ಇದೇ ಮಾರ್ಚ್ 29ರಂದು ಶನಿ ಗ್ರಹವು ತನ್ನ ದಾರಿಯನ್ನು ಬದಲಿಸಿದ್ದಾನೆ. ಯಾರಿಗೆ ಸಾಡೇಸಾತಿ ಆರಂಭವಾಗಲಿದೆ? ಯಾರು ನಿರಾಳರಾಗಲಿದ್ದಾರೆ? ಯಾರಿಗೆ ಕಾದಿದೆ ಗ್ರಹಚಾರ? ಇಲ್ಲಿದೆ ಡಿಟೇಲ್ಸ್
ಸಾಡೇಸಾತಿ ಎಂದರೆ ಏಳೂವರೆ ವರ್ಷ ಎಂದು. ಇದು ಶನಿ ಒಂದು ರಾಶಿಯಲ್ಲಿ ಏಳೂವರೆ ವರ್ಷ ಕುಳಿತು ಮಾಡುವ ಕಿತಾಪತಿ. ಎರಡೂವರೆ ವರ್ಷ ಮೊದಲ ಹಂತ, ಇನ್ನು ಎರಡೂವರೆ ವರ್ಷ ಎರಡನೆಯ ಹಂತ ಹಾಗೂ ಕೊನೆಯ ಎರಡೂವರೆ ವರ್ಷ ಮೂರನೆಯ ಹಂತದಲ್ಲಿ ಶನಿ ಒಂದು ರಾಶಿಯಲ್ಲಿ ಇರುತ್ತಾನೆ. ಮೊದಲ ಹಂತದಲ್ಲಿ ಅಷ್ಟೊಂದು ಪ್ರಭಾವ ಬೀರದೇ ಹೋದರೂ ಮಧ್ಯದ ಹಂತದಲ್ಲಿ ಶನಿ ಆ ರಾಶಿಯವರಿಗೆ ಇನ್ನಿಲ್ಲದಂತೆ ತೊಂದರೆ ಕೊಡುತ್ತಾರೆ ಎನ್ನಲಾಗುತ್ತದೆ. ಬಿಲೇನಿಯರ್ ರಸ್ತೆಗೆ ಬೀಳುವುದು, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವ ವ್ಯಕ್ತಿ ಹುದ್ದೆ ಕಳೆದುಕೊಳ್ಳುವುದು, ಕೋಟ್ಯಧಿಪತಿ ಜೈಲು ಪಾಲಾಗುವುದು, ಉತ್ತಮ ಉದ್ಯಮದಲ್ಲಿ ಇರುವವನು ದಿವಾಳಿಯಾಗುವುದು... ಹೀಗೆ ಶನಿ ತನ್ನ ಎರಡನೆಯ ಹಂತದಲ್ಲಿ ವ್ಯತಿರಿಕ್ತ ಪ್ರಭಾವವನ್ನು ತೋರಿಸುವುದು ಹೆಚ್ಚು. ಇನ್ನು ಹಲವರಿಗೆ ಅನಾರೋಗ್ಯ ಸಮಸ್ಯೆ, ಸಾಲದ ಕಾಟವೂ ಆಗುತ್ತದೆ. ಇದರಿಂದಾಗಿಯೇ ಸಾಡೇಸಾತಿ ಶುರುವಾಗಿದೆ ಎಂದರೆ ಮೈಯೆಲ್ಲಾ ಝುಂ ಎನ್ನುವುದು ಸಹಜ.
ಆದರೆ ಶನಿ ತನ್ನ ಕೊನೆಯ ಎರಡೂವರೆ ವರ್ಷ ಅವರವರ ಕರ್ಮಕ್ಕೆ ತಕ್ಕಂತೆ ಒಳ್ಳೆಯದನ್ನೇ ನೀಡುತ್ತಾನೆ ಎನ್ನಲಾಗುತ್ತದೆ. ಅಷ್ಟು ವರ್ಷಗಳು ಮಾಡಿರುವ ಕರ್ಮದ ಫಲ ಅವರಿಗೆ ಕಾಣಿಸುತ್ತದೆ. ಒಳ್ಳೆಯದ್ದನ್ನು ಮಾಡಿದರೆ ಮೂರನೆಯ ಹಂತದಲ್ಲಿ ಶನಿ ಒಳ್ಳೆಯದ್ದನ್ನೇ ಮಾಡುತ್ತಾನೆ, ಕಳೆದುಕೊಂಡಿರುವ ಅಧಿಕಾರ ವಾಪಸ್ ಬರುತ್ತದೆ, ಅದೃಷ್ಟ ಬೆನ್ನಿಗೆ ಅಂಟುತ್ತದೆ. ಹಣದ ಹೊಳೆಯಾಗುತ್ತದೆ... ಹೀಗೆ ಕಳೆದುಕೊಂಡಿದ್ದನ್ನೆಲ್ಲಾ ಮರಳಿ ಪಡೆಯುವ ಅವಕಾಶವೂ ಕೊನೆಯ ಎರಡೂವರೆ ವರ್ಷದಲ್ಲಿ ಶನಿ ಕೊಡುತ್ತಾನೆ. ಹೀಗೆ, ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯಕ್ಕೆ ಕುಂಭ, ಮಕರ, ಮೀನ ರಾಶಿಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದೆ.
ಜೀವನದಲ್ಲಿ ಈ 3 ತಪ್ಪು ಮಾಡಿದ್ರೆ, ಹಣದ ಜೊತೆ ಮಾನ, ಮರ್ಯಾದೆ ಕೂಡ ಹೋಗುತ್ತೆ!
ಆದರೆ ಇದೇ ಮಾರ್ಚ್ 29ರಂದು ಶನಿಯ ಬದಲಾವಣೆ ಆಗಲಿದೆ. ಮಕರ ರಾಶಿಯವರಿಗೆ ಕೊನೆಯ ಹಂತದಲ್ಲಿರುವ ಶನಿ ಆ ರಾಶಿಯನ್ನು ಬಿಟ್ಟು ಹೋಗಲಿದ್ದಾನೆ. ಕುಂಭ ರಾಶಿಯವರಿಗೆ ಎರಡನೆಯ ಹಂತದಲ್ಲಿದ್ದು ಈ ರಾಶಿಯವರು ಈ ಎರಡೂವರೆ ವರ್ಷ ಸಾಕಷ್ಟು ನೋವು ಅನುಭವಿಸಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಬಾಧಿಸಿವೆ, ಸಾಲದ ಸಮಸ್ಯೆಗಳು ಕಾಡಿದ್ದಿರಬಹುದು. ಆದರೆ ಕುಂಭ ರಾಶಿಯವರು ನಿರಾಳರಾಗುವ ಕಾಲ ಸನ್ನಿಹಿತವಾಗಿದೆ. ಇದೇ 29ರಂದು ಶನಿ ಎರಡನೆಯ ಹಂತವನ್ನು ಬಿಟ್ಟು ಮೂರನೆಯ ಹಂತಕ್ಕೆ ಕಾಲಿಡುತ್ತಿದ್ದಾನೆ. ಇದರಿಂದ ಕರ್ಮಕ್ಕೆ ಅನುಗುಣವಾಗಿ ಒಳ್ಳೆಯದನ್ನೂ ಇನ್ನು ಎರಡೂವರೆ ವರ್ಷ ನೋಡಬಹುದಾಗಿದೆ.
ಇನ್ನು ಮೀನ ರಾಶಿಯವರಿಗೆ ಒಂದನೆಯ ಹಂತದಿಂದ ಎರಡನೆಯ ಹಂತಕ್ಕೆ ಶನಿ ಬರಲಿದೆ. ಇದರಿಂದ ಮೀನ ರಾಶಿಯವರಿಗೆ ಸಾಡೇಸಾತಿಯ ಪ್ರಭಾವ ಕಾಣಿಸಲು ಶುರುವಾಗಲಿದೆ. ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶ್ಯಾಧಿಪತಿ ಶನಿಯೇ ಆಗಿರುವುದರಿಂದ ಬೇರೆ ರಾಶಿಗಳವರಂತೆ ಈ ಮೂರು ರಾಶಿಯವರಿಗೆ ಶನಿ ಅಷ್ಟೊಂದು ಹಾನಿ ಮಾಡುವುದಿಲ್ಲ ಎನ್ನಲಾಗುತ್ತದೆ. ಆದರೆ ಸಾಡೇಸಾತಿಯ ಪ್ರಭಾವವಂತೂ ಇದ್ದೇ ಇರುತ್ತದೆ. ಇನ್ನು ಮೇಷ ರಾಶಿಗೆ ಮಾರ್ಚ್ 29ರಂದು ಶನಿಯ ಪ್ರವೇಶವಾಗಿ ಸಾಡೇಸಾತಿಯ ಮೊದಲ ಹಂತ ಶುರುವಾಗಲಿದೆ. ಅಂದಹಾಗೆ ಮಾರ್ಚ್ 29ರ ರಾತ್ರಿ 10:07 ಕ್ಕೆ ಮೀನ ರಾಶಿಯನ್ನು ಶನಿ ಪ್ರವೇಶಿಸಲಿದ್ದಾನೆ.
ಮೃತ ವ್ಯಕ್ತಿ ಆಹಾರ ಸೇವನೆ ಮಾಡೋದು ನಿಜನಾ? ಈ ಪ್ರಯೋಗ ಮಾಡಿ ನೋಡಿ ಎಂದ ಘೋಸ್ಟ್ ಹಂಟರ್ ಇಮ್ರಾನ್