
ಮಂಗಳವಾರ(Tuesday) ಹನುಮಂತನ ದಿನ. ಉಳಿದಂತೆ ತ್ರಯೋದಶಿ, ಚತುರ್ದಶಿ, ಶನಿವಾರ(Saturday)ದಂದು ಕೂಡಾ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶಿವನ ಅವತಾರವಾಗಿರುವ ಹನುಮಂತ ಹಿಂದೂಗಳ ಮೆಚ್ಚಿನ ದೇವರಲ್ಲಿ ಒಬ್ಬ. ಧೈರ್ಯ, ಬುದ್ಧಿವಂತಿಕೆ, ಸಾಹಸಕ್ಕೆ ಹೆಸರಾದವನು. ಸ್ವತಃ ಬ್ರಹ್ಮನಿಂದ ವೇದಾಧ್ಯಯನ ಮಾಡಿದವನು. ಆಂಜನೇಯನ ಕೃಪೆಯೊಂದಿದ್ದರೆ ಶನಿಯ ಆಟಗಳೂ ನಡೆಯುವುದಿಲ್ಲ ಎನ್ನಲಾಗುತ್ತದೆ. ಈ ಭಜರಂಗಬಲಿ ಒಲಿದರೆ ಎಲ್ಲ ಬಯಕೆಗಳೂ ಪೂರೈಸುತ್ತವೆ. ಹನುಮಂತನನ್ನು ಒಲಿಸಿಕೊಳ್ಳಲು ಆತನ ಭಕ್ತರು ಪೂಜೆಯಲ್ಲಿ ಈ ನಿಯಮಗಳನ್ನು ಗಮನಿಸಬೇಕು.
ಶ್ರೀರಾಮನ ಬಂಟನಾಗಿರುವ ಹನುಮಂತನನ್ನು ಯಾವುದೇ ಸಂದರ್ಭದಲ್ಲೂ ಪೂಜಿಸಬಹುದು, ಭಜಿಸಬಹುದು. ಸಂಪೂರ್ಣ ಶರಣಾದರೆ ಆತ ಬಹಳ ಬೇಗ ತನ್ನ ಭಕ್ತರ ಸಹಾಯಕ್ಕೆ ಧಾವಿಸುತ್ತಾನೆ. ಆದರೆ, ಮಂಗಳವಾರ ಆಂಜನೇಯನಿಗೆ ವಿಶೇಷವಾಗಿದೆ. ನೀವು ಯಾವುದೋ ಒಂದು ಗುರಿ ಸಾಧನೆಗಾಗಿ ಹನುಮಂತನನ್ನು ಪೂಜಿಸಬೇಕೆಂದರೆ ಪೂಜೆಯನ್ನು ಮಂಗಳವಾರ ಆರಂಭಿಸಿ. ನಂತರ ಪ್ರತಿದಿನ ಅದೇ ಗುರಿ ಸಾಧನೆಗೆ ಪ್ರಾರ್ಥಿಸಿ ಆತನ ಪೂಜೆ ಮುಂದುವರಿಸಬಹುದು.
ಯಾವ ರೂಪವನ್ನು ಪೂಜಿಸಬೇಕು?
ಆಂಜನೇಯನನ್ನು ಪೂಜಿಸುವಾಗ ಯಾವ ರೂಪವನ್ನು ಪೂಜಿಸಬೇಕು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಏಳಬಹುದು. ಇದು ನಿಮ್ಮ ಉದ್ದೇಶ ಅವಲಂಬಿಸಿ ಬದಲಾಗುತ್ತದೆ. ಅಂದರೆ ಮನಃಶಾಂತಿ(peace of mind)ಗಾಗಿ ನೀವು ಈ ಪೂಜೆ ಕೈಗೊಳ್ಳುತ್ತಿದ್ದರೆ ಆಗ ನೀವು ಧ್ಯಾನ ಮಾಡುವಾಗ ಎದುರಲ್ಲಿ ಆಂಜನೇಯನ ಮೂರ್ತಿ ಇಲ್ಲವೇ ಯಾವುದೇ ಫೋಟೋ ಇಟ್ಟುಕೊಳ್ಳಬೇಕು. ನಿಮಗೆ ಸಂತೋಷ(happiness), ಸಮೃದ್ಧಿ ಬೇಕಾಗಿದ್ದರೆ, ಆಗ ಪಂಚಮುಖಿ ಆಂಜನೇಯನ ಫೋಟೋವನ್ನು ಪೂಜಿಸಬೇಕು. ಜೀವನದ ಯಾವುದೋ ನಿರ್ದಿಷ್ಟ ಸಮಸ್ಯೆ ಕಳೆಯಲಿ ಎಂದಾಗಿದ್ದರೆ ಏಕಮುಖಿ ಆಂಜನೇಯನ ಫೋಟೋವಿಟ್ಟು ಪೂಜಿಸಿ. ಯಾವುದೋ ವಿಷಯದಲ್ಲಿ ಯಶಸ್ಸಿ(success)ಗಾಗಿ ಪೂಜಿಸುತ್ತಿದ್ದರೆ ಆಗ ಆಶೀರ್ವಾದ ಮಾಡುತ್ತಿರುವ ಆಂಜನೇಯನ ಪುಟ್ಟ ಮೂರ್ತಿಯನ್ನಿಟ್ಟು ಪೂಜಿಸಿ.
Astrology Tips : ಮನೆಯ ಅಂದ ಹೆಚ್ಚಿಸುವ ಗುಲಾಬಿಯಲ್ಲಿದೆ ಅದೃಷ್ಟ ಬದಲಿಸುವ ಶಕ್ತಿ
ಆಂಜನೇಯ ಪೂಜೆಗೆ ನಿಯಮಗಳು(Rules)
ಒಲಿಸಿಕೊಳ್ಳುವ ಮಾರ್ಗ