Vastu Tips : ಯಮರಾಜನಿಗೆ ಸೀಮಿತವಾದ ಈ ದಿಕ್ಕಿನ ಬಗ್ಗೆ ನಿರ್ಲಕ್ಷ್ಯ ಬೇಡ

Published : Apr 08, 2022, 03:21 PM IST
Vastu Tips : ಯಮರಾಜನಿಗೆ ಸೀಮಿತವಾದ ಈ ದಿಕ್ಕಿನ ಬಗ್ಗೆ ನಿರ್ಲಕ್ಷ್ಯ ಬೇಡ

ಸಾರಾಂಶ

ಸುಖ – ಸಮೃದ್ಧಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನಿಸಿದ್ರೂ ಸಮಸ್ಯೆ ಬಗೆಹರಿಯುವುದಿಲ್ಲ. ನಿಮ್ಮ ಶ್ರಮ ವಿಫಲವಾಗಲು ಕಾರಣ ವಾಸ್ತುದೋಷವಾಗಿರಬಹುದು. ಮನೆಯ ಕೆಲ ದಿಕ್ಕು ವಿಶೇಷವಾಗಿರುತ್ತದೆ. ಅದ್ರ ಬಳಕೆ ವೇಳೆ ಎಚ್ಚರದಿಂದಿರಬೇಕು.   

Vastu Shastra Tips: ಸುಂದರ ಮನೆ (Home) ಕಟ್ಟುವುದು ಮಾತ್ರ ಕನಸಲ್ಲ, ಕನಸಿನ ಮನೆಯಲ್ಲಿ ಸುಖವಾಗಿ ಜೀವನ (Life ) ನಡೆಸಬೇಕೆಂಬುದು ಎಲ್ಲರ ಬಯಕೆ. ಕಷ್ಟಪಟ್ಟು ಮನೆಯನ್ನೇನೋ ನಿರ್ಮಾಣ ಮಾಡ್ತಾರೆ. ಆದ್ರೆ ಹೊಸ ಮನೆಯಲ್ಲಿ ಸಂತೋಷ (Happiness) ವಿರುವುದಿಲ್ಲ. ಒಂದಾದ್ಮೇಲೆ ಒಂದು ಸಮಸ್ಯೆ, ಅನಾರೋಗ್ಯ (Illness), ದಾಂಪತ್ಯ ಕಲಹ ಕಾಡಬಹುದು. ಇದಕ್ಕೆ ವಾಸ್ತು ಮುಖ್ಯ ಕಾರಣವಾಗುತ್ತದೆ. ಹಾಗಾಗಿ ಮನೆ ಕಟ್ಟುವ ವೇಳೆ ವಾಸ್ತು ಶಾಸ್ತ್ರದ ಬಗ್ಗೆ ಗಮನವಿರಬೇಕೆಂದು ತಜ್ಞರು ಹೇಳ್ತಾರೆ. ಜೀವನ ಪರ್ಯಂತ ದುಡಿದ ಹಣದಲ್ಲಿ ನಿರ್ಮಾಣವಾದ ಮನೆಯಲ್ಲಿ ಸುಖ,ಶಾಂತಿ,ನೆಮ್ಮದಿ ಬೇಕೆಂದ್ರೆ ವಾಸ್ತು ಪ್ರಕಾರ ಮನೆ ನಿರ್ಮಾಣವಾಗ್ಬೇಕು. ವಾಸ್ತು ಶಾಸ್ತ್ರದಲ್ಲಿ ದಿಕ್ಕಿಗೆ ಮಹತ್ವದ ಸ್ಥಾನವಿದೆ. ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆಯೇ ವಾಸ್ತು ಶಾಸ್ತ್ರದಲ್ಲಿ ಮನೆಯ ದಕ್ಷಿಣ ದಿಕ್ಕನ್ನು ಯಮದೇವತೆ ಮತ್ತು ಪೂರ್ವಜರದ್ದು ಎಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ನಿರ್ಮಿಸುವುದನ್ನು ತಪ್ಪಿಸಬೇಕು. ಇಲ್ಲವಾದರೆ ಪಿತೃ ದೋಷ ನಿಮ್ಮನ್ನು ಕಾಡುತ್ತದೆ. ಮನೆಯ ಸದಸ್ಯರ ಮಧ್ಯೆ  ಉದ್ವಿಗ್ನತೆ ಹೆಚ್ಚಿಸಬಹುದು. ಇಂದು ಮನೆಯ ದಕ್ಷಿಣ ದಿಕ್ಕು ಹೇಗಿರಬೇಕು? ಅಲ್ಲಿ ಏನನ್ನು ಇಡಬಾರದು ಎಂಬುದನ್ನು ನಾವು ಹೇಳ್ತೇವೆ.

ದೇವರ ಮನೆ : ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ ಪ್ರತ್ಯೇಕವಾಗಿರುತ್ತದೆ. ದೇವರ ಮನೆಯನ್ನು ಪವಿತ್ರವಾಗಿಟ್ಟುಕೊಳ್ಳಲು ಎಲ್ಲರೂ ಬಯಸ್ತಾರೆ. ಆದರೆ ಮನೆಯ ದೇವರ ಕೋಣೆ ಎಂದಿಗೂ ದಕ್ಷಿಣ ದಿಕ್ಕಿನಲ್ಲಿರಬಾರದು. ಇದರಿಂದ ನೀನು ಮಾಡಿದ ಪೂಜೆಯ ಪೂರ್ಣ ಫಲ ನಿಮಗೆ ಸಿಗುವುದಿಲ್ಲ. ದೇವರ ಮನೆ ನಿರ್ಮಿಸಲು ಅಥವಾ ಇಡಲು ಮನೆಯ ಈಶಾನ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ಮಲಗುವ ಕೋಣೆ : ಮಲಗುವ ಕೋಣೆ ಕೂಡ ಬಹಳ ಮುಖ್ಯವಾದ ಸ್ಥಳ. ದಂಪತಿ ಮಧ್ಯೆ ಪ್ರೀತಿ ಬೆಸೆಯುವ ಜಾಗ ಅದು. ಬೆಡ್ ರೂಮ್ ಕೂಡ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಮಲಗುವ ಕೋಣೆಯ ಹಾಸಿಗೆಯನ್ನು ಸಹ ಈ ದಿಕ್ಕಿನಲ್ಲಿ ಹಾಕಬೇಡಿ. ದಕ್ಷಿಣ ದಿಕ್ಕಿನಲ್ಲಿ ಮಲಗುವ ಕೋಣೆಯಿದ್ದರೆ ದಾಂಪತ್ಯ ಜೀವನ ಸಿಹಿಯಾಗಿರುವುದಿಲ್ಲ. ಇಬ್ಬರ ಮಧ್ಯೆ ಪರಿಸ್ಥಿತಿ ಜಗಳ ಉಂಟಾಗಬಹುದು. ಪತಿ-ಪತ್ನಿಯರ ನಡುವಿನ ಸಂಬಂಧ ಹಾಳಾಗಬಹುದು. ಇದಲ್ಲದೆ ನಿದ್ರಾಹೀನತೆ ಸಮಸ್ಯೆ ಕೂಡ ನಿಮ್ಮನ್ನು ಕಾಡ್ಬಹುದು.

ಅಡುಗೆ ಕೋಣೆ : ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯನ್ನು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಬಾರದು. ದಕ್ಷಿಣ ದಿಕ್ಕಿನಲ್ಲಿ ಅಡುಗೆ ಮನೆಯಿದ್ದರೆ ಕುಟುಂಬ ಸದಸ್ಯರ ಆರೋಗ್ಯ ಕೆಡಬಹುದು. ಅಲ್ಲದೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಬಹುದು. ಹಣಕ್ಕೆ ಸಂಬಂಧಿತ ಸಮಸ್ಯೆ ನಿಮ್ಮನ್ನು ಕಾಡ್ಬಹುದು.

ಇದನ್ನೂ ಓದಿ: Vastu Tips: ಈ ವಾಸ್ತು ನಿಯಮಗಳು ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತೆ

ತುಳಸಿ ಗಿಡ : ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವನ್ನು ಬೆಳೆಸಲಾಗುತ್ತದೆ. ಲಕ್ಷ್ಮಿ ಪ್ರತೀಕವಾದ ತುಳಸಿ ಗಿಡ ನಿಮ್ಮ ಮನೆಯಲ್ಲಿದ್ದರೆ ನೀವು ಅದ್ರ ವಾಸ್ತು ಬಗ್ಗೆಯೂ ಗಮನ ಹರಿಸಬೇಕು. ವಾಸ್ತು ಪ್ರಕಾರ, ಮನೆಯ ದಕ್ಷಿಣ ದಿಕ್ಕು ಪೂರ್ವಜರಿಗೆ ಸೇರಿರುವುದರಿಂದ ಇಲ್ಲಿ ತುಳಸಿ ಗಿಡವನ್ನು ಇಡುವುದನ್ನು ತಪ್ಪಿಸಬೇಕು. ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಲಾಭದ ಬದಲು ನಷ್ಟವನ್ನೇ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: CHANAKYA NEETI: ಹೊರಗಿನವರಿಗೆ ಈ ವಿಷಯಗಳ ಬಾಯಿ ಬಿಟ್ಟರೆ ಕೆಟ್ಟಂತೆ!

ಪಾದರಕ್ಷೆಗಳು : ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಇಟ್ಟಿದ್ದರೆ ಇದನ್ನು ತಕ್ಷಣ ತೆಗೆಯಿರಿ. ಈ ದಿಕ್ಕು ಪೂರ್ವಜರದ್ದಾಗಿರುವುದರಿಂದ ಇಲ್ಲಿ ಬೂಟುಗಳು ಮತ್ತು ಚಪ್ಪಲಿಗಳು ಅಥವಾ ಶೂ ರ್ಯಾಕ್‌ಗಳನ್ನು ಇಟ್ಟರೆ ಪಿತೃ ದೋಷಕ್ಕೆ ಕಾರಣವಾಗಬಹುದು. ಇದರಿಂದ ಮನೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಗಳಿರುತ್ತವೆ. ಪಿತೃದೋಷವಾಗಬಾರದು ಅಂದ್ರೆ ಶೂ ರ್ಯಾಕ್ ಗಳನ್ನು ದಕ್ಷಿಣ ದಿಕ್ಕಿನ ಬದಲು ಮನೆಯ ಬೇರೆ ಸ್ಥಳದಲ್ಲಿ ಇಡಿ.

PREV
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ