ಶನಿ ಜಯಂತಿಯಂದು ಸರ್ವಾರ್ಥ ಸಿದ್ಧಿ ಯೋಗ

By Suvarna NewsFirst Published May 20, 2022, 1:53 PM IST
Highlights

ಈ ಬಾರಿ ಶನಿ ಜಯಂತಿ (Shani Jayanti)ಯಂದು ಸರ್ವಾರ್ಥ ಸಿದ್ಧಿ ಯೋಗ ಉಂಟಾಗಲಿದ್ದು. ಈ ದಿನ ಶನಿ ಕೃಪೆ ಪಡೆಯಲು ಇದು ಅತ್ಯಂತ ಪ್ರಶಸ್ತವಾದ ದಿನವೆಂದೇ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ದಿನ ಶನಿ ದೇವರನ್ನು ಶ್ರದ್ಧೆಯಿಂದ ಆರಾಧಿಸಿದರೆ ಶನಿಗೆ ಸಂಬಂಧಿಸಿದ ಎಲ್ಲ ದೋಷಗಳು (Probelm) ನಿವಾರಣೆಯಾಗುತ್ತವೆ ಎಂದು ಸಹ ಹೇಳಲಾಗುತ್ತದೆ.

ನ್ಯಾಯದ ದೇವನಾಗಿರುವ ಶನಿ ದೇವರ (Saturn) ಜಯಂತಿಯನ್ನು ಜ್ಯೇಷ್ಠ ಮಾಸದ (Jyeshta maasa) ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಶನಿ ದೇವರ ಕೃಪೆ ಪಡೆಯಲು ಶನಿ ಜಯಂತಿಯು ಪ್ರಶಸ್ತವಾದ ದಿನವಾಗಿದೆ. ಈ ದಿನ ಶನಿ (Saturn) ದೇವರನ್ನು ಭಕ್ತಿಯಿಂದ ಪೂಜಿಸಿ, ಮನಸ್ಸಿನಲ್ಲಿರುವುದನ್ನು ಕೇಳಿಕೊಂಡರೆ ನೇರವೇರುತ್ತದೆ ಎಂದು ಹೇಳಲಾಗುತ್ತದೆ. ಶನಿಯ ವಕ್ರದೃಷ್ಟಿಗೆ ಒಳಗಾದವರು ಈ ದಿನ ಶನಿ ದೇವರನ್ನು ಪ್ರಾರ್ಥಿಸಿ, ಕಷ್ಟ ನಿವಾರಿಸೆಂದು ಬೇಡಿಕೊಂಡರೆ, ಸಕಲ ಸಮಸ್ಯೆಗಳು ದೂರವಾಗುತ್ತವೆ. ಈ ವರ್ಷದ ಶನಿ ಜಯಂತಿಯು ವಿಶೇಷವಾದದ್ದೇಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಹಾಗಾದರೆ ಶನಿ ಜಯಂತಿಯ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ...

ಶನಿ ಜಯಂತಿಯಂದು ಹೀಗೆ ಮಾಡಿ (Shani jayanti)
ಪ್ರತಿ ವರ್ಷವೂ ಜ್ಯೇಷ್ಠ ಮಾಸದ ಅಮಾವಾಸ್ಯೆ ತಿಥಿಯಂದು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇ 30ರ ಸೋಮವಾರ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಛಾಯಾ ಪುತ್ರ ಶನಿದೇವನ ಜನನ ಇದೇ ಅಮಾವಾಸ್ಯೆಯಂದು (Amavasye) ಆಗಿದೆ ಎಂದು ಪುರಾಣ ಉಲ್ಲೇಖಿಸುತ್ತದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುವ ಶನಿದೇವರನ್ನು ನ್ಯಾಯ ದೇವರೆಂದೇ ಕರೆಯಲಾಗುತ್ತದೆ.

ಪ್ರತಿ ವ್ಯಕ್ತಿಯ ಜೀವನದಲ್ಲೂ ಒಮ್ಮೆಯಾದರೂ ಶನಿ ಸಾಡೇಸಾತ್‌ನಿಂದ (Shani sadesath) ಸಂಕಟ ಪಡುವ ಸಂದರ್ಭ ಬಂದೇ ಇರುತ್ತದೆ. ಆ ಸಮಯದಲ್ಲಿಯೇ ವ್ಯಕ್ತಿಯು ಮಾಡಿದ ಅನ್ಯಾಯ ಮತ್ತು ಅಧರ್ಮಗಳಿಗೆ ತಕ್ಕ ಶಿಕ್ಷೆಯನ್ನು ಅನುಭವಿಸಲೇ ಬೇಕಾಗುತ್ತದೆ. ಹಾಗಾಗಿ ಶನಿ ಸಾಡೇಸಾತ್ ಸಮಯದಲ್ಲಿ ಅನೇಕ ಕಷ್ಟಗಳನ್ನು, ತೊಂದರೆ – ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆ ಪರಿಹಾರವಾಗಿ ಶನಿ ಜಯಂತಿಯಂದು ಶನಿ ದೇವರನ್ನು ವಿಧಿ- ವಿಧಾನಗಳಿಂದ ಪೂಜಿಸುವುದರಿಂದ ಎದುರಾಗಿರುವ ಕಷ್ಟ ಮತ್ತು ಸಮಸ್ಯೆಗಳು ತಕ್ಕ ಮಟ್ಟಿಗೆ ನಿವಾರಣೆಯಾಗುತ್ತದೆ.

ಇದನ್ನು ಓದಿ: ಜ್ಯೇಷ್ಠ ಮಾಸದ ಶ್ರೇಷ್ಠ ವಿಶೇಷತೆಗಳು, ಸೂರ್ಯ ಕೃಪೆಗೆ ಹೀಗೆ ಮಾಡಿ

ಈ ವರ್ಷದ ಶನಿ ಜಯಂತಿಯ ವಿಶೇಷತೆಗಳೇನು? (Special) 
ಈ ಬಾರಿಯ ಶನಿ ಜಯಂತಿಯಂದು ವಿಶೇಷ ಸಂಯೋಗವಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಶನಿ ಜಯಂತಿಯಂದು ಅಂದರೆ ಮೇ 30ರ ಅಮಾವಾಸ್ಯೆಯಂದು ವಟ ಸಾವಿತ್ರಿ ವ್ರತವನ್ನು (Vat savithri vrat) ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೇ ಈ ಸೋಮವಾರ (Monday) ಆಗಿರುವುದರಿಂದ ಸೋಮಾವತಿ ಅಮಾವಾಸ್ಯೆ (Somavati Amavasye) ವ್ರತವನ್ನು ಸಹ ಆಚರಿಸಲಾಗುತ್ತದೆ. ಇದರ ಜೊತೆಗೆ ಈ ದಿನದ ಅಮಾವಾಸ್ಯೆಯಂದು ಶನಿದೇವನು ತನ್ನದೇ ರಾಶಿಯಾಗಿರುವ ಕುಂಭ (Aquarius) ರಾಶಿಯಲ್ಲಿ ಸ್ಥಿತನಾಗಿರುತ್ತಾನೆ. ಹಾಗಾಗಿ ಈ ಶನಿ ಜಯಂತಿಯು ಅತ್ಯಂತ ಮಹತ್ವದ್ದಾಗಿದೆ. ಈ ದಿನ ಸರ್ವಾರ್ಥ ಸಿದ್ಧಿ ಯೋಗ (Sarvartha siddi yoga) ಉಂಟಾಗಲಿದೆ.

ಶನಿ ಜಯಂತಿಯ ಶುಭ ಮುಹೂರ್ತ  (Auspicious timing)
ಮೇ 29ರ ಭಾನುವಾರ 2ಗಂಟೆ 54ನಿಮಿಷಕ್ಕೆ ಅಮಾವಾಸ್ಯೆ ತಿಥಿ ಆರಂಭವಾಗುತ್ತದೆ. ಇದು ಮೇ 30ರ ಸಂಜೆ 4ಗಂಟೆ 59 ನಿಮಿಷದ ವರೆಗೂ ಇರಲಿದೆ. ಹಾಗಾಗಿ ಶನಿ ಜಯಂತಿಯನ್ನು ಮೇ 30ರಂದೇ ಆಚರಿಸಲಾಗುತ್ತದೆ.

ಇದನ್ನು ಓದಿ: ಪತಿಯ ಆಯಸ್ಸು ಹೆಚ್ಚಿಸೋ ವಟ ಸಾವಿತ್ರಿ ವ್ರತ; ಆಚರಣೆ ಹೇಗೆ?

ಶನಿ ಜಯಂತಿಯಂದು ಪೂಜೆ ಮಾಡುವ ವಿಧಾನ ಹೀಗಿದೆ (Procedure)
ಪ್ರಾತಃ ಕಾಲದಲ್ಲಿ ಎದ್ದು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು. ನಂತರ ಶುಚಿಯಾದ ಕಪ್ಪು ವಸ್ತ್ರದ ಮೇಲೆ ಶನಿ ದೇವರ ಪ್ರತಿಮೆಯನ್ನು ಇಡಬೇಕು. ಪ್ರತಿಮೆ ಇಲ್ಲದೇ ಹೋದಲ್ಲಿ ವಿಳ್ಯದೆಲೆ ಮತ್ತು ಅಡಿಕೆಯನ್ನು ಇಡಬೇಕು. ನಂತರ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿಡಬೇಕು. ಅದಾದ ಬಳಿಕ ಅಕ್ಷತೆ, ಹೂವು, ಧೂಪ ದೀಪಗಳಿಂದ ಪೂಜಿಸಬೇಕು. ನಂತರ ಸಾಸಿವೆ ಎಣ್ಣೆಯಿಂದ ಮಾಡಿದ ಖಾದ್ಯಗಳನ್ನು ಶನಿ ದೇವರಿಗೆ ನೈವೇದ್ಯ ಮಾಡಬೇಕು.

ನಂತರ ಶನಿ ಚಾಲೀಸಾ (shani chalisa) ಮತ್ತು ಶನಿಗೆ ಸಂಬಂಧಿಸಿದ ಮಂತ್ರಗಳನ್ನು ಜಪಿಸಬೇಕು. ಈ ದಿನ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಸಹ ಶನಿ ಕೃಪೆ ಪ್ರಾಪ್ತವಾಗುತ್ತದೆ. ಶನಿ ದೇವರಿಗೆ ಆರತಿ ಮಾಡಿದ ಬಳಿಕ, ಆಲದ ಮರದ ಬಳಿಯಲ್ಲಿ ಸಾಸಿವೆ ಎಣ್ಣೆಯ (Musturd oil) ದೀಪವನ್ನು ಹಚ್ಚಿಟ್ಟು, ಯಾವುದೇ ತಪ್ಪಿದ್ದರೂ ಕ್ಷಮಿಸೆಂದು ಬೇಡಿಕೊಳ್ಳಬೇಕು. ನಿರ್ಗತಿಕರಿಗೆ ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಶನಿ ದೇವರ ಪ್ರಸಾದವನ್ನು ಸ್ವೀಕರಿಸಿದ ನಂತರ ವ್ರತವನ್ನು ಮುಗಿಸಬೇಕು.

click me!