ಮನೆ ಮುಂದೆ ನಿಂಬೆ- ಮೆಣಸು ಕಟ್ಟುವುದು ಏಕೆ ಗೊತ್ತಾ?

ಕೆಲವರು ಮನೆ ಮುಂದೆ, ಕೆಲವರು ಅಂಗಡಿ ಮುಂದೆ, ಇನ್ನು ಕೆಲವರು ತಮ್ಮ ವಾಹನದ ಮುಂದೆಯೂ ನಿಂಬೆಹಣ್ಣು- ಮೆಣಸು ಕಟ್ಟಿಕೊಳ್ಳುತ್ತಾರೆ. ಅದ್ಯಾಕೆ ಅಂತ ನಿಮಗೆ ಗೊತ್ತಾ?

 

What is the reason behind tagging lemon and mirchi in front of home

ಮಾಜಿ ಸಚಿವ ರೇವಣ್ಣ ಅವರು ಸದಾ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡಿರುವುದನ್ನು ನೀವು ನೋಡಬಹುದು. ಅದಕ್ಕೆ ಕಾರಣ ಏನೆಂದು ಯಾರೂ ಅವರನ್ನು ಕೇಳಿದ ಹಾಗಿಲ್ಲ. ನಿಂಬೆಹಣ್ಣು ತಮ್ಮ ಬಳಿ ಇದ್ದರೆ ತಮಗೆ ಅಧಿಕಾರ, ಆಸ್ತಿ, ಪವರ್ ವಿಷಯದಲ್ಲಿ ಯಾವುದೇ ಕೇಡು ಉಂಟಾಗುವುದಿಲ್ಲ ಎಂದು ರೇವಣ್ಣ ನಂಬಿದ್ದಾರೆ. ಹಾಗೇ ತುಂಬಾ ಮಂದಿ ತಮ್ಮ ಮನೆ, ಅಂಗಡಿ, ವಾಹನಗಳ ಮುಂದೆ ನಿಂಬೆಹಣ್ಣು ಹಾಗೂ ಏಳು ಹಸಿಮೆಣಸನ್ನು ಒಟ್ಟಿಗೇ ಕಟ್ಟಿ ತೂಗುಹಾಕಿರುತ್ತಾರೆ. ಇದರ ಹಿಂದೆ ಇರುವ ಕಾರಣ ವೈಜ್ಞಾನಿಕವಾದದ್ದೇ ಆಗಿದೆ. 

ಸಾಂಪ್ರದಾಯಿಕ ನಂಬಿಕೆ ಎಂದರೆ, ಇದು ನಷ್ಟಲಕ್ಷ್ಮಿಯನ್ನು ದೂರವಿಡುವ ಒಂದು ರೂಢಿ. ನಷ್ಟಲಕ್ಷ್ಮಿ ಎಂದರೆ ಭಾಗ್ಯಲಕ್ಷ್ಮಿಯ ಸೋದರಿ, ಈಕೆ ನಷ್ಟ ಉಂಟುಮಾಡುವ ದೇವತೆ. ನಷ್ಟಲಕ್ಷ್ಮಿಗೆ ಹುಳಿಯಾದ, ಖಾರವಾದ ಪದಾರ್ಥಗಳೆಂದರೆ ಇಷ್ಟ. ವ್ಯಾಪಾರಸ್ಥರ ಮನೆ ಅಥವಾ ಅಂಗಡಿ ಬಾಗಿಲವರೆಗೂ ಬರುವ ಈಕೆ, ಅಲ್ಲಿ ನಿಂಬೆಹನ್ಣು ಹಾಗೂ ಹಸಿಮೆಣಸನ್ನು ಕಂಡು, ಅದನ್ನು ಸೇವಿಸುತ್ತಾಳೆ. ನಂತರ ಆಕೆಗೆ ಒಳಬರಲು ಯಾವುದೇ ಕಾರಣ ಇರುವುದಿಲ್ಲ. ಹುಳಿ, ತೀಕ್ಷ್ಣ, ಖಾರ ಪದಾರ್ಥಗಳನ್ನು ಸೇವಿಸಿದ ನಂತರ ಒಳಗೆ ಬರುವ ಪ್ರಚೋದನೆಯನ್ನು ಕಳೆದುಕೊಳ್ಳುವುದರಿಂದ ದುರದೃಷ್ಟದ ದೇವತೆ ಒಳಗೆ ಪ್ರವೇಶಿಸುವುದಿಲ್ಲ, ತನ್ನ ದುಷ್ಟ ಕಣ್ಣಿನಿಂದ ಅಂಗಡಿಯ ಮೇಲೆ ದೃಷ್ಟಿ ಹಾಯಿಸದೇ ಹೊರಟು ಹೋಗುತ್ತಾಳೆ ಎನ್ನುವ ನಂಬಿಕೆ.

ವಾಹನಗಳಿಗೂ ನಿಂಬೆ ಹಣ್ಣು ಹಾಗೂ ಹಸಿಮೆಣಸಿನಕಾಯಿ ಕಟ್ಟಲಾಗುತ್ತದೆ. ಇಲ್ಲೂ ಕಾರಣ ಮೇಲೆ ಹೇಳಿದ್ದೇ. ಅದರ ಜೊತೆಗಿನ ಇನ್ನೊಂದು ಕಾರಣ ಅಂದರೆ, ವಿಷಜಂತುಗಳನ್ನು ದೂರವಿಡುವುದು. ಕಾಡುದಾರಿ ಪ್ರಯಾಣ ಮಾಡುವಾಗ, ವಿಷಜಂತುಗಳು ಕಾರಿನ ಹತ್ತಿರ ಅಥವಾ ಒಳಗೆ ಬಾರದಂತೆ ಈ ಮೆಣಸು ಹಾಗೂ ನಿಂಬೆ ನೋಡಿಕೊಳ್ಳುತ್ತವೆ. ಅಥವಾ ಒಂದು ವೇಳೆ ಯಾವುದಾದರೂ ಜಂತು ಕಚ್ಚಿದರೆ, ನಿಂಬೆ- ಮೆಣಸಿನ ರುಚಿ ತಿಳಿದರೆ, ಕಡಿದದ್ದು ವಿಷಜಂತುವಲ್ಲ ಎಂದು ತಿಳಿಯುತ್ತದೆ. 

ಇದಕ್ಕೆ ವೈಜ್ಞಾನಿಕ ಕಾರಣವನ್ನೂ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಮನೆ, ಅಂಗಡಿಗಳು ಮಣ್ಣಿನಿಂದ ನಿರ್ಮಾಣವಾಗುತ್ತಿದುದರಿಂದ ಆ ಸಮಯದಲ್ಲಿ ಕ್ರಿಮಿ, ಕೀಟಗಳು ಒಳಗೆ ಬರುವ ಸಂಭವ ಹೆಚ್ಚಾಗಿತ್ತು, ಆ ಸಮಯದಲ್ಲಿ ಕೀಟನಾಶಕಗಳ ಬಳಕೆಯೂ ಇಲ್ಲದಿದ್ದುದರಿಂದ ಹತ್ತಿಯ ದಾರಕ್ಕೆ ನಿಂಬೆ ಹಣ್ಣು ಹಾಗು ಮೆಣಸನ್ನು ಚುಚ್ಚಿ ಕಟ್ಟಲಾಗುತ್ತಿತ್ತು. ಹತ್ತಿಯು ಮೆಣಸು ಹಾಗೂ ನಿಂಬೆ ಹಣ್ಣಿನಿಂದ ಬರುವ ಆಮ್ಲವವನ್ನು ಹೀರಿಕೊಂಡು ಕ್ರಿಮಿ ಕೀಟಗಳನ್ನು ಒಳಗೆ ಬರದಂತೆ ತಡೆಯುತ್ತದೆ. ಇದನ್ನೇ ಕೀಟನಾಶಕವಾಗಿ ಅಂದಿನ ಕಾಲದಲ್ಲಿ ಬಳಸುತ್ತಿದ್ದರು.

ಕೃಷ್ಣನ ಅವತಾರಕ್ಕೆ ಕೃತಜ್ಞತೆ ಸಲ್ಲಿಸುವ ಅಷ್ಟಮಿ! 
ನಿಂಬೆ ಹಣ್ಣು ಹಾಗೂ ಮೆಣಸನ್ನು ಇತರರ ಕೆಟ್ಟದೃಷ್ಟಿ ಅಥವಾ ದುಷ್ಟಶಕ್ತಿಗಳ ದೃಷ್ಟಿ ಮನೆ ಅಥವಾ ಅಂಗಡಿಯ ಮೇಲೆ ಬೀಳಬಾರದು ಎನ್ನುವ ಕಾರಣಕ್ಕಾಗಿಯೂ ಕಟ್ಟುತ್ತಾರೆ. ಶತ್ರುಗಳ ವಕ್ರದೃಷ್ಟಿ ಬಿದ್ದರೆ ನಷ್ಟ ಅಥವಾ ಕೆಡುಕುಂಟಾಗಬಹುದು ಎಂಬ ಕಾರಣದಿಂದ ಈ ಪದ್ಧತಿಯನ್ನು ಅನುಸರಿಸುತ್ತಾರೆ. ನಿಂಬೆ ಹಣ್ಣು ತಮೋಗುಣವನ್ನು ಹೀರಿಕೊಳ್ಳುತ್ತದೆ. ಕೆಲವು ನಿಂಬೆಹಣ್ಣಿನ ಮೇಲ್ಭಾಗದಲ್ಲಿ ಮೇಲಿಂದ ಕೆಳಗಿನವರೆಗೂ ಒಂದು ಗೆರೆಯಂತೆ ರಚನೆ ಇರುತ್ತದೆ. ಎರಡು ಗೆರೆಗಳಿದ್ದರೆ, ಆ ನಿಂಬೆಹಣ್ಣನ್ನು ಮಾಟ ಮಂತ್ರಕ್ಕೆ ಉಪಯೋಗಿಸುತ್ತಾರೆ.  ಯಾಕೆಂದರೆ ತಮೋಪ್ರಧಾನ ಶಕ್ತಿಗಳನ್ನು ಅದು ಹೆಚ್ಚು ಆಕರ್ಷಿಸುತ್ತದೆ ಎಂಬ ನಂಬಿಕೆ. 

ಶ್ರೀಕಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ…! 
ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ವ್ಯಕ್ತಿಯ ಕಾಲಿನಿಂದ ತಲೆಯವರೆಗೂ ವೃತ್ತಾಕಾರವಾಗಿ ದೃಷ್ಟಿ ತೆಗೆದು ನಂತರ ಆ ನಿಂಬೆ ಹಣ್ಣನ್ನು ಕೆಂಡದಲ್ಲೋ ಅಥವಾ ಹರಿವ ನೀರಿನಲ್ಲೋ ಬಿಟ್ಟು ಬಿಡುವ ಕ್ರಮವಿದೆ. ನಿಂಬೆಹಣ್ಣನ್ನು ಸುಟ್ಟರೆ ರಜೋ- ತಮೋ ಪ್ರಧಾನ ಕಂಪನಗಳು ಬೇಗ ನಾಶವಾಗುತ್ತದೆ. ತೀವ್ರವಾಗಿ ವಕೃದೃಷ್ಟಿಯಾಗಿದ್ದಲ್ಲಿ ರಜೋ ತಮೋ ಶಕ್ತಿಯು ನೀರಿನೊಂದಿಗೆ ಬೆರೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಿಂಬೆ ನೀರಿನಲ್ಲಿ ಮುಳುಗುತ್ತದೆ. ಸೌಮ್ಯ ದೃಷ್ಟಿ ತಗುಲಿದ್ದರೆ ನಿಂಬೆ ತಕ್ಷಣವೇ ನೀರಿನೊಂದಿಗೆ ಹರಿಯುತ್ತದೆ. ವಕ್ರದೃಷ್ಟಿ ತಗುಲದೇ ಇದ್ದಾಗ ನಿಂಬೆ ಹಣ್ಣನ್ನು ಬೆಂಕಿಗೆ ಹಾಕಿದಾಗ ತಕ್ಷಣವೇ ಸುಟ್ಟುಹೋಗುತ್ತದೆ. ತೀವ್ರವಾದ ದೃಷ್ಟಿಯಾಗಿದ್ದಲ್ಲಿ ನಿಂಬೆ ಹಣ್ಣು ನೇರಳೆ ಹೊಗೆಯನ್ನು ಹೊರಸೂಸುತ್ತದೆ, ಬೆಂಕಿಯ ಜ್ವಾಲೆಯು ಅಸ್ಥಿರವಾಗುತ್ತದೆ.

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ! 

Latest Videos
Follow Us:
Download App:
  • android
  • ios