Love Compatibility: ಮೇಷಕ್ಕೂ ಸಿಂಹಕ್ಕೂ ಜೋಡಿಯಾದ್ರೆ ಹೊಂದಾಣಿಕೆ ಇರುತ್ತಾ?

By Suvarna NewsFirst Published Sep 5, 2022, 3:24 PM IST
Highlights

ಮೇಷ ಮತ್ತು ಸಿಂಹ ಎರಡೂ ಬಲಿಷ್ಠ ರಾಶಿಗಳು. ಈ ರಾಶಿಗಳ ಇಬ್ಬರು ವಿವಾಹವಾದರೆ, ಅವರಿಬ್ಬರ ನಡುವೆ ಹೊಂದಾಣಿಕೆ ಇರುತ್ತಾ?

ಮೇಷವು ಅಗ್ನಿ ತತ್ವದ ರಾಶಿ. ಅಂತೆಯೇ ಸಿಂಹ ಕೂಡಾ ಅಗ್ನಿ ತತ್ವದ ರಾಶಿಯೇ. ಈ ಎರಡು ಅಗ್ನಿತತ್ವದ ರಾಶಿಗಳು ಸೇರಿದರೆ ಹೊತ್ತಿ ಜೋರಾಗಿ ಉರಿಯುವುದು ಪ್ರೀತಿಯೋ, ಅಹಂಕಾರವೋ? ಮೇಷ ಮತ್ತು ಸಿಂಹ ರಾಶಿಯ ನಡುವೆ ಹೊಂದಾಣಿಕೆ ಇರುತ್ತಾ? ಈ ಎರಡು ಸಮಬಲ ರಾಶಿಗಳು ವಿವಾಹವಾದರೆ ಸುಖವಾಗಿ ಇರಬಲ್ಲವೇ? 
ಖಂಡಿತವಾಗಿ ಇರಬಲ್ಲರು ಎನ್ನುತ್ತದೆ ಜ್ಯೋತಿಷ್ಯ. ಎರಡೂ ರಾಶಿಗಳು ಸಾಹಸಿಗಳು, ಸ್ಪರ್ಧಾತ್ಮಕ ಮನೋಭಾವದವರು, ಜೀವನದಲ್ಲಿ ವೇಗವಾಗಿ ಮುನ್ನಡೆಯಲು ಬಯಸುವವರು. ಇವರಿಬ್ಬರೂ ಒಂದಾದರೆ ಸಮಾನ ರೇಖೆಯಲ್ಲಿ ಬೆಳೆಯುತ್ತಾರೆ. ಅವರು ಸಂಬಂಧದಲ್ಲಿ ಸ್ನೇಹಿತರಂತಿರುತ್ತಾರೆ. ಮೇಷ ಮತ್ತು ಸಿಂಹ ರಾಶಿಯವರು ಪರಸ್ಪರ ಹೊಂದಾಣಿಕೆಯಾಗಲು 4 ಕಾರಣಗಳು ಇಲ್ಲಿವೆ.

1. ಅವರು ಭಾವೋದ್ರಿಕ್ತರು
ಎರಡೂ ಅಗ್ನಿ ತತ್ವದ ರಾಶಿಗಳು ಸೇರಿದ ಮೇಲೆ ಮಲಗುವ ಕೋಣೆ ಹೆಚ್ಚು ಬಿಸಿಯಾಗಲೇಬೇಕಲ್ಲವೇ? ಈ ಎರಡು ರಾಶಿಯವರ ಪ್ರೇಮ(Love)ದ ಕಿಡಿ ಚೆನ್ನಾಗಿ ಉರಿಯುತ್ತದೆ. ದಾಂಪತ್ಯದಲ್ಲಿ ಈ ಹಾಟ್‌ನೆಸ್ ಸದಾ ಇರುತ್ತದೆ. ಹುಟ್ಟಾ ಶೋ ಮ್ಯಾನ್ ಆಗಿರುವ ಸಿಂಹವು ತಮ್ಮ ಮೇಷ ರಾಶಿ(Aries)ಯ ಸಂಗಾತಿಗಾಗಿ ಇಂದ್ರಿಯ ಪ್ರದರ್ಶನವನ್ನು ನೀಡುವುದನ್ನು ಆನಂದಿಸುತ್ತಾರೆ. ಮೇಷದವರು ಕೂಡಾ ತಮಗಾಗಿ ನಡೆವ ಶೋವನ್ನು ಇಷ್ಟಪಡುತ್ತಾರೆ. ಅವರಿಬ್ಬರೂ ಸ್ವಯಂಪ್ರೇರಿತರು ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವುದನ್ನು ಆನಂದಿಸುತ್ತಾರೆ, ಆದ್ದರಿಂದ ಅವರ ಪ್ರೀತಿಯ ಜೀವನವು ಎಂದಿಗೂ ನೀರಸವಾಗಿರುವುದಿಲ್ಲ.

2. ಪರಸ್ಪರ ನಂಬಲರ್ಹರು
ಸಿಂಹ ಮತ್ತು ಮೇಷ ರಾಶಿಯವರು ಪರಸ್ಪರರ ಅಗತ್ಯಗಳಿಗೆ ಗಮನ ಕೊಟ್ಟರೆ, ಬಲವಾದ ಹೊಂದಾಣಿಕೆ ಸೃಷ್ಟಿಯಾಗಿ ಅದು ದೀರ್ಘ, ಸಮರ್ಪಿತ ಸಂಬಂಧಗಳಿಗೆ ಕಾರಣವಾಗುತ್ತದೆ. ಮೇಷ ಮತ್ತು ಸಿಂಹ (Leo) ರಾಶಿಯವರು ಇತರರ ಬಗ್ಗೆ ಸ್ವಾಭಾವಿಕವಾಗಿ ಅನುಮಾನಿಸುತ್ತಿದ್ದರೂ, ಇಬ್ಬರೂ ಪ್ರಾಮಾಣಿಕರಾಗಿರುವುದರಿಂದ ಅವರು ಒಬ್ಬರನ್ನೊಬ್ಬರು ನಂಬುತ್ತಾರೆ. ಸಿಂಹ ಮತ್ತು ಮೇಷ ರಾಶಿಯವರು ಕಡಿಮೆ ಅವಧಿಯಲ್ಲಿ ಬಲವಾದ ಬಂಧಗಳನ್ನು ರಚಿಸಿಕೊಳ್ಳುತ್ತಾರೆ. 

Lucky Bamboo ಲಕ್ ತರಬೇಕಂದ್ರೆ ಸುಮ್ನೆ ತಂದಿಟ್ರಾಗಲ್ಲ, ಈ ವಾಸ್ತು ನಿಯಮ ಪಾಲಿಸ್ಬೇಕು!

3. ಭಾವನಾತ್ಮಕ ಹೊಂದಾಣಿಕೆ
ಅವರಿಬ್ಬರೂ ಉರಿಯುತ್ತಿರುವ ಚಿಹ್ನೆಗಳು, ಅವರು ತಮ್ಮ ಭಾವನೆಗಳನ್ನು ಇನ್ನೊಬ್ಬರಿಗೆ ವ್ಯಕ್ತಪಡಿಸಲು ಹೆದರುವುದಿಲ್ಲ. ಭಾವನೆಗಳ ಬಗ್ಗೆ ಆಳವಾಗಿ ಮಾತನಾಡುತ್ತಾ ಕೂರುವುದಿಲ್ಲ. ಆದರೆ, ಪರಸ್ಪರರ ಭಾವನೆಗಳನ್ನು ಗೌರವಿಸುವುದನ್ನು ಅರಿತಿದ್ದಾರೆ. ಅವರು ಪರಸ್ಪರರ ಕಂಪನಿಯನ್ನು ತುಂಬಾ ಪ್ರೀತಿಸುತ್ತಾರೆ. ಒಟ್ಟಿಗಿದ್ದು ಕೆಲಸ ಮಾಡಲು ಬಯಸುತ್ತಾರೆ. 

4. ಸಾಹಸಪ್ರಿಯರು(Adventurous)
ಸಿಂಹ ರಾಶಿಯವರು ಮೇಷ ರಾಶಿಯಂತಹ ಇತರ ಸಾಹಸಮಯ ಚಿಹ್ನೆಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅವರಿಬ್ಬರೂ ಪ್ರಕೃತಿಯಲ್ಲಿ ಹೊರಗೆ ಇರುವುದನ್ನು ಇಷ್ಟ ಪಡುತ್ತಾರೆ. ಟ್ರೆಕ್‌ಗಳು ಮತ್ತು ಬೈಸಿಕಲ್‌ ವಿಹಾರಗಳಲ್ಲಿ ಅವರೊಂದಿಗೆ ಯಾರನ್ನಾದರೂ ಕರೆದುಕೊಂಡು ಹೋಗುವುದು ಅವರಿಗೆ ಅಗತ್ಯವಾಗಿರುತ್ತದೆ. ಇಬ್ಬರೂ ಸಾಹಸಪ್ರಿಯರಾದ್ದರಿಂದ ಹೊಸ ವಿಷಯಗಳನ್ನು ಕಲಿಯಲು, ಅನುಭವಿಸಲು ಹೆದರುವವರಲ್ಲ. ಇದು ಅವರ ನಡುವೆ ಸಾಕಷ್ಟು ನೆನಪಿನ ಅನುಭವಗಳನ್ನು ನೀಡುತ್ತದೆ. ಇದಲ್ಲದೆ, ಉದ್ಯೋಗ ರಂಗದಲ್ಲಿಯೂ ಇಬ್ಬರೂ ಸ್ಪರ್ಧಾತ್ಮಕ ಸ್ವಭಾವದವರು, ನಾಯಕತ್ವ ಗುಣ ಹೊಂದಿದವರು. ಇಬ್ಬರೂ ವೃತ್ತಿಯಲ್ಲಿ ಜೊತೆಜೊತೆಯಾಗಿ ಬೆಳೆಯಲು ಸಾಧ್ಯವಿದೆ. ಈ ಎಲ್ಲ ಕಾರಣಗಳಿಂದ ಒಬ್ಬರ ಮನಸ್ಸು ಮತ್ತೊಬ್ಬರಿಗೆ ಚೆನ್ನಾಗಿ ಅರ್ಥವಾಗುತ್ತದೆ. 

Love Compatibility: ನಿಮಗೆ ಈ ರಾಶಿಯವರೇ ಅತ್ಯುತ್ತಮ ಸಂಗಾತಿ, ಸಿಕ್ಕಿದ್ರೆ ಮಿಸ್ ಮಾಡ್ಕೋಬೇಡಿ!

ಒಟ್ಟಾರೆಯಾಗಿ ಈ ಎರಡು ರಾಶಿಗಳು ಉತ್ತಮ ಜೋಡಿಯಾಗಬಹುದು. ಇದಕ್ಕಾಗಿ ಅವರು ತಮ್ಮ ಅಹಂಕಾರವನ್ನು ಕೊಂಚ ನುಂಗಿಕೊಳ್ಳಬೇಕಷ್ಟೇ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ರಾಶಿಯ ಸ್ವಭಾವಗಳು, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!