ಮೃತ ವ್ಯಕ್ತಿ ಆಹಾರ ಸೇವನೆ ಮಾಡೋದು ನಿಜನಾ? ಈ ಪ್ರಯೋಗ ಮಾಡಿ ನೋಡಿ ಎಂದ ಘೋಸ್ಟ್​ ಹಂಟರ್​ ಇಮ್ರಾನ್​

 ಮೃತಪಟ್ಟ ಬಳಿಕ 12, 14... ಹೀಗೆ ಕೆಲ ದಿನಗಳ ಬಳಿಕ ಅವರ ಇಷ್ಟದ ಆಹಾರಗಳನ್ನು ಇಡುವ ಸಂಪ್ರದಾಯವಿದೆ. ಆಗ ಏನಾಗುತ್ತೆ? ಆಹಾರ ಸೇವನೆ ಮಾಡ್ತಾರಾ ಎನ್ನುವ ಪ್ರಶ್ನೆಗೆ ಪ್ರಯೋಗವೊಂದನ್ನು ಮಾಡಿನೋಡುವಂತೆ ಹೇಳಿದ್ದಾರೆ ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​.
 

There is a custom of keeping a persons favorite food after his death Imran revealed some interesting facts suc

ಭೂತ, ಪ್ರೇತ, ಪಿಶಾಚಿ, ಆತ್ಮಗಳ ಇರುವಿಕೆ ಇದೆಯೋ ಇಲ್ಲವೋ ಎನ್ನುವ ಬಗ್ಗೆ ದೊಡ್ಡ ಜಿಜ್ಞಾಸೆಯೇ ಇದೆ. ಅದು ಅವರವರ ಭಾವಕ್ಕೆ ಬಿಟ್ಟ ವಿಷಯ. ಇವುಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. 

ಆದರೆ ಇದೀಗ ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಅವರು ಭೂತ, ಪ್ರೇತ, ಆತ್ಮಗಳ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ಸ್ಟೋರಿ ಹೇಳಿದ್ದಾರೆ. ಸತ್ತ ಬಳಿಕ ಹಲವು ಸಂಪ್ರದಾಯದಲ್ಲಿ ಇಂತಿಷ್ಟು ದಿನಗಳ ಬಳಿಕ, ಮೃತವ್ಯಕ್ತಿಯ   ಇಷ್ಟವಾದ ಆಹಾರ ಪದಾರ್ಥಗಳನ್ನು ಇಟ್ಟು ಬಾಗಿಲು ಮುಚ್ಚುವ ಪದ್ಧತಿ ಇದೆ. ಆ ಬಳಿಕ ಏನಾಗುತ್ತದೆ ಎನ್ನುವ ಕುತೂಹಲದ ಮಾಹಿತಿಯನ್ನೂ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇಮ್ರಾನ್​ ಅವರು ಹೇಳಿದ್ದಾರೆ. ಇದಕ್ಕೂ ಮುನ್ನ ಭೂತ, ಪ್ರೇತ ಎಂದರೇನು ಎನ್ನುವುದನ್ನು ಅವರು ವಿವರಿಸಿದ್ದಾರೆ. 'ಮನುಷ್ಯನಿಗೆ ಬಾಡಿ ಇರುವಂತೆ, ಕಣ್ಣಿಗೆ ಕಾಣದೇ ಇರುವ ಪಡೆಗಳೂ ಇರುವೆ. ಅವುಗಳಿಗೆ ನಾವು ಕೊಟ್ಟುಕೊಂಡಿರುವ ಹೆಸರು ಅಷ್ಟೇ. ಆದರೆ ಅದೊಂದು ಎನರ್ಜಿ ಅಷ್ಟೇ' ಎಂದಿದ್ದಾರೆ. ಇದಕ್ಕೆ ಉದಾಹರಣೆ ಕೊಟ್ಟಿರುವ ಅವರು, ಪ್ರತಿಯೊಬ್ಬರಿಗೂ ಇಂತಿಷ್ಟು ಆಯಸ್ಸು ಎಂದು ಇರುತ್ತದೆ. ಆದರೆ ಅವರು ಮಧ್ಯೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಉಳಿದ ಆಯಸ್ಸನ್ನು ಅವರು ಮುಕ್ತಿ ಸಿಗದೇ ಅಲೆದಾಡುತ್ತಿರುತ್ತಾರೆ. ಆ ಸಮಯದಲ್ಲಿ, ಕೆಲವರಿಗೆ ಕಾಣಿಸಿಕೊಳ್ಳುವುದು ಇದೆ. ತೊಂದರೆ ಕೊಡುವುದೂ ಇದೆ. ಗ್ರಹಗತಿ, ನಾಡಿಬಡಿತ ನೋಡಿ ಅವರು ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ.

Latest Videos

ಧಾರವಾಡದ ಯುವತಿ ದೇಹ ಹೊಕ್ಕ ಎಂಟು ಆತ್ಮ: ಕೂದಲು ಒರೆಸುವಾಗ ನಡೆದ ಭಯಾನಕ ಘಟನೆ ವಿವರಿಸಿದ ಘೋಸ್ಟ್​ ಹಂಟರ್​

ಇದೇ  ವೇಳೆ, ಭೂತಗಳಿಗೂ ಹಸಿವಾದರೆ ಏನು ಮಾಡುತ್ತವೆ ಎನ್ನುವ ಬಗ್ಗೆ ಮಾತನಾಡಿರುವ ಇಮ್ರಾನ್​ ಅವರು, ಮೊದಲು ಪಾಸಿಟಿವ್​ ಎನರ್ಜಿ ಬಗ್ಗೆ ಹೇಳುವುದಾದರೆ, ದೇವರ ಮುಂದೆ ಹೂವು, ಹಣ್ಣು, ತಿನಿಸುಗಳನ್ನು ನೈವೇದ್ಯಕ್ಕೆಂದು ಇಡುತ್ತೀರಿ. ದೇವರು ಬಂದು ತಿಂದುಕೊಂಡು ಹೋಗುವುದಿಲ್ಲ. ಆದರೆ ಇಲ್ಲೊಂದು ಸೈನ್ಸ್​ ಇದೆ. ನಂಬಿಕೆ ಪ್ರಕಾರ ಅದರ ಎಸೆನ್ಸ್​ ಅನ್ನು ದೇವರು ಸೇವಿಸುತ್ತಾರೆ ಎಂದಿದ್ದಾರೆ. ಹೀಗೆ ಹೇಳಿದರೆ ಏನೋ ಪುಂಗುತ್ತಾನೆ ಎಂದು ಕಮೆಂಟ್​ ಮಾಡುವವರು ಸಾಕಷ್ಟು ಇದ್ದಾರೆ. ಆದರೆ ಅದು ಅವರವರ ನಂಬಿಕೆ ಬಿಟ್ಟಿದ್ದು ಎನ್ನುತ್ತಲೇ ಸತ್ತ ಬಳಿಕ ಮೃತಪಟ್ಟ ವ್ಯಕ್ತಿಗೆ ಇಡುವ ಆಹಾರಗಳ ಬಗ್ಗೆ ಕುತೂಹಲದ ಮಾಹಿತಿಯೊಂದನ್ನು ಶೇರ್​ ಮಾಡಿದ್ದಾರೆ. 

ಯಾರಾದರೂ ಸತ್ತ ವ್ಯಕ್ತಿ ಇದ್ದರೆ ಅವರ ಇಷ್ಟದ ಆಹಾರ ಮಾಡಿ ಇಡುತ್ತಾರೆ. ನಂತರ ಬಾಗಿಲು ಹಾಕುತ್ತಾರೆ. ಬಾಗಿಲು ತೆರೆದಾಗ ಅಲ್ಲಿನ ಆಹಾರವೇನೂ ಖಾಲಿಯಾಗಿರುವುದಿಲ್ಲ. ಸತ್ತ ವ್ಯಕ್ತಿ ಬಂದು ತಿಂದು ಹೋಗುತ್ತಾರೆ ಎನ್ನುವುದು ನಂಬಿಕೆಯಷ್ಟೇ. ಆದರೆ ಯಾರಿಗೂ ಗೊತ್ತಿಲ್ಲದ ಸತ್ಯವೊಂದಿದೆ. ಅದೇನೆಂದರೆ, ನೀವು ಬೇಕಿದ್ದರೆ ಪ್ರಯೋಗ ಮಾಡಿ ನೋಡಿ. ಆ ವ್ಯಕ್ತಿಗೆ ಇಡುವ ಆಹಾರವನ್ನು ಸ್ವಲ್ಪ ತೆಗೆದಿಟ್ಟುಕೊಳ್ಳಿ. ಉಳಿದದ್ದನ್ನು ಶವದ ಮುಂದೆ ಇಡಿ. ಬಾಗಿಲು ಮುಚ್ಚಿ ತೆಗೆಯುವ ಶಾಸ್ತ್ರ ಆದ ಬಳಿಕ ಅಲ್ಲಿರುವ ಆಹಾರವನ್ನು ಸ್ವಲ್ಪ ಟೇಸ್ಟ್​ ಮಾಡಿ ನೋಡಿ, ಹಾಗೂ ಮೊದಲೇ ಇಟ್ಟಿರುವ ಆಹಾರವನ್ನು ಟೇಸ್ಟ್​ ಮಾಡಿ. ಎಷ್ಟು ವ್ಯತ್ಯಾಸ ಇರುತ್ತದೆ ಎನ್ನುವುದು ತಿಳಿಯುತ್ತದೆ. ಆ ವ್ಯಕ್ತಿ ಆ ಆಹಾರಗಳ ಎಸೆನ್ಸ್​ ತೆಗೆದುಕೊಂಡು ಹೋಗಿರುತ್ತಾರೆ. ಇವೆಲ್ಲವನ್ನೂ ಸ್ಟಡಿ ಮಾಡಿಯೇ ವಿಷಯವನ್ನು ಹೇಳುತ್ತಿದ್ದೇನೆ. ಇದನ್ನು ಕೆಲವರು ಟೀಕಿಸುವುದೂ ಇದೆ ಎಂದಿದ್ದಾರೆ ಇಮ್ರಾನ್​​.

ಅದೃಶ್ಯ ವ್ಯಕ್ತಿ ಜೊತೆ ಸೇಲ್ಸ್ ಗರ್ಲ್ ಮಾತುಕತೆ? ಅಂಗಡಿಯ ಸಿಸಿಟಿಯಲ್ಲಿ ಶಾಕಿಂಗ್‌ ಘಟನೆ ಸೆರೆ!
 

vuukle one pixel image
click me!