ನಿಮ್ಮ-ನಿಮ್ಮವರದು ಪೂರ್ವಭಾದ್ರ, ಉತ್ತರಭಾದ್ರ, ರೇವತಿ ನಕ್ಷತ್ರವಾದರೆ ಹೀಗಿರುತ್ತೆ ಸ್ವಭಾವ..!

By Suvarna News  |  First Published Oct 8, 2021, 4:36 PM IST

ಜ್ಯೋತಿಷ್ಯ ಶಾಸ್ತ್ರದ ಅನುಸಾರ ವ್ಯಕ್ತಿಗಳ ಭವಿಷ್ಯವನ್ನು ಹಲವು ಮಾರ್ಗಗಳ ಮೂಲಕ ನಿರ್ಧರಿಸಬಹುದಾಗಿದೆ. ಅಂದರೆ, ಹಸ್ತ ಸಾಮುದ್ರಿಕ ಶಾಸ್ತ್ರ, ಸಂಖ್ಯಾ ಶಾಸ್ತ್ರ ಸೇರಿದಂತೆ ಹಲವು ರೀತಿಯಲ್ಲಿ ಅರಿತುಕೊಳ್ಳಬಹುದಾಗಿದೆ. ಅದೇ ರೀತಿ ಜಾತಕದ ಅನುಸಾರ ಇರುವ ರಾಶಿ-ನಕ್ಷತ್ರಗಳ ಮೂಲಕವೂ ಗುಣ – ಸ್ವಭಾವಗಳನ್ನು ಅರಿಯಬಹುದಾಗಿದೆ. ಹಾಗಿದ್ದರೆ, ಪೂರ್ವಭಾದ್ರ, ಉತ್ತರಭಾದ್ರ, ರೇವತಿ ನಕ್ಷತ್ರದವರ ಬಗ್ಗೆ ತಿಳಿಯೋಣ.


ಹಿಂದೂ (HIndu) ಧರ್ಮದಲ್ಲಿ ಒಂದೊಂದು ಆಚರಣೆಗೆ ಒಂದೊಂದು ಅರ್ಥ ಇರುತ್ತದೆ. ಈಗಾಗಲೇ ಹಲವಾರು ವಿಚಾರಗಳು ವೈಜ್ಞಾನಿಕವಾಗಿಯೂ ದೃಢಪಟ್ಟಿವೆ (Scientifically Proven). ಗ್ರಹಗತಿಗಳು, ಮಿತಿ-ತಿಥಿಗಳ ಲೆಕ್ಕಾಚಾರಗಳು, ನಕ್ಷತ್ರಗಳು, (Stars) ರಾಶಿಚಕ್ರಗಳು, (Zodiac Sign) ಘಳಿಗೆಗಳು ಹೀಗೆ ಪ್ರತಿ ಅಂಶಗಳು ಗಣನೆಗೆ ಒಳಪಡುತ್ತವೆ. 

ಇಲ್ಲಿ ಒಬ್ಬ ವ್ಯಕ್ತಿಯ ಹುಟ್ಟು (Birth) ಹಾಗೂ ಹುಟ್ಟಿನ ಸಮಯ ಪ್ರಮುಖವಾಗುವುದರ ಜೊತೆಗೆ ಆ ವ್ಯಕ್ತಿಯ ಬಾಳಿನಲ್ಲಿ (life) ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರೂ ತಪ್ಪಲ್ಲ. ಹುಟ್ಟಿದ ದಿನಾಂಕ (Date), ಸಮಯಕ್ಕೆ (Time) ಅನುಸಾರವಾಗಿ ರಾಶಿ-ನಕ್ಷತ್ರ (Zodiac Signs and Zodiac stars) ಸೇರಿದಂತೆ ಜಾತಕವನ್ನು (Horoscope) ಸಿದ್ಧಪಡಿಸಲಾಗುತ್ತದೆ. ಆ ಜಾತಕದನ್ವಯ (Jataka) ಅವರ ಅದೃಷ್ಟ (Fortune), ವಿದ್ಯೆ (Education), ಬುದ್ಧಿ (Intellect), ನಡವಳಿಕೆ (Behavior), ಜೀವನ ಘಟ್ಟ, ವೈವಾಹಿಕ ಸ್ಥಿತಿಗತಿ (Marriage), ಸಾಮಾಜಿಕ ಮತ್ತು ರಾಜಕೀಯ ಏಳಿಗೆ, ಯಾವ ಕ್ಷೇತ್ರದಲ್ಲಿ ಸಾಧಿಸಬಹುದು ಎಂಬಿತ್ಯಾದಿ ಅಂಶಗಳನ್ನು ಅಂದಾಜಿಸಬಹುದಾಗಿದೆ. 

ಇದನ್ನು ಓದಿ: ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರ ವಿಶೇಷ ಗುಣ ಅರಿಯಿರಿ..!

ಇದೇ ನಿಟ್ಟಿನಲ್ಲಿ ನಕ್ಷತ್ರಗಳೂ ಸಹ ಆ ವ್ಯಕ್ತಿಯ ಗುಣ – ಸ್ವಭಾವಗಳ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಒಂದೊಂದು ನಕ್ಷತ್ರಕ್ಕೆ ಒಂದೊಂದು ಗುಣಗಳಿರುತ್ತವೆ. ಹೀಗಾಗಿ ಕೆಲವು ರಾಶಿ ನಕ್ಷತ್ರದವರು ಧನಿಕರು (Rich), ಮತ್ತೆ ಕೆಲವರು ಮಧ್ಯಮರು, ಮತ್ತೆ ಕೆಲವರಿಗೆ ಮಾಡಿದ ಕೆಲಸದಲ್ಲೆಲ್ಲ ನಷ್ಟ... ಹೀಗೆ ಹತ್ತು ಹಲವು ಜಯ - ಅಪಜಯ ಸಂಗತಿಗಳು ತಳುಕು ಹಾಕಿಕೊಂಡು ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನೂ ಕೊಡುತ್ತವೆ. ಇವುಗಳ ಮೇಲೆ ವ್ಯಕ್ತಿಗಳ ಗುಣ (Personality) ಸ್ವಭಾವಗಳನ್ನೂ ನಿರ್ಧರಿಸಬಹುದಾಗಿದೆ. 

ಇದನ್ನು ಓದಿ: ಪಿತೃಪಕ್ಷ ಆಚರಣೆ ಹಿಂದಿನ ಕರ್ಣ ರಹಸ್ಯ - ಹೀಗಿದೆ ಪೌರಾಣಿಕ ಕಥೆ!

ವೈದಿಕ ಜ್ಯೋತಿಷ್ಯದಲ್ಲಿರುವ ಒಟ್ಟು 27 ನಕ್ಷತ್ರಗಳ ಪೈಕಿ ಕೊನೆಯ ಮೂರು ನಕ್ಷತ್ರಗಳೇ ಪೂರ್ವಭಾದ್ರ (Purvabhadra), ಉತ್ತರಭಾದ್ರ (Uttarabhadra) ಮತ್ತು ರೇವತಿ (Revati) ನಕ್ಷತ್ರಗಳಾಗಿವೆ. ಹಾಗಾದರೆ ಈ ನಕ್ಷತ್ರಗಳು ವ್ಯಕ್ತಿಗಳ ಮನಸ್ಸಿನ (Mind) ಮೇಲೆ, ಭವಿಷ್ಯದ ಮೇಲೆ, ಸ್ವಭಾವದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮಗಳನ್ನು ಬೀರುತ್ತವೆ. ಈ ನಕ್ಷತ್ರಗಳಲ್ಲಿ ಜನಿಸಿದವರ ಗುಣಗಳು ಏನು..? ಎಂಬಿತ್ಯಾದಿ ವಿಷಗಳ ಬಗ್ಗೆ ಅರಿಯೋಣ ಬನ್ನಿ.... 

Tap to resize

Latest Videos


ಪೂರ್ವಭಾದ್ರ ನಕ್ಷತ್ರ
ಇರುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಪೂರ್ವಭಾದ್ರ ನಕ್ಷತ್ರವು ಇಪ್ಪತ್ತೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು (Guru) ಗ್ರಹವಾಗಿದೆ. ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಸತ್ಯ ಮತ್ತು ನೈತಿಕ ಚೌಕಟ್ಟಿನ (Moral Values) ಅಡಿಯಲ್ಲಿ ಜೀವನ ನಡೆಸುತ್ತಾರೆ. ಇವರಿಗೆ ಅನೈತಿಕ, ಅನ್ಯಾಯ ಚಟುವಟಿಕೆಯನ್ನು ಸಹಿಸಲು ಆಗದು. ಅಲ್ಲದೆ, ಇವರು ಉತ್ತಮ ಮೌಲ್ಯಗಳನ್ನು ಹೊಂದಿದವರಾಗಿದ್ದು, ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ವ್ಯಾಪಾರ (Trade) ವ್ಯವಹಾರಗಳಲ್ಲಿ ಹೆಚ್ಚಿನ ಕುಶಲತೆಯನ್ನು ಹೊಂದಿರುತ್ತಾರೆ. ಆಧ್ಯಾತ್ಮಿಕ (Spiritual) ವಿಚಾರಗಳಲ್ಲಿ ಸಹ ಹೆಚ್ಚಿನ ಆಸಕ್ತಿಯನ್ನು ಉಳ್ಳವರಾಗಿರುತ್ತಾರೆ. ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆಯೂ ಒಂದುಮಟ್ಟಿಗೆ ಒಲವನ್ನು ಹೊಂದಿರುತ್ತಾರೆ.

ಇದನ್ನು ಓದಿ: ಜಾತಕದ ಈ ಸ್ಥಾನದಲ್ಲಿ ಶನಿ ಇದ್ದರೆ ಆಗುವ ಕೆಲಸವೂ ಆಗುವುದಿಲ್ಲ..!

ಉತ್ತರಭಾದ್ರ ನಕ್ಷತ್ರ 
ನಕ್ಷತ್ರಗಳ ಕೂಟದಲ್ಲಿ ಉತ್ತರಭಾದ್ರ ನಕ್ಷತ್ರವು ಇಪ್ಪತ್ತಾರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ಶನಿ ಗ್ರಹವಾಗಿದೆ. ಕಲ್ಪನಾ ಲೋಕದಲ್ಲಿ ವಿಹರಿಸುವುದು ಈ ನಕ್ಷತ್ರದಲ್ಲಿ ಜನಿಸಿದವರಿಗೆ  ಇಷ್ಟವಿರುವುದಿಲ್ಲ. ಈ ವ್ಯಕ್ತಿಗಳು ಸದಾ ಪ್ರ್ಯಾಕ್ಟಿಕಲ್ (Practical) ಆಗಿ ಯೋಚಿಸುತ್ತಾರೆ. ಉದ್ಯೋಗವಾಗಲಿ (Job), ವ್ಯಾಪಾರವಾಗಲಿ ಪರಿಶ್ರಮದಿಂದ ಸಫಲತೆ ಸಿಗುತ್ತದೆ ಎಂಬ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೆ ಅಲ್ಲದೆ ತ್ಯಾಗ ಜೀವಿಗಳು ಇವರಾಗಿರುತ್ತಾರೆ.

ರೇವತಿ ನಕ್ಷತ್ರ 
ನಕ್ಷತ್ರಗಳ ಕೂಟದಲ್ಲಿ ಕೊನೆಯ ಇಪ್ಪತ್ತೇಳನೆಯ ನಕ್ಷತ್ರ ರೇವತಿ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಬುಧ ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ. ಹಾಗಾಗಿ ಇತರರಿಗೆ ಮೋಸ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಪರಂಪರೆ ಆಚರಣೆಗಳ (Ritual) ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿರುತ್ತಾರೆ. ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು (Higher Education) ಯಾರು ಪಡೆಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ವಿಚಾರ ಮತ್ತು ಬುದ್ಧಿವಂತಿಕೆ ಎಂಥ ಸಮಸ್ಯೆಯನ್ನಾದರೂ ಪರಿಹರಿಸಿಕೊಳ್ಳುತ್ತಾರೆ.

click me!