ಇಂದು ಚೈತ್ರ ನವರಾತ್ರಿಯ ಅಷ್ಟಮಿ. ಈ ದಿನ ವಿಶೇಷ ಸಂಯೋಗವೊಂದಿದ್ದು, ಈ ದೇವಿಯ ಪೂಜೆ ಮಾಡುವುದರಿಂದ ಶನಿ ಶಾಂತಗೊಳ್ಳುತ್ತಾನೆ.
ವರ್ಷದಲ್ಲಿ ಎರಡು ಬಾರಿ ನವರಾತ್ರಿ ಬರುತ್ತದೆ. ಮೊದಲ ನವರಾತ್ರಿ ಚೈತ್ರ ಮಾಸದ ಆರಂಭದಲ್ಲೇ ಶುರುವಾಗಿದೆ. ಇಂದು ಚೈತ್ರ ನವರಾತ್ರಿಯ ಎಂಟನೇ ದಿನ. ಅಂದರೆ ದುರ್ಗಾಷ್ಟಮಿ. ನವರಾತ್ರಿಯ ಅಷ್ಟಮಿ ಎಂದರೆ ಬಹಳ ಮಹತ್ವದ ದಿನ. ಈ ದಿನ ಶನಿವಾರ ಬೇರೆ ಬಂದಿದೆ. ಈ ನವರಾತ್ರಿ ಆರಂಭವಾಗಿದ್ದೂ ಶನಿವಾರ(Saturday)ವೇ. ಅಂದರೆ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದದಂದು, ಹಿಂದೂ ಹೊಸ ವರ್ಷದ ದಿನ ನವರಾತ್ರಿಯ ಆರಂಭವೂ ಆಗಿದೆ. ಈ ವರ್ಷದ ರಾಜ ಕೂಡಾ ಶನೀಶ್ವರನೇ ಆಗಿದ್ದಾನೆ. ಈ ಎಲ್ಲ ಕಾರಣಗಳಿಂದ ಶನಿಯನ್ನು ಶಾಂತಗೊಳಿಸುವುದು, ಆತನನ್ನು ಮೆಚ್ಚಿಸುವುದು ಮುಖ್ಯವಾಗಿದೆ.
ಈ ದುರ್ಗಾಷ್ಠಮಿಯ ದಿನ ಶನಿವಾರವೇ ಆಗಿರುವುದರಿಂದ ಈ ತಾಯಿಯನ್ನು ಆರಾಧಿಸುವುದರಿಂದ ಶನಿಯನ್ನು ಮೆಚ್ಚಿಸಬಹುದಾಗಿದೆ.
ಯಾರನ್ನು ಪೂಜಿಸಬೇಕು?
ಪಂಚಾಂಗದ ಪ್ರಕಾರ, ಚೈತ್ರ ಶುಕ್ಲದ ಅಷ್ಟಮಿಯಾದ ಇಂದು ಮಹಾಗೌರಿ(Mahagauri)ಯನ್ನು ಪೂಜಿಸುವುದರಿಂದ ಶನಿ ಶಾಂತನಾಗುತ್ತಾನೆ. ಹೌದು, ಈ ದುರ್ಗಾಷ್ಟಮಿಯು ಶನಿಯನ್ನು ಮೆಚ್ಚಿಸಲು ಸಕಾಲವಾಗಿದೆ. ಶನಿ ಶಾಂತನಾದಾಗ ಬದುಕು ಬಹಳ ಸುಲಭವಾಗುತ್ತದೆ.
ನವರಾತ್ರಿ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ಬಾರ್ದು ಅಂತಾರಲ್ಲ ಯಾಕೆ ?
ಈ ಮಂತ್ರ ಹೇಳಿ
ತಾಯಿ ದುರ್ಗೆಯ ಈ ಮಂತ್ರ ಹೇಳುವುದರಿಂದ ಶನಿ ಸಮಾಧಾನ ಹೊಂದುತ್ತಾನೆ. ಇದೇ ನವರ್ಣ ಮಂತ್ರ. ನವರ್ಣ ಎಂದರೆ ವರ್ಣಮಾಲೆಯ ಒಂಬತ್ತು ಅಕ್ಷರಗಳು. ಈ ಮಂತ್ರದಲ್ಲಿ ಒಂಬತ್ತು ಅಕ್ಷರಗಳಿವೆ. ಇದರಲ್ಲಿರುವ ಪ್ರತಿಯೊಂದು ಅಕ್ಷರವೂ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತದೆ. ಒಂಬತ್ತು ದಿನಗಳ ನವರಾತ್ರಿ ಸಂದರ್ಭದಲ್ಲಿ ಈ ಮಂತ್ರ ಹೇಳುವುದನ್ನು ಬಹಳ ಫಲದಾಯಕ ಎನ್ನಲಾಗುತ್ತದೆ. ಈ ಮಂತ್ರವು ಕೇವಲ ಶನಿಯನ್ನು ಶಾಂತಗೊಳಿಸುವುದಷ್ಟೇ ಅಲ್ಲ, ಎಲ್ಲ ಗ್ರಹಗಳನ್ನೂ ಸಂತುಷ್ಟಗೊಳಿಸುತ್ತದೆ. ಮಂತ್ರ ಹೀಗಿದೆ- 'ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ'
ಈ ದಿನ ತಾಯಿ ಗೌರಿಯನ್ನು ಪೂಜಿಸಬೇಕು ಮತ್ತು ಸುಮಂಗಲಿಯರು ಬಳಸುವ ವಸ್ತುಗಳನ್ನು ದಾನ ಮಾಡಬೇಕು. ಅಂದರೆ ಗೌರಿಯನ್ನು ಮೆಚ್ಚಿಸಲು ನಿರ್ಗತಿಕರಿಗೆ ಬಟ್ಟೆಗಳನ್ನು ನೀಡಬೇಕು. ಅದಲ್ಲದೆ, ಬಳೆ, ಅರಿಶಿನ, ಕುಂಕುಮ, ಬಾಚಣಿಗೆ ನೀಡಬಹುದು. ಈ ದಿನ ದೇವಸ್ಥಾನಕ್ಕೆ ಹಣ್ಣುಗಳನ್ನು ದಾನ ಮಾಡಬೇಕು. ಈ ದಿನ ಅಕ್ಕಿಯನ್ನು ದಾನ ಮಾಡುವುದರಿಂದ ಅಕ್ಷಯವಾಗಲಿದೆ ಸಂಪತ್ತು, ಇದಲ್ಲದೆ ಗೋಧಿ, ಉದ್ದು ಬೇಳೆಗಳನ್ನು ಕೂಡಾ ಇಂದು ದಾನ ಮಾಡುವುದರಿಂದ ಗೌರಿಯು ಸಂತುಷ್ಟಳಾಗುತ್ತಾಳೆ.
Panchanga: ರಾತ್ರಿ ಮಲಗಿದ್ದಾಗ ದುಸ್ವಪ್ನಗಳು ಬೀಳುತ್ತಿದ್ದರೆ, ಈ ಮಂತ್ರವನ್ನು ಹೇಳಿಕೊಳ್ಳಿ
ಸಂಖ್ಯಾಶಾಸ್ತ್ರ(Numerology)
ಇಂದು ಅಷ್ಟಮಿ. ಅಂದರೆ 8ನೇ ದಿನ. 8 ಸಂಖ್ಯೆಯು ಶನಿಯ ಸಂಖ್ಯೆಯಾಗಿದೆ. ಶನಿವಾರವೇ ಅಷ್ಟಮಿ ಬಂದಿರುವುಜರಿಂದ, ಈ ದಿನ ವಿಶೇಷ ಸಂಯೋಗ ಆಗುತ್ತಿದೆ.
ಶನಿಗಾಗಿ ದಾನ ಮಾಡಿ(donate to saturn)
ಶನಿವಾರ ಶನಿ ದೇವರ ದಿನವಾಗಿರುವುದರಿಂದ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಇಂದು ದಾನ ಮಾಡಬೇಕು. ಸಾಸಿವೆ ಎಣ್ಣೆ, ಕಪ್ಪು ಕೊಡೆ, ಕಪ್ಪು ಹೊದಿಕೆಗಳು, ಕಪ್ಪು ಬಣ್ಣದ ಶೂ, ಕಪ್ಪು ಉದ್ದು ಇತ್ಯಾದಿಗಳನ್ನು ಈ ದಿನ ದಾನ ಮಾಡಿ. ಶನಿಗೆ ಕೋಪ ಬರಿಸುವಂಥ ಯಾವುದೇ ಕೆಲಸಗಳನ್ನು ಮಾಡಬೇಡಿ. ಯಾರನ್ನಾದರೂ ಅವಮಾನಿಸುವುದು, ಕೋಪ ಮಾಡುವುದು, ಕೈ ಎತ್ತುವುದು ಮುಂತಾದ ಕೆಲಸಗಳನ್ನು ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ಕರ್ಮಕ್ಕೆ ತಕ್ಕ ಫಲ ಕೊಡುವ ಆತ, ಶನಿದೆಸೆ, ದೈಯ್ಯ, ಸಾಡೇಸಾತಿ ನಡೆವ ಸಂದರ್ಭದಲ್ಲಿ ಎಲ್ಲದಕ್ಕೂ ಸರಿಯಾಗಿ ಶಿಕ್ಷೆ ನೀಡುತ್ತಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.