⦁ ಹಾಲಿನ ಬೇಡಿಕೆ ಪೂರೈಸಲು ಕ್ರಮ ಕೈಗೊಂಡ ಕೆಎಂಎಫ್..!
⦁ ಹೆಚ್ಚುವರಿ 1.75 ಲಕ್ಷ ಲೀಟರ್ ಹಾಲು ಆಮದು.!
⦁ ಕೋವಿಡ್ ಸಮಯದಲ್ಲೂ ಲಾಭದಲ್ಲಿದ್ದ ಕೆಎಂಎಫ್..!
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಮೇ.01): ರಂಜಾನ್ ಹಬ್ಬದಂದು (Ramadan Festival) ಮುಸ್ಲಿಂ (Muslim) ಸಮುದಾಯದವರು ಸುರುಕುಂಬಾ ಮಾಡೋದು ಕಾಮನ್. ಈ ಸುರಕುಂಬಾವನ್ನ ಹಾಲಿನಲ್ಲೆ ಮಾಡೋದ್ರಿಂದ ರಂಜಾನ್ ದಿನ ಹಾಲಿಗೆ (Milk) ಬಹುಬೇಡಿಕೆ ಉಂಟಾಗುತ್ತೆ. ಇದನ್ನ ಅರಿತ ವಿಜಯಪುರ (Vijayapura) ಕೆ.ಎಂ.ಎಫ್ (KMF) ಸಂಸ್ಥೆ ಹೆಚ್ಚಿನ ಪ್ರಮಾಣದ ಹಾಲನ್ನ ಆಮದು ಮಾಡಿಕೊಂಡಿದೆ.
1.75 ಲಕ್ಷ ಲೀಟರ್ ಹಾಲು ಆಮದು: ವಿಜಯಪುರದಲ್ಲಿ ಮುಸ್ಲಿಂ ಸಮಾಜದವರು ರಂಜಾನ್ ಹಬ್ಬವನ್ನ ಅದ್ದೂರಿಯಾಗಿ ಆಚರಿಸ್ತಾರೆ. ಈ ಹಬ್ಬದ ಹಿನ್ನೆಲೆ ಪ್ರತಿಯೊಬ್ಬ ಮುಸ್ಲಿಂರ ಮನೆಯಲ್ಲಿ ಸುರಕುಂಬ ಮಾಡುತ್ತಾರೆ. ಇದನ್ನು ಮನಗಂಡ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ KMF ಸಂಸ್ಥೆಯವರು ಹೆಚ್ಚಿನ ಹಾಲನ್ನು ಬೇರೆ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಂಡಿದ್ದಾರೆ. ವಿಜಯಪುರದ ಕೆಎಂಎಫ್ ಸಂಸ್ಥೆ ಪ್ರತಿ ದಿನ 1 ಲಕ್ಷ 70 ಸಾವಿರ ಲೀಟರ್ ದಷ್ಟು ಹಾಲನ್ನು ಮಾರಾಟ ಮಾಡುತ್ತೆ. ಆದರೆ ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗುವದನ್ನು ಮನಗಂಡು ಶಿವಮೊಗ್, ಮೈಸೂರು, ಮಂಡ್ಯ, ಧಾರವಾಡ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಿಂದ 1 ಲಕ್ಷ 70 ಸಾವಿರ್ ಲೀಟರ ಹಾಲನ್ನು ಆಮದು ಮಾಡಿಕೊಂಡಿದ್ದಾರೆ.
Basava Jayanti 2022: ಬಸವನ ಬಾಗೇವಾಡಿಯಲ್ಲಿ ಮೂರು ದಿನಗಳ ಕಾಲ ಬಸವ ಜಯಂತಿ ಆಚರಣೆ!
ಕೋವಿಡ್ ವೇಳೆಯು ಹಬ್ಬದಲ್ಲಿ ಹಾಲಿಗೆ ಬೇಡಿಕೆ ಇತ್ತು: ಕೋವಿಡ್ ಸಂದರ್ಭದಲ್ಲಿ ಕಳೆದ ಎರಡು ವರ್ಷವೂ ಸಹಿತ ಹಾಲಿನ ಬೇಡಿಕೆ ಕಡಿಮೆಯಾಗಿರಲಿಲ್ಲ. ಆಗಲು ಸಹಿತ 2 ಲಕ್ಷ 25 ರಿಂದ 2 ಲಕ್ಷ 30 ಸಾವಿರ ಲಿಟರ್ ಹಾಲು ಮಾರಾಟ ಮಾಡಲಾಗಿತ್ತು. ಹಬ್ಬವನ್ನ ಸಿಂಪಲ್ಲಾಗಿಯೇ ಆಚರಣೆ ಮಾಡಿದ್ದರು. ಮನೆಗಳಲ್ಲಿ ಹಬ್ಬದ ಅದ್ದೂರಿಗೆ ಕಡಿಮೆ ಇರಲಿಲ್ಲ. ಪ್ರತಿ ವರ್ಷದಂತೆ ಕೋವಿಡ್ ಸಮಯದಲ್ಲು ಸುರಕುಂಬಾ ಮಾಡಿದ್ದರು. ಹೀಗಾಗಿ ಹಾಲಿನ ಬೇಡಿಕೆ ತಗ್ಗಿರಲಿಲ್ಲ.
3 ಲಕ್ಷ ಲೀಟರ್ ಹಾಲು ಮಾರಾಟವಾಗೋ ಗುರಿ: ಈ ಬಾರಿ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ 3 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಖಾಸಗಿಯಾಗಿ ಹಾಲಿನ ದರ ಹೆಚ್ಚಾದ ಕಾರಣ ಈ ಬಾರಿ 2 ಲಕ್ಷ 70 ಸಾವಿರ ಲಿಟರ್ ದಿಂದ 3 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಇನ್ನೂ 1 ಲಕ್ಷ 70 ಸಾವಿರ ಲೀಟರ್ ಹಾಲನ್ನು ನಾವು ವಿಜಯಪುರ ಜಿಲ್ಲೆಯಲ್ಲಿಯೇ ಶೇಖರಣೆ ಮಾಡುತ್ತಿದ್ದು, ಇನ್ನೂಳಿದ ಹಾಲನ್ನು ಬೇರೆ ಬೇರೆ ಜಿಲ್ಲೆಯಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಎಮ್‌ಎಫ್ ಎಂ ಡಿ ದಿಕ್ಷೀತ್ ಮಾಹಿತಿ ನೀಡಿದ್ದಾರೆ.
ವಿಜಯಪುರ: ಪ್ರಾಣದ ಹಂಗು ತೊರೆದು ರಾಷ್ಟ್ರ ಪಕ್ಷಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ...!
ಬಾರಿ ಲಾಭ ಗಳಿಸುವ ನಿರೀಕ್ಷೆಯಲ್ಲಿ ಕೆಎಂಎಫ್: ಕೋವಿಡ್ ಸಂದರ್ಭದಲ್ಲಿ ಹಬ್ಬಗಳು ಡಲ್ ಆಗಿದ್ದವು. ಬೇರೆ ವ್ಯಾಪಾರ ಉದ್ಯಮಗಳ ಮೇಲೆ ಬಾರಿ ಹೊಡೆತ ಬಿದ್ದಿತ್ತು. ಆದ್ರೆ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿರುವ ಕೆ.ಎಂ.ಎಫ್ ಸಂಸ್ಥೆ ಕೋವಿಡ್ ಸಂದರ್ಭದಲ್ಲಿ ಸಹಿತ ಲಾಭದಲ್ಲಿತ್ತು ಅನ್ನೋದೆ ವಿಶೇಷ.