Astrology Tips: ದೇವಸ್ಥಾನಕ್ಕೆ ಹೋಗ್ವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

Published : Jan 16, 2023, 06:30 PM IST
Astrology Tips: ದೇವಸ್ಥಾನಕ್ಕೆ ಹೋಗ್ವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಸಾರಾಂಶ

ದೇವಸ್ಥಾನಕ್ಕೆ ಹೋಗಿ ನಾವು ಅಭಿಷೇಕ ಮಾಡಿಸ್ತೇವೆ. ಈ ವೇಳೆ ದೇವಸ್ಥಾನದಲ್ಲಿರುವ ನೀರನ್ನೇ ಅಭಿಷೇಕ್ಕೆ ಬಳಸ್ತೇವೆ. ಆದ್ರೆ ಮನೆಯಿಂದ್ಲೇ ಶುದ್ಧ ನೀರನ್ನು ತೆಗೆದುಕೊಂಡು ಹೋಗುವ ಜೊತೆಗೆ ಕೆಲ ನಿಯಮ ಪಾಲನೆ ಮಾಡಿದ್ರೆ ದೇವಸ್ಥಾನಕ್ಕೆ ಹೋದ ಸಂಪೂರ್ಣ ಫಲ ಸಿಗುತ್ತದೆ.  

ದೇವಸ್ಥಾನ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಮಡಿ ಮೈಲಿಗೆಯ ವಿಚಾರ. ಮನುಷ್ಯನಿಗೆ ಏನೇ ಕಷ್ಟ ಬರಲಿ, ಸುಖ ಬರಲಿ ಮೊದಲು ಅವನು ನೆನೆಸಿಕೊಳ್ಳುವುದು ದೇವರನ್ನು. ಒಂದು ಕಾರ್ಯವನ್ನು ಆರಂಭಿಸುವಾಗ ಹಾಗೂ ಅದು ಫಲಿಸಿದಾಗ ಕೂಡ ದೇವರಿಗೆ ಪೂಜೆ ಸಲ್ಲಿಸುವುದು ಎಲ್ಲರ ರೂಢಿ. ದೇವಸ್ಥಾನಗಳಿಗೆ ಹೋಗುವಾಗ ಶುದ್ಧವಾಗಿ ಹೋಗಬೇಕು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹಾಗೆ ದೇವಸ್ಥಾನಕ್ಕೆ ಹೋಗುವವರು ಸಾಮಾನ್ಯವಾಗಿ ಹೂವು ಹಣ್ಣು, ಕಾಯಿ ಮುಂತಾದವುಗಳನ್ನು ನೈವೇದ್ಯಕ್ಕೆಂದು ತೆಗೆದುಕೊಂಡು ಹೋಗ್ತಾರೆ. ಇನ್ನು ಕೆಲವು ಮಂದಿ ಹರಕೆ ತೀರಿಸುವುದಕ್ಕಾಗಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗ್ತಾರೆ. ಹಾಗೆ ದೇವಸ್ಥಾನಕ್ಕೆ ಹೋಗುವಾಗ ಈ ಕೆಳಗಿನ ವಸ್ತುಗಳನ್ನು ಕೂಡ ನೀವು ತೆಗೆದುಕೊಂಡು ಹೋದರೆ ಹಾಗೂ ಕೆಲ ನಿಯಮಗಳನ್ನು ಪಾಲಿಸಿದರೆ ನಿಮ್ಮ ಜೀವನದಲ್ಲಿ ಅನೇಕ ರೀತಿಯ ಏಳ್ಗೆಗಳಾಗುತ್ತವೆ. ಮನೆಯಲ್ಲಿ ನೆಮ್ಮದಿ ನೆಲೆಸಲು ಸಹಾಯವಾಗುತ್ತದೆ.

ದೇವಸ್ಥಾನ (Temple) ಕ್ಕೆ ಹೋಗುವಾಗ ಹೀಗೆ ಮಾಡಿ : 

ಶುದ್ಧ ನೀರು (Water) ತೆಗೆದುಕೊಂಡು ಹೋಗಿ : ಹೌದು, ಜ್ಯೋತಿಷ್ಯ (Astrology)  ಶಾಸ್ತ್ರದ ಪ್ರಕಾರ ನೀವು ದೇವಸ್ಥಾನಗಳಿಗೆ ಹೋಗುವಾಗ ಮನೆಯಿಂದ ಶುದ್ಧವಾದ ನೀರನ್ನು ತೆಗೆದುಕೊಂಡು ಹೋಗಬೇಕು. ನೀವು ತೆಗೆದುಕೊಂಡ ಹೋದ ನೀರಿನಿಂದಲೇ ದೇವರ ಅಭಿಷೇಕ ಮಾಡಬೇಕು. ಈಶ್ವರನಿಗೆ ಅಭಿಷೇಕ ಪ್ರಿಯವಾಗಿದ್ದರಿಂದ ಮನೆಯ ನೀರನಿಂದ ಅಭಿಷೇಕ ಮಾಡಿದಾಗ ನಿಮ್ಮ ಅಭಿವೃದ್ಧಿ ಹೆಚ್ಚುತ್ತೆ. ಸುಖ ಜೀವನ ಪ್ರಾಪ್ತಿಯಾಗುತ್ತದೆ.

ದೇವಸ್ಥಾನದಲ್ಲಿ ಗಂಟೆ ಹೊಡೆಯಲು ಮರೆಯಬೇಡಿ : ಎಲ್ಲ ದೇವಸ್ಥಾನದಲ್ಲಿಯೂ ದೇವರ ಎದುರಿನಲ್ಲಿ ಗಂಟೆಗಳನ್ನು ತೂಗಿಹಾಕಿರುತ್ತಾರೆ. ದೇವಸ್ಥಾನಕ್ಕೆ ಹೋದ ತಕ್ಷಣ ನೀವು ಕೂಡ ಮೊದಲು ಗಂಟೆಯನ್ನು ಹೊಡೆಯಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳಿ : ದೇವಸ್ಥಾನದಲ್ಲಿ ಪೂಜೆ ಮಾಡುವ ಸಮಯದಲ್ಲಿ ನಿಮ್ಮ ತಲೆಯ ಮೇಲೆ ಬಟ್ಟೆಯನ್ನು ಹಾಕಿಕೊಳ್ಳಲು ಮರೆಯಬೇಡಿ. ಇದರಿಂದ ಮೈಮೇಲೆ ಎರಡು ವಸ್ತ್ರವಿದ್ದ ಹಾಗೆ ಆಗುತ್ತದೆ. ಹೀಗೆ ಮಾಡುವುದರಿಂದ ಶೃದ್ಧೆ, ಭಕ್ತಿ ಎರಡೂ ಹೆಚ್ಚುತ್ತದೆ. ದೇವರಿಗೆ ನಮಸ್ಕರಿಸುವಾಗ, ದೊಡ್ಡವರಿಂದ ಆಶೀರ್ವಾದ ಪಡೆಯುವಾಗ ಹೀಗೆ ವಸ್ತ್ರಗಳನ್ನು ತಲೆಯ ಮೇಲೆ ಅಥವಾ ಹೆಗಲ ಮೇಲೆ ಹಾಕಿಕೊಳ್ಳುವ ಸಂಪ್ರದಾಯ ಹಲವು ಕಡೆ ರೂಢಿಯಲ್ಲಿದೆ.

ದೇವಸ್ಥಾನದಿಂದ ಬರಿಗೈನಲ್ಲಿ ಬರಬೇಡಿ : ಅಭಿಷೇಕ ಮಾಡಲೆಂದು ತೆಗೆದುಕೊಂಡು ಹೋದ ನೀರಿನ ಪಾತ್ರೆಯನ್ನು ಖಾಲಿ ಮಾಡಿಕೊಂಡು ಮನೆಗೆ ತರಬಾರದು. ಇದರಿಂದ ಮನೆಗೆ ಶ್ರೇಯಸ್ಸಾಗುವುದಿಲ್ಲ. ದೇವಸ್ಥಾನದಿಂದ ಬರುವಾಗ ಆ ಬಿಂದಿಗೆಯಲ್ಲಿ ತೀರ್ಥವನ್ನು ತೆಗೆದುಕೊಂಡು ಬನ್ನಿ. ತುಂಬಿದ ಪಾತ್ರೆಯನ್ನು ಮನೆಗೆ ತರುವುದರಿಂದ ದೇವರ ಆಶೀರ್ವಾದ ಯಾವಾಗಲೂ ಇರುತ್ತೆ ಮತ್ತು ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತೆ.

ದೇವಸ್ಥಾನದಲ್ಲಿ ದೀಪ ಹಚ್ಚಿ : ದೇವಸ್ಥಾನಕ್ಕೆ ಪೂಜೆಗೆಂದು ಹೋದಾಗ ಅಲ್ಲಿ ದೀಪ ಹಚ್ಚುವುದನ್ನು ಮರೆಯಬಾರದು. ದೇವರ ಮುಂದೆ ದೀಪ ಹಚ್ಚುವುದರಿಂದ ಆಸೆಗಳು ಈಡೇರುತ್ತವೆ ಮತ್ತು ಕೆಲಸದಲ್ಲಿಯೂ ಪ್ರಗತಿ ಸಿಗುತ್ತದೆ.

Hindu Rituals: ದೇವಾಲಯದ ಮುಖ್ಯ ಮೆಟ್ಟಿಲಿಗೆ ನಮಸ್ಕಾರ ಯಾಕೆ ಮಾಡ್ಬೇಕು?

ಪ್ರಸಾದ ಸ್ವೀಕರಿಸದೆ ಬರಬೇಡಿ : ಅನೇಕ ದೇವಸ್ಥಾನದಲ್ಲಿ ಪ್ರಸಾದ ವಿತರಣೆಯ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಪ್ರಸಾದ ಕೊಟ್ಟಾಗ ಅದರ ಸ್ವಲ್ಪ ಭಾಗವನ್ನಾದರೂ ಅಲ್ಲೇ ಕುಳಿತು ತಿನ್ನಬೇಕು. ದೇವರಿಗೆ ನೈವೇದ್ಯ ಮಾಡಿಕೊಟ್ಟ ಪ್ರಸಾದವನ್ನು ತಿನ್ನದೆ ಹಾಗೇ ಬರುವುದು ಶ್ರೇಯಸ್ಸಲ್ಲ. ಇದ್ರಿಂದ ಜೀವನದ ಕಷ್ಟಗಳು ದೂರವಾಗಿ ಸುಖ, ಸಮೃದ್ಧಿ ನೆಲೆಸುತ್ತದೆ.

ಈ ಜ್ಯೋತಿಷ್ಯ ಪರಿಹಾರ ಪಾಲಿಸಿದ್ರೆ ಪ್ರಮೋಷನ್ ಖಚಿತ

ಪೂಜೆಗಾಗಿ ಪ್ರತ್ಯೇಕವಾಗಿರಲಿ ಬಟ್ಟೆ : ದೇವಸ್ಥಾನದಲ್ಲಿ ನೀವು ಪೂಜೆ ಮಾಡುತ್ತಿರಿ ಎಂದಾದ್ರೆ ಅಥವಾ ಗರ್ಭಗುಡಿ ಪ್ರವೇಶ ಮಾಡುತ್ತೀರಿ ಎಂದಾದ್ರೆ ನೀವು ಪ್ರತ್ಯೇಕವಾದ ಬಟ್ಟೆಯನ್ನು ತೆಗೆದುಕೊಂಡು ಹೋಗಿ. ದೇವಸ್ಥಾನದಲ್ಲಿ ಕಾಲು, ಕೈ ತೊಳೆದು, ಶುದ್ಧ ಬಟ್ಟೆಯನ್ನು ಧರಿಸಿ ದೇವರ ಪೂಜೆ ಮಾಡಿ. 

PREV
Read more Articles on
click me!

Recommended Stories

Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು