ಭಾರತದಲ್ಲಿ ಎಷ್ಟು ದೇವಸ್ಥಾನವಿದೆ ಎಂಬುದನ್ನು ಲೆಕ್ಕ ಹಾಕೋದೆ ಕಷ್ಟ. ಗಲ್ಲಿಯಲ್ಲಿ ಮೂರು ನಾಲ್ಕು ದೇವಸ್ಥಾನಗಳನ್ನು ನಾವು ಕಾಣ್ಬಹುದು. ಆದ್ರೆ ಕೆಲವೊಂದು ದೇವಸ್ಥಾನ ಪ್ರಸಿದ್ಧಿ ವಿಶ್ವಮಟ್ಟದಲ್ಲಿದ್ದು, ಶ್ರೀಮಂತಿಕೆಯ ಹೆಗ್ಗುರುತಾಗಿದೆ.
ಭಾರತ ದೇವಾಲಯಗಳ ತವರು. ಶ್ರೀಮಂತ ಧಾರ್ಮಿಕ ಪರಂಪರೆಯನ್ನು ಭಾರತ ಹೊಂದಿದೆ. ಪ್ರಾಚೀನ ಕಾಲದಿಂದಲೂ ಭಾರತವನ್ನು ಗೋಲ್ಡನ್ ಬರ್ಡ್ ಎಂದೇ ಕರೆಯಲಾಗುತ್ತಿದೆ. ಆದ್ರೆ ಬ್ರಿಟಿಷರ ದಾಳಿ ನಂತ್ರ ಭಾರತದ ದೇವಾಲಯಗಳು ಬರಿದಾದವು. ಬ್ರಿಟಿಷರು, ಸುಂದರ ಕೆತ್ತನೆಯ, ಭವ್ಯ ದೇವಾಲಯಗಳನ್ನು, ಅಧ್ಬುತ ದೇವಸ್ಥಾನದ ಕಟ್ಟಡಗಳನ್ನು ನೆಲಕ್ಕುರುಳಿಸಿದ್ರು. ಅವರು ಕಟ್ಟಡಗಳನ್ನು ನೆಲಸಮ ಮಾಡಿದ್ರೆ ಹೊರತು ಭಾರತೀಯರ ಭಾವನೆ, ನಂಬಿಕೆಯನ್ನಲ್ಲ. ಭಾರತೀಯರು ಎಂದೆದಿಗೂ ದೇವರ ಆರಾಧಕರು. ಅದೇ ಕಾರಣಕ್ಕೆ ಭಾರತದಲ್ಲಿ ದೇವಾನುದೇವತೆಗಳ ದೇವಸ್ಥಾನಗಳು ಸಾಕಷ್ಟಿವೆ. ಕೆಲ ದೇವಸ್ಥಾನ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದೇವಸ್ಥಾನಕ್ಕೆ ದೇಶ – ವಿದೇಶಗಳಿಂದ ಕೋಟ್ಯಾಂತರ ರೂಪಾಯಿ ಹಣ ಕಾಣಿಕೆ ರೂಪದಲ್ಲಿ ಬರುತ್ತದೆ. ನಾವಿಂದು ಭಾರತದಲ್ಲಿರುವ ಅತ್ಯಂತ ಶ್ರೀಮಂತ ದೇವಸ್ಥಾನಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಪದ್ಮನಾಭ (Padmanabha) ದೇವಸ್ಥಾನ: ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭ ಸ್ವಾಮಿ ದೇವಾಲಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ದೇವಸ್ಥಾನದಲ್ಲಿ ಚಿನ್ನದಿಂದ ಮಾಡಿದ ಶಿಲ್ಪಗಳನ್ನು ನೀವು ನೋಡ್ಬಹುದು. ವಜ್ರಗಳು, ಚಿನ್ನದ ಆಭರಣಗಳು ಪದ್ಮನಾಭನ ಬಳಿ ಇವೆ. ಈ ದೇವಾಲಯದ 6 ಬಾಗಿಲುಗಳನ್ನು ತೆರೆದಾಗ ಈ ದೇವಾಲಯ ಚರ್ಚೆಗೆ ಬಂತು. ಯಾಕೆಂದ್ರೆ ಅಲ್ಲಿ ಸುಮಾರು 20 ಶತಕೋಟಿ ಡಾಲರ್ ಮೌಲ್ಯದ ನಿಧಿ ಕಂಡುಬಂದಿತ್ತು. ಇದರಲ್ಲಿ ಚಿನ್ನ, ವಜ್ರಗಳು ಮತ್ತು ಅಮೂಲ್ಯ ಆಭರಣಗಳು ಸೇರಿದ್ದವು. ವಾರ್ಷಿಕವಾಗಿ 1000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕಾಣಿಕೆಗಳು ಇಲ್ಲಿಗೆ ಬರುತ್ತವೆ. ದೇವಸ್ಥಾನದಲ್ಲಿ ಪ್ರತಿದಿನ 150,000 ಲಡ್ಡುಗಳನ್ನು ತಯಾರಿಸಲಾಗುತ್ತದೆ. ಇದರಿಂದ ದೇವಸ್ಥಾನವು ವಾರ್ಷಿಕವಾಗಿ 1 ಕೋಟಿ ರೂಪಾಯಿ ಗಳಿಸುತ್ತದೆ.
ರಾಮರಾಜ್ಯದಲ್ಲಿ ತೆರಿಗೆ ಪದ್ಧತಿ ಹೇಗಿತ್ತು? ತುಳಸಿದಾಸರು ಹೇಳ್ತಾರೆ ಕೇಳಿ..
ತಿರುಪತಿ ಬಾಲಾಜಿ ದೇವಸ್ಥಾನ: ದೇಶದ ಎರಡನೇ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ತಿರುಪತಿ ಬಾಲಾಜಿ ದೇವಸ್ಥಾನಕ್ಕಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ತಿರುಪತಿಯಲ್ಲಿ ನೆಲೆ ನಿಂತಿರುವ ವೆಂಕಟೇಶ್ವರನ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಭಕ್ತರು ಹೋಗ್ತಾರೆ. 2.5 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ತಿರುಪತಿ ಹೊಂದಿದ್ದಾನೆ.
ಕಡಲ್ಗಳ್ಳರ ಅನುಭವ ಪಡೀಬೇಕಾ? ಇಲ್ಲಿ ಸಿಗಲಿದೆ ಅವಕಾಶ
ಶಿರಡಿ ಸಾಯಿಬಾಬಾ: ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಾಲಯ ದೇಶದ ಶ್ರೀಮಂತ ದೇವಾಲಯಗಳಲ್ಲಿ ಸ್ಥಾನ ಪಡೆದಿದೆ. ವಿದೇಶಿ ಕರೆನ್ಸಿಯೊಂದಿಗೆ ಚಿನ್ನ, ಬೆಳ್ಳಿ, ವಜ್ರಗಳನ್ನು ಇಲ್ಲಿಗೆ ಬರುವ ಭಕ್ತರು ಕಾಣಿಕೆ ರೂಪದಲ್ಲಿ ಹಾಕೋದನ್ನು ನೀವು ನೋಡ್ಬಹುದು. ಇಲ್ಲಿನ ಒಟ್ಟೂ ಸಂಪತ್ತು 1800 ಕೋಟಿ ಎನ್ನಲಾಗಿದೆ.
ಸಿದ್ಧಿವಿನಾಯಕ ದೇವಾಲಯ: ದೇಶದ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯದ ಹೆಸರಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಅನೇಕರು ವಿನಾಯಕನ ದರ್ಶನ ಪಡೆಯಲು ಇಲ್ಲಿಗೆ ಬರ್ತಾರೆ. ಈ ದೇವಾಲಯವು 3.7 ಕೆಜಿ ಚಿನ್ನದ ಲೇಪನವನ್ನು ಹೊಂದಿದ್ದು.
ಮೀನಾಕ್ಷಿ ದೇವಾಲಯ: ದಕ್ಷಿಣ ಭಾರತದ ಮಧುರೈನಲ್ಲಿರುವ ಮೀನಾಕ್ಷಿ ದೇವಾಲಯ, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿದಿನ 20-30 ಸಾವಿರ ಭಕ್ತರು ದರ್ಶನಕ್ಕೆ ಬರುತ್ತಾರೆ. ದೇಗುಲದ ಆಸ್ತಿಯಲ್ಲಿ 380 ಕೆಜಿ ಚಿನ್ನ, 4428 ಕೆಜಿ ಬೆಳ್ಳಿ, ದೊಡ್ಡ ಮೊತ್ತದ ವಿದೇಶಿ ಕರೆನ್ಸಿ ಸೇರಿದೆ.
ವೈಷ್ಣೋ ದೇವಿ ದೇವಸ್ಥಾನ: ಇದು ಕೂಡ ಶ್ರೀಮಂತ ದೇವಸ್ಥಾನವಾಗಿದೆ. ಭಾರತದ ಜಮ್ಮುವಿನಲ್ಲಿರುವ ಶಕ್ತಿ ಪೀಠದ ದೇವಾಲಯಗಳಲ್ಲಿ ಒಂದು. ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಪ್ರಕಾರ, 2000 ರಿಂದ 2020 ರವರೆಗಿನ ಇಪ್ಪತ್ತು ವರ್ಷಗಳಲ್ಲಿ ಮಾತೆಯ ಆಸ್ಥಾನಕ್ಕೆ 1800 ಕೆಜಿ ಚಿನ್ನ, 4700 ಕೆಜಿ ಬೆಳ್ಳಿ ಮತ್ತು 2000 ಕೋಟಿ ರೂಪಾಯಿ ಬಂದಿದೆ.