ಹೊಸ ಸಂವತ್ಸರದಲ್ಲಿ ಎಲ್ಲ ರಾಶಿಗಳ ಮೇಲೆ ಹೀಗಿದೆ Saturn Effect

Published : Apr 02, 2022, 01:57 PM ISTUpdated : Apr 02, 2022, 01:58 PM IST
ಹೊಸ ಸಂವತ್ಸರದಲ್ಲಿ ಎಲ್ಲ ರಾಶಿಗಳ ಮೇಲೆ ಹೀಗಿದೆ Saturn Effect

ಸಾರಾಂಶ

ಹೊಸ ಸಂವತ್ಸರದ ರಾಶಿ ಫಲ ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲವಿರುತ್ತದೆ.  ಎಲ್ಲ ರಾಶಿಗಳಿಗೆ ಈ ಹೊಸ ವರ್ಷವು ಯಾವ ರೀತಿಯಲ್ಲಿ ಶುಭ ಅಶುಭ ಫಲವನ್ನು ನೀಡಲಿದೆ? ಶನಿಯು ಎಲ್ಲ ರಾಶಿಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ.

ಯುಗಾದಿ(Ugadi) ಹಬ್ಬ ಎಂದರೆ ಹೊಸ ಸಂವತ್ಸರದ ಆರಂಭ. ಶುಭಕೃತ್ ಸಂವತ್ಸರವು ಇದೇ ಏಪ್ರಿಲ್ 2ರ ಶನಿವಾರದಿಂದ ಆರಂಭವಾಗಿದ್ದು, ಈ ದಿನವನ್ನು ಯುಗಾದಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಯುಗಾದಿಯಂದು ಘಟಸ್ಥಾಪನೆ, ಅಖಂಡ ಜ್ಯೋತಿಯನ್ನು ಬೆಳಗಿಸಿ, ಬೇವು ಬೆಲ್ಲವನ್ನು ತಿಂದು ಹಬ್ಬವನ್ನು ಆಚರಿಸಲಾಗುತ್ತದೆ. 

ಈ ಸಂವತ್ಸರದ ರಾಜ ಶನಿಯಾಗಿದ್ದು, ಮಂತ್ರಿ ಗುರು ಗ್ರಹವಾಗಿದೆ. ಹನ್ನೆರಡು ರಾಶಿಗಳ ಮೇಲೆ ಶನಿ ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ. ದ್ವಾದಶ ರಾಶಿಗಳ ಮೇಲೆ ಶನಿ ಪ್ರಭಾವ ಹೇಗಿದೆ ಎಂಬುದನ್ನು ತಿಳಿಯೋಣ...

ಮೇಷ (Aries)
ಈ ಸಂವತ್ಸರದಲ್ಲಿ ಶನಿಯಿಂದ (Saturn) ಮೇಷ ರಾಶಿಯವರಿಗೆ ಶುಭ ಫಲಗಳು ಪ್ರಾಪ್ತವಾಗುತ್ತವೆ. ಈ ವರ್ಷ ಅಕಸ್ಮಾತ್ ಲಾಭಗಳು (Profit) ಉಂಟಾಗುತ್ತವೆ. ಉದ್ಯೋಗದಲ್ಲಿ (Job) ಉನ್ನತ ಸ್ಥಾನಕ್ಕೇರುವ ಯೋಗವೂ ಇದೆ. ಆಸ್ತಿಯಲ್ಲಿಯೂ (Asset) ಲಾಭ ಸಿಗುವ ಸಂಭವವಿದೆ. ಅಷ್ಟೇ ಅಲ್ಲದೆ ವರ್ಷ ಪೂರ್ತಿ ಶ್ರಮವಹಿಸಿ ಕೆಲಸ ಮಾಡುವ ಅಗತ್ಯವೂ ಇದೆ.

ವೃಷಭ ರಾಶಿ (Taurus) 
ಈ ಸಂವತ್ಸರದಲ್ಲಿ ಧನ (Money) ಲಾಭವಾಗುವ ಯೋಗವಿದೆ. ಶನಿಯ ಅರ್ಧಾಷ್ಟಮ ನಡೆಯಲಿದೆ. ಹತ್ತಿರದವರೊಂದಿಗೆ ಭಿನ್ನಾಭಿಪ್ರಾಯ (Disagreement) ಮೂಡುವ ಸಾಧ್ಯತೆ ಇರುತ್ತದೆ. ವರ್ಷವಿಡೀ ಮಿಶ್ರ ಪರಿಣಾಮಗಳನ್ನು ಎದುರಾಗುತ್ತವೆ. 

ಮಿಥುನ ರಾಶಿ (Gemini)
ಈ ವರ್ಷ ಶನಿಯಿಂದಾಗಿ ಕಾರ್ಯಕ್ಷೇತ್ರಗಳಲ್ಲಿ ತೊಂದರೆ ಎದುರಾಗುವ ಸಂಭವವಿದೆ. ಆರ್ಥಿಕ ಸ್ಥಿತಿ ಸಾಧಾರಣವಾಗಿರಲಿದೆ. ವರ್ಷವಿಡೀ ಖರ್ಚು (Expenses) ಹೆಚ್ಚುವ ಸಂಭವವಿದೆ. ಅಷ್ಟೇ ಅಲ್ಲದೆ ಬ್ಯುಸಿನೆಸ್ ಪಾಲುದಾರಿಕೆಯಲ್ಲಿ ಮತ್ತು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. 

ಇದನ್ನು ಓದಿ: ಯಾವ ಸ್ಪರ್ಧೆ ಇದ್ದರೂ ಈ ರಾಶಿಯವರೇ ವಿನ್ನರ್ಸ್ !

ಕರ್ಕಾಟಕ ರಾಶಿ (Cancer)
ಈ ಸಂವತ್ಸರವು ತುಂಬಾ ಉತ್ತಮ ಪರಿಣಾಮವನ್ನು ಬೀರಲಿದೆ. ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚು ಉನ್ನತಿಯನ್ನು ಕಾಣಲಿದ್ದಾರೆ. ಕಾನೂನು (Law) ಪ್ರಕ್ರಿಯೆಗಳಲ್ಲಿ ತೊಂದರೆಗಳು ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ (Job) ಉನ್ನತ ಪದವಿ ಪ್ರಾಪ್ತವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಯಶಸ್ಸು (Success) ಸಿಗುವ ಸಾಧ್ಯತೆ ಹೆಚ್ಚಿದೆ. 

ಸಿಂಹ ರಾಶಿ (Leo)  
ಈ ವರ್ಷ ಶನಿಯಿಂದಾಗಿ ತೊಂದರೆ (Trouble) ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಏರ್ಪಡುತ್ತವೆ. ಆದಾಯದಲ್ಲಿ ಹೆಚ್ಚುವ ಸಾಧ್ಯತೆಯಿದೆ. ಮಕ್ಕಳಿಗೆ (Children) ತೊಂದರೆಯಾಗುವ ಸಂಭವವಿದೆ. 

ಕನ್ಯಾ ರಾಶಿ (Virgo)
ಈ ರಾಶಿಯವರಿಗೆ ಶನಿ ಗ್ರಹದಿಂದ ಅರ್ಧಾಷ್ಟಮ ಶುಭ (Good Luck)  ಫಲವನ್ನು ನೀಡಲಿದೆ. ತೊಂದರೆ ತಾಪತ್ರಯಗಳು ನಿವಾರಣೆಯಾಗಿ ಗೌರವ (Respect) ಪ್ರತಿಷ್ಠೆ ಹೆಚ್ಚುತ್ತದೆ. 

ತುಲಾ ರಾಶಿ (Libra)
ಈ ರಾಶಿಯವರಿಗೆ ಶನಿಯಿಂದಾಗಿ ಸಾಹಸ (Adventure) ವೃತ್ತಿಗಳು ಹೆಚ್ಚುತ್ತವೆ. ಆರ್ಥಿಕವಾಗಿ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಆದಾಯ ಕಡಿಮೆ, ಖರ್ಚು ಹೆಚ್ಚುತ್ತದೆ. ತಮ್ಮಂದಿರ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. 

ವೃಶ್ಚಿಕ ರಾಶಿ (Scorpio) 
ಆರ್ಥಿಕವಾಗಿ ಲಾಭವಾಗುವ (Economic Profit) ಯೋಗವಿದೆ. ಹೊಸ ಕಾರ್ಯಗಳನ್ನು ಆರಂಭಿಸಲು ಅವಕಾಶ ಒದಗಿಬರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಮನೆ ಮಾಡುವ ಕನಸು (Dream) ನನಸಾಗುವ ಸಂಭವವಿದೆ. 

ಧನು ರಾಶಿ (Sagittarus)
ಈ ವರ್ಷ ಶನಿಗ್ರಹದ ಪ್ರಭಾವ ದಿಂದಾಗಿ ಮಾನಸಿಕ ಅಸ್ಥಿರತೆ (Mental instability) ಕಾಡಲಿದೆ. ಸಾಡೇಸಾತ್ ಪ್ರಭಾವದಿಂದಾಗಿ ಮಾನಸಿಕ ತೊಂದರೆ ಉಂಟಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದಾಗಿದೆ.

ಮಕರ ರಾಶಿ (Capricorn)
ಪ್ರತಿ ಕಾರ್ಯದಲ್ಲೂ ತೊಂದರೆ ತಾಪತ್ರಯ ಎದುರಾಗುತ್ತವೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಖರ್ಚು ಅಧಿಕವಾಗುತ್ತದೆ. ಶತ್ರುಗಳಿಂದ ತಾಪತ್ರಯಗಳು ಹೆಚ್ಚುತ್ತದೆ. ಭಾಗ್ಯದ ಫಲ ದೊರೆಯುವುದು ನಿಧಾನವಾಗುತ್ತದೆ.

ಕುಂಭ ರಾಶಿ (Aquarius) 
ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಂಭವವಿದೆ. ಆದಾಯ ಮೂಲ ಹೆಚ್ಚುತ್ತದೆ. ಆರೋಗ್ಯದ (Health) ವಿಷಯದಲ್ಲಿ ತೊಂದರೆ ಎದುರಾಗುತ್ತದೆ. ಅಪಘಾತವು ಸಂಭವವಿದ್ದು ಎಚ್ಚರ ವಹಿಸುವುದು ಅಗತ್ಯ. 

ಇದನ್ನು ಓದಿ:  Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು

ಮೀನ ರಾಶಿ  (Pisces) 
ಕಾರ್ಯಕ್ಷೇತ್ರದಲ್ಲಿ ಸಫಲತೆ ದೊರಕುತ್ತದೆ. ಕುಟುಂಬದಲ್ಲಿ ಸಾಮರಸ್ಯ ಕಡಿಮೆಯಾಗುತ್ತದೆ. ತಂದೆಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆಸ್ಪತ್ರೆ (Hospital) ಖರ್ಚು ಅಧಿಕವಾಗುತ್ತದೆ.

PREV
Read more Articles on
click me!

Recommended Stories

ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ
ಜನಕನ ಅಳಿಯ ಶ್ರೀರಾಮನಲ್ಲವಂತೆ.. ಹಾಗಾದ್ರೆ ನಿಜವಾದ ಅಳಿಯ ಯಾರು? ಇಲ್ಲಿದೆ ರಾಮಾಯಣದ ರಹಸ್ಯ!