Gemology: ರಾಹು ಗ್ರಹದ ಕೆಟ್ಟ ಪ್ರಭಾವದಿಂದ ಪಾರಾಗಲು ಧರಿಸಿ ಈ ರತ್ನ

Suvarna News   | Asianet News
Published : Mar 08, 2022, 07:23 PM IST
Gemology: ರಾಹು ಗ್ರಹದ ಕೆಟ್ಟ ಪ್ರಭಾವದಿಂದ ಪಾರಾಗಲು ಧರಿಸಿ ಈ ರತ್ನ

ಸಾರಾಂಶ

ರತ್ನಗಳು ನವಗ್ರಹಗಳ ಅಂಶವೆಂದು ಹೇಳಲಾಗುತ್ತದೆ. ಹಾಗಾಗಿ ರಾಶಿಗೆ ಸಂಬಂಧಿಸಿದಂತೆ ಆಯಾ ರತ್ನಗಳನ್ನು ಧರಿಸಿದಾಗ ಜೀವನದಲ್ಲಿ ಅಭಿವದ್ಧಿ, ಸುಖ ಮತ್ತು  ನೆಮ್ಮದಿ ಸಾಧ್ಯವಾಗುತ್ತದೆ. ಗೋಮೇಧಿಕ ರತ್ನವನ್ನು ಧರಿಸುವುದರಿಂದ ರಾಹುಗ್ರಹದ ದುಷ್ಪರಿಣಾಮಗಳಿಂದ ಪಾರಾಗಬಹುದಾಗಿದೆ. ಹಾಗಾದರೆ ಯಾರು ಈ ರತ್ನವನ್ನು ಧರಿಸಬಹುದು ಎಂಬುದನ್ನು ತಿಳಿಯೋಣ....

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ರತ್ನಗಳು (Stone) ನವಗ್ರಹಗಳ ಅಂಶ ಎಂದು ಹೇಳಲಾಗುತ್ತದೆ. ಹಾಗೆ ಶಾಸ್ತ್ರದಲ್ಲಿ  ಗೋಮೇಧ ರತ್ನವು ಅಥವಾ ಗೋಮೇಧಿಕ (onyx gem) ರತ್ನವು ಅತ್ಯಂತ ಮಹತ್ವದ್ದಾಗಿದೆ. ರಾಹು ಗ್ರಹದ ಕೆಟ್ಟ ಪರಿಣಾಮವನ್ನು (Effects) ತಗ್ಗಿಸುವಲ್ಲಿ ಗೋಮೇಧಿಕ ರತ್ನವು ಪರಿಣಾಮಕಾರಿ ಆಗಿದೆ. 

ಮನುಷ್ಯ ಎಂದ ಮೇಲೆ ಸಮಸ್ಯೆಗಳು (Problems) ಇರುವುದು ಸಹಜ. ಹಾಗೆಯೇ ಪ್ರತಿ ಸಮಸ್ಯೆಗೂ ಒಂದಲ್ಲ ಒಂದು ಪರಿಹಾರ (Solution) ಇದ್ದೇ ಇರುತ್ತದೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಪ್ರತಿ ಸಮಸ್ಯೆಗಳ ಪರಿಹಾರಕ್ಕೂ ಅದರದ್ದೇ ಆದ ರೀತಿಯಲ್ಲಿ ಉಪಾಯಗಳಿವೆ. ಅದೇ ರೀತಿ ಗ್ರಹ (Planet) ಮತ್ತು ರಾಶಿಗಳ (Zodiac) ಶುಭ ಪ್ರಭಾವಕ್ಕಾಗಿ ಧರಿಸುವ ರತ್ನಗಳು (Gemstone) ಸಹ ಒಂದು ತರದ ಉಪಾಯವಾಗಿದೆ.  

ಪ್ರತಿ ಗ್ರಹಗಳಿಗೂ ಒಂದೊಂದು  ರತ್ನಗಳನ್ನು ಸಂಕೇತವಾಗಿ ಸೂಚಿಸಲಾಗುತ್ತದೆ. ಮಾಣಿಕ್ಯವು ಸೂರ್ಯನ ರತ್ನ, ಮುತ್ತು ಚಂದ್ರನ ರತ್ನ, ಪಚ್ಚೆಯು ಬುಧಗ್ರಹದ ರತ್ನ, ಹಳದಿ ನೀಲಮಣಿ ಗುರುವಿನ ರತ್ನ, ಹವಳ ಮಂಗಳ ಗ್ರಹದ ರತ್ನ, ವಜ್ರವು ಶುಕ್ರ ಗ್ರಹದ ರತ್ನ, ನೀಲಿ ನೀಲಮಣಿ ಶನಿಯ ರತ್ನ, ಗೋಮೇಧ ರಾಹುವಿನ ರತ್ನವಾಗಿದೆ ಮತ್ತು ಲಹುನಿಯಾ (ಬೆಕ್ಕಿನ ಕಣ್ಣು) ಕೇತುವಿನ ರತ್ನವಾಗಿದೆ.

ಆಯಾ ಗ್ರಹ ಮತ್ತು ರಾಶಿಗಳ ಬಲ ವೃದ್ಧಿಸಲು ಮತ್ತು ಕೆಲ ಸಮಸ್ಯೆಗಳ ಪರಿಹಾರಕ್ಕೆ ರತ್ನಗಳನ್ನು ಧರಿಸಲಾಗುತ್ತದೆ (Wearing). ಇದರಿಂದ ಆರೋಗ್ಯ (Health), ಸಂಪತ್ತು (Wealth), ನೆಮ್ಮದಿ ಸೇರಿದಂತೆ ಇನ್ನೂ ಅನೇಕ ಲಾಭಗಳನ್ನು (Benefit) ಪಡೆಯಬಹುದಾಗಿದೆ. ರತ್ನ ಧಾರಣೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಶಾಸ್ತ್ರ ತಿಳಿಸುತ್ತದೆ.

ಜಾತಕದಲ್ಲಿ (Horoscope) ರಾಹು (Rahu) ಗ್ರಹದ (Plamet) ಪ್ರಭಾವ ಕೆಟ್ಟದ್ದಾಗಿದ್ದರೆ ಅಥವಾ ರಾಹು ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಅಂತಹ ಸಮಯದಲ್ಲಿ ಗೋಮೇಧಿಕ ರತ್ನವನ್ನು ಧರಿಸುವುದರಿಂದ ರಾಹು ಗ್ರಹದಿಂದ ಉಂಟಾಗುವ ದುಷ್ಪರಿಣಾಮಗಳು (Bad effect) ನಿವಾರಣೆಯಾಗುತ್ತವೆ. ಗೋಮೇಧಿಕ ರತ್ನದ ಪ್ರಯೋಜನಗಳ (Uses) ಬಗ್ಗೆ ತಿಳಿಯೋಣ....

ಗೋಮೇಧಿಕ ರತ್ನವನ್ನು ಧರಿಸುವ (Wearing) ಮೊದಲು ರತ್ನಗಳ ಬಗ್ಗೆ ತಿಳಿದಿರುವ ಜ್ಯೋತಿಷಿಗಳ (Astrologer) ಬಳಿ ಪರಾಮರ್ಶಿಸಿ ಧರಿಸುವುದು ಉತ್ತಮ. 

ಜಾತಕದ ಕೇಂದ್ರ ಸ್ಥಾನದಲ್ಲಿ ಅಂದರೆ 1,4,7 ಮತ್ತು 10ನೇ ಮನೆಯಲ್ಲಿ ರಾಹು ಗ್ರಹವು ಸ್ಥಿತವಾಗಿದ್ದರೆ ಅಂತಹ ಜಾತಕದವರು ಗೋಮೇಧಿಕ ರತ್ನವನ್ನು ಧರಿಸುವುದು ಉತ್ತಮ.

ರಾಹು ಗ್ರಹವು ಜಾತಕದ ಆರನೇ ಅಥವಾ ಎಂಟನೇ ಮನೆಯಲ್ಲಿ ಅಥವಾ ಲಗ್ನದಲ್ಲಿ ಸ್ಥಿತನಾಗಿದ್ದರೆ ಅಂಥವರು ಗೋಮೇಧಿಕ ರತ್ನವನ್ನು ಧರಿಸುವುದರಿಂದ ಲಾಭ (Profit) ಉಂಟಾಗುತ್ತದೆ.

Holi 2022: ಕಾಮ ದಹನದ ದಿನ ಈ ಒಂದು ಕೆಲ್ಸ ಮಾಡಿ ನೋಡಿ

ರಾಹು ಗ್ರಹವು ಜಾತಕದ ಶುಭ ಸ್ಥಾನದ ಅಧಿಪತಿಯಾಗಿದ್ದು ಆರನೇ ಅಥವಾ ಎಂಟನೇ ಮನೆಯಲ್ಲಿ ಸ್ಥಿತನಾಗಿದ್ದರೆ ಅಂಥವರು ಸಹ ಗೋಮೇಧಿಕ ರತ್ನವನ್ನು ಧರಿಸುವುದು ಶುಭವನ್ನು ಉಂಟುಮಾಡುತ್ತದೆ.

ಮಿಥುನ (Gemini), ತುಲಾ (Libra), ಕುಂಭ (Aquarius) ಮತ್ತು ವೃಷಭ (Taurus) ರಾಶಿ  (Zodiac) ಅಥವಾ ಲಗ್ನದಲ್ಲಿ ಜನಿಸಿದವರು ಗೋಮೇಧಿಕ ರತ್ನವನ್ನು ಧರಿಸುವುದರಿಂದ ಶುಭ ಫಲಗಳು ಪ್ರಾಪ್ತವಾಗುತ್ತವೆ. 

ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಗ್ರಹವು ನೀಚ ಸ್ಥಾನದಲ್ಲಿ ಅಂದರೆ ಧನು ರಾಶಿಯಲ್ಲಿ ಸ್ಥಿತನಾಗಿದ್ದರೆ ಅಂಥವರು ಗೋಮೇಧಿಕ ಅನ್ನು ಧರಿಸುವುದರಿಂದ ರಾಹು ಗ್ರಹ ದಿಂದ ಉಂಟಾಗುವ ದುಷ್ಪರಿಣಾಮಗಳು ತಗ್ಗುವುದಲ್ಲದೆ ಶುಭವಾಗುವ ಸಾಧ್ಯತೆ ಹೆಚ್ಚಿರುತ್ತದೆ. 

Rahu Ketu Transit 2022: ಈ ಐದು ರಾಶಿಗಳಿಗೆ ಕಂಟಕಪ್ರಾಯರಾಗಲಿರುವ ರಾಹುಕೇತು

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಮಕರ (Capricorn) ರಾಶಿಯವರು ಗೋಮೇಧಿಕ ರತ್ನಗಳನ್ನು ಧರಿಸುವುದರಿಂದ ಲಾಭ ಉಂಟಾಗುತ್ತದೆ.

ಜಾತಕದಲ್ಲಿ ಶುಕ್ರ ಗ್ರಹ (Venus) ಮತ್ತು  ಬುಧ ಗ್ರಹ (Mercury) ದೊಂದಿಗೆ ರಾಹುಗ್ರಹದ ಯುತಿಯಾದಾಗ ಅಂತಹ ವ್ಯಕ್ತಿಗಳು ಗೋಮೇಧಿಕ ರತ್ನವನ್ನು ಧರಿಸುವುದು ಉತ್ತಮ. 

PREV
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!