Astrology Tips : ಪೂರ್ವಜನ್ಮದ ಪಾಪಕರ್ಮಕ್ಕೆ ಮುಕ್ತಿ ಬೇಕೆ? ಇಲ್ಲಿವೆ ದಾರಿಗಳು..

By Suvarna News  |  First Published Jan 25, 2022, 11:38 AM IST

ಯಾವ ಜನ್ಮದ ಕರ್ಮವೋ, ಈ ಜನ್ಮದಲ್ಲಿ ಅನುಭವಿಸ್ತಿದೇನೆ ಎಂಬ ಮಾತನ್ನು ನೀವು ಕೇಳಿರ್ತೀರ. ಒಳ್ಳೆಯದಾದ್ರೆ, ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು, ಈ ಜನ್ಮದಲ್ಲಿ ಇಂತ ಅದೃಷ್ಟ ಒಲಿದಿದೆ ಎನ್ನುತ್ತಾರೆ. ಎಲ್ಲವನ್ನೂ ಹಿಂದಿನ ಜನ್ಮಕ್ಕೆ ಹೋಲಿಸುವ ಜನರಿಗೆ ಪೂರ್ವ ಜನ್ಮದ ಕರ್ಮಗಳಿಂದ ಮುಕ್ತಿ ಹೊಂದಲು ದಾರಿಗಳು ಇಲ್ಲಿವೆ.
 


ಹಿಂದೂ ಧರ್ಮ(Hinduism) ದಲ್ಲಿ ಒಳ್ಳೆಯ ಕೆಲಸ ಹಾಗೂ ಕೆಟ್ಟ ಕೆಲಸಗಳನ್ನು ಪುಣ್ಯ (Good )-ಪಾಪಕ್ಕೆ ಹೋಲಿಕೆ ಮಾಡಲಾಗುತ್ತದೆ. ಕೆಟ್ಟ ಕೆಲಸ (Work) ಮಾಡಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ಒಳ್ಳೆಯ ಕೆಲಸ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ನಂಬಲಾಗುತ್ತದೆ. ಕೆಟ್ಟ ಕೆಲಸ ಮಾಡಿದವರಿಗೆ ಕೆಟ್ಟದ್ದಾಗುತ್ತದೆ ಎನ್ನಲಾಗುತ್ತದೆ. ಈಗಿನ ಜೀವನವನ್ನು ಪೂರ್ವಜನ್ಮಕ್ಕೆ ತಾಳೆ ಹಾಕಲಾಗುತ್ತದೆ. ಅನೇಕರು ಪೂರ್ವಜನ್ಮವನ್ನು ನಂಬುತ್ತಾರೆ. ಆದ್ರೆ ಪೂರ್ವ ಜನ್ಮ ಎಂಬುದಿದೆಯೇ ಎಂಬುದು ಸರಿಯಾಗಿ ಯಾರಿಗೂ ತಿಳಿದಿಲ್ಲ. ಅದ್ರ ಬಗ್ಗೆ ಚರ್ಚೆ ಈಗ ಅಗತ್ಯವಿಲ್ಲ.

ಪೂರ್ವಜನ್ಮವನ್ನು ನಂಬುವವರು, ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಈಗ ಕಾಡ್ತಿದೆ ಎನ್ನುತ್ತಾರೆ. ಸಣ್ಣ ಘಟನೆಯಿಂದ ಹಿಡಿದು ದೊಡ್ಡ ಘಟನೆಯವರೆಗೆ ಎಲ್ಲವನ್ನೂ ಪೂರ್ವಜನ್ಮಕ್ಕೆ ಹೋಲಿಸಿ ನೋಡುವವರಿದ್ದಾರೆ. ಆಗ ಯಾವ ಕೆಟ್ಟ ಕೆಲಸ ಮಾಡಿದ್ದೆ ಎಂಬುದು ಗೊತ್ತಿಲ್ಲ, ಈಗ ನನ್ನನ್ನು ಬೆನ್ನು ಹತ್ತಿದೆ. ಈ ಜನ್ಮದಲ್ಲಿ ಕಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ, ಹಿಂದಿನ ಜನ್ಮದ ಕೆಟ್ಟ ಕೆಲಸ ಈಗ ಹಿಂಸೆಯಾಗಬಾರದು ಎಂದಾದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಿ. ಇದ್ರಿಂದ ಈಗ ಅನುಭವಿಸುತ್ತಿರುವ ನೋವು, ಸಂಕಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಪೂರ್ವಜನ್ಮದ ಪಾಪ ಈ ಕಾಡಬಾರದೆಂದ್ರೆ ಮಾಡಿ ಈ ಕೆಲಸ..

ಕರ್ಪೂರ : ಮನೆಯಲ್ಲಿ ಪ್ರತಿ ದಿನ ಕರ್ಪೂರವನ್ನು ಬೆಳಗಬೇಕು. ಇದ್ರಿಂದ ಪೂರ್ವಜನ್ಮದ ಪಾಪ ನಷ್ಟವಾಗುತ್ತದೆ. ಜೊತೆಗೆ ಪಿತೃದೋಷ ದೂರವಾಗುತ್ತದೆ. 

Tap to resize

Latest Videos

undefined

Numerology: ಪಾದಾಂಕ 5ರ ವ್ಯಕ್ತಿಗಳ 2022ರ ದಾಂಪತ್ಯ ರಹಸ್ಯ

ಬಿಲ್ವಪತ್ರೆ : ಭಾನುವಾರದಂದು ಅಥವಾ ಪ್ರತಿ ದಿನ ಬಿಲ್ವಪತ್ರೆ ಮರಕ್ಕೆ ಮೂರು ಪ್ರದಕ್ಷಣೆ ಹಾಕಬೇಕು. ಇದ್ರಿಂದ ಪೂರ್ವಜನ್ಮದ ಪಾಪ ಕಳೆಯುತ್ತದೆ. ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ.

ಪ್ರಾಣಿಗೆ ಆಹಾರ : ತಿಳಿಯದೆ ಮಾಡಿದ ತಪ್ಪಿಗೆ ಪರಿಹಾರ ಬಯಸುವವರು ಪ್ರತಿ ದಿನ ನಾಯಿ, ಹಸು, ಇರುವೆ ಅಥವಾ ಯಾವುದೇ ಪಕ್ಷಿಗೆ ಆಹಾರವನ್ನು ನೀಡಿ. ಇದ್ರಿಂದ ನೀವು ಮಾಡಿದ ಎಲ್ಲ ಪಾಪಗಳು ದೂರವಾಗುತ್ತವೆ.

ದಾನಕ್ಕಿದೆ ಮಹತ್ವ: ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ದಾನ ಮಾಡುವ ರೂಢಿ ಬೆಳೆಸಿಕೊಳ್ಳಿ. ಪ್ರತಿ ಅಮವಾಸ್ಯೆಯಂದು ಪೂರ್ವಜರ ಹೆಸರಿನಲ್ಲಿ ದಾನ ಮಾಡಿ. ಇದ್ರಿಂದ ಪೂರ್ವಜನ್ಮದ ಪಾಪ ಪರಿಹಾರವಾಗುವ ಜೊತೆಗೆ ಪೂರ್ವಜರ ಆಶೀರ್ವಾದ ಸಿಗುತ್ತದೆ.

ಧಾರ್ಮಿಕ ಗ್ರಂಥ ಪಠಣ : ಪ್ರತಿ ದಿನ ಯಾವುದಾದರೂ ಒಂದು ಧಾರ್ಮಿಕ ಗ್ರಂಥವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ಇದ್ರಿಂದ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ. ಜೊತೆಗೆ ನಿಮ್ಮ ಪೂರ್ವಜನ್ಮದ ದೋಷ ಕಡಿಮೆಯಾಗುತ್ತದೆ. 

ದೇವರ ಮರಗಳ ಸೇವೆ : ಅಶ್ವತ್ಥ ಮರ ಅಥವಾ ಆಲದ ಮರದ ಸೇವೆಯನ್ನು ಪ್ರತಿ ದಿನ ಮಾಡಬೇಕು. ಈ ಮರಗಳ ಬೇರುಗಳಿಗೆ ನಿತ್ಯ ನೀರು ನೀಡಬೇಕು. ಹಿಂದೂ ಧರ್ಮದಲ್ಲಿ ಈ ಎರಡು ಮರಗಳಿಗೆ ಮಹತ್ವದ ಸ್ಥಾನವಿದೆ. ಇದರ ನೆರಳಿನಲ್ಲಿ ಕುಳಿತು ಪ್ರಾರ್ಥನೆ ಮಾಡುವುದ್ರಿಂದ,ಮನಸ್ಸು ಶುದ್ಧವಾಗುತ್ತದೆ. ಯಾವುದೇ ಕೆಟ್ಟ ಸಂಗತಿ ನಿಮ್ಮ ಮುಂದೆ ಸುಳಿಯುವುದಿಲ್ಲ. ಜೊತೆಗೆ ಪೂರ್ವಜನ್ಮದಲ್ಲಿ ಮಾಡಿದ ದೋಷ ಪರಿಹಾರವಾಗುತ್ತದೆ.
ಪ್ರತಿ ಅಮವಾಸ್ಯೆಯಂದು 9 ಅಶ್ವತ್ಥ ಗಿಡಗಳನ್ನು ನೀವು ನೆಡಬೇಕು. 7 ಅಮಾವಾಸ್ಯೆಗಳ ಕಾಲ ಚಾಚು ತಪ್ಪದೆ ಈ ಕೆಲಸ ಮಾಡಿದ್ರೆ ಹಿಂದಿನ ಜನ್ಮದ ಪಾಪ ಕೊನೆಯಾಗಲಿದೆ. 

Healing Temple: ಸರ್ವ ರೋಗ ನಿವಾರಕ, ವೈದ್ಯರಿಗೇ ವೈದ್ಯ ಈ ವೈದ್ಯನಾಥೇಶ್ವರ

ಗುಪ್ತ ದಾನ : ಅಮವಾಸ್ಯೆ,ಹುಣ್ಣಿಮೆ ಜೊತೆ ಅಕ್ಷಯ ತೃತೀಯದಂದು ಗುಪ್ತ ದಾನ ಮಾಡಿದ್ರೆ ಜೀವನದಲ್ಲಿ ಕಾಡುತ್ತಿದ್ದ ಕಷ್ಟಗಳು ದೂರವಾಗಲಿವೆ. ಅಲ್ಲದೆ ಅದೃಷ್ಟ ಒಲಿದು ಬರಲಿದೆ.

ನಿಸರ್ಗದಲ್ಲಿದೆ ಗುಟ್ಟು: ಸೋಮವಾರದಂದು ಬಿಲ್ವಪತ್ರೆಯ 14 ಸಸಿಗಳನ್ನು ನೆಡಬೇಕು. ಶುಕ್ರವಾರದಂದು 9 ಬೆಟ್ಟದ ನೆಲ್ಲಿ ಗಿಡವನ್ನು ನೆಡಬೇಕು. ಶನಿವಾರದಂದು ಅಶ್ವತ್ಥದ 9 ಸಸಿಗಳನ್ನು ನೆಡಬೇಕು. ಸರಿಸುಮಾರು 90 ದಿನಗಳ ಕಾಲ ಈ ಕೆಲಸ ಮಾಡಿದ್ರೆ ಪೂರ್ವಜನ್ಮದ ಪಾಪದಿಂದ ಮುಕ್ತಿ ಸಿಗಲಿದೆ. 

click me!