Astrology Tips : ಗೆಸ್ಟ್ ಬರ್ತಾರೆ ಅನ್ನೋದ್ರಿಂದ ಹಿಡಿದು ಅನಾಹುತದವರೆಗೆ ಸೂಚನೆ ನೀಡುತ್ತೆ ಜೇಡ

Published : Sep 05, 2022, 03:22 PM IST
Astrology Tips : ಗೆಸ್ಟ್ ಬರ್ತಾರೆ ಅನ್ನೋದ್ರಿಂದ ಹಿಡಿದು ಅನಾಹುತದವರೆಗೆ ಸೂಚನೆ ನೀಡುತ್ತೆ ಜೇಡ

ಸಾರಾಂಶ

ಮನೆಯಲ್ಲಿ ಜೇಡ ಕಟ್ಟಿದ್ರೆ ಪೊರಕೆ ಕೈಗೆ ಬರುತ್ತೆ. ಮುಲಾಜಿಲ್ಲದೆ ಎಲ್ಲ ಜೇಡ ತೆಗೆದ್ರೂ ಗೊತ್ತಿಲ್ಲದೆ ಹಿಂದೊಂದು ಜೇಡ ಬಲೆ ಕಟ್ಟಿರುತ್ತದೆ. ಈ ಜೇಡದ ಸಹವಾಸ ಸಾಕು ಎನ್ನುವವರು ಅದ್ರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ಜೇಡದ ಬಲೆ ತೆಗೆಯುವ ಮೊದಲು ಅದರ ಅರ್ಥ ತಿಳಿರಿ.   

ಮನೆ ಅಂದ್ಮೇಲೆ ಜೇಡ ಮತ್ತು ಜೇಡ ಬಲೆ ಇರದೆ ಇರುತ್ತಾ? ಒಂದಲ್ಲ ಒಂದು ಮೂಲೆಯಲ್ಲಿ ಜೇಡರ ಬಲೆ ಕಟ್ಟೋದು ಸಾಮಾನ್ಯ. ಜೇಡ ಅಂದ್ರೆ ಕೆಲವರಿಗೆ ಭಯ ಮತ್ತೆ ಕೆಲವರಿಗೆ ಕೊಳಕು. ಮನೆ ಸೌಂದರ್ಯವನ್ನು ಜೇಡ ಹಾಳು ಮಾಡುತ್ತೆ. ಆದ್ರೆ ಈ ಜೇಡರ ಬಲೆ ಕಟ್ಟೋದು ಒಳ್ಳೆಯ ಸಂಕೇತವಲ್ಲವೆಂದು ನಂಬಲಾಗಿದೆ. ಇನ್ನು ಕೆಲಸ ಕಡೆ ಜೇಡ ಶುಭ ಎಂದು ಹೇಳಲಾಗುತ್ತದೆ. ಕೆಲವು ಜನರು ಜೇಡಗಳನ್ನು ಬಹಳ ನಿಗೂಢ ಜೀವಿಯೆಂದು ಪರಿಗಣಿಸುತ್ತಾರೆ. ಜೇಡ ಕೂಡ ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ನಮಗೆ ಮುನ್ಸೂಚನೆ ನೀಡುತ್ತದೆ. ಜೇಡ ಮನೆಯಲ್ಲಿರೋದು ಅಶುಭವಾ ಇಲ್ಲ ಶುಭವಾ ಎಂಬ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡ್ತೇವೆ.

ಜೇಡ (Spider) ಹಾಗೂ ಜೇಡದ ಬಲೆ (Spider Web) ನೀಡುತ್ತೆ ಈ ಸಂಕೇತ : 
1. ಬೆಳಿಗ್ಗೆ ಎದ್ದ ತಕ್ಷಣ ಜೇಡ ಮೇಲಕ್ಕೆ ಏರುವುದು ಕಂಡರೆ ಇದನ್ನು ಶುಭವೆಂದು ಹೇಳಲಾಗುತ್ತದೆ.  ನೀವು ಶೀಘ್ರದಲ್ಲೇ ಎತ್ತರದ ಸ್ಥಾನಕ್ಕೆ ಏರುತ್ತೀರಿ ಎಂದರ್ಥ.  

2. ಜೇಡರ ಬಲೆಯನ್ನು ಯಾರೂ ಸೂಕ್ಷ್ಮವಾಗಿ ಗಮನಿಸಲು ಹೋಗೋದಿಲ್ಲ. ಇನ್ಮುಂದೆ ಮನೆಯಲ್ಲಿ ಜೇಡರ ಬಲೆ ಕಟ್ಟಿದ್ದರೆ ಅದನ್ನು ಗಮನಿಸಿ. ಜೇಡರ ಬಲೆಯಲ್ಲಿ ನಿಮ್ಮ ಸಹಿ (Signature) ಅಥವಾ ಹೆಸರಿನ ಆಕಾರವನ್ನು ನೀವು ನೋಡಿದರೆ ಅದು ಮಂಗಳಕರ. ಭವಿಷ್ಯದಲ್ಲಿ ಇದರಿಂದ ದೊಡ್ಡ ಲಾಭ (Profit) ಅಥವಾ ಒಳ್ಳೆಯ ಸುದ್ದಿ ಸಿಗಲಿದೆ.

3. ಜೇಡ, ಬಲೆ ನೇಯುತ್ತಿರುವುದು ನಿಮ್ಮ ಕಣ್ಣಿಗೆ ಬಿದ್ರೆ ಖುಷಿಪಡಿ.  ನೀವು ಶೀಘ್ರದಲ್ಲೇ ಯಶಸ್ವಿಯಾಗಲಿದ್ದೀರಿ ಎಂಬುದರ ಸಂಕೇತವಾಗಿದೆ. ಕೆಲಸದ ಸ್ಥಳದಲ್ಲಿ ಉನ್ನತಿ ಸಿಗಲಿದೆ, ಉನ್ನತ ಸ್ಥಾನಕ್ಕೆ ಏರಲಿದ್ದೀರಿ ಎಂಬ ಸೂಚನೆಯಾಗಿದೆ. ಕನಸಿ (dream) ನಲ್ಲಿಯೂ ಜೇಡ ಬಲೆ ಹೆಣೆಯುತ್ತಿರುವುದನ್ನು ಕಂಡರೆ ಅದೂ ಕೂಡ ಮಂಗಳಕರ.  

4. ಅನೇಕ ಜೇಡದ ಹುಳು (Insect) ಗಳನ್ನು ಒಟ್ಟಿಗೆ ನೋಡಿದರೆ ಅದನ್ನು ಅಮಂಗಲವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಅನೇಕ ತೊಡಕುಗಳು ಒಟ್ಟಿಗೆ ಬರಲಿವೆ ಎಂಬ ಸೂಚನೆ ಇದಾಗಿದೆ. ನಿಮ್ಮ ವಿರುದ್ಧ ಯಾರಾದರೂ ಪಿತೂರಿ ನಡೆಸುತ್ತಿದ್ದಾರೆ ಎಂಬುದರ ಸಂಕೇತವಾಗಿರುವುದರಿಂದ ನೀವು ಅಂತಹ ಸಮಯದಲ್ಲಿ ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರುವುದು ಒಳ್ಳೆಯದು.

5. ಜೇಡ ಬಿದ್ದರೆ ಭಯ (Fear) ವಾಗುತ್ತದೆ. ಸಾಮಾನ್ಯವಾಗಿ ಜೇಡ ಕಚ್ಚಿದ್ರೆ ಅದು ತುಂಬಾ ಅಪಾಯ. ಹಾಗಾಗಿಯೇ ಜೇಡ ಬಿದ್ರೆ ಎಲ್ಲರೂ ಭಯಗೊಳ್ತಾರೆ. ಆದ್ರೆ ನಿಮ್ಮ ಬಟ್ಟೆಯ ಮೇಲೆ ಜೇಡ ಬಿದ್ದರೆ ಅಥವಾ ಬಂದರೆ ಅದನ್ನು ಒಳ್ಳೆಯ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ನಿಮಗೆ ಹೊಸ ಬಟ್ಟೆಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.

Vaastu Tips: ಮನೆಗೆ ಪೇಂಟಿಂಗ್ ತರುವ ಮುನ್ನ ಈ 9 ಸಂಗತಿಗಳನ್ನು ನೆನಪಿಟ್ಟುಕೊಳ್ಳಿ

6. ಜೇಡ ಮನೆಗೆ ಅತಿಥಿಗಳು ಬರ್ತಾರೆ ಎಂಬ ಸಂಕೇತವನ್ನು ಕೂಡ ನೀಡುತ್ತದೆ. ಮನೆಯ ಕೋಣೆಯಲ್ಲಿ ಗೋಡೆ ಮೇಲೆ ಸಣ್ಣ ಜೇಡವೊಂದು ಕೆಳ ಮುಖವಾಗಿ ಬಲೆ ಹೆಣೆಯುತ್ತಿದ್ದರೆ ನಿಮ್ಮ ಮನೆಗೆ ಶೀಘ್ರವೇ ನೆಂಟರು ಬರ್ತಾರೆಂದು ನೀವು ಭಾವಿಸಬಹುದು. ಈ ಜಾಗವನ್ನು ನೆಂಟರಿಗೆ ಮೀಸಲಿಡಿ ಎಂಬುದು ಇದ್ರ ಸೂಚನೆಯಾಗಿದೆ. 

Vastu tips: ಮರೆತೂ ಈ ವಸ್ತುಗಳನ್ನು ತೆರೆದಿಡಬೇಡಿ, ನಷ್ಟವಾಗುತ್ತೆ!

7. ಜೇಡ ಬರಿ ಒಳ್ಳೆಯ ಸಂಕೇತವನ್ನು ಮಾತ್ರ ನೀಡುವುದಿಲ್ಲ ಕೆಟ್ಟ ಸೂಚನೆಯನ್ನು ಕೂಡ ನೀಡುತ್ತದೆ. ಮನೆಯಲ್ಲಿ ಬಲೆ ಕಟ್ಟಿದ ಜೇಡ, ಆ ಬಲೆಯಲ್ಲಿಯೇ ಒದ್ದಾಡುತ್ತಿದ್ದರೆ, ಅಲ್ಲಿಂದ ಇಲ್ಲಿಗೆ, ಅಲ್ಲಿಂದ ಇಲ್ಲಿಗೆ ಓಡುವ ಪ್ರಯತ್ನದಲ್ಲಿದ್ದರೆ ಇದನ್ನು ಅಪಾಯಕಾರಿ ಎನ್ನಲಾಗುತ್ತದೆ. ಇದ್ರಿಂದ ಮನೆಯಲ್ಲಿ ಸಾವು ಸಂಭವಿಸಲಿದೆ ಎಂಬ ಸೂಚನೆಯಾಗಿದೆ. ಕುಟುಂಬ ಸದಸ್ಯರು ನಿಧನರಾಗ್ತಾರೆ ಎಂಬ ಸಂಕೇತವನ್ನು ಜೇಡ ಈ ರೀತಿ ನೀಡುತ್ತದೆ ಎಂದು ಹೇಳಲಾಗಿದೆ. 
 

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ