ಸತ್ತು ಮತ್ತೆ ಜೀವ ಬಂದಿದ್ದ ವ್ಯಕ್ತಿಗೆ ತಿಥಿ ಮಾಡಿದ ಗ್ರಾಮಸ್ಥರು: ಚಾಮರಾಜನಗರ ಜಿಲ್ಲೆಯಲ್ಲೊಂದು ವಿಚಿತ್ರ ಆಚರಣೆ!

Published : May 19, 2022, 10:35 PM IST
ಸತ್ತು ಮತ್ತೆ ಜೀವ ಬಂದಿದ್ದ ವ್ಯಕ್ತಿಗೆ ತಿಥಿ ಮಾಡಿದ ಗ್ರಾಮಸ್ಥರು: ಚಾಮರಾಜನಗರ ಜಿಲ್ಲೆಯಲ್ಲೊಂದು ವಿಚಿತ್ರ ಆಚರಣೆ!

ಸಾರಾಂಶ

ಚಾಮರಾಜನಗರದಲ್ಲಿ ಜೀವಂತ ವ್ಯಕ್ತಿಗೂ ಅಂದರೆ ಬಲಿ ಹಬ್ಬದಲ್ಲಿ ಬಲಿಯಾಗಿ, ಬದುಕಿದ ವ್ಯಕ್ತಿಗೂ ತಿಥಿ ಕಾರ್ಯ ಮಾಡಿ 101 ಎಡೆ ಇಟ್ಟು, ಸತ್ತು ಬದುಕಿದ ವ್ಯಕ್ತಿಯ ಹೆಸರಿನಲ್ಲಿ ಮಾಂಸಹಾರದ ಊಟದ ವ್ಯವಸ್ಥೆ ಮಾಡಿ, 120 ಕುಟುಂಬದ ಜನರು ದೇವಸ್ಥಾನದ ಮುಂಬಾಗ ಸೇರಿ ತಿಥಿ ಊಟ ಮಾಡುತ್ತಾರೆ ಯಾಕೆ ಗೊತ್ತಾ?

ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮೇ.19): ಸತ್ತವರಿಗೆ ತಿಥಿ ಮಾಡೋದು ಕಾಮನ್. ಆದರೆ ಚಾಮರಾಜನಗರದಲ್ಲಿ ಜೀವಂತ ವ್ಯಕ್ತಿಗೂ ಅಂದರೆ ಬಲಿ ಹಬ್ಬದಲ್ಲಿ ಬಲಿಯಾಗಿ, ಬದುಕಿದ ವ್ಯಕ್ತಿಗೂ ತಿಥಿ ಕಾರ್ಯ ಮಾಡಿ 101 ಎಡೆ ಇಟ್ಟು, ಸತ್ತು ಬದುಕಿದ ವ್ಯಕ್ತಿಯ ಹೆಸರಿನಲ್ಲಿ ಮಾಂಸಹಾರದ ಊಟದ ವ್ಯವಸ್ಥೆ ಮಾಡಿ, 120 ಕುಟುಂಬದ ಜನರು ದೇವಸ್ಥಾನದ ಮುಂಬಾಗ ಸೇರಿ ತಿಥಿ ಊಟ ಮಾಡುತ್ತಾರೆ ಯಾಕೆ, ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಹೌದು! ಇದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೀಗೆಮಾರಮ್ಮನ ನರಬಲಿ ಹಬ್ಬದ ಮತ್ತೊಂದು ವಿಶೇಷ. ಕಳೆದ 25 ದಿನಗಳಿಂದ ನಡೆಯುತ್ತಿರುವ  ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಸೀಗೆ ಮಾರಮ್ಮ ನರಬಲಿ ಹಬ್ಬದ ಕೊನೆಯ ದಿನ ತಿಥಿ ಮಾಡಿ ಹಬ್ಬಕ್ಕೆ ಅಂತ್ಯ ಹಾಡಲಾಗಿದೆ.  ಇಲ್ಲಿ ಸೀಗಮಾರಮ್ಮನ ಒಕ್ಕಲಿನ ಕುಟುಂಬಸ್ಥರಿಗೆ ಮರಿ ಕೊಯ್ದು ಮಾಂಸಾಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು ಈ ವೇಳೆ ಇತರ ಸಮುದಾಯದ ಜನರು ತಿಥಿ ಕಾರ್ಯ ನೋಡುವಂತಿಲ್ಲ ಸೀಗೆ ಮಾರಮ್ಮ ಮನೆತನದವರಷ್ಟೇ ತಿಥಿ ನಡೆಸಬೇಕೆಂಬ ಸಂಪ್ರದಾಯ ಇದೆ. ವ್ಯಕ್ತಿ ಸತ್ತು ಮತ್ತೆ ಬದುಕುತ್ತಾನೆ ಎಂಬ ನಂಬಿಕೆಯ ವಿಶಿಷ್ಠ ಆಚರಣೆಗೆ  ಸಾಕ್ಷಿಯಾಗಿದ್ದ ಪಾಳ್ಯ ಗ್ರಾಮ ಬದುಕಿ ಬಂದ ವ್ಯಕ್ತಿಗೆ ತಿಥಿ ಮಾಡುವ ಮೂಲಕ ಮತ್ತೊಂದು ವಿಚಿತ್ರ ಅಚರಣೆಗೆ ಸಾಕ್ಷಿಯಾಯಿತು.

ಸಣ್ಣ-ಪುಟ್ಟ ವಿಚಾರಕ್ಕೆ ಜೀವವನ್ನೇ ತೆಗೆದ, ಸಂಭ್ರಮದ ಮನೆಯಲ್ಲಿ ಸ್ಮಶಾನ ಮೌನ

ಈ ತಿಥಿಯ ಹಿನ್ನಲೆ ನೋಡುವುದಾದರೆ ಪಾಳ್ಯ ಗ್ರಾಮದಲ್ಲಿ ಐದು ವರ್ಷಗಳಿಗೊಮ್ಮೆ ಸೀಗಮಾರಮ್ಮ ಜಾತ್ರೆ ನಡೆಯುತ್ತದೆ. ಆದರೆ ಕಳೆದ19 ವರ್ಷಗಳಿಂದ ಇಲ್ಲಿ ನಾನಾ ಕಾರಣಗಳಿಂದ ಈ ಜಾತ್ರೆಯೇ ನಡೆದಿರಲಿಲ್ಲ. ಇದೀಗ ಬರೋಬ್ಬರಿ 19 ವರ್ಷಗಳ ನಂತರ  ಈ ವಿಶಿಷ್ಟ ಜಾತ್ರೆ ನಡೆಯಿತು. ಸಾಮಾನ್ಯವಾಗಿ ಗ್ರಾಮದೇವತೆಗೆ ಪ್ರಾಣಿಗಳನ್ನು ಬಲಿಕೊಟ್ಟರೆ ಪಾಳ್ಯ ಗ್ರಾಮದಲ್ಲಿ ನರಬಲಿ ರೀತಿಯ ಆಚರಣೆ ರೂಢಿಯಲ್ಲಿದೆ. ಕಾರಣವೇನೆಂದರೆ ದೇವತೆಗಳಾದ ಸೀಗಮಾರಮ್ಮ, ಸಾಕಮ್ಮ ಹಾಗು ಒಳಗೆರೆ ಹುಚ್ಚಮ್ಮ ಎಂಬ ಸಹೋದರಿಯದ್ದರು ಎಂಬ ಪುರಾಣವಿದೆ. ಒಮ್ಮೆ ಸೀಗಮಾರಮ್ಮ ತನ್ನ ಸಹೋದರಿ ಸಾಕಮ್ಮಳ ಮಗನನ್ನೆ ಬಲಿತೆಗೆದುಕೊಂಡಳೆಂಬ ಕಥೆ ಇದೆ. 

ಆದರೆ ಸಾಕಮ್ಮನ ಮಗನಿಗೆ ಒಳಗೆರೆಹುಚ್ಚಮ್ಮ ಜೀವ ನೀಡಿದಳೆಂಬ ಪುರಾಣವಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಬಲಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಜಾತ್ರೆಯ ಹಿಂದಿನ ಮಧ್ಯೆ ರಾತ್ರಿ ಬಲಿ ಬೀಳುವ ಕಾರ್ಯಕ್ರಮ ನಡೆಯುತ್ತದೆ. ಬಲಿ ಬೀಳುವ ವ್ಯಕ್ತಿಯನ್ನು ಕರೆದೊಯ್ದು ಸ್ನಾನ ಮಾಡಿಸಿ ಮತ್ತೆ ಬಲಿ ಮನೆಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಈ ಸಂದರ್ಭದಲ್ಲಿ ಸೀಗಮಾರಮ್ಮ ಮೈ ಮೇಲೆ ಬಂದ ಅರ್ಚಕ ಬಲಿ ಬೀಳುವ ವ್ಯಕ್ತಿಯ ಮೇಲೆ ಮಂತ್ರಿಸಿದ ಅಕ್ಕಿ ಕಾಳು ಹಾಕುತ್ತಾರೆಂದು ಈ ವೇಳೆ ಆತನ ಕೈಕಾಲು ಸ್ವಾದೀನ ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಹೀಗೆ ಸ್ವಾಧೀನ ಕಳೆದುಕೊಂಡ ವ್ಯಕ್ತಿಯನ್ನು ಮತ್ತೆ ಬಲಿಮನೆಗೆ ಕರೆತಂದು ಮಲಗಿಸಲಾಗುತ್ತದೆ. 

ಮತ್ತೆ ಸೀಗಮಾರಮ್ಮ ಮೈಮೇಲೆ ಆವೇಶ ಬಂದ ಅರ್ಚಕ ಹೆಬ್ಬರೆಯವರ ಜೊತೆಗೂಡಿ  ಬಲಿಮನೆಗೆ ಬಂದು ಅಲ್ಲಿ ಮಲಗಿರುವ ವ್ಯಕ್ತಿಯ  ಎದೆ ಮೇಲೆ ಕಾಲು ತಾಗಿಸುತ್ತಾನೆ. ಈ ಸಂದರ್ಭದಲ್ಲಿ ಈ ವ್ಯಕ್ತಿಯ ಉಸಿರಾಟ  ಸಂಪೂರ್ಣ ನಿಂತು ಹೋಗುತ್ತದೆ  ಆತ ದೇವರಿಗೆ ಬಲಿಯಾಗಿದ್ದಾನೆ  ಹೋಗುತ್ತಾನೆ ಎಂಬ ನಂಬಿಕೆ ಇದೆ. ಬಳಕ ಹೀಗೆ ಬಲಿಬಿದ್ದ ವ್ಯಕ್ತಿಯ ದೇಹವನ್ನು ಮೆರವಣಿಗೆ ಮೂಲಕ  ಬಲಿಪೀಠಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಹೀಗೆ ಮೆರವಣಿಗೆ ಸಾಗುವಾಗ ಬಲಿ ಬಿದ್ದ ವ್ಯಕ್ತಿಯ ಹೆಣವನ್ನು ಎಸೆದಾಡುತ್ತ ಗ್ರಾಮದ ಮಾರಿಗುಡಿ ಬಳಿ ತಂದಿಡಲಾಗುತ್ತದೆ. ಈ ವೇಳೆ ಈ ವ್ಯಕ್ತಿಯ ಮೂಗು, ಕಣ್ಣು,ಬಾಯಿಗೆ ಅಕ್ಕಿ,ಅರಿಶಿನ ಹಾಗು ಕುಂಕುಮ ತುಂಬಲಾಗುತ್ತದೆ.  

ಸಹಸ್ರಾರು ಮಂದಿ ಬಲಿಗೆ ಬಿದ್ದ ವ್ಯಕ್ತಿಯ ದರ್ಶನ ಮಾಡುತ್ತಾರೆ. ಬಲಿಗೆ ಬಿದ್ದ ವ್ಯಕ್ತಿಯ ದೇಹದಲ್ಲಿ ಜೀವ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇತ್ತ ದೇವಸ್ಥಾನದಲ್ಲಿ ರಾತ್ರಿಯಿಡಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮರುದಿನ ಬೆಳಿಗ್ಗೆ ಒಳಗೆರೆ ಹುಚ್ಚಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಒಳಗೆರೆ ಹುಚ್ಚಮ್ಮ ದೇವಿಯ ಆವೇಶ ಬಂದ ಅರ್ಚಕ ತೀರ್ಥ ತಂದು ಬಲಿಗೆ ಬಿದ್ದ ವ್ಯಕ್ತಿಯ ದೇಹಕ್ಕೆ ಪ್ರೋಕ್ಷಣೆ ಮಾಡುತ್ತಾರೆ.  ಈ ವೇಳೆ ಪ್ರಾಣ ಪಕ್ಷಿ ಹಾರಿಹೋಗಿದ್ದ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಇದೆ. ಹೀಗೆ ಬಲಿಗೆ ಬಿದ್ದ ವ್ಯಕ್ತಿಗೆ ಜೀವ 11 ನೇ ದಿನಕ್ಕೆ ತಿಥಿ ಮಾಡಲಾಗುತ್ತದೆ  ಹನ್ನೊಂದನೆ ದಿನಕ್ಕೆ ಕುರಿಯೊಂದನ್ನು ಬಲಿ ನೀಡಿ ಶಾಂತಿ ಮಾಡಲಾಗುತ್ತದೆ. ಅಲ್ಲಿಗೆ ಬಲಿ ಹಬ್ಬಕ್ಕೆ ತೆರೆಬೀಳುತ್ತದೆ.

Chamarajanagar: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆ, ಶಸ್ತ್ರಕ್ರಿಯೆ ಸ್ಥಗಿತ!

ಈ ತಿಥಿ ಕಾರ್ಯದೊಂದಿಗೆ  25  ದಿನಗಳ ಕಾಲ  ನಡೆದ ಸೀಗೆಮಾರಮ್ಮ ನರಬಲಿ ಹಬ್ಬ ಮುಕ್ತಾಯಗೊಂಡಿದೆ. ಹಬ್ಬ ನಡೆಯುವ 25 ದಿನಗಳ ಕಾಲ ಗ್ರಾಮದಲ್ಲಿ ಯಾರೂ ಮಾಂಸಾಹಾರ , ಮದ್ಯಪಾನ ಮಾಡುವಂತಿಲ್ಲ. ಶುಭ ಸಮಾರಂಭಗಳನ್ನು ಮಾಡುವಂತಿಲ್ಲ. ಮನೆಗಳಲ್ಲಿ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ. ಇದೀಗ ಈ ಎಲ್ಲಾ ಕಟ್ಟುಪಾಡುಗಳನ್ನು ತೆರವುಗೊಳಿಸಲಾಗಿದೆ. ಅಡುಗೆಗೆ ಒಗ್ಗರಣೆ  ಹಾಕಲು, ಮನೆಗಳಲ್ಲಿ  ಬಾಡೂಟ ಸೇವಿಸಲು, ಶುಭ ಸಮಾರಂಭಗಳನ್ನು ಮಾಡಲು ಇಂದಿನಿಂದ ಅವಕಾಶ ಸಿಗಲಿದೆ. ಈ  ವಿಶಿಷ್ಟ ಹಾಗು ವಿಸ್ಮಯಕಾರಿ ಜಾತ್ರೆಯನ್ನು ಪಾಳ್ಯ ಗ್ರಾಮಸ್ಥರು ಈಗಲು  ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ