ಡ್ಯೂಟಿ ಕಡಿಮೆ ಮಾಡು ದೇವರೇ, ಬಾಳೆ ಹಣ್ಣು ತೇರಿಗೆ ಸಮರ್ಪಿಸಿ ಪೊಲೀಸಪ್ಪನ ಪ್ರಾರ್ಥನೆ

Published : Feb 13, 2025, 10:28 PM ISTUpdated : Feb 13, 2025, 10:40 PM IST
ಡ್ಯೂಟಿ ಕಡಿಮೆ ಮಾಡು ದೇವರೇ, ಬಾಳೆ ಹಣ್ಣು ತೇರಿಗೆ ಸಮರ್ಪಿಸಿ ಪೊಲೀಸಪ್ಪನ ಪ್ರಾರ್ಥನೆ

ಸಾರಾಂಶ

ದೇವರೇ ಕಾಪಾಡು, ನನಗೆ ಬಂದೋಬಸ್ತ್ ಡ್ಯೂಟಿ ಕಡಿಮೆ ಮಾಡು. ಇದು ಪೊಲೀಸಪ್ಪ ರಥೋತ್ಸವದಲ್ಲಿ ಬಾಳೆ ಹಣ್ಣಿನ ಮೇಲೆ ಬೆರದು ತೇರಿಗೆ ಸಮರ್ಪಿಸಿದ ಬೇಡಿಕೆ. ಇದೀಗ ಪೊಲೀಸಪ್ಪನ ಈ ಪಾರ್ಥನೆ ಭಾರಿ ಸದ್ದು ಮಾಡುತ್ತಿದೆ.

ಚಾಮರಾಜನಗರ(ಫೆ.13) ಲಕ್ಷ್ಮಿನಾರಾಯಣಸ್ವಾಮಿ ರಥೋತ್ಸವದಲ್ಲಿ ಭಕ್ತರು ತಮ್ಮ ಪಾರ್ಥನೆ, ಬೇಡಿಕೆಗಳನ್ನು ಬಾಳೆ ಹಣ್ಣಲ್ಲಿ ಬರೆದು ತೇರಿಗೆ ಸಮರ್ಪಿಸುತ್ತಾರೆ.ಭಕ್ತಿಯಿಂದ ಸಮರ್ಪಿಸಿದ ಮನವಿಗಳನ್ನು ದೇವರು ಈಡೇರಿಸುತ್ತಾನೆ ಅನ್ನೋದು ನಂಬಿಕೆ. ಹೀಗಾಗಿ ಹಲವರು ತಮ್ಮ ವಿವಿಧ ಭೇಡಿಕೆಗಳನ್ನು ಸಮರ್ಪಿಸುತ್ತಾರೆ. ಮದುವೆ, ವಿದ್ಯಾಭ್ಯಾಸ, ಉದ್ಯೋಗ ರೀತಿ ಬೇಡಿಕೆಗಳು ಹಲವು. ಆದರೆ ಇದೇ ಜಾತ್ರೆಯಲ್ಲಿ ಪೊಲೀಸಪ್ಪನ ಬೇಡಿಕೆ ಇದೀಗ ಸದ್ದು ಮಾಡುತ್ತಿದೆ.  ದೇವರೆ ನನಗೆ ಬಂದೋಬಸ್ತ್ ಡ್ಯೂಟಿ ಕಡಿಮೆ ಮಾಡಿಸು ಎಂದು ಪೊಲೀಸಪ್ಪ ಬಾಳೇ ಹಣ್ಣಿನಲ್ಲಿ ಬರೆದು ತೇರಿಗೆ ಸಮರ್ಪಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಕೊಳ್ಳೇಗಾಲದಲ್ಲಿಲಕ್ಷ್ಮಿನಾರಾಯಣಸ್ವಾಮಿ ರಥೋತ್ಸವ ಅತ್ಯಂತ ವಿಜ್ರಂಭಣೆಯಿಂದ, ಭಕ್ತಿಯಿಂದ ನಡೆಯುತ್ತದೆ. ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತಿ ಹಾಗೂ ಗೌರವದಿಂದ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಈ ಜಾತ್ರೆಯ ಮತ್ತೊಂದು ವಿಶೇಷ ಅಂದರೆ ಬಾಳೇ ಹಣ್ಣು ತೇರಿಗೆ ಸರ್ಪಿಸುವುದು. ರಥ ಎಳೆಯುವ ವೇಳೆಬಹುತೇಕ ಎಲ್ಲಾ ಜಾತ್ರೆಯಲ್ಲಿ ತೇರಿಗೆ ಬಾಳೆ ಹಣ್ಣು ಸಮರ್ಪಿಸುತ್ತಾರೆ. ಆದರೆ ಲಕ್ಷ್ಮಿನಾರಾಯಣ ಸ್ವಾಮಿ ರಥೋತ್ಸವದಲ್ಲಿ ಹೀಗೆ ತೇರಿಗೆ ಬಾಳೇ ಹಣ್ಣ ಸಮರ್ಪಿಸುವಾಗ ಭಕ್ತಿಯಿಂದ ಪಾರ್ಥಿಸಿ ಸಮರ್ಪಿಸುತ್ತಾರೆ. 

Koppal: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ, 10 ಲಕ್ಷಕ್ಕೂ ಅಧಿಕ ಜನ ಭಾಗಿ

ಪೊಲೀಸಪ್ಪ ಬಿಡುವಿಲ್ಲದ ಕರ್ತವ್ಯದಿಂದ ಹೈರಾಣಾಗಿದ್ದಾನೆ. ಹೆಚ್ಚುವರಿ ಡ್ಯೂಟಿ, ರಜೆ ಕೊರತೆ, ವಿಶ್ರಾಂತಿ, ನಿದ್ದೆ, ಹೀಗೆ ಯಾವುದು ಸರಿಯಾಗಿ ಆಗುತ್ತಿಲ್ಲ. ಸತತ ಡ್ಯೂಟಿಯಿಂದಲೂ ಪೊಲೀಸಪ್ಪ ರೋಸಿ ಹೋಗಿದ್ದ. ಅದೇನೆ ಮಾಡಿದರೂ ಡ್ಯೂಟಿಯಲ್ಲಿಕೊಂಚ ವಿಶ್ರಾಂತಿ ಸಿಗುತ್ತಿರಲಿಲ್ಲ. ಇತ್ತ ಹಿರಿಯ ಅಧಿಕಾರಿಗಳಿಗೆ ಹೇಳಿದರೆ ದೊಡ್ಡ ರಾದ್ಧಾಂತವಾಗುವುದು ಬೇಡ ಎಂದುಕೊಂಡಿದ್ದಾರೆ. ಆದರೆ ಬಂದೋಬಸ್ತ್ ಡ್ಯೂಟಿಯಲ್ಲಿ ಇಡೀ ದಿನ ಕಳೆಯುತ್ತಿರುವುದು ಪೊಲೀಸಪ್ಪನ ತಾಳ್ಮೆಯನ್ನು ಪರೀಕ್ಷಿಸಿತ್ತು. ಹೀಗಾಗಿ ಈ ಬಂದೋಬಸ್ತ್ ಡ್ಯೂಟಿಯಿಂದ ಮುಕ್ತಿ ನೀಡುವಂತೆ ಪೊಲೀಸಪ್ಪ, ಬಾಳೆ ಹಣ್ಮಿನಲ್ಲಿ ಬರೆದು ತೇರಿಗೆ ಸಮರ್ಪಿಸಿದ್ದಾರೆ. 

ಬಂದೋಬಸ್ತ್ ಡ್ಯೂಟಿ ಕಡಿಮೆ ಮಾಡು  ದೇವರೇ ಎಂದು ಬಾಳೆ ಹಣ್ಣಿನಲ್ಲಿ ಬರೆದ ಪೊಲೀಸಪ್ಪ, ರಥಕ್ಕೆ ಎಸೆದು ಪಾರ್ಥಿಸಿದ್ದಾನೆ. ದೇವರು ತನ್ನ ಪಾರ್ಥನೆ ಕೇಳಿಸಿಕೊಂಡು ಈ ಬಂದೋಬಸ್ತ್ ಡ್ಯೂಟಿಯಿಂದ ಮುಕ್ತಿ ನೀಡಲಿ ಅನ್ನೋದು ಪಾರ್ಥನೆ. ಇದೀಗ ಪೊಲೀಸಪ್ಪನ ಈ ಪಾರ್ಥನೆ ಭಾರಿ ಸದ್ದು ಮಾಡುತ್ತಿದೆ. ಈ ಮಟ್ಟಿಗೆ ವೈರಲ್ ಆಗಿರುವ ಕಾರಣ ಈ ಪೊಲೀಸಪ್ಪನಿಗೆ ಬಂದೋಬಸ್ತ್ ಡ್ಯೂಟಿಯಿಂದ ಮುಕ್ತಿ ಸಿಗುವ ಸಾಧ್ಯತೆ  ಇದೆ. 
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ