Rahu Ketu Transit 2022: ಈ ಐದು ರಾಶಿಗಳಿಗೆ ಕಂಟಕಪ್ರಾಯರಾಗಲಿರುವ ರಾಹುಕೇತು

By Suvarna News  |  First Published Mar 8, 2022, 4:36 PM IST

ಏಪ್ರಿಲ್ 12ರಂದು ರಾಹು ಹಾಗೂ ಕೇತುವಿನ ಗೋಚಾರವಿದೆ. ಇವರಿಬ್ಬರ ಈ ಜಂಟಿ ಚಲನೆಯಿಂದ ಐದು ರಾಶಿಗಳ ಬದುಕಲ್ಲಿ ಬಹಳಷ್ಟು ಬದಲಾವಣೆಗಳು, ಸಮಸ್ಯೆಗಳು ಎದುರಾಗಲಿವೆ. 


ರಾಹು ಕೇತು ಗೋಚಾರ(Rahu-Ketu Transit 2022)ವು ಏಪ್ರಿಲ್ 12ರಂದು ನಡೆಯಲಿದೆ. ಆ ದಿನ ರಾಹು(Rahu) ಮೇಷಕ್ಕೆ ಕಾಲಿಟ್ಟರೆ, ಕೇತು ತುಲಾ ರಾಶಿಗೆ ಕಾಲಿಡುತ್ತಾನೆ. ಸುಮಾರು 18 ತಿಂಗಳ(18 months) ಕಾಲ ಇವರಿಬ್ಬರೂ ಇಲ್ಲಿಯೇ ಇರಲಿದ್ದಾರೆ. ರಾಹು ಕೇತುಗಳು ನಮ್ಮ ಬದುಕಿನ ಮೇಲೆ ಬಹಳಷ್ಟು ಪರಿಣಾಮಗಳನ್ನು ಬೀರುತ್ತವೆ. ಹೀಗಾಗಿ, ಈ ಎರಡು ಗ್ರಹಗಳ ಈ ಚಲನೆಯ ಪರಿಣಾಮ ಎಲ್ಲ ರಾಶಿಗಳ(zodiac signs) ಮೇಲಾಗಲಿದೆ. ಆದರೆ, ಪ್ರಮುಖವಾಗಿ 5 ರಾಶಿಗಳ ಮೇಲೆ ಹೆಚ್ಚಿನ ಪರಿಣಾಮವಾಗಲಿದೆ.

ಮೇಷ(Aries): ಈ ಸಮಯದಲ್ಲಿ ನಿಮ್ಮ ನಿಕಟ ಸಂಬಂಧಗಳು ಹಳಸಬಹುದು. ಹಾಗಾಗಿ ಹುಷಾರಾಗಿರಿ. ಯಾವುದೇ ಹತ್ತಿರದ ಸಂಬಂಧದವರ ಜೊತೆ ಸಿಟ್ಟು ಮಾಡುವುದು, ಅಸಮಾಧಾನ ತೋರುವುದು ಬೇಡ. ಆರೋಗ್ಯ ಹದಗೆಡಬಹುದು. ಆದಷ್ಟು ಆರೋಗ್ಯ, ಜೀವನಶೈಲಿ ಕಡೆ ಗಮನ ಹರಿಸಿ. ಜೀವನದ ಹಲವು ಕ್ಷೇತ್ರಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಯಾವುದೇ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ತಪ್ಪು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಲ್ಲವನ್ನೂ ಎರಡೆರಡು ಬಾರಿ ಪರಿಶೀಲಿಸಿ. ತಪ್ಪು ಮಾಡದಿದ್ದರೂ ನಿಮ್ಮ ಮೇಲೆ ಅಪವಾದ ಬರುವ ಸಾಧ್ಯತೆಯೂ ಇರುತ್ತದೆ. 

Tap to resize

Latest Videos

ತುಲಾ(Libra): ರಾಹುವು ಈ ರಾಶಿಯ ಏಳನೇ ಮನೆಯಲ್ಲೂ, ಕೇತುವು ಒಂದನೇ ಮನೆಯಲ್ಲೂ ಸಂಚರಿಸಲಿದ್ದಾರೆ. ರಾಹು ಕೇತುವಿನ ಈ ಸಂಚಾರವು ನಿಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ಎಚ್ಚರದಿಂದಿರಬೇಕು. ಆಸ್ತಿಪಾಸ್ತಿ ಹಾನಿ ಮಾಡಿಕೊಳ್ಳುವಂಥ ಯಾವುದೇ ನಿರ್ಧಾರಕ್ಕೆ ಕೈ ಹಾಕಬೇಡಿ. ಹಣಕಾಸಿನ ವರ್ಗಾವಣೆ ವಿಷಯದಲ್ಲಿ ಎಚ್ಚರ ಅಗತ್ಯ. ನಿಮ್ಮ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಾಗುತ್ತವೆ. ಕೆಲ ವಿಷಯಗಳು ಮುಂದೆಯೇ ಹೋಗದೆ ನಿಂತಲ್ಲೇ ನಿಂತಿವೆ ಎನಿಸಬಹುದು. ವೆಚ್ಚವನ್ನು ನಿಯಂತ್ರಿಸುವ ಅವಶ್ಯಕತೆಯಿದೆ. 

ಧನು(Sagittarius): ರಾಹು-ಕೇತುಗಳ ಸಂಚಾರವು ಈ ರಾಶಿಯವರಿಗೂ ಒಳ್ಳೆಯದೆಂದು ಹೇಳಲಾಗುವುದಿಲ್ಲ. ಈ ಸಂದರ್ಭದಲ್ಲಿ ನೀವು ಭವಿಷ್ಯದ ಬಗ್ಗೆ ಅಭದ್ರತೆ ಅನುಭವಿಸುವಿರಿ. ಈ ಅವಧಿಯಲ್ಲಿ ನೀವು ಮಾನಸಿಕ ಮತ್ತು ದೈಹಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಹಣದ ನಷ್ಟ ಉಂಟಾಗಬಹುದು. ಈ ಪ್ರಯಾಣದಲ್ಲಿ ಧನ ಹಾನಿಯಾಗುವ ಸಂಭವವಿರುತ್ತದೆ. ಈ ಅವಧಿಯಲ್ಲಿ ಹಣಕಾಸಿನ ವಿಚಾರವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದೇ ಉತ್ತಮ. 

Vastu shastra 2022: ಮಲಗುವ ಕೋಣೆಗೆ ಈ ಬಣ್ಣ ಬಳಸಿದರೆ ಪತಿ ಪತ್ನಿ ನಡುವೆ ಜಗಳ ತಪ್ಪಿದ್ದಲ್ಲ!

ಮಕರ(Capricorn): ಈ ರಾಶಿಯ 4 ಹಾಗೂ 10ನೇ ಮನೆಯಲ್ಲಿ ರಾಹು ಕೇತು ಕ್ರಮವಾಗಿ ಚಲಿಸುತ್ತಿದ್ದಾರೆ. ಕೇತುವಿನ ಚಲನೆ ನಿಮಗೆ ಶುಭವೇ ಇದ್ದರೂ, ರಾಹುವಿನ ಚಲನೆ ಅಪಾಯಕಾರಿಯಾಗಿದೆ. ಇದರಿಂದ ಕುಟುಂಬದಲ್ಲಿ ಹಲವು ಸಮಸ್ಯೆಗಳಿರಬಹುದು. ಯಾವುದೇ ವಿವಾದದ ಸಂದರ್ಭದಲ್ಲಿ, ನೀವು ನ್ಯಾಯಾಲಯಕ್ಕೆ ಹೋಗಬೇಕಾಗಬಹುದು. ನೀವು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಯಾರಾದರೂ ಹಾಳು ಮಾಡಲು ಪ್ರಯತ್ನಿಸಬಹುದು. ಹಾಗಾಗಿ ಹುಷಾರಾಗಿರಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಅಪಘಾತ ಮುಂತಾದ ಕಹಿ ಘಟನೆಗಳಿಗೆ ಆಸ್ಪದವಿಲ್ಲದಂತೆ ಎಚ್ಚರ ವಹಿಸಿ. 

ಕುಜದೋಷ ನಿವಾರಿಸುವ ತಾಮ್ರ, ಯಾರೆಲ್ಲ ಧರಿಸಬಹುದು?

ಮೀನ(Pisces): ರಾಹು ಕೇತುವು ಮೀನ ರಾಶಿಗೂ ಕಂಟಕರಾಗಲಿದ್ದಾರೆ. ಇವರು ಆರ್ಥಿಕ, ಕುಟುಂಬ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರತಿ ವಿಷಯದಲ್ಲೂ ನೀವು ಹೆಚ್ಚು ಜಾಗರೂಕರಾಗಿರಬೇಕು. ಯಾರನ್ನೂ ಕುರುಡಾಗಿ ನಂಬಬೇಡಿ. ಮೋಸ ಹೋಗುವ ಸಾಧ್ಯತೆಗಳಿವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!