ಮೂಢನಂಬಿಕೆಯಲ್ಲ ಈ ಹಿಂದೂ ಆಚರಣೆಗಳು,ಇದರ ಬೆನ್ನಿಗಿದೆ ವಿಜ್ಞಾನ!

By Web Desk  |  First Published Nov 2, 2019, 3:46 PM IST

ಹಿಂದೂಗಳು ಏನು ಮಾಡಿದರೂ ಅವನ್ನು ಮೂಢನಂಬಿಕೆ ಎನ್ನುವುದು ಕೆಲವರಿಗೆ ಅಭ್ಯಾಸ. ಆದರೆ, ಬಹುತೇಕ ಪದ್ಧತಿ, ಆಚರಣೆಗಳ ಹಿಂದೆ ಸದುದ್ದೇಶವಿದೆ, ವಿಜ್ಞಾನ ಕೂಡಾ ಇದೆ. ಆದರೆ, ದೇವರು, ಧರ್ಮದ ಹೆಸರಿನಲ್ಲಿ ಹೇಳಿದಾಗ ಮಾತ್ರ ಹೆಚ್ಚಿನ ಜನರು ಶ್ರದ್ಧಾ ಭಕ್ತಿಯಿಂದ ಅದನ್ನು ಆಚರಿಸುತ್ತಾರೆ ಎಂದು ಅವುಗಳನ್ನು ಆಚರಣೆಗಳ ಕಟ್ಟಳೆಯಾಗಿಸಲಾಗಿದೆ. 


ಹಿಂದೂ ಧರ್ಮದ ಹಲವಾರು ಆಚರಣೆಗಳು, ಸಂಪ್ರದಾಯಗಳನ್ನು ಮೂಢನಂಬಿಕೆಯೆಂದು ಜರಿಯುವವರು ಹಲವು. ಆದರೆ, ವಿಜ್ಞಾನ ಮುಂದುವರಿದಂತೆಲ್ಲ ಈ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆ ದೊರೆಯುತ್ತ ಹೋಗುತ್ತಿದೆ.

ಈ ವೈಜ್ಞಾನಿಕ ಜ್ಞಾನವನ್ನೇ ಸಂಪ್ರದಾಯದ ಹೆಸರಿನಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿಯಬಿಡಲಾಗಿದೆ. ಸಾಮಾನ್ಯ ಜನರಿಗೆ ಈ ಆಚರಣೆಗಳ ಹಿಂದಿನ ವಿಜ್ಞಾನದ ಅರಿವು ಇಲ್ಲವಾದರೂ, ಅವರಿದನ್ನು ನಂಬಿಕೆಯ ತಳಹದಿ ಮೇಲೆ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಂಥ ಕೆಲವು ಆಚರಣೆಗಳು ಹಾಗೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ವಿವರಣೆಗಳನ್ನಿಲ್ಲಿ ಕೊಡಲಾಗಿದೆ.

Tap to resize

Latest Videos

undefined

ನಿಶಬ್ಧ ದೀಪಾವಳಿ ಮೊರೆ ಹೋದ ಹಳ್ಳಿಗರು, ಕಾರಣ ಕೇಳಿದ್ರೆ ಖುಷಿ ಪಡ್ತೀರಿ!

1. ನಾಣ್ಯಗಳನ್ನು ನದಿಗೆಸೆಯುವುದು

ನಾಣ್ಯಗಳನ್ನು ದೇವಸ್ಥಾನದ ಸಮೀಪದ ಕಲ್ಯಾಣಿಗೆ, ಕೆರೆಗೆ, ನದಿಗೆ ಎಸೆಯುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಇದೆ. ಇದೇ ನಂಬಿಕೆ ಮೇಲೆ ಈಗಲೂ ಹಲವರು ಹೀಗೆ ನಾಣ್ಯಗಳನ್ನು ಕಲ್ಯಾಣಿಗೆಸೆಯುವುದನ್ನು ಕಾಣಬಹುದು. ಆದರೆ, ಹೀಗೆ ಸಾವಿರಾರು ಕೈಗಳನ್ನು ದಾಟಿ ಬ್ಯಾಕ್ಟೀರಿಯಾಗಳ ಆಗರವಾಗಿರುವ ನಾಣ್ಯಗಳನ್ನು ನೀರಿಗೆಸೆದು, ನೀರನ್ನು ಮಲಿನಗೊಳಿಸಲಾಗುತ್ತಿದೆ ಎಂಬ ಆರೋಪ ಇದಕ್ಕಿದೆ.

ಆದರೆ, ಈ ಅಭ್ಯಾಸ ಶುರುವಾದದ್ದು ಹೀಗಲ್ಲ, ಹಿಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು. ಈ ಕಾಪರ್ ಮನುಷ್ಯನ ದೇಹಕ್ಕೆ ಬಹಳಷ್ಟು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಅದೇ ಕಾರಣಕ್ಕೆ ಈಗೀಗ ಎಲ್ಲರೂ ಕಾಪರ್ ಬಾಟಲ್, ಲೋಟಗಳನ್ನು ಬಳಸುವುದು ಟ್ರೆಂಡ್ ಕೂಡಾ ಆಗಿದೆ. ಹೀಗೆ ಕಾಪರ್ ನಾಣ್ಯಗಳನ್ನು ನೀರಿಗೆ ಹಾಕಿ, ನಂತರದಲ್ಲಿ ಆ ನೀರಿನ ಸೇವನೆಯಿಂದ ಮನುಷ್ಯನ ದೇಹಕ್ಕೆ ಅಗತ್ಯವಿರುವಷ್ಟು ಕಾಪರ್ ಸೇರಿಸುವುದು ಹಿರಿಯರ ಉದ್ದೇಶವಾಗಿತ್ತು. ಆಗ ನದಿಯ ನೀರು ಮಾತ್ರ ಕುಡಿಯುವ ನೀರಿನ ಮೂಲವಾಗಿತ್ತು. ಇದನ್ನು ದೇವರ ಹೆಸರಿನಲ್ಲೊಂದು ಆಚರಣೆಯಾಗಿಸಿದರೆ, ಎಲ್ಲರೂ ಈ ಮಾರ್ಗ ಅನುಸರಿಸುತ್ತಾರೆ, ಎಲ್ಲರಿಗೂ ಅಗತ್ಯವಾದ ಕಾಪರ್ ದೊರೆಯುತ್ತದೆ ಎಂಬುದು ಈ ಆಚರಣೆ ಹಿಂದಿನ ಉದ್ದೇಶ. 

ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ

2. ಯಾರನ್ನಾದರೂ ನೋಡಿದೊಡನೆ ನಮಸ್ಕರಿಸುವುದು

ಹಿಂದೂ ಸಂಸ್ಕೃತಿಯಲ್ಲಿ ಜನರು ಮತ್ತೊಬ್ಬರನ್ನು ಭೇಟಿಯಾದ ಕೂಡಲೇ ಎರಡೂ ಕೈ ಜೋಡಿಸಿ ನಮಸ್ಕರಿಸುವುದು ಪದ್ಧತಿ. ಸಾಮಾನ್ಯವಾಗಿ ಹೀಗೆ ನಮಸ್ಕರಿಸುವುದು ಗೌರವಿಸುವ ಪ್ರತೀಕ ಎಂಬ ನಂಬಿಕೆಯಿದೆ. ಆದರೆ, ವೈಜ್ಞಾನಿಕವಾಗಿ ಹೇಳಬೇಕೆಂದರೆ ಹೀಗೆ ಕೈ ಜೋಡಿಸಿದಾಗ ಎರಡೂ ಕೈಗಳ ಎಲ್ಲ ಬೆರಳುಗಳೂ ಪ್ರೆಸ್ ಆಗುತ್ತವೆ. ಎಲ್ಲ ಬೆರಳುಗಳ ತುದಿಯಲ್ಲಿ ನರತಂತುಗಳಿವೆ. ಇವು ಕಣ್ಣು, ಕಿವಿ, ಮನಸ್ಸಿನ ಪ್ರೆಶರ್ ಪಾಯಿಂಟ್‌ಗಳು.

ಈ ಪ್ರೆಶರ್ ಪಾಯಿಂಟ್ ಪ್ರೆಸ್ ಆಗುವುದರಿಂದ ಭೇಟಿಯಾದ ವ್ಯಕ್ತಿ ಬಹುಕಾಲ ನೆನಪಿನಲ್ಲಿ ಉಳಿವ ಜೊತೆಗೆ ಅವರ ಬಳಿ ಮಾತನಾಡುವಾಗ ಮನಸ್ಸು ಚಂಚಲವಾಗುವುದಿಲ್ಲ ಎಂಬುದು ಕಾರಣ. ಇದರೊಂದಿಗೆ ಶೇಕ್ ಹ್ಯಾಂಡ್ ಮಾಡಿದಾಗ ಬ್ಯಾಕ್ಟೀರಿಯಾಗಳು ಒಬ್ಬರಿಂದೊಬ್ಬರಿಗೆ ಹರಡಬಹುದು. ನಮಸ್ಕಾರದಲ್ಲಿ ಆ ಭಯವೂ ಇಲ್ಲ, ಇದು ಸಂಪೂರ್ಣ ಸ್ವಚ್ಛ ಹಾಗೂ ಸುರಕ್ಷಿತ.

3. ಕಾಲುಂಗುರ ಧರಿಸುವುದು

ಹೆಂಗಸಿಗೆ ಮದುವೆಯಾಗಿದೆ ಎಂಬುದನ್ನು ಸೂಚಿಸಲು ಆಕೆ ಕಾಲುಂಗುರ ಧರಿಸಬೇಕೆಂದು ನಾವು ನಂಬಿದ್ದೇವೆ. ಆದರೆ ಈ ಆಚರಣೆ ಜಾರಿಗೆ ತಂದ ಹಿಂದೆ ಬೇರೆ ಸದುದ್ದೇಶವಿದೆ. ಸಾಮಾನ್ಯವಾಗಿ ಕಾಲುಂಗುರವನ್ನು ಮಹಿಳೆಯರು ಎರಡನೇ ಬೆರಳಿಗೆ ಧರಿಸುತ್ತಾರೆ. ಈ ಬೆರಳಿನಲ್ಲಿರುವ ನರತಂತುಗಳು ಗರ್ಭಕೋಶ ಹಾಗೂ ಹೃದಯಕ್ಕೆ ಸಂಪರ್ಕ ಹೊಂದಿರುತ್ತವೆ. ಹಾಗಾಗಿ, ಈ ಬೆರಳಿಗೆ ಉಂಗುರ ತೊಡುವುದರಿಂದ ಗರ್ಭಕೋಶವನ್ನು ಬಲಪಡಿಸುತ್ತದೆ.

ಕೈ ತುಂಬಾ ದುಡ್ಡು ಇರ್ಬೇಕಂದ್ರೆ ಹೀಗೆ ಮಾಡಿ!

ಇದು ಗರ್ಭಕೋಶಕ್ಕೆ ರಕ್ತಸಂಚಾರ ಸರಿಯಾಗಿರಿಸಿ ಅದನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಬೆಳ್ಳಿಯು ಉತ್ತಮ ಸಂವಾಹಕವಾಗಿದ್ದು, ಅದು ಭೂಮಿಯಿಂದ ಪೋಲಾರ್ ಎನರ್ಜಿಯನ್ನೆಲ್ಲ ಸೆಳೆದು ದೇಹಕ್ಕೆ ಪಾಸ್ ಮಾಡುತ್ತದೆ. 

4. ಹಣೆಯ ಮೇಲೆ ತಿಲಕ ಧರಿಸುವುದು

ಎರಡು ಹಣೆಗಳ ನಡುವಿನ ಆ ಕೇಂದ್ರಬಿಂದುವನ್ನು ಬಹಳ ಹಿಂದಿನಿಂದಲೂ ಬಹಳ ಮುಖ್ಯವಾದ ನರಕೇಂದ್ರ ಎಂದು ನಂಬಲಾಗಿದೆ. ಇಲ್ಲಿ ಕುಂಕುಮ ಇಡುವುದರಿಂದ ದೇಹದಿಂದ ಎನರ್ಜಿ ಕಳೆದುಹೋಗದಂತೆ ನೋಡಿಕೊಳ್ಳಬಹುದು. ಜೊತೆಗೆ ಏಕಾಗ್ರತೆ ಹೆಚ್ಚುತ್ತದೆ. ಹೀಗೆ ಕುಂಕುಮ ಇಡುವಾಗ ಆಜ್ಞಾಚಕ್ರಕ್ಕೆ ಪ್ರೆಸ್ ಆಗುವುದರಿಂದ ಮುಖಕ್ಕೆ ರಕ್ತ ಸಂಚಾರವೂ ಹೆಚ್ಚುತ್ತದೆ. ಹಿಂದೆಲ್ಲ ಗಂಡಸರು, ಹೆಂಗಸರು ಹಾಗೂ ಮಕ್ಕಳು ಎಲ್ಲರೂ ಹಣೆಗೆ ತಿಲಕ ಇಡುತ್ತಿದ್ದುದು ಇದೇ ಕಾರಣಕ್ಕೆ. 

5. ದೇವಸ್ಥಾನಗಳಲ್ಲಿ ಗಂಟೆ

ಗರ್ಭಗುಡಿಯ ಬಳಿ ಹೋಗುವಾಗ ಗಂಟೆ ಬಡಿಯುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಗಂಟೆಯ ಶಬ್ದ ಕೆಟ್ಟ ಶಕ್ತಿಗಳನ್ನು ದೂರವಿರಿಸುತ್ತದೆ ಎಂಬ ನಂಬಿಕೆ ಇದೆಯಾದರೂ, ವೈಜ್ಞಾನಿಕವಾಗಿ, ಈ ಗಂಟೆ ಹೊಮ್ಮಿಸುವ ನಿನಾದ ಹಾಗೂ ಅದರ ಮೊಳಗುವಿಕೆ ಮನಸ್ಸಿನಿಂದ ಬೇರೆಲ್ಲ ಯೋಚನೆ ದೂರವಾಗಿಸಿ, ಏಕಾಗ್ರಚಿತ್ತ ನೀಡುತ್ತದೆ. 

ದೇವರನ್ನು ಒಲಿಸಿಕೊಳ್ಳುವ ಮಾರ್ಗ ಯಾವುದು?

6. ಅಶ್ವತ್ಥ ಮರ ಪೂಜೆ

ಅಶ್ವತ್ಥ ಮರವು ಸಾಮಾನ್ಯ ಜನರಿಗೆ ಅಷ್ಟೇನು ಪ್ರಯೋಜನವಿಲ್ಲ. ಅದರ ಹಣ್ಣನ್ನು ನಾವು ತಿನ್ನುವುದಿಲ್ಲ. ಇದರ ಕಟ್ಟಿಗೆ ಯಾವುದಕ್ಕೂ ಬಳಸುವಷ್ಟು ಗಟ್ಟಿಯಿರುವುದಿಲ್ಲ. ಹಾಗಿದ್ದರೂ, ಅಶ್ವತ್ಥ ಮರವನ್ನು ದೇವರೆಂದು ಪೂಜಿಸುವುದೇಕೆ? ಏಕೆಂದರೆ ಇದೊಂದೇ ಮರ ರಾತ್ರಿ ಹೊತ್ತಿನಲ್ಲೂ ಆಮ್ಮಜನಕವನ್ನೇ ಹೊರಸೂಸುತ್ತದೆ. ಈ ಕಾರಣಕ್ಕಾಗಿ ಈ ಮರವನ್ನು ರಕ್ಷಿಸಬೇಕಾಗಿರುವುದರಿಂದ ಅದಕ್ಕೆ ದೇವರ ಪಟ್ಟ ಕಟ್ಟಿ ಪೂಜಿಸುವ ಯೋಚನೆ ಹಿರಿಯರಿಗೆ ಬಂದಿದೆ. 

7. ಸೂರ್ಯ ನಮಸ್ಕಾರ

ಹಿಂದೂಗಳು ಬೆಳಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಸೂರ್ಯ ನಮಸ್ಕಾರ ಹಾಗೂ ಸಂಧ್ಯಾವಂದನೆ ಆಚರಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಬೆಳಗಿನ ಹಾಗೂ ಸಂಜೆಯ ಬಿಸಿಲು ಮನುಷ್ಯನ ದೇಹಕ್ಕೆ ಅತ್ಯಗತ್ಯ. ಇದು ವಿಟಮಿನ್ ಡಿ ನೀಡುವ ಜೊತೆಗೆ ದೇಹವನ್ನು ಚೇತೋಹಾರಿಯಾಗಿಸುತ್ತದೆ. ಇದರೊಂದಿಗೆ ಬೆಳಗ್ಗೆ ಬೇಗ ಏಳುವುದು ಅಭ್ಯಾಸವೂ ಆಗುತ್ತದೆ. 

click me!