ವೃಷಭ ರಾಶಿಯಲ್ಲಿ ರಾಹು ಗ್ರಹ, ಈ 5 ರಾಶಿಯವರಿಗೆ ಹಾನಿ ಭಯ..!

Suvarna News   | Asianet News
Published : May 22, 2021, 06:50 PM IST
ವೃಷಭ ರಾಶಿಯಲ್ಲಿ ರಾಹು ಗ್ರಹ, ಈ 5 ರಾಶಿಯವರಿಗೆ ಹಾನಿ ಭಯ..!

ಸಾರಾಂಶ

ಈಗ ವೃಷಭ ರಾಶಿಯಲ್ಲಿ ರಾಹು ನೆಲೆಸಿದ್ದಾನೆ. ರಾಹು ಎಂದರೆ ಸಂಕಷ್ಟಗಳನ್ನು ಕೊಡುವ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ರಾಹು ಒಂದು ಪಾಪ ಗ್ರಹವಾಗಿದೆ. ಹೀಗಾಗಿ ಈಗ ವೃಷಭ ರಾಶಿಯವರಿಗೆ ಭಾರಿ ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲದೆ, ಇದರ ಜೊತೆ ಜೊತೆಗೆ ಮತ್ತೆ ನಾಲ್ಕು ರಾಶಿಗಳ ಮಂದಿಗೂ ಸಹ ರಾಹು ಕಾಟವಿದೆ. ಹಾಗಾದರೆ, ಯಾವ ರಾಶಿಗಳು…? ಅದಕ್ಕೇನು ಪರಿಹಾರ ನೋಡೋಣ ಬನ್ನಿ…

ಜ್ಯೋತಿಷ್ಯ ಶಾಸ್ತ್ರದ ಅನುಸಾರ ರಾಹು ಒಂದು ಪಾಪ ಗ್ರಹ, ಛಾಯಾ ಗ್ರಹ ಎಂದು ಕರೆಯಲಾಗುತ್ತದೆ. ಅದಕ್ಕೆ ಅದರದ್ದೇ ಆದ ವಾಸ್ತವಿಕ ರೂಪ ಇಲ್ಲ. ಜೊತೆಗೆ ಈ ಗ್ರಹದ ಸ್ವಭಾವ ರಹಸ್ಯಮಯವಾಗಿದ್ದು, ಏನು, ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯುವುದು ಕಷ್ಟ ಸಹ. ವ್ಯಕ್ತಿಗೆ ಸಾಹಸ ಶಕ್ತಿಯನ್ನು ಕೊಡುವ ರಾಹು, ಆ ಸಂದರ್ಭದಲ್ಲಿ ಈ ಶಕ್ತಿ ಪಡೆದವರಿಗೆ ಯಾವುದೇ ರೀತಿಯ ಭಯ, ಆತಂಕಗಳು ಇರುವುದಿಲ್ಲ. ವೃಷಭ ರಾಶಿಯಲ್ಲಿ ಈಗ ಒಟ್ಟಿಗೆ ನಾಲ್ಕು ಗ್ರಹಗಳು ಸ್ಥಿತವಾಗಿವೆ. ಸೂರ್ಯ, ಬುಧ, ಶುಕ್ರ ಹಾಗೂ ರಾಹು ಗ್ರಹಗಳು ನೆಲೆಸಿವೆ. ಇದರಿಂದ ವೃಷಭ ರಾಶಿಯವರ ಜೊತೆಗೆ ಮತ್ತೆ 4 ರಾಶಿಯವರಿಗೆ ಕೆಡಕು ಉಂಟಾಗುವ ಸಾಧ್ಯತೆ ಹೆಚ್ಚಿದೆ. 

ಇದನ್ನು ಓದಿ: ದಿಕ್ಕುಗಳ ವಿಶೇಷತೆಯೊಂದಿಗೆ ದಿಕ್ಪಾಲಕರ ಮಹತ್ವ.. 

ವೃಷಭ ರಾಶಿ
ಈ ರಾಶಿಯವರಿಗೆ ಮಾನಸಿಕ ಒತ್ತಡ, ಅಶಾಂತಿ ಎದುರಾಗುವ ಸಂಭವ ಹೆಚ್ಚಿದೆ. ಇತರರ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ವಿಶ್ವಾಸ ಒಳ್ಳೆಯದಲ್ಲ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇದ್ದರೆ, ಅದು ಮುಂದುವರಿಯುತ್ತದೆಯೇ ವಿನಃ ಪರಿಹಾರವಂತೂ ಈ ಸಂದರ್ಭದಲ್ಲಿ ಕಾಣುವುದಿಲ್ಲ. ಇನ್ನು ಈ ರಾಶಿಯವರು ತಮ್ಮ ಜೇಬಿನ ಬಗ್ಗೆಯೂ ವಿಚಾರ ಮಾಡಬೇಕಿದ್ದು, ಆರ್ಥಿಕ ಪರಿಸ್ಥಿತಿ ಬಗ್ಗೆ ಅರಿವನ್ನು ಹೊಂದಿ, ವಿಚಾರ ಮಾಡಿ ಖರ್ಚು-ವೆಚ್ಚಗಳನ್ನು ನಿರ್ವಹಿಸಬೇಕಿದೆ. ಇದರಿಂದ ಪಾರಾಗಬೇಕೆಂದರೆ ಎಳ್ಳು, ಎಣ್ಣೆ, ಲೋಹ, ಕಪ್ಪು ವಸ್ತ್ರ, ಅಬ್ರಕವನ್ನು ದಾನ ಮಾಡಬೇಕು. 

ಸಿಂಹ ರಾಶಿ
ಈ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ತುಸು ಹೆಚ್ಚಿದೆ. ಕೌಟುಂಬಿಕ ಜೀವನದಲ್ಲಿ ಕೆಲವು ಒತ್ತಡಗಳನ್ನು ಅನುಭವಿಸಬೇಕಾಗಲಿದೆ. ವ್ಯಾಪಾರಿ ವರ್ಗದವರಿಗೆ ಕೊಂಚ ನೆಮ್ಮದಿ ಸಿಗಲಿದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸ್ವಲ್ಪ ಜಾಗ್ರತೆ ವಹಿಸಬೇಕಿದೆ. ಇದರಿಂದ ಪಾರಾಗಬೇಕೆಂದರೆ ಕೆಟ್ಟ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರ ಇರುವ ಮೂಲಕ ಅವರಿಂದ ಯಾವುದೇ ಸಲಹೆ-ಸಹಕಾರವನ್ನು ಪಡೆಯದಿರಿ.

ಇದನ್ನು ಓದಿ: ನಕಾರಾತ್ಮಕ ಶಕ್ತಿಯನ್ನು ಮೊದಲೇ ಗ್ರಹಿಸೋ ರಾಶಿಗಳಿವು, ನಿಮಗಿದ್ಯಾ ಈ ಪವರ್? 

ತುಲಾ ರಾಶಿ
ತುಲಾ ರಾಶಿಯವರು ತುಂಬಾ ಯೋಚಿಸಿ ಹೆಜ್ಜೆ ಇಡುವುದು ಉತ್ತಮ. ಕಾರಣ, ರಾಹು ಗ್ರಹವು ಯಾವುದೇ ಕೆಲಸಕ್ಕೆ ಹೋದರೂ ಅಡೆ ತಡೆ ಉಂಟು ಮಾಡುತ್ತದೆ. ಹೀಗಾಗಿ ಯಾವ ಕೆಲಸಕ್ಕೂ ಕೈ ಹಾಕುವ ಮುಂಚೆ ಯೋಚಿಸಿ ತೀರ್ಮಾನ ಕೈಗೊಳ್ಳುವುದು ಒಳಿತು. ಮಾನಸಿಕ ಕಷ್ಟಗಳು ಸಹ ಎದುರಾಗುವ ಸಂಭವ ಹೆಚ್ಚಿದೆ. ಹೀಗಾಗಿ ನೀವು ಒತ್ತಡವನ್ನು ಎದುರಿಸಬೇಕಾಗಬಹುದು. ಹಣ ಸಂಪಾದನೆಗೆ ಯಾವುದೇ ಕಾರಣಕ್ಕೂ ಅಡ್ಡದಾರಿಯನ್ನು ಹಿಡಿಯಬೇಡಿ. ಇದು ಸಹ ನಿಮಗೆ ಸಂಕಷ್ಟವನ್ನು ತಂದೊಡ್ಡೀತು. ಹೀಗಾಗಿ ಕೆಟ್ಟ ಕೆಲಸಗಳನ್ನು ಮಾಡದಿರುವುದೇ ಇದಕ್ಕೆ ಪರಿಹಾರ.


ವೃಶ್ಚಿಕ ರಾಶಿ
ಈ ರಾಶಿಯವರು ಕೊಟ್ಟು ತೆಗೆದುಕೊಳ್ಳುವ ವ್ಯವಹಾರಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ರಾಹುವಿನ ಅಶುಭ ಪ್ರಭಾವದಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ವ್ಯಾಪಾರಕ್ಕೆ ಉತ್ತಮ ಸಮಯ ಇದಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ. ಮದ್ಯ ಸೇವನೆ ಅಥವಾ ಇನ್ನಿತರ ನಶೆಯುಕ್ತ, ಮಾದಕ ವಸ್ತುಗಳ ಸೇವನೆಯನ್ನು ಮಾಡದಿರುವುದು ಒಳಿತು. ಇಲ್ಲದಿದ್ದರೆ ಇದು ನಿಮಗೆ ಸಂಕಷ್ಟವನ್ನು ತಂದೊಡ್ಡುತ್ತದೆ. 

ಇದನ್ನು ಓದಿ: ಶನಿವಾರ ಈ ವಸ್ತು ಖರೀದಿಸಿದರೆ ಶನಿ ದೇವರಿಗೆ ಸಿಟ್ಟು ಬರುತ್ತೆ..! 

ಮಕರ ರಾಶಿ
ಈ ರಾಶಿಯವರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಒತ್ತಡ ಎದುರಾಗಲಿದೆ. ಪ್ರೇಮ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆದರೆ, ನೆಮ್ಮದಿಯ ಹಾಗೂ ಸಂತಸದ ವಿಷಯವೆಂದರೆ ಆದಾಯವು ಹೆಚ್ಚಲಿದೆ. ಮಕ್ಕಳ ಶಿಕ್ಷಣದಲ್ಲಿ ಸಮಸ್ಯೆಗಳು ಉಂಟಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತೆ ಮಾಡುತ್ತದೆ. ಪೂಜೆ ಮಾಡುವ ಸಮಯದಲ್ಲಿ ನಿತ್ಯ ಓಂ ರಾಂ ರಾಹವೇ ನಮಃ ಎಂಬ ಮಂತ್ರವನ್ನು ಜಪಿಸಿದರೆ ಒಳ್ಳೆಯದಾಗುತ್ತದೆ. 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ