Business and black magic: ವ್ಯಾಪಾರಕ್ಕೆ ನಷ್ಟ ತರುವ ವಾಮಾಚಾರ, ರಕ್ಷಣೆ ಹೇಗೆ?

By Suvarna News  |  First Published Mar 2, 2022, 12:38 PM IST

ಈ ಸ್ಪರ್ಧಾತ್ಮಕ ಯುಗದಲ್ಲಿ ವ್ಯಾಪಾರದಲ್ಲಿ ಮಾಟ, ವಾಮಾಚಾರದ ಬಳಕೆ ದಿನದಿಂದ ದಿನಕ್ಕೆ ಸಾಮಾನ್ಯವಾಗುತ್ತಿದೆ. ಇದರಿಂದೇನಾಗುತ್ತದೆ, ರಕ್ಷಿಸಿಕೊಳ್ಳುವುದು ಹೇಗೆ ಎಂಬ ವಿವರಗಳು ಇಲ್ಲಿವೆ. 


ಈಗಂತೂ ಜನರಿಗೆ ದೇವರು ದಿಂಡರ ಭಯವಿಲ್ಲ. ತಾವು ಮಾಡುವ ಕೆಲಸದಲ್ಲಿ ಗೆಲ್ಲಬೇಕು, ಸ್ಪರ್ಧಿಗಳು ಸೋಲಬೇಕು ಎಂಬ ಮನೋಭಾವ ಹೆಚ್ಚಾಗುತ್ತದೆ. ಜಗತ್ತಿನಲ್ಲಿ ಸ್ಪರ್ಧೆ ಹೆಚ್ಚುತ್ತಿರುವ ನಡುವೆ ಅಸೂಯಾ ಭಾವವೂ ಹೆಚ್ಚುತ್ತಿದೆ.  ಈ ಅಸೂಯೆಯಿಂದಾಗಿ ಜನರು ತಾವೂ ಬೆಳೆಯುವುದಿಲ್ಲ, ಬೆಳೆಯುವವರ ಕಾಲನ್ನೂ ಎಳೆಯುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲೂ, ತಮಗೆ ಸ್ಪರ್ಧೆ ಒಡ್ಡುವವರ ಮೇಲೆ ಅವರ ವ್ಯಾಪಾರ, ಉದ್ದಿಮೆ(business) ಹಾಳಾಗುವಂತೆ ವಾಮಾಚಾರ(black magic), ಮಾಟಮಂತ್ರ ಮಾಡಿಸುವ ಜನರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂಬುದು ವಿಪರ್ಯಾಸ. ಹೀಗೆ ವಾಮಾಚಾರಕ್ಕೆ ಬಲಿಪಶುವಾದ ವ್ಯಕ್ತಿಯ ವ್ಯಾಪಾರವು ಇದ್ದಕ್ಕಿದ್ದಂತೆ ನಷ್ಟದತ್ತ ಮುಖ ಮಾಡುತ್ತದೆ. ಇನ್ನೂ ಹಲವು ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ. ಹೀಗಾಗಿ ವಾಮಾಚಾರ ನಡೆದಿದೆ ಎಂಬುದು ತಿಳಿದಾಗ ಅದರಿಂದ ಪಾರಾಗುವ ಯತ್ನ ಮಾಡುವುದು ಮುಖ್ಯ. ಉದ್ಯಮದ ಮೇಲೆ ವಾಮಾಚಾರ ನಡೆಸುವುದು ಯಾರು, ಅದರಿಂದೇನಾಗುತ್ತದೆ, ಪರಿಹಾರವೇನು ಎಲ್ಲ ವಿವರಗಳನ್ನು ನೋಡೋಣ. 

ಯಾರು ಮಾಡಿಸುತ್ತಾರೆ? 
ವಾಮಾಚಾರ ಆಗಿರಬಹುದು ಎಂಬುದು ಮನಸ್ಸಿಗೆ ಬಂದಾಗ ಹಾಗೆ ಮಾಡಿಸುವವರು ಯಾರು ಎಂಬುದನ್ನು ತಿಳಿಯಲು ಯತ್ನಿಸಬೇಕು. ವ್ಯಾಪಾರ, ಉದ್ಯಮ ಎಂದರೆ ಸಾಮಾನ್ಯವಾಗಿ ಮುಖ್ಯ ಸ್ಪರ್ಧಿಗಳು(Competitors) ಯಾರಿರುತ್ತಾರೆೋ ಅವರು ಮಾಡಿಸಬಹುದು. ನಿಮ್ಮ ವ್ಯಾಪಾರ ವೃದ್ಧಿಯಾಗುವುದು ಕಂಡು ಅಸೂಯೆಯಿಂದಲೋ ಅಥವಾ ನಿಮ್ಮ ವ್ಯಾಪಾರದಿಂದ ಅವರಿಗೆ ನಷ್ಟವಾಗುತ್ತಿದೆ ಎಂಬ ಕಾರಣದಿಂದಲೋ ವಾಮಾಚಾರ ಮಾಡಿಸಬಹುದು. ಇದಲ್ಲದೇ ನೀವು ಬೆಳವಣಿಗೆಯಾಗುವುದನ್ನು ಸಹಿಸಲಾಗದ ಸಹೋದರರೋ, ಬಂಧುಮಿತ್ರರೋ ಕೂಡಾ ಈ ಕೆಲಸ ಮಾಡಬಹುದು. ಇನ್ನು ಕೆಲವರಿರುತ್ತಾರೆ, ಅವರಿಗೆ ಮತ್ತೊಬ್ಬರು ಉದ್ಧಾರವಾಗುವುದನ್ನು ಸಹಿಸಲಾಗುವುದಿಲ್ಲ. ನಿಮ್ಮ ಸೋಲನ್ನು ಸಂಭ್ರಮಿಸಲೆಂದೇ ಅವರು ವಾಮಾಚಾರ ಮಾಡಿಸುತ್ತಾರೆ. 

Tap to resize

Latest Videos

undefined

ಅಮಾವಾಸ್ಯೆಯಲ್ಲಿ ಶಕ್ತಿ ಹೆಚ್ಚು
ನಿಮ್ಮ ವ್ಯಾಪಾರ ಇದ್ದಕ್ಕಿದ್ದಂತೆ ನಷ್ಟದತ್ತ ಮುಖ ಮಾಡಿದ್ದರೆ ಈ ಕಾರಣಗಳಿರಬಹುದು.

  • ನಕಾರಾತ್ಮಕ ಶಕ್ತಿಗಳು(negative energies) ಕೆಲವು ವಿಶೇಷ ಅವಧಿಯಲ್ಲಿ ಹೆಚ್ಚಾಗುತ್ತವೆ. ಅಂದರೆ ಅಮಾವಾಸ್ಯೆಯಂದು ಇಲ್ಲವೇ ಹುಣ್ಣಿಮೆಯ ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿಗಳಿಗೆ ಶಕ್ತಿ ಹೆಚ್ಚುತ್ತದೆ. ಇಂಥ ದಿನವೇ ವಾಮಾಚಾರ ನಡೆಸುವುದೂ ಅಲ್ಲದೆ, ಈ ದಿನಗಳಲ್ಲಿ ವ್ಯಾಪಾರ, ಉದ್ದಿಮೆಯ ಮೇಲೆ ವಾಮಾಚಾರದ ಪರಿಣಾಮ ಹೆಚ್ಚಾಗಿ ಗೋಚರಿಸಬಹುದು. 
  • ಇದಲ್ಲದೆ, ನಿಮ್ಮ ಉದ್ಯಮ ಸಲೀಸಾಗಿ ಹೋಗುತ್ತಿದ್ದರೆ ಅದರ ಮೇಲೆ ಇದ್ದಕ್ಕಿದ್ದಂತೆ ಕೆಟ್ಟ ದೃಷ್ಟಿ(evil eye) ತಾಕಿರಬಹುದು. ನಮ್ಮ ವ್ಯಾಪಾರದ ಆವರಣದಲ್ಲಿ ವಿವಿಧ ವ್ಯಕ್ತಿಗಳು ಪ್ರವೇಶಿಸುತ್ತಾರೆ ಅವರಲ್ಲಿ ಕೆಲವರದು ಒಳ್ಳೆಯ ಮನಸ್ಸಾಗಿದ್ದರೆ ಮತ್ತೆ ಕೆಲವರದು ಕೆಟ್ಟ ಮನಸ್ಸು. ಅಂಥವರ ಕೆಟ್ಟ ದೃಷ್ಟಿ ತಾಕಿಯೂ ವ್ಯಾಪಾರ ಹಿಂದೆ ಬಿದ್ದಿರಬಹುದು. 
  • ಇನ್ನು ಸಾಮಾನ್ಯವಾಗಿ ಮೂರು ದಾರಿ ಕೂಡುವಲ್ಲಿ ಮಾಟಮಂತ್ರ ಮಾಡಿದ ವಸ್ತುಗಳನ್ನು ಹಾಕಿರುತ್ತಾರೆ. ನೀವು ಗೊತ್ತಿಲ್ಲದೆ ಅದನ್ನು ಮೆಟ್ಟಿದಾಗ ಇಲ್ಲವೇ ದಾಟಿದಾಗ ಅದರ ಪರಿಣಾಮ ನಿಮ್ಮ ಮೇಲಾಗಬಹುದು. 
  • ಇನ್ನು ಕೆಲವರು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಲು ಈ ದೃಷ್ಟಿ ನಿವಾಳಿಸಿದ ವಸ್ತುವನ್ನೋ, ಮತ್ತೊಂದು ದುಷ್ಟ ಶಕ್ತಿ ನಿವಾರಣೆ ಸಾಮಗ್ರಿಗಳನ್ನೋ ಮೂರು ದಾರಿ ಕೂಡುವಲ್ಲಿ ಹಾಕುತ್ತಾರೆ. ಇದನ್ನು ದಾಟಿದವರ ಮೇಲೂ ನಕಾರಾತ್ಮಕ ಪರಿಣಾಮಗಳಾಗಬಹುದು. 

    Mount Kailash: ಶಿವನ ಮನೆ ಕೈಲಾಸವೇ ಜಗತ್ತಿನ ಕೇಂದ್ರಬಿಂದು!

ವ್ಯಾಪಾರದ ಮೇಲೆ ವಾಮಾಚಾರದ ಪರಿಣಾಮಗಳು

  • ವ್ಯಾಪಾರ, ಉದ್ದಿಮೆಯ ಮೇಲೆ ವಾಮಾಚಾರ ಆಗಿದೆ ಎಂದು ತಿಳಿಯುವುದು ಹೇಗೆ? ಇದಕ್ಕಾಗಿ ಈ ಲಕ್ಷಣಗಳನ್ನು ಗಮನಿಸಿ. 
  • ನಿಮ್ಮ ಅಂಗಡಿಯ ಎದುರು ತನಕ ಬರುವ ಜನ ಇದ್ದಕ್ಕಿದ್ದಂತೆ ದಾರಿ ಬದಲಿಸಿ ಬೇರೆ ಕಡೆಗೆ ಹೋಗಲಾರಂಭಿಸುವರು. 
  • ಉದ್ಯಮಕ್ಕೆ ಎಲ್ಲ ರೀತಿಯಿಂದಲೂ ಇದ್ದಕ್ಕಿದ್ದಂತೆ ಅಡೆತಡೆಗಳು ಎದುರಾಗಬಹುದು. 
  • ವ್ಯಾಪಾರಿಗಳಿಗೆ ನಿರಂತರ ತಲೆನೋವು(headache) ಕಾಡಬಹುದು. 
  • ಉದ್ಯಮದ ಸ್ಥಳದಲ್ಲಿ ವಿಚಿತ್ರ ವಾಸನೆ ಆವರಿಸಬಹುದು. 
  • ಪದೇ ಪದೆ ಕೆಟ್ಟ ಕನಸುಗಳು(Frightening dreams) ಬೀಳಲು ಆರಂಭಿಸಬಹುದು.
  • ಮೊದಲು ತೃಪ್ತಿ ವ್ಯಕ್ತಪಡಿಸುತ್ತಿದ್ದ ಗ್ರಾಹಕರು ಇದ್ದಕ್ಕಿದ್ದಂತೆ ನಿಮ್ಮ ಉತ್ಪನ್ನಗಳ ಮೇಲೆ ಅತೃಪ್ತಿ ವ್ಯಕ್ತಪಡಿಸಲು ಆರಂಭಿಸಬಹುದು. 
  • ವ್ಯಾಪಾರಿಯು ಚಿತ್ರವಿಚಿತ್ರವಾದ ವರ್ತನೆ ತೋರಿಸಲಾರಂಭಿಸಬಹುದು. 
  • ಉದ್ಯಮ ಸ್ಥಳದಲ್ಲಿ ನಿಂಬೆಹಣ್ಣು, ಮೂಳೆಚೂರು, ಕೂದಲ ಚೂರು, ಕರಿಎಳ್ಳು, ಕುಂಕುಮ, ಕಬ್ಬಿಣದ ಚೂರುಗಳು ಮುಂತಾದ ವಿಚಿತ್ರ ವಸ್ತುಗಳು(tantrik items) ಕಾಣಿಸಬಹುದು. 
  • ಅಪಘಾತಗಳು ಆಗಬಹುದು.
  • ಲಾಭದಲ್ಲಿರುವ ಉದ್ದಿಮೆ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ನಷ್ಟದತ್ತ ಮುಖ ಮಾಡಬಹುದು. 

    Phalguna Amavasya 2022: ಫಾಲ್ಗುಣ ಅಮಾವಾಸ್ಯೆ, ನೀವು ಮಾಡಬೇಕಾದ್ದೇನು?

ವಾಮಾಚಾರದ ಪರಿಣಾಮಗಳನ್ನು ತಡೆಯುವುದು ಹೇಗೆ?
ವಾಮಾಚಾರ ಆಗಿದೆ ಎಂತಲೋ ಅಥವಾ ವ್ಯಾಪಾರದ ಮೇಲೆ ದೃಷ್ಟಿಯಾಗಿದೆ ಎಂಥಲೋ ಅನಿಸಿದರೆ ಅದರಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ. 

  • ವ್ಯಾಪಾರ ಸ್ಥಳದಲ್ಲಿ ಸಿದ್ಧ ಮಹಾಕಾಳಿ ಯಂತ್ರ ಸ್ಥಾಪಿಸಿ. ಎಲ್ಲಿಡಬೇಕೆಂಬುದನ್ನು ಜ್ಯೋತಿಷಿಗಳ ಬಳಿ ವಿಚಾರಿಸಿ. 
  • ಪ್ರತಿ ಮಂಗಳವಾರ ಹಾಗೂ ಶನಿವಾರ ವ್ಯಾಪಾರ ಸ್ಥಳದಲ್ಲಿ ನಿಂಬೆಹಣ್ಣು ಹಾಗೂ ಮೆಣಸಿನಕಾಯಿ(lemon and chilly)ಯನ್ನು ಬದಲಿಸುತ್ತಾ ನೇತು ಹಾಕಿ. ಇದರಿಂದ ದೃಷ್ಟಿಯ ಪರಿಣಾಮಗಳು ತಾಕುವುದಿಲ್ಲ. 
  • ಎರಡು ತಿಂಗಳಿಗೊಮ್ಮೆ ಉದ್ಯಮ ಸ್ಥಳದಲ್ಲಿ ಹೋಮ ಹವನ ಮಾಡಿಸಿ. 
  • ವಾರಕ್ಕೊಮ್ಮೆ ಗಂಗಾಜಲವನ್ನು ಅಂಗಡಿಮುಂಗಟ್ಟಿನಲ್ಲಿ ಪ್ರೋಕ್ಷಣೆ ಮಾಡಿ. ಗೋಮೂತ್ರವನ್ನು ಕೂಡಾ ಸಿಂಪಡಿಸಬಹುದು. 
  • ಸಿದ್ಧ ಶ್ರೀ ಯಂತ್ರ ಕೂಡಾ ವಾಮಾಚಾರದ ಪರಿಣಾಮ ತಡೆಯುತ್ತದೆ. 
  • ವ್ಯಾಪಾರಿಯು ಕೈಗೆ ರಕ್ಷಾದಾರ ಕಟ್ಟಿಕೊಳ್ಳಬೇಕು. 
  • ಆಂಜನೇಯನ ಸಿಂಧೂರವನ್ನು ಮಂಗಳವಾರ ತಂದು ವ್ಯಾಪಾರ ಸ್ಥಳದ ಎಂಟ್ರೆನ್ಸ್‌ನಲ್ಲಿ ಅದರಿಂದ ಸ್ವಸ್ತಿಕ್ ಬರೆಯಿರಿ. 
  • ಏನಾದರೂ ಬೇಡದ ವಸ್ತುಗಳು ಸ್ಥಳದಲ್ಲಿ ಕಾಣಿಸಿದರೆ ತಾಂತ್ರಿಕರನ್ನು ಸಂಪರ್ಕಿಸಿ, ವಾಮಾಚಾರ ತೆಗೆಸಿ. 
click me!