ಹಣದ ಅಡಚಣೆಗಳು ಬದುಕನ್ನೇ ಕಷ್ಟವಾಗಿಸುತ್ತವೆ. ಆದರೆ, ಹಣದ ಸಮಸ್ಯೆ ದೂರವಿಡಲು ಜ್ಯೋತಿಷ್ಯ ಮತ್ತು ವಾಸ್ತುವಿನಲ್ಲಿ ಸಾಕಷ್ಟು ಮಾರ್ಗಗಳಿವೆ. ಅದರಂತೆ, ಇಂಥ ನಾಣ್ಯಗಳನ್ನು ಮನೆಯಲ್ಲಿಟ್ಟರೆ ಹಣದ ಸಮಸ್ಯೆ ಇರೋದಿಲ್ಲ.
ಆರ್ಥಿಕ ಸಂಕಷ್ಟಗಳು(financial problems) ಎಲ್ಲರಿಗೂ ಒಂದಿಲ್ಲೊಂದು ಸಮಯದಲ್ಲಿ ಕಾಡುತ್ತವೆ, ನುಜ್ಜುಗುಜ್ಜಾಗಿಸುತ್ತವೆ. ಹೀಗೆ ಆರ್ಥಿಕ ಸಂಕಷ್ಟಗಳಿಂದ ಹೊರ ಬರಲಾಗದಾದಾಗ ಜನರು ಜ್ಯೋತಿಷ್ಯ, ವಾಸ್ತು ಮುಂತಾದ ಶಾಸ್ತ್ರಗಳ ಸಹಾಯ ಕೋರುತ್ತಾರೆ. ಈ ಶಾಸ್ತ್ರಗಳಲ್ಲಿ ಹಣಕಾಸಿನ ಅಡಚಣೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪರಿಹಾರ ಮಾರ್ಗಗಳನ್ನು(remedies) ಸೂಚಿಸಲಾಗುತ್ತದೆ. ಅವುಗಳಲ್ಲೊಂದು ಬೆಳ್ಳಿಯ ನಾಣ್ಯದ(Silver coin) ಪರಿಹಾರ.
ಹೌದು, ಬರಿಯ ಬೆಳ್ಳಿ ನಾಣ್ಯವಲ್ಲ, ಲಕ್ಷ್ಮೀ ದೇವಿ ಇಲ್ಲವೇ ಗಣೇಶನ ಚಿತ್ರವಿರುವ ಬೆಳ್ಳಿ ನಾಣ್ಯಗಳು ಮನೆಗೆ ಸಂಪತ್ತನ್ನು ಆಕರ್ಷಿಸುತ್ತವೆ ಎನ್ನಲಾಗುತ್ತದೆ. ಕೆಲವೊಮ್ಮೆ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರವೆರಡೂ ಒಂದೇ ಬೆಳ್ಳಿ ನಾಣ್ಯಗಳಲ್ಲಿರುತ್ತವೆ. ಇಂಥ ನಾಣ್ಯಗಳನ್ನು ಅನೇಕ ಹಿಂದೂಗಳು ತಮ್ಮ ಮನೆಯಲ್ಲಿ ಇಡುತ್ತಾರೆ. ಗಣೇಶ, ಲಕ್ಷ್ಮಿ ಮತ್ತು ನವಗ್ರಹ ಶುಕ್ರ(Venus)ನ ಆಶೀರ್ವಾದವನ್ನು ಆಕರ್ಷಿಸುವುದು ಈ ಆಚರಣೆಯ ಹಿಂದಿನ ಮಹತ್ವವಾಗಿದೆ. ಏಕೆಂದರೆ, ಈ ಮೂರು ದೇವತೆಗಳ ಆಶೀರ್ವಾದ ಹೊಂದಿರುವ ವ್ಯಕ್ತಿಗೆ ಎಂದಿಗೂ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ.
undefined
ಕೆಲವು ನಾಣ್ಯಗಳಲ್ಲಿ ಒಂದು ಬದಿಯಲ್ಲಿ ಲಕ್ಷ್ಮಿ ದೇವಿ(Lakshmi Devi)ಯನ್ನು ಮತ್ತು ಇನ್ನೊಂದು ಬದಿಯಲ್ಲಿ ಗಣೇಶ(Ganesha)ನನ್ನು ಕೆತ್ತಲಾಗಿರುತ್ತದೆ. ಎರಡೂ ಬದಿಗಳಲ್ಲಿ ಒಂದೇ ದೇವತೆಯ ಚಿತ್ರ ಕೆತ್ತಲಾದ ನಾಣ್ಯಗಳೂ ಇವೆ.
Chaturmasa Prediction: ಚಾತುರ್ಮಾಸದಲ್ಲಿ ಈ ರಾಶಿಯವರಿಗೆ ವಿಷ್ಣುವಿನ ವಿಶೇಷ ಕೃಪೆ
ಲಕ್ಷ್ಮಿ ಮತ್ತು ಗಣೇಶನ ಬೆಳ್ಳಿ ನಾಣ್ಯಗಳನ್ನು ಮನೆಯಲ್ಲಿ ಇಡುವುದು ಹೇಗೆ?
ಶುಕ್ರವಾರ(Friday) ಮಾತ್ರ ಇಂಥ ನಾಣ್ಯವನ್ನು ಮನೆಗೆ ತರಬೇಕು. ನಂತರ ಹರಿಯುವ ನೀರಿನಲ್ಲಿ ಸರಿಯಾಗಿ ತೊಳೆಯಬೇಕು.
ನಂತರ ಅದನ್ನು ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರದ ಎದಿರು ಪೂಜಾ ಕೋಣೆಯಲ್ಲಿ ಇರಿಸಲಾಗುತ್ತದೆ. ನಂತರ ಈ ನಾಣ್ಯಕ್ಕೆ ಭಯಭಕ್ತಿಯಿಂದ, ಶ್ರದ್ಧೆಯಿಂದ ಪೂಜೆ ಸಲ್ಲಿಸಬೇಕು. ಲಕ್ಷ್ಮೀ ಮತ್ತು ಗಣೇಶನಿಗೆ ಇಷ್ಟದ ತಿನಿಸುಗಳ ನೈವೇದ್ಯ ಮಾಡಬೇಕು. ಬಳಿಕ ನಿಮ್ಮ ಮನದ ಅಭಿಲಾಷೆ ಹೇಳಿಕೊಳ್ಳಬೇಕು.
ಸಂಜೆ ಆರತಿಯ ನಂತರ ನಾಣ್ಯವನ್ನು ತೆಗೆದುಹಾಕಲಾಗುತ್ತದೆ ಮತ್ತು ಅದರ ಸ್ಥಳದಲ್ಲಿ 1 ರೂಪಾಯಿ ಅಥವಾ 5 ರುಪಾಯಿಯಂಥ ಏಳು ಸಣ್ಣ ಸಂಭಾವನೆಯ ನಾಣ್ಯಗಳನ್ನು ಇರಿಸಲಾಗುತ್ತದೆ.
ಬೆಳ್ಳಿ ನಾಣ್ಯಗಳನ್ನು ತೆಗೆದು ಮನೆಯ ಈಶಾನ್ಯ ದಿಕ್ಕಿ(North east direction)ನಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ. ಸಾಮಾನ್ಯವಾಗಿ ಈ ದಿಕ್ಕಿನಲ್ಲಿಯೇ ಮನೆಯ ತಿಜೋರಿ ಇರುವುದು.
ರಾತ್ರಿಯಲ್ಲಿ, ದೇವರೆದುರು ಸಂಭಾವನೆಯಾಗಿಟ್ಟ ಏಳು ಸಣ್ಣ ನಾಣ್ಯಗಳನ್ನು ತೋಟಕ್ಕೆ ತೆಗೆದುಕೊಂಡು ಹೋಗಿ ಹೂಳಲಾಗುತ್ತದೆ. ಇದನ್ನು ಸಸ್ಯದೊಂದಿಗೆ ಮಡಕೆ(pot)ಯೊಳಗೆ ಸುರಕ್ಷಿತವಾಗಿ ಇರಿಸಬಹುದು.
ಪತಿ – ಪತ್ನಿಯ ನಡುವಲ್ಲಿದ್ದರೆ ಮನಸ್ತಾಪ ಧರಿಸಿ ಈ ರತ್ನ
ಲಕ್ಷ್ಮಿ ದೇವಿಯ ಕ್ರೋಧವನ್ನು ಆಹ್ವಾನಿಸದಂತೆ ಎಚ್ಚರಿಕೆ ವಹಿಸಿ
ಮೇಲಿನ ಪರಿಹಾರ ನಡೆಸಿ, ನೀವು ಆರ್ಥಿಕ ಸ್ಥಿರತೆಯನ್ನು ಪಡೆದಾಗ, ಅನ್ನದಾನ(Annadan)ವನ್ನು ಮಾಡಬೇಕು. ಜೊತೆಗೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುವುದರಿಂದ ಪುಣ್ಯ ಬರುತ್ತದೆ.
ಸಂಪತ್ತಿನ ಆಗಮನದೊಂದಿಗೆ, ನೀವು ಅಧರ್ಮದ ಹಾದಿಯನ್ನು ಹಿಡಿದರೆ ಸಂಪತ್ತು ಕಣ್ಮರೆಯಾಗುವುದು ಖಚಿತ.
ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ.
ಮನೆಯ ಎಲ್ಲ ವ್ಯಕ್ತಿಗಳ ಆಂತರಿಕ ಶುದ್ಧೀಕರಣ ಇರಬೇಕು - ಭಗವದ್ಗೀತೆ, ಶ್ರೀಮದ್ ಭಗವದ್ ಪುರಾಣ ಓದುವುದು ನಡೆಯಬೇಕು.
ಅತಿಥಿಗಳನ್ನು ಪ್ರೀತಿಯಿಂದ ಕಾಣಬೇಕು.
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುವುದು ಸುಲಭ ಆದರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ ಎಂಬುದನ್ನು ಸದಾ ನೆನಪಿಡಿ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.