ರಾಮಚರಿತ ಮಾನಸ ಪುಸ್ತಕಕ್ಕೆ ಎಲ್ಲಿಲ್ಲದ ಡಿಮ್ಯಾಂಡ್; ಪೂರೈಕೆಗೆ ಹೆಣಗುತ್ತಿದೆ ಗೀತಾ ಪ್ರೆಸ್

By Suvarna News  |  First Published Jan 13, 2024, 12:50 PM IST

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮಚರಿತ ಮಾನಸ ಪುಸ್ತಕ ಬೇಡಿಕೆಯು ಎಷ್ಟು ಹೆಚ್ಚಾಗಿದೆಯೆಂದರೆ, ಹಿಂದೂ ಧರ್ಮಗ್ರಂಥಗಳ ಪ್ರಧಾನ ಪ್ರಕಾಶಕ ಗೋರಖ್‌ಪುರದ ಗೀತಾ ಮುದ್ರಣಾಲಯವು 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರತಿಗಳ ಕೊರತೆಯನ್ನು ಎದುರಿಸುತ್ತಿದೆ.


ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಸಮಾರಂಭದ ಹಿನ್ನೆಲೆಯಲ್ಲಿ ದೇಶ ವಿದೇಶಗಳಲ್ಲಿ ಸಂಭ್ರಮದ ವಾತಾವರಣ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ರಾಮನ ಧ್ಯಾನ, ಭಜನೆ, ಧಾರಮಿಕ ಪುಸ್ತಕಗಳನ್ನು ಓದುವುದು ಸೇರಿದಂತೆ ತಮ್ಮದೇ ಆದರ ರೀತಿಯಲ್ಲಿ ಈ ಸಂಭ್ರಮಕ್ಕೆ ಕೊಡುಗೆ ನೀಡಲು ಬಯಸುತ್ತಿದ್ದಾರೆ. ಈ ನಡುವೆ ಇದೇ ಮೊದಲ ಬಾರಿಗೆ ಶ್ರೀ ರಾಮಚರಿತಮಾನಸ್, ಶ್ರೀ ಹನುಮಾನ್ ಚಾಲೀಸಾ ಮತ್ತು ಶ್ರೀಮದ್ ಭಗವತ್ ಗೀತೆಗಳಿಗೆ ಬೇಡಿಕೆ ಹಿಂದೆಂದೂ ಇಲ್ಲದಷ್ಟು ಹೆಚ್ಚಾಗಿದೆ. 

ಹೌದು, ರಾಮಚರಿತ ಮಾನಸ ಪುಸ್ತಕದ ಬೇಡಿಕೆ ಎಷ್ಟು ಹೆಚ್ಚಿದೆಯೆಂದರೆ, ಗೋರಖ್‌ಪುರದ ಪ್ರಸಿದ್ಧ ಧಾರ್ಮಿಕ ಗ್ರಂಥಗಳ ಪ್ರಕಟಣಾಲಯ ಗೀತಾ ಪ್ರೆಸ್, ಇದೇ ಮೊದಲ ಬಾರಿಗೆ ಬೇಡಿಕೆಯನ್ನು ಪೂರೈಸಲು ಒದ್ದಾಡುತ್ತಿದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಶ್ರೀ ರಾಮಚರಿತಮಾನಸ ಸಂಗ್ರಹ ಮುಗಿದಿದೆ. 

Tap to resize

Latest Videos

ಇದುವರೆಗೂ 95 ಕೋಟಿಗೂ ಹೆಚ್ಚು ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿರುವ ಗೀತಾ ಪ್ರೆಸ್ ಸ್ಥಾಪನೆಯಾದಾಗಿನಿಂದ , 3 ಕೋಟಿ 70 ಲಕ್ಷ ರಾಮಚರಿತ ಮಾನಸ ಪ್ರತಿಗಳನ್ನು ಪ್ರಕಟಿಸಿದೆ.  1948 ರಿಂದಲೂ ರಾಮ ಚರಿತ ಮಾನಸ ಪ್ರಕಟಣೆಯಲ್ಲಿ ತೊಡಗಿರುವ ಗೀತಾ ಪ್ರೆಸ್, 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪುಸ್ತಕವನ್ನು ಪೂರೈಸಲು ಸಾಧ್ಯವಾಗದಷ್ಟು ಬೇಡಿಕೆ ಕಂಡಿದೆ.

ರಾಮಮಂದಿರಕ್ಕಾಗಿ 10ನೇ ವರ್ಷದಿಂದ ಮೌನವ್ರತ; 44 ವರ್ಷಗಳ ಬಳಿಕ 'ರಾಮ ಜಪ' ಮಾಡಿ ಮೌನ ಮುರಿಯಲಿರುವ ಬಾಬಾ!

ಎಷ್ಟು ಮಾರಾಟ?
ಗೋರಖ್‌ಪುರದ ಗೀತಾ ಪ್ರೆಸ್‌ನ ಮ್ಯಾನೇಜರ್ ಡಾ.  ಲಾಲಮಣಿ ತ್ರಿಪಾಠಿ ಹೇಳುವಂತೆ ರಾಮಮಂದಿರ ಉದ್ಘಾಟನೆ ದಿನಾಂಕ ಘೋಷಿಸಿದಂದಿನಿಂದ ರಾಮಚರಿತ ಮಾನಸ, ಸುಂದರಕಾಂಡ ಹಾಗೂ ಹನುಮಾನ್ ಚಾಲೀಸಾಗೆ ಬೇಡಿಕೆ ಹೆಚ್ಚಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ರಾಮಚರಿತ ಮಾನಸದ  3.27 ಲಕ್ಷ ಪ್ರತಿಗಳನ್ನು ವಿವಿಧ ಭಾಷೆಗಳಲ್ಲಿ ಮತ್ತು ಗಾತ್ರಗಳಲ್ಲಿ ಮುದ್ರಿಸಲಾಗಿದೆ. ಅವೆಲ್ಲವೂ ಮಾರಾಟವಾಗಿವೆ. ಹನುಮಾನ್ ಚಾಲೀಸಾದ 13.50 ಲಕ್ಷ ಪ್ರತಿಗಳನ್ನು ಪ್ರಕಟಿಸಲಾಗಿದೆ. 30 ಸಾವಿರ ಮಾತ್ರ ದಾಸ್ತಾನು ಇದೆ. ಇನ್ನೂ ಎರಡು ಲಕ್ಷ ಪ್ರತಿಗಳು ತಯಾರಾಗುತ್ತಿವೆ.

ಬಿಹಾರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಲವು ಜಿಲ್ಲೆಗಳಿಂದ ಈ ತಿಂಗಳು ಸುಮಾರು 1.75 ಲಕ್ಷ ಶ್ರೀ ರಾಮಚರಿತಮಾನಗಳ (ಗುಟ್ಕಾ ಗಾತ್ರ) ಪ್ರತಿಗಳಿಗೆ ಬೇಡಿಕೆ ಬಂದಿದೆ, ಆದರೆ ಅದನ್ನು ನೀಡಲು ಗೀತಾ ಪ್ರೆಸ್ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದೆ. ಸಧ್ಯ 79 ಸಾವಿರ ಪ್ರತಿಗಳು ಪ್ರಕಟವಾಗುತ್ತಿದ್ದು, ಇವುಗಳನ್ನು ಗೀತಾ ಪ್ರೆಸ್ ತನ್ನ ಶಾಖೆಗಳಿಗೆ ಕಳುಹಿಸಲಿದೆ. ಇನ್ನು ಮುಂಬೈನ ಅವದಾ ಫೌಂಡೇಶನ್ ಭಗವಾನ್ ಶ್ರೀ ರಾಮ, ತಾಯಿ ಸೀತಾ, ಲಕ್ಷ್ಮಣ, ಭಗವಾನ್ ವಿಷ್ಣು ಮತ್ತು ಶಿವ ಮತ್ತು ತಾಯಿ ದುರ್ಗಾ ಸೇರಿದಂತೆ ವಿವಿಧ ದೇವರು ಮತ್ತು ದೇವತೆಗಳ 102 ಭಜನೆಗಳಿರುವ ಆರಿತಿ ಸಂಗ್ರಹದ 4 ಲಕ್ಷ ಪ್ರತಿಗಳನ್ನು ಕೇಳಿದೆ. ಮುದ್ರಣಾಲಯವು 3 ಲಕ್ಷ ಪ್ರತಿಗಳನ್ನು ತಲುಪಿಸುವ ಭರವಸೆ ನೀಡಿದೆ.

ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ ಎಸ್ ಎಲ್ ಭೈರಪ್ಪ

ಇನ್ನು ಸಾಕಷ್ಟು ಶಾಖೆಗಳು, ಸಂಸ್ಥೆಗಳಿಂದ ಭಗವದ್ಗೀತೆ, ರಾಮಚರಿತ ಮಾನಸ, ಹನುಮಾನ್ ಚಾಲೀಸಾಕ್ಕೆ ದೊಡ್ಡ ಮಟ್ಟದ ಬೇಡಿಕೆ ಬರುತ್ತಿದ್ದು, ಅವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲವಂತೆ.

ಜನವರಿ 22 ರ ನಂತರ ಅಯೋಧ್ಯೆಯಲ್ಲಿ ಗ್ರಂಥದ ಬೇಡಿಕೆಯೂ ಹೆಚ್ಚಾಗುತ್ತದೆ ಎನ್ನುತ್ತಾರೆ ತ್ರಿಪಾಠಿ. ಜನರು ರಾಮಮಂದಿರ ಅಯೋಧ್ಯೆಗೆ ಭೇಟಿ ನೀಡಿದಾಗ, ಅವರು ಮನೆಗೆ ಪ್ರಸಾದವಾಗಿ ತರಲು ರಾಮಚರಿತಮಾನಸ ಪ್ರತಿಯನ್ನು ಖರೀದಿಸಲು ಬಯಸುತ್ತಾರೆ. ಮುದ್ರಿತ ಪುಸ್ತಕಗಳ ಪ್ರಮಾಣ ಹೆಚ್ಚಿರುವುದರಿಂದ ಮುದ್ರಣಾಲಯವು ಸ್ಥಳಗಳ ಕೊರತೆಯನ್ನು ಎದುರಿಸುತ್ತಿದೆ. ಹಾಗಾಗಿ, ಬೇಡಿಕೆಗಳನ್ನು ಪೂರೈಸುವುದು ಕಷ್ಟಸಾಧ್ಯವಾಗಿದೆ ಎಂದರು. 

click me!