Lemon Remedies 2022: ವ್ಯಾಪಾರ ಗರಿಗೆದರುತ್ತಿಲ್ಲವೇ? ನಿಂಬೆ ಹಣ್ಣಿನ ಪರಿಹಾರ ಮಾಡಿ..

By Suvarna News  |  First Published Jun 18, 2022, 1:05 PM IST

ನಿಂಬೆಹಣ್ಣು ಎಲ್ಲ ಆಹಾರಕ್ಕೂ ರುಚಿ ಕೊಡುತ್ತದೆ. ಅಡುಗೆಮನೆಯಲ್ಲಿ ನಿಂಬೆಗೆ ಅತ್ಯುತ್ತಮ ಸ್ಥಾನವಿದೆ. ಈ ನಿಂಬೆಯನ್ನು ಜ್ಯೋತಿಷ್ಯದ ಹಲವಾರು ವಿಷಯಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ನಿಮ್ಮ ಬಿಸ್ನೆಸ್ ಚಿಗುರಬೇಕೆಂದರೆ ಈ ನಿಂಬೆಹಣ್ಣಿನ ಪರಿಹಾರ ಕೈಗೊಳ್ಳಿ. 


ನಿಂಬೆ(Lemon)ಯಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಸಿ ಇದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಯಕೃತ್ತಿನ ಅನಾರೋಗ್ಯವನ್ನು ಹೊಂದಿದ್ದರೆ, ನಿಂಬೆಹಣ್ಣನ್ನು ಪ್ರತಿದಿನ ಸೇವಿಸಬೇಕು.  ನಿಮಗೆ ಹೊಟ್ಟೆ, ಒಸಡು ಅಥವಾ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ನಿಂಬೆಯ ರಸ ದೊಡ್ಡ ಪ್ರಮಾಣದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದಲ್ಲದೆ ಜ್ಯೋತಿಷ್ಯದಲ್ಲಿ , ತಾಂತ್ರಿಕ ಪೂಜೆಗಳಲ್ಲಿ ನಿಂಬೆಹಣ್ಣನ್ನು ಅಗಾಧವಾಗಿ ಬಳಸಲಾಗುತ್ತದೆ. 

ತಾಂತ್ರಿಕ ಪೂಜೆಗಳಲ್ಲಿ ಕೆಟ್ಟ ಉದ್ದೇಶದಿಂದ ನಿಂಬೆಹಣ್ಣು ಬಳಸಲಾಗುತ್ತದೆ. ಆದರೆ, ಜ್ಯೋತಿಷ್ಯದಲ್ಲಿ ಸಮಸ್ಯೆಗಳಿಂದ ಪಾರಾಗಲು ನಿಂಬೆಯ ಬಳಕೆ ಮಾಡಲಾಗುತ್ತದೆ. ನಿಂಬೆಹಣ್ಣನ್ನು ಹೇಗೆ ಬಳಸಿದರೆ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ನೋಡಿ. 

Tap to resize

Latest Videos

ದೃಷ್ಟಿ ತೆಗೆಯಲು(For evil eye)
ಯಾರಿಗಾದರೂ ದೃಷ್ಟಿ ಆಗಿದೆ ಎನಿಸಿದರೆ ಕಣ್ಣು ಇರುವವರಿಗೆ ತಲೆಯಿಂದ ಪಾದದವರೆಗೆ ಏಳು ಬಾರಿ ನಿಂಬೆಹಣ್ಣನ್ನು ಸುತ್ತು ಬರಿಸಿ. ಅದರ ನಂತರ, ಮೂರು ದಾರಿ ಸೇರುವಲ್ಲಿ ನಿಂಬೆಯನ್ನು ನಾಲ್ಕು ಹೋಳುಗಳಾಗಿಸಿ ಎಸೆಯಿರಿ. ನೀವು ಇದನ್ನು ಪೂರ್ಣಗೊಳಿಸಿದ ನಂತರ ಹಿಂತಿರುಗಿ ನೋಡದೆ ಮುಂದೆ ನಡೆಯಿರಿ. 

ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಿಭಾಯಿಸೋದ್ರಲ್ಲಿ ಈ ರಾಶಿಗಳು ನಿಸ್ಸೀಮರು!

ವ್ಯಾಪಾರ ಪ್ರಗತಿಗಾಗಿ(For business advancement)
ನಿಂಬೆಯನ್ನು ಕೆಟ್ಟ ಕಣ್ಣುಗಳಿಗೆ ಬಳಸುವ ರೀತಿಯಲ್ಲಿಯೇ ವ್ಯಾಪಾರದ ಪ್ರಗತಿಗಾಗಿ ಬಳಸಲಾಗುತ್ತದೆ. ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಅಂಗಡಿಯ ಸುತ್ತಲೂ ಸುತ್ತಿಸಿ.  ನಂತರ ನಿಮ್ಮ ವ್ಯಾಪಾರವು ಸರಿಯಾಗಿ ನಡೆಯದಿದ್ದರೆ ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ. ಪ್ರತಿ ನಾಲ್ಕು ದಿಕ್ಕುಗಳಲ್ಲಿ, ನಿಂಬೆ ತುಂಡನ್ನು ಎಸೆಯಿರಿ. ಏಳು ಶನಿವಾರಗಳಂದು, ಮೊದಲಿನಿಂದ ಕೊನೆಯವರೆಗೆ ಈ ಪರಿಹಾರವನ್ನು ಪುನರಾವರ್ತಿಸಿ.

ವೃತ್ತಿ ಜೀವನದ ಯಶಸ್ಸಿಗಾಗಿ(For career success)
ನಿಮ್ಮ ಉತ್ತಮ ಪ್ರಯತ್ನಗಳ ಹೊರತಾಗಿಯೂ ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ವಿಯಾಗದಿದ್ದರೆ, ನೀವು ನಿಂಬೆಹಣ್ಣಿನ ಮೇಲೆ ನಾಲ್ಕು ಲವಂಗವನ್ನು ಇಟ್ಟು 108 ಸುತ್ತುಗಳನ್ನು ಬರಿಸುತ್ತಾ 'ಓಂ ಶ್ರೀ ಹನುಮತೇ ನಮಃ' ಎಂದು ಹೇಳಬೇಕು. ಮತ್ತು ಕಚೇರಿಗೆ ಹೋಗುವಾಗ ನಿಮ್ಮೊಂದಿಗೆ  ಈ ನಿಂಬೆಹಣ್ಣನ್ನು ಇಟ್ಟುಕೊಳ್ಳಬೇಕು. ಇದರಿಂದ ನಿಸ್ಸಂದೇಹವಾಗಿ ವೃತ್ತಿಪರ ಯಶಸ್ಸನ್ನು ಸಾಧಿಸುವಿರಿ. 

Vastu Tips: ಒಡೆದ ಗಾಜು ಅಪಾಯದ ಮುನ್ಸೂಚನೆ, ಹೀಗೆ ಮಾಡಿ..

ಉದ್ಯೋಗ ಪಡೆಯಲು(To get job)
ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಸಿಗದಿದ್ದರೆ, ಮಧ್ಯರಾತ್ರಿಯ ಮೊದಲು ಒಂದು ಶುಚಿಯಾದ ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ನಾಲ್ಕು ದಾರಿ ಸೇರುವಲ್ಲಿ ನಾಲ್ಕು ಮೂಲೆಗಳಲ್ಲಿ ಎಸೆಯಬೇಕು. ಇದರ ಪರಿಣಾಮವಾಗಿ ನಿಮ್ಮ ನಿರುದ್ಯೋಗ ಪರಿಸ್ಥಿತಿ ತೊಲಗುತ್ತದೆ. 

ಸಂತೋಷ ಮತ್ತು ಸಮೃದ್ಧಿಗಾಗಿ(for happiness and prosperity)
ಕೆಲವೊಮ್ಮೆ ವ್ಯಕ್ತಿಗೆ ಸಂತೋಷ ಮತ್ತು ಸಮೃದ್ಧಿಯ ಮಾರ್ಗಗಳು ಮುಚ್ಚಲ್ಪಡುತ್ತವೆ. ಇಂಥ ಸಂದರ್ಭದಲ್ಲಿ ನಿಮ್ಮೊಂದಿಗೆ ನಿಂಬೆ ತೆಗೆದುಕೊಳ್ಳಿ ಮತ್ತು ಮೂರು ದಾರಿ ಸೇರುವಲ್ಲಿ ಹೋಗಿ ನಿಂಬೆಯಿಂದ ಏಳು ಬಾರಿ ಸುತ್ತಿ. ಇದರ ನಂತರ, ನೀವು ನಿಂಬೆಯನ್ನು ಎರಡು ತುಂಡುಗಳಾಗಿ ಕತ್ತರಿಸಿ. ಒಂದು ತುಂಡನ್ನು ನಿಮ್ಮ ಹಿಂದೆ ಮತ್ತು ಇನ್ನೊಂದು ತುಂಡನ್ನು ನಿಮ್ಮ ಮುಂದೆ ಎಸೆದು ಮನೆಗೆ ಅಥವಾ ಎಲ್ಲಿಯಾದರೂ ಹೋಗಬಹುದು.

ಉತ್ತಮ ಆರೋಗ್ಯಕ್ಕಾಗಿ(for good health)
ಮನೆಯಲ್ಲಿ ಮಕ್ಕಳಾಗಲಿ, ಹಿರಿಯರಾಗಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಅಥವಾ ಮಗುವಿನ ಸುತ್ತಲೂ ಏಳು ಬಾರಿ ನಿಂಬೆಹಣ್ಣಿನಿಂದ ಸುತ್ತು ಬರಿಸಿ, ಎರಡು ತುಂಡುಗಳಾಗಿ ಕತ್ತರಿಸಿ ಎರಡು ದಿಕ್ಕುಗಳಲ್ಲಿ ಎಸೆಯಿರಿ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!