಕವಾಗಿ ಸ್ವಲ್ಪ ನೆಮ್ಮದಿಯಾಗುತ್ತದೆ. 

Astrology tips: ಮಕ್ಕಳಾಗ್ತಿಲ್ವಾ? ಸಂತಾನ ಯೋಗ ಹೆಚ್ಚಿಸಲು ಹೀಗ್ಮಾಡಿ..

ಶನಿಕಾಟದಿಂದ ಮುಕ್ತಿ ಹೇಗೆ?
•   ಶನಿಯ ಕಾಟದ ಪ್ರಭಾವ ಕುಗ್ಗಿಸಲು ದಿನವೂ ಶನಿ ಚಾಲೀಸಾ (Shani Chalisa) ಪಠಣ ಮಾಡಬೇಕು.
•   ಕಪ್ಪು (Black) ಮುತ್ತುಗಳ ಹಾರವನ್ನು ಕೊರಳಲ್ಲಿ ಧರಿಸಬೇಕು.
•   ನಿತ್ಯವೂ ಹನುಮಂತ(Hanuman)ನ ದರ್ಶನ ಮಾಡಬೇಕು. ಶನಿಯ ಅಶುಭ ಪ್ರಭಾವದಿಂದ ರಕ್ಷಿಸಿಕೊಳ್ಳಲು ಹನುಮಂತನನ್ನು ಪೂಜಿಸಬೇಕು. 
•   ಹಸಿ ಹಾಲಿ(Milk)ಗೆ ಶುದ್ಧ ಜಲ (Water) ಮತ್ತು ಕಪ್ಪು ಎಳ್ಳನ್ನು ಹಾಕಿ ಅಶ್ವತ್ಥ (Peepul) ವೃಕ್ಷಕ್ಕೆ ಅರ್ಪಿಸಬೇಕು.
•   ಶನಿದೇವ ಅಥವಾ ಹನುಮಂತನ ಮಂದಿರದಲ್ಲಿ ಸಾಸಿವೆ ಎಣ್ಣೆಯ ದೀಪ ಬೆಳಗಿಸಬೇಕು.
•   ಅಗತ್ಯವುಳ್ಳ ಜನರಿಗೆ ಆಹಾರ (Food) ಮತ್ತು ಬಟ್ಟೆ (Cloth) ದಾನ (Donate) ಮಾಡಬೇಕು.
•   ಎಣ್ಣೆ (Oil), ಎಳ್ಳು (Sesame), ಕಪ್ಪು ಬಟ್ಟೆ, ಉದ್ದಿನಕಾಳು (Urad Dal), ಚರ್ಮದಿಂದ ಮಾಡಿರುವ ವಸ್ತುಗಳನ್ನು ದಾನ ನೀಡುವುದು ಉತ್ತಮ.
•   ಶನಿವಾರದಿಂದ ಶನಿ ದೇವರಿಗೆ ತೈಲವನ್ನು ಅರ್ಪಿಸಿ.
•   ಶನಿಯನ್ನು ಪೂಜಿಸುವಾಗ ಓಂ ಪ್ರಾಂ ಪ್ರೀಂ ಫ್ರೋಂ ಸಃ ಶನೈಶ್ವರಾಯ ನಮಃ ಮಂತ್ರವನ್ನು ಜಪಿಸಬೇಕು.


 

click me!