ಬಾಂಬೆ ಐಐಟಿ ಪದವೀಧರ: ಕೀರ್ಲೋಸ್ಕರ್‌ನಲ್ಲಿ ಲಕ್ಷಗಟ್ಟಲೇ ಸಂಬಳದ ಕೆಲಸ ಬಿಟ್ಟು ಸನ್ಯಾಸಿಯಾಗಿದ್ದೇಕೆ?

By Anusha Kb  |  First Published Jan 31, 2024, 5:54 PM IST

ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ಮಾಡಿದ ಮೇಲೆ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂಬುದು ಬಹುತೇಕರ ಕನಸು. ಆದರೆ ಇವರು ಐಐಟಿ ಪದವೀಧರರಾಗಿ ಸಂಸ್ಥೆಯೊಂದರಲ್ಲಿ ಲಕ್ಷಾಂತರ ವೇತನ ಸಿಗುತ್ತಿದ್ದ ಹುದ್ದೆಯಲ್ಲಿದ್ದು ಕೊನೆಗೆ ಎಲ್ಲವನ್ನು ಬಿಟ್ಟು ಆಧ್ಮಾತ್ಮದತ್ತ ಒಲವು ತೋರಿದವರು. ಅವರೇ ಇಸ್ಕಾನ್‌ನ ಗೌರಂಗ್ ದಾಸ್ ಅವರ ಬಗ್ಗೆ ಡಿಟೇಲ್ ಸ್ಟೋರಿ.


ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ಮಾಡಿದ ಮೇಲೆ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂಬುದು ಬಹುತೇಕರ ಕನಸು. ಆದರೆ ಇವರು ಐಐಟಿ ಪದವೀಧರರಾಗಿ ಸಂಸ್ಥೆಯೊಂದರಲ್ಲಿ ಲಕ್ಷಾಂತರ ವೇತನ ಸಿಗುತ್ತಿದ್ದ ಹುದ್ದೆಯಲ್ಲಿದ್ದು ಕೊನೆಗೆ ಎಲ್ಲವನ್ನು ಬಿಟ್ಟು ಆಧ್ಮಾತ್ಮದತ್ತ ಒಲವು ತೋರಿದವರು. ಅವರೇ ಇಸ್ಕಾನ್‌ನ ಗೌರಂಗ್ ದಾಸ್ ಅವರ ಬಗ್ಗೆ ಡಿಟೇಲ್ ಸ್ಟೋರಿ.

ಪ್ರತಿ ವರ್ಷವೂ ಭಾರತದಲ್ಲಿ ಲಕ್ಷಾಂತರ  ವಿದ್ಯಾರ್ಥಿಗಳು ತಮ್ಮ ಪಿಯುಸಿ ಶಿಕ್ಷಣ ಮುಗಿಸಿದ ನಂತರ ಇಂಜಿನಿಯರಿಂಗ್ ಮಾಡುವುದಕ್ಕಾಗಿ ದೇಶದ ವಿವಿಧ ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶ ಪಡೆಯಲು ಇನ್ನಿಲ್ಲದ ಸಿದ್ಧತೆ ನಡೆಸುತ್ತಾರೆ. ಐಐಟಿ ಜೆಇಇ ಪರೀಕ್ಷೆ ಮುಗಿಸಿ ಐಐಟಿಯಲ್ಲಿ ಪ್ರವೇಶ ಪಡೆದು ಇಂಜಿನಿಯರಿಂಗ್ ಶಿಕ್ಷಣ ಮುಗಿಸಬೇಕು ಎಂಬುದು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿದೆ. ಇದಕ್ಕಾಗಿ ದೇಶದ ಅತ್ಯಂತ ಕಠಿಣ ಪರೀಕ್ಷೆ ಎನಿಸಿರುವ ಜೆಇಇ ಪರೀಕ್ಷೆ ಪಾಸು ಮಾಡಲು ವಿದ್ಯಾರ್ಥಿಗಳು ಇನ್ನಿಲ್ಲದ ಶ್ರಮ ಪಡುತ್ತಾರೆ. ಆದರೆ ಐಐಟಿಯಲ್ಲಿ ಶಿಕ್ಷಣ ಪಡೆದ ಈ ಪ್ರತಿಭಾನ್ವಿತ ವಿದ್ಯಾರ್ಥಿಗಳು ಒಂದೋ ದೇಶದಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲೋ ಅಥವಾ ವಿದೇಶದಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲೋ ಕೆಲಸ ಗಿಟ್ಟಿಸುತ್ತಾರೆ. ಆದರೆ ಹೀಗೆ ಐಐಟಿ ಪದವೀಧರರಾದ ಪ್ರತಿಭಾನ್ವಿತರೊಬ್ಬರು ತಮ್ಮ ಬದುಕಿನ ಮಾರ್ಗವನ್ನು ಬದಲಾಯಿಸಿಕೊಂಡು ಸನ್ಯಾಸಿಯಾಗಿದ್ದಾರೆ ಅವರ ಕತೆ ಇಲ್ಲಿದೆ. 

Tap to resize

Latest Videos

ಐಐಟಿ ಮದ್ರಾಸ್‌ಗೆ 110 ಕೋಟಿ ರೂಪಾಯಿ ಗಿಫ್ಟ್‌ ನೀಡಿದ ಮಾಜಿ ವಿದ್ಯಾರ್ಥಿ!

ಹೌದು ನಾವು ಹೇಳುತ್ತಿರುವುದು ಐಐಟಿ ಇಂಜಿಯರಾಗಿದ್ದು ಲಕ್ಷ ಗಳಿಸುವ ಉದ್ಯೋಗದಲ್ಲಿದ್ದು, ಕೆಲಸ ತೊರೆದು ಸನ್ಯಾಸಿಯಾದ ಗೌರಂಗ್ ದಾಸ್ ಅವರ ಬಗ್ಗೆ ಐಐಟಿ ಬಾಂಬೆ ಪದವೀಧರರಾಗಿದ್ದ ಇವರು ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಅಧಿಕ ವೇತನದ ಉದ್ಯೋಗದಲ್ಲಿದ್ದರು. ಮನಸ್ಸು  ಮಾಡಿದ್ದರೆ ಇಂದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೋಟ್ಯಾಂತರ ರೂಪಾಯಿ ಗಳಿಸಬಹುದಿತ್ತು. ಆದರೆ ಅದೆಲ್ಲವನ್ನು ತೊರೆದ ಅವರು ಇಂದು ಸಂನ್ಯಾಸಿಯಾಗಿದ್ದಾರೆ. ಬರೀ ಅಷ್ಟೇ ಅಲ್ಲ, ಜೀವನದ ಬಗ್ಗೆ ಬೋಧನೆ ಮಾಡುವ ಇವರು ನಾಯಕತ್ವ ಸಲಹೆಗಾರ, ಕಾರ್ಪೊರೇಟ್ ತರಬೇತುದಾರ, ಸ್ಪೂರ್ತಿದಾಯಕ ಭಾಷಣಕಾರ, ಪರಿಸರ ನಾಯಕ, ಸಮಾಜ ಸುಧಾರಕ, ಆಧ್ಯಾತ್ಮಿಕ ನಾಯಕ, ಶಿಕ್ಷಕ ಮತ್ತು ಶಿಕ್ಷಣತಜ್ಞ ಎಂಬ ಸಮಾಜಮುಖಿಯೆನಿಸುವ ಎಲ್ಲಾ ಹುದ್ದೆಗಳನ್ನು ಜೊತೆಯಾಗಿ ನಿಭಾಯಿಸುತ್ತಿದ್ದಾರೆ. 

ಐಐಟಿ ಡ್ರಾಪ್ಔಟ್ ಅವಳಿಗಳು, 15000 ಕೋಟಿ ಸಂಪತ್ತು ಹೊಂದಿರುವ ಶ್ರೀಮಂತ ಗೂಗಲ್ ಉದ್ಯೋಗಿ

ಸಂನ್ಯಾಸಿಯಾಗುವುದಕ್ಕೂ ಮೊದಲು ಕಿರ್ಲೋಸ್ಕರ್‌ ಸಂಸ್ಥೆಯಲ್ಲಿ ಅತ್ಯಧಿಕ ವೇತನದ ಹುದ್ದೆಯಲ್ಲಿ ಕೆಲಸ ಮಾಡಿದ್ದ ಇವರು ನಂತರದಲ್ಲಿ ಮುಂಬೈ ಇಸ್ಕಾನ್ ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಿಕೊಂಡರು. ಪ್ರಸ್ತುತ ಗೌರಂಗಾ ದಾಸ್ ಅವರು ಇಸ್ಕಾನ್‌ನ ಆಡಳಿತ ಮಂಡಳಿ ಆಯೋಗ (GBC), ಇಸ್ಕಾನ್ ಜಿಬಿಸಿ ಕಾಲೇಜಿನ ಟ್ರಸ್ಟಿ, ಜಿಬಿಸಿ ಸಾಂಸ್ಥಿಕ ಅಭಿವೃದ್ಧಿ ಸಮಿತಿ ಮತ್ತು ಜಿಬಿಸಿ ನಾಮನಿರ್ದೇಶನ ಸಮಿತಿಯ ಸದಸ್ಯ, ಭಕ್ತರ ಆರೈಕೆ ಮತ್ತು ದೇವಾಲಯ ಅಭಿವೃದ್ಧಿ ಮತ್ತು ವಿಶ್ವಾದ್ಯಂತ ಇಸ್ಕಾನ್ ದೇವಾಲಯಗಳ ಆಡಳಿತ ವಿಭಾಗಗಳ ವಿಭಾಗೀಯ ನಿರ್ದೇಶಕರಾಗಿ ಇಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಅವರು ಗೋವರ್ಧನ್ ಇಕೋವಿಲೇಜ್‌ನ ನಿರ್ದೇಶಕರಾಗಿದ್ದಾರೆ. ಕೋಲ್ಕತ್ತಾದ ಭಕ್ತಿವೇದಾಂತ ಸಂಶೋಧನಾ ಕೇಂದ್ರದ (BRC) ಟ್ರಸ್ಟಿ ಮತ್ತು ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವ್ಯವಹಾರದಲ್ಲಿ 17 ಸಾರಿ ಸೋತರೂ ಎದ್ದು ನಿಂತ ವ್ಯಕ್ತಿ, ಈಗ ಕಂಪನಿ ಮೌಲ್ಯ 40 ಸಾವಿರ ಕೋಟಿ!

click me!