ಡಿ.21ಕ್ಕೆ ಮೈಲಾರ ಲಿಂಗೇಶ್ವರ ದೇಗುಲದಲ್ಲಿ ಬೃಹತ್‌ ದೋಣಿ ಸೇವೆ, ಏನಿದು ದೋಣಿ ಸೇವೆ?

By Kannadaprabha NewsFirst Published Jul 24, 2023, 4:59 AM IST
Highlights

ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆ, ಹುಣ್ಣಿಮೆ ದಿನ ಭಕ್ತರು ದೋಣಿ ಸೇವೆ ಮಾಡುತ್ತಾರೆ. ಇದನ್ನು ರಾಜ್ಯಮಟ್ಟದಲ್ಲಿ ಪ್ರಚಾರ ಆಗುವಂತೆ ಮಾಡಲು ಡಿ.21ರಂದು ಬೃಹತ್‌ ಮಟ್ಟದ ದೋಣಿ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಹೂವಿನಹಡಗಲಿ(ಹಾವೇರಿ) (ಜು.24) :  ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆ, ಹುಣ್ಣಿಮೆ ದಿನ ಭಕ್ತರು ದೋಣಿ ಸೇವೆ ಮಾಡುತ್ತಾರೆ. ಇದನ್ನು ರಾಜ್ಯಮಟ್ಟದಲ್ಲಿ ಪ್ರಚಾರ ಆಗುವಂತೆ ಮಾಡಲು ಡಿ.21ರಂದು ಬೃಹತ್‌ ಮಟ್ಟದ ದೋಣಿ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ದೋಣಿ ಸೇವೆ ಮಾಡಿ ನಂತರ ಶಂಕರ ಸೇವಾ ಟ್ರಸ್ಟ್‌ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿ.21ರಂದು ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಎಲ್ಲ ಸಮಾಜದ ಸ್ವಾಮಿಗಳು ಹಾಗೂ ವಿಶೇಷ ವ್ಯಕ್ತಿಗಳನ್ನು ಆಹ್ವಾನಿಸಿ ಅವರ ಸಮ್ಮುಖ ದೋಣಿ ಸೇವೆ ಕಾರ್ಯಕ್ರಮ ಮಾಡುವ ಚಿಂತನೆ ಇದೆ. ದೋಣಿ ಸೇವೆಯಲ್ಲಿ ಭಾಗವಹಿಸಿದ ಗೊರವರ ನೃತ್ಯ, ಹಾಡು ಸೇರಿ ವಿಶಿಷ್ಟಪೂಜೆ ಮನಸ್ಸಿಗೆ ಶಾಂತಿ ತಂದಿದೆ ಎಂದರು.

‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌' ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಿದ್ದು ನಿಜವಾಯ್ತು!

ಏನಿದು ದೋಣಿ ಸೇವೆ?

ಮೈಲಾರಲಿಂಗೇಶ್ವರ ದೇವಸ್ಥಾನ(Mailarlingeshwar temple)ದ ಆವರಣದಲ್ಲಿರುವ ಗೊರವರು ಬಳಸುವ ತಾಮ್ರದ ಚೌಕಟ್ಟು ಆಕಾರದ ಪಾತ್ರೆಯನ್ನು ದೋಣಿ ಎನ್ನುತ್ತಾರೆ. ಭಕ್ತರು ತಾವು ದೇವರಿಗೆ ಅರ್ಪಿಸುವ ಆಹಾರ ಪದಾರ್ಥ ಮತ್ತು ಪ್ರಸಾದವನ್ನು ಈ ದೋಣಿಯಲ್ಲಿ ಹಾಕುತ್ತಾರೆ. ಜತೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದನ್ನೇ ದೋಣಿ ಸೇವೆ ಎಂದು ಕರೆಯುತ್ತಾರೆ.

ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ, ಶಾಸಕ ಕೃಷ್ಣನಾಯ್ಕ ಮಾತನಾಡಿದರು. ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ ಕಾರ್ಣಿಕದ ಸೇರಿ ಇತರರಿದ್ದರು.

 

ಹೂವಿನಹಡಗಲಿ: ಮೈಲಾರ ಜಾತ್ರೆಗೆ ಭರದ ಸಿದ್ಧತೆ

ಇದಕ್ಕೂ ಮುನ್ನ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ದೋಣಿ ಸೇವೆ ಕಾರ್ಯಕ್ರಮ ಜರುಗಿತು. ದೋಣಿ ಸೇವೆಯಲ್ಲಿ ಈಶ್ವರಪ್ಪ ಅವರ ಪತ್ನಿ, ಮಗ ಸೊಸೆ ಹಾಗೂ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

click me!