ಮಕರ ರಾಶಿಯು ಭೂಮಿ ತತ್ವಕ್ಕೆ ಸೇರಿದೆ. ಈ ರಾಶಿಯವರ ವ್ಯಕ್ತಿತ್ವ ಎಂಥದ್ದು, ಅವರ ಐದು ವಿಶಿಷ್ಠ ಗುಣಗಳ ಬಗ್ಗೆ ಇಲ್ಲಿ ವಿವರಣೆ ಇದೆ.
ಮಕರ(Capricorn) ರಾಶಿಯವರ ಚೇತನೇ ಅದಮ್ಯವಾದುದು. ಅವರ ಎನರ್ಜಿ ಅಸಾಧಾರಣ. ಮನಸ್ಸು ಮಾಡಿಬಿಟ್ಟರೆ ಮುಗಿಯಿತು, ಅದನ್ನವರು ಸಾಧಿಸಿಯೇ ತೀರುತ್ತಾರೆ. ಅದಕ್ಕಾಗಿ ಎಷ್ಟು ಶಕ್ತಿ ವಿನಿಯೋಗಿಸಬೇಕಾದರೂ ಸರಿ. ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಬೇಕಾದರೂ ಸರಿ. ಇವರಲ್ಲಿ ಜವಾಬ್ದಾರಿಯೂ ಹೆಚ್ಚು, ನ್ಯಾಯಪರತೆಯೂ ಹೆಚ್ಚು. ಇವರು ಯಶಸ್ಸಿಗೆ ಶಾರ್ಟ್ ಕಟ್ ಹುಡುಕುವವರಲ್ಲ, ಅದೃಷ್ಟ(luck) ಬಲದ ಮೇಲೆ ನಂಬಿಕೆ ಇಟ್ಟವರಲ್ಲ. ತಮ್ಮ ಮೇಲೆ, ಪರಿಶ್ರಮದ ಮೇಲೆ, ಅನುಭವ(experience)ದ ಮೇಲೆ ನಂಬಿಕೆ ಇಟ್ಟವರು. ವಾಸ್ತವವಾದಿಗಳಾದ ಇವರ 5 ಅಪರೂಪದ ಗುಣಗಳನ್ನು ನೋಡೋಣ.
ಎಂದಿಗೂ ಬಿಟ್ಟುಕೊಡುವವರಲ್ಲ(They never give up)
ಯಾವುದನ್ನೂ ಸುಲಭವಾಗಿ ಎಂದಿಗೂ ಬಿಟ್ಟುಕೊಡದಿರುವುದು ಇವರ ಶ್ಲಾಘನೀಯ ಗುಣವಾಗಿದೆ. ಮಕರ ರಾಶಿಯವರಿಗೆ ಬೆಳೆಯುವುದು, ಕಷ್ಟಪಟ್ಟು ಕೆಲಸ ಮಾಡುವುದು ಮತ್ತು ಜೀವನದ ಬಗ್ಗೆ ಗಂಭೀರವಾಗಿರುವುದು ಸ್ವಭಾವವಾಗಿದೆ. ಎಂಥದೇ ಪ್ರತಿಕೂಲ ಪರಿಸ್ಥಿತಿಗಳು ನಿರ್ಮಾಣವಾದರೂ ಜಗ್ಗದೆ ಅದನ್ನೆದುರಿಸಿ ನಿಲ್ಲುತ್ತಾರೆ. ಹಟ, ಛಲ ಎರಡೂ ಹೆಚ್ಚಿರುವ ಇವರು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನೋಡಲು ಸೌಮ್ಯ ಸ್ವಭಾವದವರ ಹಾಗೆ ಕಾಣುವ, ಹೆಚ್ಚು ಮಾತನಾಡದ ಇವರನ್ನು ಬಹುತೇಕರು ಕಡಿಮೆ ಅಂದಾಜು ಮಾಡುತ್ತಾರೆ.
ಆಕಾಶಕ್ಕೆ ಏಣಿ ಇಡುತ್ತಾರೆ
ಮಕರ ರಾಶಿಯವರು ಮಹತ್ವಾಕಾಂಕ್ಷಿಗಳು(ambitious). ಅವರು ಬದುಕಿಗೆ ದೊಡ್ಡ ಗುರಿಗಳನ್ನೇ ಹಾಕಿಕೊಳ್ಳುತ್ತಾರೆ. ಹಾಗಂಥ ವಾಸ್ತವದ ಅರಿವು ಅವರಲ್ಲಿ ಚೆನ್ನಾಗಿಯೇ ಇರುತ್ತದೆ. ಆದರೆ, ತಮ್ಮ ಮೇಲಿನ ನಂಬಿಕೆ ಅವರಲ್ಲಿ ದೊಡ್ಡ ಗುರಿಗಳನ್ನಿಟ್ಟುಕೊಳ್ಳುವಂತೆ ಮಾಡುತ್ತದೆ. ತಮ್ಮ ಗುರಿ ಸಾಧನೆಗಾಗಿ ಕೆಲವೊಂದನ್ನು ತ್ಯಾಗ ಮಾಡಬೇಕಾಗಿ ಬಂದರೆ ಅದಕ್ಕವರು ಅಂಜುವುದಿಲ್ಲ. ಆದರೆ, ಅವರ ಈ ಗುರಿಸಾಧನೆಯ ಹಾದಿಯಲ್ಲಿ ಸಂಗಾತಿ ತನಗೆ ಸಿಗಬೇಕಾದ ಬೆಚ್ಚನೆಯ ಭಾವಗಳಿಂದ ವಂಚಿತವಾಗಬೇಕಾಗಬಹುದು. ಅವರಿಗೆ ಪ್ರೀತಿ ಇಲ್ಲ ಎಂದಲ್ಲ, ಅದನ್ನವರು ಗುರಿ ಸಾಧನೆಯ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ತೋರುತ್ತಾರೆಯೇ ಹೊರತು, ಫೀಲಿಂಗ್ಸ್ ಸರಿಯಾಗಿ ವ್ಯಕ್ತಪಡಿಸುವುದರಿಂದಲ್ಲ.
undefined
ಜವಾಬ್ದಾರಿ ಹೆಚ್ಚು(responsible)
ಈ ರಾಶಿಯವರು ತಮ್ಮೆಲ್ಲ ಕೆಲಸಗಳ ಹೊಣೆಯನ್ನು ತಾವೇ ಹೊರುತ್ತಾರೆ ಹಾಗೂ ತಮ್ಮ ತಪ್ಪುಗಳಿಂದ ಬೇಗನೆ ಕಲಿಯುತ್ತಾರೆ. ಹಾಗಾಗಿ, ಮಧ್ಯೆ ಕಾಣಿಸಿಕೊಳ್ಳುವ ಅಡೆತಡೆಗಳನ್ನು ಎದುರಿಸಿ ಉತ್ತಮ ಅನುಭವ ಹೊಂದುತ್ತಾರೆ. ಇವರು ಜೀವನವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ತಾವು ಬಯಸಿದ್ದನ್ನು ಪಡೆಯಲು ಏನು ಮಾಡಬೇಕೋ ಅದನ್ನವರು ಮಾಡುತ್ತಾರೆ. ಇವರ ತಾಳ್ಮೆಗಾಗಿ ಜನ ಇವರನ್ನು ಮೆಚ್ಚುತ್ತಾರೆ. ಗುರಿ ತಲುಪಲು ಪರ್ವತವನ್ನೇ ಎತ್ತಿ ಪಕ್ಕಕ್ಕಿಡಬೇಕೆಂದರೂ ಅಂಜದ ಗುಂಡಿಗೆ ಇವರದು.
Business and black magic: ವ್ಯಾಪಾರಕ್ಕೆ ನಷ್ಟ ತರುವ ವಾಮಾಚಾರ, ರಕ್ಷಣೆ ಹೇಗೆ?
ಭಾವನೆಗಳ ಕೊರತೆ(They lack emotion)
ಪ್ರೀತಿ ಹಾಗೂ ಸಂಬಂಧಗಳ ವಿಷಯಕ್ಕೆ ಬಂದರೆ ಇವರಲ್ಲಿ ಭಾವನೆಗಳು ಕೊಂಚ ಕಡಿಮೆಯೇ. ಅಥವಾ ಭಾವನೆಗಳನ್ನು ವ್ಯಕ್ತಪಡಿಸಲು ಬರುವುದಿಲ್ಲ ಎಂದರೇ ಹೆಚ್ಚು ಸಮಂಜಸ. ಇವರನ್ನು ನೋಡಿದವರು ಭಾವನಾರಹಿತರು ಎಂದುಕೊಳ್ಳುತ್ತಾರೆ. ಇದರೊಂದಿಗೆ ದೇವರ ವಿಚಾರದಲ್ಲಿ ಭಕ್ತಿಯೂ ಕಡಿಮೆ. ಇವೆಲ್ಲವೂ ಸೇರಿ ಇವರ ಭಾವನಾತ್ಮಕ ಮುಖ ಹೊರ ಬರುವುದೇ ಅಪರೂಪ. ಅದನ್ನು ಹೊರತರಲು ಸಾಕಷ್ಟು ಸರ್ಕಸ್ಸನ್ನೇ ಮಾಡಬೇಕಾಗುತ್ತದೆ. ಇನ್ನೊಬ್ಬರ ಎದಿರು ಅಳುವುದು, ತಮ್ಮ ದುಃಖ ನೋವನ್ನು ಆ ರೀತಿಯಾಗಿ ತೋಡಿಕೊಳ್ಳುವುದನ್ನು ಇವರು ಮಾಡಲಾರರು. ಹಾಗೊಂದು ವೇಳೆ ಅವರು ನಿಮ್ಮೆದುರು ಭಾವನೆಗಳನ್ನು ಹೊರ ಹಾಕುತ್ತಿದ್ದಾರೆಂದರೆ ಅವರು ನಿಮ್ಮನ್ನು ಅತಿಯಾಗಿ ನಂಬಿದ್ದಾರೆ ಹಾಗೂ ತುಂಬಾ ಹಚ್ಚಿಕೊಂಡಿದ್ದಾರೆ ಎಂದರ್ಥ.
Personality Traits And Zodiacs: ಈ ನಾಲ್ಕು ರಾಶಿಯವರದು ಬಹಳ ಸೌಮ್ಯ ಸ್ವಭಾವ
ಹಟಮಾರಿಗಳು(stubborn)
ಮಕರ ರಾಶಿಯವರು ತಾವು ನಂಬಿದ ವಿಷಯಕ್ಕೆ ವಿರುದ್ಧವಾಗಿ ಹೋಗದ ಕಾರಣ ಅವರು ಬಹಳಷ್ಟು ಹಟಮಾರಿಗಳೆನಿಸುತ್ತಾರೆ. ಇದೇ ಸ್ವಭಾವ ಅವರನ್ನು ಎಲ್ಲರಿಗಿಂತ ಹೆಚ್ಚು ಸ್ಟ್ರಾಂಗ್ ಎನಿಸುವಂತೆ ಮಾಡುತ್ತದೆ. ಕುಟುಂಬ, ವೃತ್ತಿ ಜೀವನದ ಬಗೆಗಿನ ಜವಾಬ್ದಾರಿಯಿಂದ ಅವರೆಂದಿಗೂ ನುಣುಚಿಕೊಳ್ಳಲಾರರು. ಭಾವನೆಗಳನ್ನು ಹೇಳಿಕೊಳ್ಳದ ಕಾರಣದಿಂದ ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಬಹುದು. ಆದರೆ, ಅವರ ಗುರಿಯೆಡೆಗಿನ ಗಮನ, ಜವಾಬ್ದಾರಿ ಮನೋಬಲವು ಸ್ಪೂರ್ತಿದಾಯಕವಾಗಿರುತ್ತದೆ.