ನವಗ್ರಹಗಳಲ್ಲಿ ವಿವಾಹ ಸಂದರ್ಭದಲ್ಲಿ ಮುಖ್ಯವಾಗಿ ಮೂರು ಗ್ರಹಗಳು (Planet) ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜಾತಕದಲ್ಲಿ ಗುರು, ಶುಕ್ರ ಮತ್ತು ಮಂಗಳ ಗ್ರಹಗಳ ಸ್ಥಿತಿ ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ಅವುಗಳ ಸ್ಥಿತಿಯ ಆಧಾರದ ಮೇಲೆ ವಿವಾಹ (Marriage) ಮತ್ತು ದಾಂಪತ್ಯ ಜೀವನ (Married Life) ಅವಲಂಬಿತವಾಗಿರುತ್ತದೆ.
ಪುರಾಣಗಳ ಪ್ರಕಾರ ಮದುವೆ (Marriage)ಯು ಜನ್ಮಾಂತರಗಳ ಬಂಧವೆಂದು ಹೇಳಲಾಗುತ್ತದೆ. ಆದರೆ ಕಂಕಣ ಬಲ ಕೂಡಿ ಬರದೇ, ಗ್ರಹಗಳ ಸ್ಥಿತಿ ಉತ್ತಮವಾಗಿರದಿದ್ದರೆ ಮದುವೆ ನಡೆಯುವುದಿಲ್ಲ. ಮದುವೆಯ ವಯಸ್ಸಾದರೂ ಕೆಲವರಿಗೆ ಮದುವೆಯ ಯೋಗ ಕೂಡಿ ಬರುವುದಿಲ್ಲ. ಅಂಥ ಸಮಯದಲ್ಲಿ ಜಾತಕ ತೋರಿಸಿದಾಗ, ಮದುವೆಗೆ ಮುಖ್ಯವಾಗಿ ಬೇಕಾಗುವ ಗ್ರಹ (Planet)ಗಳ ಸ್ಥಿತಿಯನ್ನು ಜ್ಯೋತಿಷಿಗಳು ಪರಿಶೀಲಿಸುತ್ತಾರೆ. ಅವುಗಳ ಸ್ಥಿತಿಯ ಆಧಾರದ ಮೇಲೆ ವಿವಾಹ ಯೋಗ ಕೂಡಿ ಬರಲು ಆಯಾ ಗ್ರಹಗಳಿಗೆ ಸಂಬಂಧಿಸಿದ ಪರಿಹಾರವನ್ನು ತಿಳಿಸುತ್ತಾರೆ. ಹಾಗಾಗಿ ವಿವಾಹಕ್ಕೆ ಮುಖ್ಯವಾಗಿ ಬೇಕಾಗುವ ಗ್ರಹಗಳ ಬಗ್ಗೆ ತಿಳಿಯೋಣ...
ಕಂಕಣ ಬಲ ಕೂಡಿ ಬರಲು ಗುರುಬಲವಾಗಿರಬೇಕು: ವಿವಾಹಕ್ಕೆ ಮುನ್ನ ಕನ್ಯೆ ಮತ್ತು ವರನ ಜಾತಕವನ್ನು ಹೋಲಿಕೆ ಮಾಡಿ ನೋಡಲಾಗುತ್ತದೆ. ಇಬ್ಬರ ಜಾತಕದಲ್ಲೂ ಗುರುಗ್ರಹದ ಸ್ಥಿತಿಯನ್ನು ನೋಡಲಾಗುತ್ತದೆ. ವಿವಾಹವಾಗಲು ಗುರು ಗ್ರಹ ಬಲವಾಗಿರಬೇಕು. ಗುರು ಗ್ರಹವು ಪಾಪ ಗ್ರಹಗಳ ಕೆಟ್ಟ ದೃಷ್ಟಿಯಿಂದ ಮುಕ್ತವಾಗಿದ್ದರೆ ಮಾತ್ರ ದಾಂಪತ್ಯ ಜೀವನ ಸುಖವಾಗಿ ಸಾಗಲು ಸಾಧ್ಯವಾಗುತ್ತದೆ.
ಮುಖ್ಯವಾಗಿ ಗುರುಗ್ರಹದ ಶುಭದೃಷ್ಟಿ ಸಪ್ತಮ ಮನೆಯಲ್ಲಿದ್ದರೆ ವಿವಾಹವಾದ ನಂತರ ತೊಂದರೆ ತಾಪತ್ರಯಗಳು ಇದ್ದರೂ ದಂಪತಿಗಳು ಬೇರೆಯಾಗುವ ಸ್ಥಿತಿ ಬರುವುದಿಲ್ಲ. ಗುರುವು ಉಚ್ಛ ಸ್ಥಾನದಲ್ಲಿದ್ದರೆ ಅಂಥವರ ವೈವಾಹಿಕ ಜೀವನ ಸುಖವಾಗಿರುತ್ತದೆ. ಅಷ್ಟೇ ಅಲ್ಲದೆ ಗುರು ಗ್ರಹವು ಸಂತಾನ ಕಾರಕ ಗ್ರಹ ಕೂಡಾ ಆಗಿದೆ. ಹಾಗಾಗಿ ವಿವಾಹಕ್ಕೆ ಗುರು ಗ್ರಹದ ಪಾತ್ರ ಅತ್ಯಂತ ಮುಖ್ಯವಾಗುತ್ತದೆ.
ವಿವಾಹ ವಿಳಂಬಕ್ಕೂ ಕಾರಣ ಗುರುಗ್ರಹ: ಜಾತಕದಲ್ಲಿ ಗುರು ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ವಿವಾಹ ವಿಳಂಬವಾಗುತ್ತದೆ. ಇದರ ಜತೆಗೆ ವಿವಾಹದ ನಂತರ ಈ ಸಮಸ್ಯೆ ಎದುರಾದರೆ ಅದು ಸಂತಾನದ ಮೇಲೂ ಪರಿಣಾವನ್ನುಂಟು ಮಾಡುತ್ತದೆ. ಸರಿಯಾದ ಸಮಯಕ್ಕೆ ಸಂತಾನ ಆಗದಿದ್ದರೆ ಅದನ್ನು ಸುಖೀ ದಾಂಪತ್ಯ ಜೀವನವಲ್ಲ ಎಂದೇ ಜಾತಕದ (ಕುಂಡಲಿ) ಮೂಲಕ ನಿರ್ಧರಿಸಲಾಗುತ್ತದೆ.
ಮದುವೆ ನಂತರ ಮೊದಲು ಜಾತಕದಲ್ಲಿ ಹುಡುಕುವ ಅಂಶವೇ ಸಂತಾನಪ್ರಾಪ್ತಿ ಯೋಗ. ಗುರು ಪಾಪಗ್ರಹದ ಪ್ರಭಾವದಲ್ಲಿದ್ದರೂ ಅಥವಾ ಪಾಪಗ್ರಹದ ರಾಶಿಯಲ್ಲಿ ಕುಳಿತಿದ್ದರೂ ಅಂಥವರ ದಾಂಪತ್ಯದಲ್ಲಿ ಅನೇಕ ಪ್ರಕಾರದ ಸಮಸ್ಯೆ (Problem)ಗಳು ಎದುರಾಗುವ ಸಂಭವ ಇದೆ.
ಇದನ್ನು ಓದಿ : Chanakya Neeti: ಇಂಥ ಸಂಗಾತಿ ಇದ್ದರೆ ದುರದೃಷ್ಟವೂ ಅದೃಷ್ಟವಾಗುತ್ತೆ..
ವಿವಾಹಕಾರಕ ಶುಕ್ರಗ್ರಹ: ಭೌತಿಕ ಸುಖದ ಕಾರಕ ಗ್ರಹ ಶುಕ್ರ ಗ್ರಹ. ಶುಕ್ರ ಗ್ರಹದ ಸ್ಥಿತಿ ಉಚ್ಛವಾಗಿದ್ದರೆ ವಿವಾಹದ ಸಕಲ ಸುಖಗಳು ಪ್ರಾಪ್ತವಾಗುತ್ತದೆ. ಅದೇ ರೀತಿ ಶುಕ್ರ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಮದುವೆಗೆ ತೊಂದರೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ ವಿವಾಹದ ನಂತರ ಸಹ ಸಮಸ್ಯೆಗಳು ಎದುರಾಗುತ್ತವೆ.
ಸುಖೀ ದಾಂಪತ್ಯ ಜೀವನಕ್ಕೆ ವಧು ಮತ್ತು ವರರಿಬ್ಬರ ಜಾತಕದಲ್ಲೂ ಶುಕ್ರ ಗ್ರಹವು ಪೂರ್ಣ ಪ್ರಮಾಣದಲ್ಲಿ ಪಾಪಗ್ರಹಗಳಿಂದ ಮುಕ್ತವಾಗಿರುವುದು ಅವಶ್ಯಕ. ಹಾಗಾಗಿ ಶುಕ್ರ ಗ್ರಹವು ಪೂರ್ಣಪ್ರಮಾಣದಲ್ಲಿ ಉಚ್ಛ ಸ್ಥಿತಿಯಲ್ಲಿ ಇರುವುದು ವಿವಾಹಕ್ಕೆ ಅತೀ ಅವಶ್ಯಕವಾಗಿರುತ್ತದೆ.
ಶುಕ್ರ ಗ್ರಹದ ಸ್ಥಿತಿ ಉತ್ತಮವಾಗಿರದಿದ್ದರೆ ಪರಸಂಬಂಧ ಸಾಧ್ಯತೆ: ಒಂದು ಜಾತಕದಲ್ಲಿ ಶುಕ್ರನು ಯಾವುದೇ ರೀತಿಯ ಅಶುಭ ಸ್ಥಿತಿಯಲ್ಲಿದ್ದರೆ ಪತಿ ಅಥವಾ ಪತ್ನಿಯ ಸಂಬಂಧದಲ್ಲಿ ಬಿರುಕು ಮೂಡಿ ಇನ್ನೊಂದು ಸಂಬಂಧದತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಉತ್ತಮ ದಾಂಪತ್ಯ ಜೀವನಕ್ಕೆ ಶುಕ್ರಗ್ರಹವು ಶುಭ ಸ್ಥಾನದಲ್ಲಿರುವುದು ಅತ್ಯಂತ ಮುಖ್ಯವಾಗುತ್ತದೆ.
ಇದನ್ನು ಓದಿ : Best Cooks: ಈ 5 ರಾಶಿಯವರು ಅಡುಗೆಗೆ ನಿಂತರೆ ಭೀಮಸೇನ ನಳಮಹಾರಾಜರೇ!
ಉತ್ತಮ ವೈವಾಹಿಕ ಜೀವನಕ್ಕೆ ಮಂಗಳ ಗ್ರಹ ಮುಖ್ಯ: ಜಾತಕ ಮೇಳಾಮೇಳಿ ಮಾಡುವ ಸಂದರ್ಭದಲ್ಲಿ ಮಂಗಳ ಗ್ರಹ ಸ್ಥಿತಿಯನ್ನು ಮುಖ್ಯವಾಗಿ ಪರಿಶೀಲಿಸುತ್ತಾರೆ. ಮಂಗಳ ಗ್ರಹವು ಯಾವ ಮನೆಯಲ್ಲಿದ್ದು, ಯಾವ ಗ್ರಹದ ದೃಷ್ಟಿ ಇದರ ಮೇಲೆ ಇದೆ. ಯಾವುದರ ಜೊತೆ ಸಹಯೋಗವಿದೆ ಎಂಬುದನ್ನು ಮುಖ್ಯವಾಗಿ ಗಮನಿಸುತ್ತಾರೆ. ಜಾತಕದಲ್ಲಿ ಮಂಗಳ ಗ್ರಹದ ಸ್ಥಿತಿ ತಿಳಿಯದೇ ವಿವಾಹವಾದರೆ ಅನೇಕ ಕಷ್ಟಗಳನ್ನು ಎದುರಿಸುವ ಸಂದರ್ಭ ಒದಗಿ ಬರುತ್ತದೆ. ಮಂಗಳ ಗ್ರಹದ ಸಹಯೋಗವಿದ್ದರೆ ಮಾಂಗಲಿಕ (ಕುಜದೋಷ, ಅಂಗಾರಕ ದೋಷ, ಮಂಗಳಗ್ರಹ ದೋಷ) ಎಂದು ಕರೆಯಲಾಗುತ್ತದೆ. ಆ
ದರೆ, ಹೀಗಿದ್ದಾಗ ಅದೇ ಯೋಗದ ವರ/ವಧುವೇ ಬೇಕಾಗುತ್ತಾರೆ. ಜಾತಕದಲ್ಲಿ ಮಂಗಳನು ಲಗ್ನದಲ್ಲಿ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ದ್ವಾದಶ ಮನೆಯಲ್ಲಿದ್ದರೆ ಅಂಥವರು ಮಾಂಗಲಿಕ ದೋಷಕ್ಕೊಳಪಟ್ಟಿರುತ್ತಾರೆ. ಇದೆಲ್ಲವೂ ಇದ್ದೂ ಮಂಗಳ ಗ್ರಹದ ಕಾರಣದಿಂದಾಗಿ ವೈವಾಹಿಕ ಜೀವನದ ಸುಖಸಮೃದ್ಧಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸುಮಾರು ಬಾರಿ ಜಾತಕದಲ್ಲಿ ಮಾಂಗಲಿಕ ಯೋಗವಿದ್ದರೂ ಬೇರೆ ಗ್ರಹಗಳ ಯೋಗದಿಂದ ಇದರ ಅಶುಭತೆ ಕಡಿಮೆಯಾಗುತ್ತದೆ. ಹಾಗಾಗಿ ವಿವಾಹಕ್ಕೆ ಮುನ್ನ ಜಾತಕದಲ್ಲಿ ಮಂಗಳ ಗ್ರಹದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳುವುದು ಅವಶ್ಯಕ.