ಆಂಜನೇಯ ಗುರು, ಸ್ವತಃ ಬ್ರಹ್ಮನಿಂದ ವೇದಾಭ್ಯಾಸ ಮಾಡಿದವನು, ಚಿರಂಜೀವಿ. ಅವನನ್ನ ನಂಬಿದವರನ್ನು ಎಂದಿಗೂ ಕೈ ಬಿಡನು.
ಆಂಜನೇಯ ಎಂದರೆ ಧೈರ್ಯ, ಶಕ್ತಿಯ ಪ್ರತೀಕ. ಕೇಸರಿ ನಂದನ, ವಾಯುಪುತ್ರ, ಭಜರಂಗಬಲಿ, ಹನುಮಾನ್ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಆಂಜನೇಯನಿಗೆ ಹಿಂದೂಗಳು ಜಗತ್ತಿನಲ್ಲಿ ಎಲ್ಲೆಲ್ಲಿ ಇದ್ದಾರೋ ಅಲ್ಲೆಲ್ಲ ಭಕ್ತರಿದ್ದಾರೆ. ಆಂಜನೇಯನನ್ನು ಶಿವನ ಅವತಾರವೆಂದೇ ಹೇಳಲಾಗುತ್ತದೆ. ರಾವಣ ಸಂಹಾರಕ್ಕಾಗಿ ವಿಷ್ಣುವು ರಾಮನ ಅವತಾರ ತಾಳಿದಾಗ ಶಿವನು ಆಂಜನೇಯನ ಅವತಾರ ತಾಳಿ ವಿಷ್ಣುವಿಗೆ ನೆರವಾಗುತ್ತಾನೆ.
ರಾಮಭಕ್ತನಾಗಿ ಭಕ್ತಿಯ ಶಕ್ತಿ, ಮಿತಿ ಏನೆಂದು ತೋರಿಸಿಕೊಟ್ಟಿದ್ದಾನೆ. ಆತನ ರಾಮಪ್ರೇಮವೇ ಒಂದು ಆದರ್ಶ. ಈತನ ತಾಯಿ ಅಂಜನಾ ಹಾಗೂ ತಂದೆ ಕೇಸರಿಯಾದ್ದರಿಂದ ಈತನಿಗೆ ಆಂಜನೇಯ ಹಾಗೂ ಕೇಸರಿ ನಂದನನೆಂಬ ಹೆಸರುಗಳು ಬಂದಿವೆ. ಆಂಜನೇಯ ಪುರಾಣಗಳಲ್ಲಿ ಭಕ್ತನಾಗಿ ಹೆಸರು ಮಾಡಿದ್ದರೂ, ಈಗ ಅವನೇ ಒಬ್ಬ ಬಹು ಶಕ್ತಿಶಾಲಿ ದೇವರಾಗಿದ್ದಾನೆ. ಈತನನ್ನು ಪೂಜಿಸುವುದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?
undefined
ವೈವಾಹಿಕ ಸಮಸ್ಯೆಗಳಿಂದ ಮುಕ್ತಿ
ಯಾರಿಗಾದರೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಿದ್ದರೆ ಹನುಮಾನ್ ಚಾಳೀಸ್ ಪ್ರತಿನಿತ್ಯ ಹೇಳುವುದರಿಂದ ಸಮಸ್ಯೆಗಳಿಂದ ಬಿಡುಗಡೆ ಹೊಂದಬಹುದು. ಹನುಮಾನ್ ಸ್ವತಃ ಗುರುವಾಗಿದ್ದಾನೆ. ಹಾಗಾಗಿ, ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅವನಿಗೆ ಗೊತ್ತು. ಅಲ್ಲದೆ, ರಾಮ- ಸೀತೆಯ ಜೀವನವನ್ನೇ ಸರಿಯಾಗಿಸಿದವನು ಆತ. ಬ್ರಹ್ಮಚಾರಿಯಾದರೂ ದಂಪತಿಯ ನೋವು ಅವನಿಗೆ ಅರ್ಥವಾಗುತ್ತದೆ.
ಪರೀಕ್ಷೆ ಗೆಲ್ಲಲು ಸಹಾಯ
ವೃತ್ತಿಯಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದಾಗ ಪ್ರತಿದಿನ ಆಂಜನೇಯ ಸ್ಮರಣೆ ಮಾಡಿ. ವಾರಕ್ಕೊಮ್ಮೆ, ಸಾಧ್ಯವಾದರೆ ಮಂಗಳವಾರ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. ಬಹಳ ಶೀಘ್ರದಲ್ಲಿ ನಿಮ್ಮ ಸಮಸ್ಯೆಗಳು ಈಡೇರುತ್ತವೆ. ವಿದ್ಯಾರ್ಥಿಗಳು ಕೂಡಾ ಆಂಜನೇಯ ಜಪ ಮಾಡುವುದರಿಂದ ಎಲ್ಲ ಪರೀಕ್ಷೆಗಳಲ್ಲಿ ಗೆಲ್ಲಬಹುದು. ಜಗತ್ತು ಕಂಡ ಪರಮಜ್ಞಾನಿ ಈತ. ಬ್ರಹ್ಮನಿಂದಲೇ ವೇದಗಳನ್ನು ಕಲಿತವನು. ಹಾಗಾಗಿ, ವಿದ್ಯೆಯನ್ನು ಕರುಣಿಸಲು ಅವನು ಪರಮ ಶಕ್ತ.
ಆರೋಗ್ಯದಾಯಕ
ಹೃದಯ, ಮೆದುಳಿಗೆ ಸಂಬಂಧಿಸಿದ ಧೀರ್ಘ ಕಾಲೀನ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿದ್ದರೆ, ಆಂಜನೇಯನ ಪ್ರಾರ್ಥನೆಯಿಂದ ಬಹಳಷ್ಟು ಸಮಾಧಾನ ಸಿಗುವುದು. ಏಕೆಂದರೆ ಆತ ಆರೋಗ್ಯ ಹಾಗೂ ಶಕ್ತಿಯ ಪ್ರತೀಕ. ಸಣ್ಣ ಮಗುವಾಗಿದ್ದಾಗ ಇಂದ್ರನ ವಜ್ರಾಯುಧ ಕೂಡಾ ಆತನಿಗೆ ಹೆಚ್ಚೇನೂ ಆಪತ್ತು ಉಂಟು ಮಾಡಲಿಲ್ಲ. ಅಷ್ಟೇ ಅಲ್ಲ, ಆತ ಚಿರಂಜೀವಿ, ಸಾವಿಲ್ಲದವನು. ಸೀತೆಗೆ ಎದುರಾದ ಎಲ್ಲ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿದವನು. ಹಾಗಾಗಿ, ಆತನಲ್ಲಿ ಬೇಡಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಟ್ರೈ ಮಾಡಿ ನೋಡಿ.
ಮಾನಸಿಕ ಸಮಸ್ಯೆಗಳಿಂದ ಪಾರು
ಖಿನ್ನತೆ(depression), ಆತಂಕ, ಭಯ ಮುಂತಾದ ಮಾನಸಿಕ ಸಮಸ್ಯೆಗಳಿದ್ದವರು ತಪ್ಪದೇ ಹನುಮಾನ್ ಚಾಲೀಸ್ ಹೇಳಬೇಕು. ಇದು ವ್ಯಕ್ತಿಯೊಳಗೆ ಅಸಾಮಾನ್ಯ ಧೈರ್ಯ ತುಂಬುವ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಆಂಜನೇಯನ ಮೇಲೆ ನಂಬಿಕೆಯಿಂದಾಗಿ ನೀವು ನಕಾರಾತ್ಮಕ ಯೋಚನೆಗಳಿಂದ ಖಂಡಿತಾ ಹೊರ ಬರುತ್ತೀರಿ. ಮನಸ್ಸನ್ನು ಅರಿವಲ್ಲಿ, ಅದರಲ್ಲಿ ಶಕ್ತಿ ತುಂಬುವಲ್ಲಿ ಅವನಿಗೆ ವಿಶೇಷ ಶಕ್ತಿಯಿದೆ.
Mythology: ಶ್ರೀಕೃಷ್ಣ ಶಿವನೊಡನೆ ಯುದ್ಧ ಮಾಡಿದ್ದೇಕೆ?
ಸಾಲದಿಂದ ಮುಕ್ತಿ ಕೊಡಿಸುತ್ತಾನೆ
ನೀವು ಸಾಲದಲ್ಲಿ ಮುಳುಗಿದ್ದು, ಹಣ ಹಿಂದಿರುಗಿಸಲಾಗದೆ ಒದ್ದಾಡುತ್ತಿದ್ದರೆ, ಆಂಜನೇಯನ ಮೊರೆ ಹೋಗುವುದರಿಂದ ನಿಮಗೆ ಅತ್ಯುತ್ತಮ ಪರಿಹಾರ ಸಿಗುತ್ತದೆ.
ಆತ್ಮವಿಶ್ವಾಸ(confidence) ತುಂಬುತ್ತದೆ
ಪ್ರತಿದಿನ ಹನುಮಾನ್ ಚಾಳೀಸ್ ಹೇಳುವುದರಿಂದ ಶಿಸ್ತು ಮೈಗೂಡುತ್ತದೆ, ಬದುಕಿನ ಬಹುತೇಕ ಗುರಿಗಳನ್ನು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅಂಥಾ ದೊಡ್ಡ ಸಮುದ್ರವನ್ನೇ ತನ್ನ ಆತ್ಮವಿಶ್ವಾಸದಿಂದ ದಾಟಿ ಹಾರಿದವನು ಆತ. ಅಂಥದರಲ್ಲಿ ನಾವು ಹಾಕಿಕೊಳ್ಳುವ ಸಣ್ಣಪುಟ್ಟ ಗುರಿಗಳೆಲ್ಲ ಅವನಿಗೆ ಯಾವ ಲೆಕ್ಕ? ಯಾವಾಗ ಆತ್ಮವಿಶ್ವಾಸ ಕಡಿಮೆ ಎನಿಸುತ್ತದೋ, ಆಗ ಆಂಜನೇಯನ ಮೊರೆ ಹೋಗಿ.
Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!
ಪ್ರೀತಿ ಒಂದುಗೂಡಿಸುತ್ತಾನೆ
ಪ್ರೀತಿ, ಬ್ರೇಕಪ್‌ನಿಂದ ನೊಂದವರು ಆಂಜನೇಯ ಸ್ಮರಣೆಯಿಂದಾಗಿ ತಮ್ಮ ನೋವು, ದುಃಖದಿಂದ ಹೊರ ಬರಲು ಸಾಧ್ಯವಾಗುತ್ತದೆ. ಇಲ್ಲವೇ, ನಿಮ್ಮ ಪ್ರೀತಿಯನ್ನು ಮರಳಿ ತಂದುಕೊಟ್ಟಾನು. ಶ್ರೀರಾಮ- ಸೀತೆಯನ್ನೇ ಅಂಥ ಕಷ್ಟದಿಂದ ಪಾರು ಮಾಡಿ ಒಂದಾಗಿಸಿದವನು ನಿಮ್ಮನ್ನು ನೋಯಲು ಬಿಡುವುದಿಲ್ಲ.
ಶನಿಕಾಟದಿಂದ ಮುಕ್ತಿ
ಈತ ಜ್ಯೋತಿಷ್ಯದ ತಜ್ಞ, ಬಹ್ಮನಿಂದ ನೇರವಾಗಿ ಜ್ಯೋತಿಷ್ಯ ಕಲಿತವನು. ಶನಿದೆಸೆಯು ನಿಮ್ಮ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುವಾಗ ಸಂಪೂರ್ಣವಾಗಿ ಆಂಜನೇಯನಿಗೆ ಶರಣಾಗಿ ನೋಡಿ. ವಾಯುಪುತ್ರನು ಆ ಎಲ್ಲ ಕಷ್ಟಗಳಿಂದ ನಿಮ್ಮನ್ನು ಪಾರು ಮಾಡುತ್ತಾನೆ.